
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಆಶ್ಲೇಷಾ, ವಾರ: ಬುಧ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ಐಂದ್ರ, ಕರಣ: ಬವ, ಸೂರ್ಯೋದಯ – 06 : 18 am, ಸೂರ್ಯಾಸ್ತ – 06 : 58 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 12:39 – 14:14 ಗುಳಿಕ ಕಾಲ 11:03 – 12:39 ಯಮಗಂಡ ಕಾಲ 07:53 – 09:28
ತುಲಾ ರಾಶಿ: ಸಮಾನ ಮನಸ್ಕರ ಜೊತೆ ದೂರ ಪ್ರಯಾಣಕ್ಕೆ ಯೋಜನೆ ಸಿದ್ಧವಾಗಲಿದೆ. ಭೂಮಿ ವ್ಯವಹಾರದಲ್ಲಿ ಅನಿರೀಕ್ಷಿತ ಆದಾಯವು ಆಗುವುದು. ನೀವು ಅನುಮಾನ ಬರುವಂತಹ ವರ್ತನೆಯನ್ನು ತೋರಿಸುವಿರಿ. ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಇರಲು ಪ್ರಯತ್ನಿಸಿ. ನಿಮ್ಮ ಕೆಲಸವು ಮಂದಗತಿಯಲ್ಲಿ ಸಾಗಬಹುದು. ಮನೆಯ ನಿರ್ಮಾಣವೂ ನಿಧಾನವಾಗಿ ನಿಮಗೆ ಬೇಸರವಾದೀತು. ಬಾರದೆಂದು ಅಂದುಕೊಂಡ ಹಣ ನಿಮ್ಮ ಕೈಸೇರಿ ಸಂತಸ ತರುವುದು. ನೀವು ನಡೆಸುವ ಉದ್ಯಮವೂ ಸದ್ಯ ವೇಗವನ್ನು ಕಳೆದುಕೊಳ್ಳಬಹುದು. ನೀವು ಮನೆಯಲ್ಲಿ ಮಾತನಾಡಲು ಹಿಂದೇಟು ಹಾಕಬಹುದು. ಯಾರದೋ ಅನುಕಂಪವನ್ನು ಪಡೆಯಲು ನೀವು ಪ್ರಯತ್ನಿಸುವಿರಿ. ನಿಮ್ಮದಾದ ಕೆಲವು ಆಚರಣೆಗಳನ್ನು ನೀವು ಬಿಡದೇ ಮಾಡುವಿರಿ. ಪಕ್ಷಪಾತ ಧೋರಣೆಯನ್ನು ನೀವು ಬಿಟ್ಟರೆ ಮಾತ್ರ ಒಳ್ಳೆಯದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು. ಕಾನೂನಿನ ತೀರ್ಮಾನಕ್ಕೆ ತಲೆಬಾಗುವುದು ಸೂಕ್ತ.
ವೃಶ್ಚಿಕ ರಾಶಿ: ಸಂಗಾತಿಯು ಅನ್ಯರ ಜೊತೆ ಹೋದ ಕನಸು ಬೀಳುವುದು. ನಿಮ್ಮೊಳಗೆ ಆತಂಕ ಹೆಚ್ಚಾಗುವುದು. ಉದ್ಯೋಗದಿಂದ ಹೊರಬಂದು ಮನೆಯ ಬಗ್ಗೆ ಗಮನ ಹೆಚ್ಚಾಗುವುದು. ಇಂದು ನಿಮ್ಮ ಕಲ್ಪನೆಯಂತೆ ಬದುಕು ನಡೆಯದು ಎಂಬ ಸತ್ಯ ತಿಳಿಯುವುದು. ದೂರಪ್ರಯಾಣ ಸುಖಕರವಾಗಿ ಇರುವಿದಾದರೂ ಅನಂತರ ಕಷ್ಟಪಡಬೇಕಾದೀತು. ನೀವು ಇಂದು ಕುಟುಂಬದ ವೃತ್ತಿಯಲ್ಲಿ ಮುಂದುವರಿಯುವ ಆಸೆ ಬರುವುದು. ಅನ್ಯರಿಗೆ ತೋರಿದ ಸಹಾನುಭೂತಿಯಿಂದ ನಿಮಗೇ ವಂಚನೆ. ಇಂದು ನೀವು ದೂರ ಪ್ರಯಾಣವನ್ನು ಇಷ್ಟಪಡುವಿರಿ. ದೈವದ ಸ್ಮರಣೆಯನ್ನು ಮಾಡಿ ನೀವು ಮುಂದುವರಿಯುವುದು ಒಳ್ಳೆಯದು. ಮೇಲಧಿಕಾರಳಿಂದ ಉದ್ಯೋಗದ ವರದಿ ನೀಡಲು ಆದೇಶ ಬರಬಹುದು. ಉತ್ತಮ ಹವ್ಯಾಸದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ವಿವಾಹದ ವಿಳಂಬಕ್ಕೆ ದೈವಜ್ಞರ ಬಳಿ ಹೋಗಿ ವಿಚಾರಿಸಿ. ಯಾರನ್ನೂ ಅವಲಂಬಿಸುವುದು ನಿಮಗೆ ಕಷ್ಟವಾಗುವುದು. ಕಾದಾಟದಿಂದ ಸಮಯವು ವ್ಯರ್ಥವಾಗಲಿದೆ. ಬೇಸರದ ಮಾತಿನಿಂದ ಆಪ್ತರನ್ನು ದೂರ ಮಾಡಿಕೊಳ್ಳುವಿರಿ.
ಧನು ರಾಶಿ: ಯಾರ ಸಹವಾಸಕ್ಕೂ ಹೋಗದೇ ಮೌನದಿಂದ ನಿಮ್ಮಷ್ಟಕ್ಕೆ ಕೆಲಸ ಮಾಡುವಿರಿ. ಆರ್ಥಿಕ ವಿಚಾರಕ್ಕೆ ಸಂಗಾತಿಯ ಜೊತೆ ವೈಮನಸ್ಯ ಉಂಟಾಗುವುದು. ಮನೆಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಯಾರ ಬಗ್ಗೆಯೂ ತಿಳಿಯದೇ ಮಾತನಾಡುವುದು ನಿಮಗೆ ಉಚಿತವಲ್ಲ. ವಂಚನೆಗೆ ನೀವು ಬೆಲೆಯನ್ನು ಕೊಡಬೇಕಾದೀತು. ಇಂದಿನ ಕೆಲವು ಅಂಶಗಳು ನಿಮಗೆ ಪಾಠವಾಗಲಿವೆ. ನೀವು ಇಂದು ಬಯಸಿದ್ದನ್ನು ಪಡೆದುಕೊಂಡು ನೆಮ್ಮದಿಯಾಗಿ ಇರುವಿರಿ. ಮನೆಯವರ ವೈರವನ್ನು ಕಟ್ಟಿಕೊಂಡು ಏನು ಸಾಧಿಸಲು ಸಾಧ್ಯ. ಪ್ರೀತಿಯಿಂದ ಅವರ ಜೊತೆ ಬರೆಯಿರಿ. ನಂಬಿಕೆಗೆ ಬೆಲೆ ಕೊಡದೇ ದಾಖಲೆಗಳನ್ನು ನಿರ್ವಹಣೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಓದಿನ ಆಸಕ್ತಿಯನ್ನು ತೋರಿಸಲು ಪೋಷಕರು ಶ್ರಮಿಸುವರು. ಅನಿರೀಕ್ಷಿತ ವಾಹನ ದುರಸ್ತಿಯಿಂದ ಧನನಷ್ಟವಾಗಲಿದೆ. ತಂದೆಯಿಂದ ಸಹಕಾರವನ್ನು ಪಡೆಯುವಿರಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಪ್ರೇಮದಲ್ಲಿ ಯಾರನ್ನಾದರೂ ನಿಮ್ಮವರನ್ನಾಗಿ ಮಾಡಿಕೊಳ್ಳುವ ಕಲೆ ನಿಮಗೆ ತಿಳಿಯದು.
ಮಕರ ರಾಶಿ: ಪ್ರೀತಿಯನ್ನು ಬಯಸುವವರಿಗೆ ಕೊಡುವಿರಿ. ನಿರುದ್ಯೋಗದ ಕಾರಣಕ್ಕೆ ಎಲ್ಲರೂ ನಿಮ್ಮನ್ನು ತಮಾಷೆ ಮಾಡಬಹುದು. ನೀವು ಸಣ್ಣ ಬುದ್ಧಿಯನ್ನು ಬಿಟ್ಟು ವ್ಯವಹರಿಸಿದರೆ ವ್ಯಾಪರಕ್ಕೆ ಅನುಕೂಲವಿದೆ. ಅನೇಕ ಶುಭಸೂಚನೆಗಳು ನಿಮಗೆ ಕಾಣಿಸುವುದು. ನಿಮ್ಮದೇ ಹಣವಾದರೂ ನೀವು ಅದನ್ನು ಪಡೆಯಲು ಓಡಾಟ ಮಾಡಬೇಕಾದೀತು. ನಿಮಗೆ ಹೇಳಿದ ಕಾರ್ಯವನ್ನು ಶ್ರದ್ಧೆಯಿಂದ ಮಾಡುವಿರಿ. ನಕಾರಾತ್ಮಕವಾಗಿ ಹೇಳಿದಾಗಲೇ ನಿಮ್ಮ ಮನಸ್ಸಿಗೆ ತಾಗುವುದು. ಬಂಧುಗಳನ್ನು ನೀವು ಭೇಟಿ ಮಾಡುವ ಸಂದರ್ಭವು ಬರಬಹುದು. ನಿಮ್ಮ ನಿಯಮ ಪಾಲನೆ ನಿಮಗೆ ಖುಷಿ ಕೊಟ್ಟೀತು. ನಿಮ್ಮ ಕಾರ್ಯಗಳಿಗೆ ಬಂಧುಗಳ ಸಹಕಾರ ಸಿಗಲಿದೆ. ಉತ್ಪನ್ನಗಳಿಗೆ ನಿಗದಿಪಡಿಸಿ ಮೌಲ್ಯ ಹೆಚ್ಚಾಗುವುದು. ಕಾನೂನಿನ ವ್ಯವಹಾರವು ನಿಮಗೆ ಬೇಸರ ತರಿಸಬಹುದು. ಸಂಗಾತಿಯನ್ನು ನೀವು ಖುಷಿಪಡಿಸಲು ಪ್ರಯತ್ನಿಸುವಿರಿ. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಸಂಗಾತಿಯನ್ನು ಮನವೊಲಿಸುವುದು ನಿಮಗೆ ಕಷ್ಟವಾಗಿ, ಸಿಟ್ಟುಗೊಳ್ಳಬೇಕಾಗುವುದು.
ಕುಂಭ ರಾಶಿ: ಮಾನಸಿಕ ದೃಢತೆಗೆ ಸಂಬಂಧವನ್ನು ಬೆಳೆಸುವುದು ಉತ್ತಮ. ನಿಮ್ಮ ವೃತ್ತಿಯ ಆದಾಯಕ್ಕಿಂತ ಬೇರೆ ಕಡೆಯಿಂದ ಆದಾಯ ಸಿಗಲಿದೆ. ಇಂದು ನಿಮ್ಮ ಕೆಲವು ಮಾತುಗಳು ಬೇರೆಯವರು ಆತುರದ ನಿರ್ಧಾರವನ್ನು ತೆಗದುಕೊಳ್ಳುವಂತೆ ಮಾಡಬಹುದು. ಇಂದು ನಿಮ್ಮ ಸ್ನೇಹ ಸಂಬಂಧವು ಸಡಿಲಾಗುವ ಸಾಧ್ಯತೆ ಇದೆ. ಅಗ್ನಿ, ವಿದ್ಯುತ್ ಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಜಾಗರೂಕತೆ ಇರಲಿ. ಹೊಸ ವಿಚಾರದ ಸಾಹಿತ್ಯ ಸಂಪಾದನೆಗೆ ತೊಡಗುವಿರಿ. ಕಛೇರಿಯಲ್ಲಿ ಒತ್ತಡದ ವಾತಾವರಣವನ್ನು ನೀವು ನಿಭಾಯಿಸಲು ಕಷ್ಟವಾದೀತು. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವ ಸಾಧ್ಯತೆ ಇದೆ. ಸಾಮಾಜಿಕ ರಂಗದಲ್ಲಿ ನೀವು ಕಲಿಯುವ ಪಾಠವು ಇರಲಿದೆ. ವಸ್ತುಗಳನ್ನು ಕಳೆದುಕೊಂಡು ಸಂಕಟಪಡಬೇಕಾದೀತು. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವ ಕೊಡುವಿರಿ. ನೀವು ಹೇಳಿದ್ದನ್ನು ಬಂಧುಗಳು ಮಾಡಿಕೊಡುವರು.
ಮೀನ ರಾಶಿ: ಸುತ್ತಲಿನ ವಿರೋಧದ ನಡುವೆಯೂ ನಿಮ್ಮ ಅಭಿಪ್ರಾಯ ಹಲವರ ಬಾಯಿ ಮುಚ್ಚಿಸುವುದು. ಪರರ ಭಾಗ್ಯವನ್ನು ನೆನೆದು ಕೊರಗುವುದಕ್ಕಿಂತ ನಿಮ್ಮ ಇರುವ ಭಾಗ್ಯವನ್ನು ನೆನೆದು ಸಂತೋಷಪಡಿ. ಧಾರ್ಮಿಕ ಕಾರ್ಯಗಳಿಂದ ಉತ್ತಮ ಯಶಸ್ಸು ಪ್ರಾಪ್ತಿಯಾಗುವುದು. ನೀರಿನ ಸೇವೆನೆಯಿಂದ ಆರೋಗ್ಯ ಸುಧಾರಣೆ ಸಾಧ್ಯತೆ. ನಿಮಗೆ ತೋರಿದ ಪ್ರೀತಿಯನ್ನು ಉಳಿಸಿಕೊಳ್ಳಬೇಕಾಗುವುದು. ತೆರಿಗೆಗೆ ಸಂಬಂಧಿಸಿದಂತೆ ನಿಮ್ಮ ದಾಖಲೆಗಳು ಸರಿಯಾಗಿರಲಿ. ಆರೋಗ್ಯವು ಹದವು ತಪ್ಪಬಹುದು. ವಾಹನಕ್ಕಾಗಿ ಖರ್ಚನ್ನು ಮಾಡಬೇಕಾದೀತು. ನಿಮ್ಮ ಸಹಾಯವನ್ನು ಯಾರಾದರೂ ಕೇಳಿಬರಬಹುದು. ಒಂಟಿಯಾಗಿ ಇರಲು ನೀವಿಂದು ಇಷ್ಟಪಡಬಹುದು. ಭೂಮಿಯ ಕಲಹವು ತಾತ್ಕಾಲಿಕವಾಗಿ ನಿಲ್ಲಬಹುದು. ನಿರೀಕ್ಷಿತ ಕಾರ್ಯದಲ್ಲಿ ವಿಘ್ನವು ಉಂಟಾಗಲಿದೆ. ಮೊಂಡು ಧೈರ್ಯವನ್ನು ಮಾಡುವುದು ಬೇಡ. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ.
Published On - 1:57 am, Wed, 6 August 25