ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (2023 ಡಿಸೆಂಬರ್ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಮಘಾ, ಯೋಗ: ಪ್ರೀತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 12 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:48 ರಿಂದ ಸಂಜೆ 06:13 ರವರೆಗೆ,
ಯಮಘಂಡ ಕಾಲ ಮಧ್ಯಾಹ್ನ 12:36 ರಿಂದ 01:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:24 ರಿಂದ 04:48ರ ವರೆಗೆ.
ಮೇಷ ರಾಶಿ: ಸಾಲಬಾಧೆಯನ್ನು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಹುಡುಕುವಿರಿ. ಅನೇಕ ಹೂಡಿಕೆಗಳ ಬಗ್ಗೆಯೂ ನಿಮ್ಮ ಮನಸ್ಸು ಹೋಗುವುದು. ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆಯನ್ನು ಸಾಧಿಸುವುದು ಕಷ್ಟವಾದೀತು. ಕಳೆದುಕೊಂಡ ವಸ್ತುವಿನ ಮೌಲ್ಯವನ್ನು ಪಡೆಯುವಿರಿ. ಹದಗೆಡುವ ಆರೋಗ್ಯವನ್ನು ಮೊದಲೇ ಸರಿಮಾಡಿಕೊಂಡು ಜಾಣರಾಗಿರಿ. ಅಸಭ್ಯವರ್ತನೆಯು ನಿಮಗೆ ಇಷ್ಟವಾಗದು. ಒಂದೇ ವಿಚಾರದ ಬಗ್ಗೆ ಹೆಚ್ಚು ಹೊತ್ತು ಚಿಂತಿಸಿದರೂ ಪ್ರಯೋಜನವಾಗದು. ದುರಭ್ಯಾಸವನ್ನು ಬೆಳೆಸಿಕೊಳ್ಳುವುದು ಬೇಡ. ಸಂಗಾತಿಯ ಬೆಂಬಲವಿಲ್ಲದ ಕಾರ್ಯವನ್ನು ಇಂದು ಮಾಡುವಿರಿ. ಆಕಸ್ಮಿಕವಾಗಿ ಆರ್ಥಿಕಲಾಭವಿದ್ದರೂ ಸಂತೋಷವಾಗದು. ಸಂತೋಷವನ್ನು ಹೇಳಿಕೊಳ್ಳಲು ನಿಮ್ಮ ಜೊತೆ ಯಾರೂ ಇಲ್ಲವೆನಿಸುವುದು. ಬೇಡವೆಂದು ಬಿಟ್ಟ ವಸ್ತುವನ್ನು ಪುನಃ ಬಳಸುವಿರಿ.
ವೃಷಭ ರಾಶಿ: ಹೊಟ್ಟೆಕಿಚ್ಚು ಈಗ ಬಹಳ ಸುಂದರ ಎಂದು ಕಂಡರೂ ಅದು ನಿಮ್ಮನ್ನೇ ಸುಡುವುದು. ಮನಃಸ್ಥೈರ್ಯವಿಲ್ಲದ ಯಾವ ಕಾರ್ಯವನ್ನೂ ಮಾಡುವ ಹುಂಬುತನ ಬೇಡ. ಅಧಿಕ ವಿಶ್ರಾಂತಿಯು ನಿಮಗೆ ಜಾಡ್ಯವನ್ನು ತಂದೀತು. ಹಳೆಯ ವಸ್ತುಗಳ ಮೇಲೆ ವ್ಯಾಮೋಹವು ಅಧಿಕವಾಗಿ ಇರುವುದು. ಅಪರಿಚಿತರಿಗೆ ನಿಮ್ಮ ವಾಹನವನ್ನು ಕೊಟ್ಟು ಕೆಡಿಸಿಕೊಳ್ಳುವಿರಿ. ದೂರಪ್ರಯಾಣವನ್ನು ಮಾಡಲು ಮನಸ್ಸು ಒಪ್ಪದು. ಸಮಯಪ್ರಜ್ಞೆಯಿಂದ ನೀವು ಯೋಗ್ಯ ಮಾತುಗಳನ್ನು ಆಡುವಿರಿ. ನಿಮ್ಮ ಆತಂಕವನ್ನು ನೀವು ಆಪ್ತರ ಜೊತೆ ಹೇಳಿಕೊಳ್ಳಿ. ಯಾರದೋ ಪ್ರೇರಣೆಯಿಂದ ನಿಮ್ಮ ಬದುಕು ಬದಲಾವಣೆಯ ಕಡೆ ಹೋಗಲಿದೆ. ಪ್ರೀತಿಯು ಸಿಗದೇ ಮೀನಿನಂತೆ ಒದ್ದಾಡುವಿರಿ. ನಿಮ್ಮ ಕುತೂಹಲದ ಸಂಗತಿಗಳಿಗೆ ತಣ್ಣೀರು ಬೀಳಬಹುದು. ಅತಿಯಾದ ಸಂತೋಷದಿಂದ ಹಿಮ್ಮುಖರಾಗುವಿರಿ.
ಮಿಥುನ ರಾಶಿ: ಅನುಕೂಲಕರ ವಾತಾವರಣವನ್ನು ಹಾಳುಮಾಡಿಕೊಳ್ಳುವಿರಿ, ಆರೋಗ್ಯವು ಪೂರ್ಣವಾಗಿ ಸರಿಯಾಗದು. ಹಾಗಾಗಿ ಅತಿಯಾದ ಉತ್ಸಾಹವೂ ಬೇಡ. ಸ್ತ್ರೀಯರಿಗೆ ಮನೆಯ ನೆನಪಾಗಿ ಸಂಗಾತಿಯ ಜೊತೆ ಹಂಚಿಕೊಳ್ಳುವರು. ಹೊರಗಿನ ಆಹಾರವನ್ನು ತಿನ್ನುವ ಅನಿವಾರ್ಯತೆ ಬರಬಹುದು. ಇಂದಿನ ನಿಮ್ಮ ಸಿಟ್ಟು ನಗಣ್ಯವಾದೀತು. ತಂದೆಯ ಜೊತೆಗಿನ ಮನಸ್ತಾಪವನ್ನು ನೀವು ಕುಳಿತು ಬಗೆಹರಿಸಿಕೊಳ್ಳುವುದು ಸೂಕ್ತ. ಕಲಾವಿದರು ಅತಿಯಾದ ನಿರೀಕ್ಷೆಯಿಂದ ಬೇಸರವನ್ನು ತಂದುಕೊಳ್ಳುವರು. ನಿಮ್ಮ ವಿದ್ಯೆಗೆ ಗೌರವ ಸಿಗುವುದು. ಅತಿಯಾದ ಅಸೆಯಿಂದ ನಿಮ್ಮಲ್ಲಿರುವ ವಸ್ತುವು ನಿಮಗೆ ದುಃಖಕೊಟ್ಟೀತು. ಅಪರಿಚಿತರ ಸಲಹೆಗಳು ನಿಮಗೆ ಯೋಗ್ಯವೆನಿಸಬಹುದು. ಸಂಗಾತಿಯನ್ನು ನೋಡುವ ದೃಷ್ಟಿಯು ಬದಲಾದೀತು. ನೀವಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಲು ನಿಮ್ಮವರು ಕಷ್ಟಪಟ್ಟಾರು. ಆದಾಯದಲ್ಲಿ ನಿಯಮವನ್ನು ಮೀರುವುದು ಬೇಡ.
ಕಟಕ ರಾಶಿ: ಮನೆಯಲ್ಲಿಯೇ ಇರಬೇಕಾದ ಸ್ಥಿತಿಯು ಬರುವುದು. ನಿಮ್ಮ ಯೋಜನೆಗಳನ್ನು ಮುಂದೂಡುವುದು ಉತ್ತಮ. ನಿಷ್ಪ್ರಯೋಜಕ ವಸ್ತುಗಳನ್ನು ನೀವು ಮಾರಾಟ ಮಾಡುವಿರಿ. ಕರಕುಶಲ ವಸ್ತುಗಳನ್ನು ನಿರ್ಮಿಸುವುದು ಇಷ್ಟದ ಸಂಗತಿಯಾಗಲಿದೆ. ಇಂದು ನಿಮ್ಮ ಮನೆಗೆ ಅತಿಥಿಗಳ ಆಗಮನವಾಗಬಹುದು. ಅಶುಭ ವಾರ್ತೆಯು ನಿಮ್ಮನ್ನು ವಿಚಲಿತಗೊಳಿಸೀತು. ರಾಜಕೀಯದ ಅನಿರೀಕ್ಷಿತ ಬದಲಾವಣೆಯ ಬಿಸಿಯು ನಿಮಗೂ ತಟ್ಟಬಹುದು. ಕೆಲವನ್ನು ನೀವು ಹೇಳಿ ಮಾಡುವುದು ಸಾಧ್ಯವಾಗದು. ನಿಮ್ಮ ಮಾತನಲ್ಲಿ ಸುಳ್ಳಿರುವುದು ಇತರರಿಗೂ ಗೊತ್ತಾಗುವುದು. ಮನೆಯ ಸ್ವಚ್ಛತೆಯ ಕಡೆ ಗಮನ ಇರಲಿದೆ. ಸಣ್ಣ ಉದ್ಯೋಗದವರು ಅಲ್ಪ ಲಾಭವನ್ನು ಗಳಿಸುವರು. ಉದ್ಯೋಗದ ನಿಮಿತ್ತ ಸುತ್ತಾಡುವುದರಿಂದ ಅನಾರೋಗ್ಯಕ್ಕೆ ಕಾರಣವಾಗಬಹುದು. ನಿಮ್ಮ ಬಗ್ಗೆ ಇರುವ ಅಭಿಪ್ರಾಯವು ಬದಲಾಗುವ ಸಂಭವವಿದೆ. ಅಧಿಕ ಒತ್ತಡವು ನಿಮ್ಮ ಕಾರ್ಯಕ್ಕೆ ಭಂಗ ತರಬಹುದು.
ಸಿಂಹ ರಾಶಿ: ಉದ್ಯೋಗಸ್ಥರು ವೃತ್ತಿಯನ್ನು ಬದಲಿಸುವ ಚಿಂತನೆಯಲ್ಲಿ ಇರುವರು. ಅಂತರ್ಜಾಲದಲ್ಲಿ ಅಪರಿಚಿತರ ಸಂಪರ್ಕವು ಬೆಳೆಯಬಹುದು. ನಿಮ್ಮ ಅಭಿಪ್ರಾಯವು ಸ್ಪಷ್ಟವಾಗಿರಲಿ. ನಿಮ್ಮ ಕರಗತ ವಿದ್ಯೆಯನ್ನು ಪ್ರಯೋಗ ಮಾಡಿ. ಕಳೆದುಕೊಂಡ ವಸ್ತುಗಳ ಬಗ್ಗೆ ನಿಮಗೆ ಮೋಹವಿರದು. ಭೂಮಿಯ ವ್ಯವಹಾರದಿಂದ ಹೊರಬರಲು ಪ್ರಯತ್ನಿಸುವಿರಿ. ವಾಹನದಿಂದ ನೋವಾಗುವ ಸಾಧ್ಯತೆ ಇದೆ. ಹಳೆಯ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ನಿಮಗೆ ಬರಬಹುದು. ಹೆಚ್ಚು ಆದಾಯವನ್ನು ಇಂದಿನ ಕಾರ್ಯದಿಂದ ನಿರೀಕ್ಷಿಸುವಿರಿ. ನಿಮ್ಮ ಕರ್ತವ್ಯದ ಕಡೆ ಗಮನ ಅತಿಯಾಗಿ ಇರಲಿ. ಅದೃಷ್ಟವನ್ನು ನಂಬಿಕೊಂಡು ಸಮಯವನ್ನು ಹಾಳುಮಾಡುವುದು ಬೇಡ. ನಿಮ್ಮ ಕೆಲಸವನ್ನು ನೀವು ಮಾಡಿ. ಕೆಲವು ಜವಾಬ್ದಾರಿಗಳು ನಿಮ್ಮ ಹಿಡಿತದಿಂದ ತಪ್ಪಿಹೋಗಬಹುದು. ಮಾತಿಗೆ ತಪ್ಪಿದ್ದಕ್ಕೆ ನಿಮ್ಮನ್ನು ಅವಮಾನಿಸಿಯಾರು. ಆರ್ಥಿಕಬಲವು ನಿಮಗೆ ಅಗತ್ಯವಾಗಿ ಬೇಕಾಗುವುದು.
ಕನ್ಯಾ ರಾಶಿ: ವ್ಯವಹಾರದಲ್ಲಿ ಆಶಾವಾದಿತನದಿಂದ ಬೇಸರವನ್ನು ಅನುಭವಿಸಬೇಕಾದೀತು. ಸಮಾರಂಭಗಳಿಗೆ ಭೇಟಿ ಕೊಟ್ಟರೂ ಅಸಮಾಧಾನವು ಅಧಿಕವಾಗಿರುವುದು. ಯಾರ ಜೊತೆಯೂ ಬೆರೆಯುವ ಮನಸ್ಸಾಗದು. ನಿಮ್ಮ ಹಿತಚಿಂತಕರ ಬಗ್ಗೆ ತಾತ್ಸಾರಭಾವವು ಬರಬಹುದು. ಉದ್ಯೋಗವನ್ನು ಬದಲಿಸುವ ಮನಸ್ಸಿದ್ದರೂ ನಿಯಮಕ್ಕೆ ಕಟ್ಟುಬಿದ್ದು ಕಷ್ಟವಾದೀತು. ಸಾಲವನ್ನು ತೀರಿಸಲು ಏನಾದರೂ ಮಾಡಬೇಕು ಏನಿಸಬಹುದು. ಬಂಧುಗಳ ಮಾತಿನಿಂದ ಸಮಾಧಾನ ಸಿಕ್ಕೀತು. ಮಕ್ಕಳ ಹಣಕಾಸಿನ ವ್ಯವಹಾರವು ನಿಮಗೆ ಇಷ್ಟವಾಗದು. ಉದ್ಯೋಗವನ್ನು ಹುಡುಕಿಕೊಂಡು ಅಲೆದಾಡಬೇಕಾದೀಯು. ಆಗಾಗ ಬರುವ ಸಾಲದ ವಿಚಾರದಿಂದ ಮನೆಯ ವಾತಾವರಣವು ಸರಿಯಾಗಿ ಇರದು. ಕಳೆದ ವಿಷಯವನ್ನು ಪುನಃ ನೆನಪಿಸಿಕೊಂಡು ಮನಸ್ಸು ಭಾರವಾಗುವುದು. ಇಂದಿನ ನಿಮ್ಮ ಪ್ರಯಾಣವು ಕೆಲವು ಅಡೆತಡೆಗಳಿಂದ ಇರಲಿದೆ. ನಿಮ್ಮ ಆಸಕ್ತಿಯ ವಿಚಾರವನ್ನು ಬದಲಿಸುವಿರಿ. ಸೊಂಟ ನೋವು ಕಾಣಿಸಿಕೊಂಡೀತು.
ತುಲಾ ರಾಶಿ: ಸೃಜನಶೀಲತೆಗೆ ಇಂದು ಹೆಚ್ಚಿನ ಮಹತ್ತ್ವವನ್ನು ಕೊಡುವಿರಿ. ಹೊಸ ಜವಾಬ್ದಾರಿಗಳನ್ನು ಪಡೆಯುವ ಉತ್ಸಾಹ, ಯೋಗ್ಯತೆ ಎರಡೂ ನಿಮ್ಮಲ್ಲಿ ಇರುವುದು. ಸುಮ್ಮನೇ ನಿಮ್ಮ ಬಗ್ಗೆ ಹೊಗಳುವುದು ನಿಮಗೆ ಇಷ್ಟವಾಗದ ಸಂಗತಿಯಾಗಿದೆ. ವ್ಯವಹಾರದಲ್ಲಿ ಆದ ಅಲ್ಪ ನಷ್ಟವೂ ನಿಮ್ಮ ಮನಸ್ಸನ್ನು ವಿಚಲಿತವಾಗಿಸೀತು. ಯಾರದೋ ಮಾತಿನ ಮೇಲೆ ನಿಮ್ಮ ಗೆಳೆತನವನ್ನು ದೂರ ಮಾಡಿಕೊಳ್ಳಬಹುದು. ಅನಿರೀಕ್ಷಿತವಾಗಿ ಸಿಕ್ಕ ಉನ್ನತ ಅಧಿಕಾರದಿಂದ ಸಂತೋಷವಾಗಬಹುದು. ನೂತನ ಗೃಹದಲ್ಲಿ ವಾಸಮಾಡುವುದು ನಿಮಗೆ ಬಹಳ ಉತ್ಸುಕತೆಯ ವಿಚಾರವಾಗಲಿದೆ. ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ಪರಸ್ಪರ ಮಾತು ಕತೆಯಿಂದ ಸರಿ ಮಾಡಿಕೊಳ್ಳಿ. ಬಹಿರಂಗಪಡಿಸಿ ನಿಮ್ಮ ಮಾನವನ್ನು ಕಳೆದುಕೊಳ್ಳಬೇಕಾಗಬಹುದು. ಕೆಲವು ಬಂಧಗಳನ್ನು ನೀವು ಬಿಡಿಸಿಕೊಳ್ಳುವ ಮನಃಸ್ಥಿತಿಯಲ್ಲಿ ಇರುವಿರಿ. ಸಾಧ್ಯವಾದಷ್ಟು ಮಾತನ್ನು ಕಡಿಮೆ ಮಾಡಿ, ಕಾರ್ಯದಲ್ಲಿ ತೋರಿಸಿ.
ವೃಶ್ಚಿಕ ರಾಶಿ: ನಿಮ್ಮ ಅಧಿಕಾರವನ್ನು ಬಳಸಿಕೊಂಡು ಸಲ್ಲದ ವ್ಯವಹಾರವನ್ನು ಮಾಡಿಸಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಬಗ್ಗೆ ನಿಮ್ಮವರಿಗೆ ಇರುವ ಸದಭಿಪ್ರಾಯವನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ. ಮಕ್ಕಳಿಗೆ ಬೇಕಾದ ಅನುಕೂಲತೆಗಳನ್ನು ನೀವು ಮಾಡಿಕೊಳ್ಳುವಿರಿ. ನಿಮಗೆ ಆಸಕ್ತಿ ಇಲ್ಲದಿದ್ದರೂ ಹೊಸ ಕೆಲಸವನ್ನು ಮಾಡಬೇಕಾದೀತು. ಪರರ ಮನೆಯಲ್ಲಿ ಆಹಾರವನ್ನು ಸ್ವೀಕಾರ ಮಾಡುವಿರಿ. ನಿಮ್ಮ ಮಾತು ನಿಮಗೇ ಹೆಚ್ಚಾದಂತೆ ತೋರುವುದು. ಬರಹಗಾರರು ಪ್ರಶಂಸೆಯನ್ನು ಗಳಿಸುವರು. ಆರ್ಥಿಕ ನಷ್ಟದಿಂದ ನಿಮಗೆ ಚಿಂತೆಯಾಗಬಹುದು. ವಿವಿಧ ಹೂಡಿಕೆಗಳ ಬಗ್ಗೆ ಆಸಕ್ತಿ ಉಂಟಾದೀತು. ತಂದೆಯಿಂದ ನಿಮಗೆ ಬೇಕಾದ ಕೆಲಸವು ಮಾಡಿಸಿಕೊಳ್ಳುವಿರಿ. ನಿಮ್ಮ ಯೋಜನೆಯನ್ನು ಯಾರ ಬಳಿಯೂ ಪ್ರಕಟಮಾಡಿಕೊಳ್ಳುವುದು ಬೇಡ. ಸಂಕೋಚದಿಂದ ನಿಮಗೆ ಸಮಸ್ಯೆಗೆ ಪರಿಹಾರವು ಸಿಗದೇಹೋಗಬಹುದು. ಬಂಧುಗಳ ಜೊತೆಗೆ ಮಾತುಕತೆಯು ಇಷ್ಟವಾಗದು. ಧಾರ್ಮಿಕ ಕಟ್ಟುಪಾಡುಗಳಿಂದ ನಿಮಗೆ ಬಂಧನದಂತೆ ಆದೀತು.
ಧನು ರಾಶಿ: ಮಾತಿನ ಘರ್ಷಣೆಯಿಂದ ದ್ವೇಷವಾಗುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ಕಛೇರಿಯ ಕೆಲಸವನ್ನು ಮಾಡಬೇಕಾಗುವುದು. ಹಿತಶತ್ರುಗಳಿಂದ ಕೆಲವನ್ನು ಕಳೆದುಕೊಳ್ಳಬೇಕಾಗುವುದು. ಸಂಪತ್ತಿನ ಅಹಂಕರವು ಬೇಡದ್ದನ್ನು ಹೇಳಿಸಬಹುದು. ಕುಟುಂಬದವರ ಜೊತೆ ನಿಮ್ಮ ಒಡಾನಾಟವನ್ನು ಕಡಿಮೆ ಮಾಡಿಕೊಳ್ಳುವಿರಿ. ಮಿತ್ರರ ಸಹಾಯವನ್ನು ನೀವು ಉಪೇಕ್ಷಿಸುವಿರಿ. ಓಡಾಟದಿಂದ ಕೆಲಸವಾಗದು. ಜಾಣ್ಮೆಯಿಂದ ಕೆಲಸವನ್ನು ಮುಗಿಸುಕೊಳ್ಳಿ. ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬೀಳಬಹುದು. ಸಂಕಷ್ಟದಲ್ಲಿ ಇರುವವರಿಗೆ ನಿಮ್ಮ ಸಹಕಾರವು ಬೇಕಾದೀತು. ಅಪರಿಚಿತರ ಸ್ನೇಹವನ್ನು ಮಾಡುವಾಗ ಜಾಗರೂಕತೆ ಇರಲಿ. ಸ್ನೇಹವೇ ಪ್ರೇಮವಾಗಿ ಬದಲಾಗಬಹುದು. ಮುಖ್ಯ ಕೆಲಸವು ಮರೆತುಹೋಗಬಹುದು. ಮೇಲಧಿಕಾರಿಗಳು ನಿಮ್ಮ ಮೇಲಿಟ್ಟ ವಿಶ್ವಾಸಕ್ಕೆ ಭಂಗಬಾರದಂತೆ ನಿಮ್ಮ ವರ್ತಿಸಿ. ಗೊಂದಲವನ್ನು ಅಪರಿಚಿತರು ಪರಿಹರಿಸಿಯಾರು.
ಮಕರ ರಾಶಿ: ನಿಮ್ಮ ಪ್ರಯತ್ನಗಳು ಫಲ ನೀಡುತ್ತವೆ ಎಂಬ ಅತಿಯಾದ ಆತ್ಮವಿಶ್ವಾಸ ಬೇಡ. ನಿಮ್ಮ ಪ್ರಯತ್ನವು ಪರಿಪೂರ್ಣವಾಗಿರಲಿ. ಸಂಸ್ಥೆಗಳ ಮುಖ್ಯಸ್ಥಾನವನ್ನು ಪಡೆದುಕೊಳ್ಳುವಿರಿ. ನಿಮ್ಮ ಸಾಮಾಜಿಕ ಕಾರ್ಯದಿಂದ ಪ್ರಶಂಸೆ ಹಾಗೂ ಗೌರವಗಳು ಲಭಿಸುವುವು. ಬೇಡ ಆಲೋಚನೆಗಳನ್ನು ನೀವು ಮಾಡುತ್ತಾ ಇರುವಿರಿ. ಹಿರಿಯರ ಮಾರ್ಗದರ್ಶನವನ್ನು ನೀವು ಅಲ್ಲಗಳೆಯುವಿರಿ. ಧನವ್ಯಯವಾಗುವ ಸಂದರ್ಭವು ಬರಬಹುದು. ತುರ್ತು ಹಣ ಸಂಪಾದನೆಯನ್ನು ಮಾಡಬೇಕಾದೀತು. ಸಹೋದರರಿಂದ ಅಪರೋಕ್ಷ ಸಹಾಯವು ನಿಮಗಾಗುವುದು. ಸಂಗಾತಿಯ ಜೊತೆ ವಾಗ್ವಾದ ಮಾಡಿ ಮನಸ್ಸನ್ನು ಕೆಡಿಸಿಕೊಳ್ಳುವಿರಿ.ಶತ್ರುಗಳ ಬಗ್ಗೆ ನಿಮಗೆ ಕುತೂಹಲವಿರುವುದು. ನಿಮ್ಮ ನಡೆಯುವುದು ಇತರರಿಗೆ ತೊಂದರೆಯನ್ನು ಉಂಟುಮಾಡೀತು. ಅತಿಯಾದ ನಿದ್ರೆಯಿಂದ ಆರೋಗ್ಯಕ್ಕೆ ತೊಂದರೆ ಆಗಬಹುದು. ಸಾಮಾಜಿಕ ಗೌರವವನ್ನು ನೀವು ಪಡೆಯಲಿದ್ದೀರಿ. ನಿರಂತರ ಕೆಲಸಕ್ಕೆ ಫಲವು ಸಿಗಲಿದೆ.
ಕುಂಭ ರಾಶಿ: ಇಂದು ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಬಹುದು. ಅದರಿಂದ ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆದುಕೊಳ್ಳುವಿರಿ. ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ತಮ್ಮ ಕೆಲಸ ಮತ್ತು ಆತ್ಮಸಾಕ್ಷಿಯ ಬಗ್ಗೆ ಸರಿಯಾದ ಮೆಚ್ಚುಗೆ ಪಡೆಯಬಹುದು. ನಿಮ್ಮ ತಪ್ಪುಗಳು ಅರ್ಥವಾಗದೇ ಬೇರೆಯವರ ಮೂಲಕ ನೀವು ತಿಳಿದುಕೊಳ್ಳಬೇಕಾದೀತು. ಸಾಲವನ್ನು ಮಾಡುವಾಗ ಯಾರದ್ದಾದರೂ ಸಲಹೆಯನ್ನು ಪಡೆಯುವುದು ಉತ್ತಮ. ರಾಜಕೀಯ ವ್ಯಕ್ತಿಗಳು ನಿಮ್ಮನ್ನು ಬಳಸಿಕೊಳ್ಳಬಹುದು. ಸಂಬಂಧಗಳಲ್ಲಿ ಸೌಹಾರ್ದತೆ ಇರಲಿದೆ. ಯಾವ ಕೆಲಸವನ್ನು ಒಪ್ಪಿಕೊಳ್ಳುವಾಗಲೂ ಜಾಗರೂಕತೆ ಇರಲಿ. ಇನ್ನೊಬ್ಬರ ಒತ್ತಾಯಕ್ಕೆ ನೀವು ಮಣಿದು ಹಣದ ಹೂಡಿಕೆಯನ್ನು ಮಾಡುವಿರಿ. ಆದಾಯದ ಮೂಲವು ಬದಲಾಗಬಹುದು. ಚರಾಸ್ತಿಯನ್ನು ಕೊಟ್ಟು ಅಲ್ಪ ಲಾಭವನ್ನು ಮಾಡಿಕೊಳ್ಳುವಿರಿ. ನಿಮ್ಮ ಮಾತಿಗೆ ಬೆಲೆ ಕೊಡದೇ ಇರುವುದರಿಂದ ಬೇಸರವಾದೀತು.
ಮೀನ ರಾಶಿ: ಇಂದು ನಿಮ್ಮ ಆಸೆಗಳನ್ನು ಪೂರ್ಣ ಮಾಡಿಕೊಳ್ಳುವಿರಿ. ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಾರಂಭಿಸಬಹುದು. ನೀವು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ಸಾಧ್ಯತೆ ಇದೆ. ಪ್ರಭಾವಿ ವ್ಯಕ್ತಿಗಳ ಭೇಟಿಯಾಗಬಹುದು. ಇಂದು ನಿಮ್ಮ ಸರ್ಕಾರಕ್ಕೆ ಸಂಬಂಧಪಟ್ಟ ಕೆಲಸಗಳು ವೇಗವಾಗಿ ಆಗುತ್ತವೆ. ರಾಜಕೀಯ ವ್ಯಕ್ತಿಗಳ ಪ್ರಭಾವವನ್ನು ಬಳಸಿಕೊಳ್ಳುವಿರಿ. ನಿಮ್ಮ ಆಸೆಗಳನ್ನು ಪೂರ್ಣ ಮಾಡಿಕೊಳ್ಳಲಾಗದು. ಭಾವನೆಗಳಿಗೆ ಬೆಲೆ ಕೊಡದೇ ಇರುವುದು ನಿನಗೆ ಬೇಸರವಾಗಬಹುದು. ಬಂಧುಗಳ ಆಗಮನದಿಂದ ಇಂದಿನ ವ್ಯವಹಾರದಲ್ಲಿ ಬದಲಾವಣೆ ಇರುವುದು. ಪಿತ್ರಾರ್ಜಿತ ಆಸ್ತಿಯ ಬಗ್ಗೆ ನಿಮಗೆ ಅಷ್ಟಾಗಿ ಆಸಕ್ತಿಯು ಇರದು. ಎಲ್ಲ ಸಮಯದಲ್ಲಿಯೂ ನಿಮ್ಮ ಪರಿಸ್ಥಿತಿಯು ಸಕಾರಾತ್ಮಕವಾಗಿ ಇರದು. ಮಾತಿನ ಮೇಲೆ ಹಿಡಿತವು ಬೇಕಾದೀತು. ನಿಮಗೆ ಸಂಗಾತಿಯ ಮೇಲೆ ಸಿಟ್ಟಾಗುವ ಸನ್ನಿವೇಶವು ಬರಲಿದೆ. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಉತ್ತರವನ್ನು ಕೊಡುವ ಅವಶ್ಯಕ ಇರುವುದಿಲ್ಲ. ಉದ್ಯೋಗದಲ್ಲಿ ವಿಶ್ವಾಸಗಳಿಸುವುದು ಮುಖ್ಯ.
-ಲೋಹಿತ ಹೆಬ್ಬಾರ್ – 8762924271 (what’s app only)