Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ಆಲಸ್ಯವು ನಿಮಗೆ ಎಲ್ಲ ಕಾರ್ಯದಲ್ಲಿ ಹಿನ್ನಡೆ ತಂದೀತು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 04, 2023 | 12:20 AM

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಅಕ್ಟೋಬರ್ 04) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ಆಲಸ್ಯವು ನಿಮಗೆ ಎಲ್ಲ ಕಾರ್ಯದಲ್ಲಿ ಹಿನ್ನಡೆ ತಂದೀತು
ಪ್ರಾತಿನಿಧಿಕ ಚಿತ್ರ
Follow us on

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಸಿದ್ಧಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06-22ಕ್ಕೆ, ಸೂರ್ಯಾಸ್ತ ಸಂಜೆ 06 – 19ಕ್ಕೆ, ರಾಹು ಕಾಲ ಮಧ್ಯಾಹ್ನ 12:21 – 01:51ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:53 – 09:22ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 10:52 – 12:21ರ ವರೆಗೆ.

ಮೇಷ ರಾಶಿ : ಸ್ನೇಹವು ಕಡಿಮೆಯಾಗಬಹುದು. ನಿಮಗೆ ಆಪ್ತರ ಜೊತೆ ಮಾತನಾಡದೇ ನೆಮ್ಮದಿಯು ಸಿಗದೇಹೋದೀತು. ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ತನ್ನವರ ಬಗ್ಗೆ ನಂಬಿಕೆ ಇರದು. ಮಾತನ್ನು ಕಡಿಮೆ ಮಾಡಿ ಏಕಾಂಗಿಯಾಗಿ ಇರುವಿರಿ. ನಿಮಗೆ ಹಲವು ದಿನಗಳಿಂದ ಬಯಸಿದ್ದು ಸಿಗಬಹುದು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬರಲಿವೆ. ಮೋಜಿಗಾಗಿ ಹಣವನ್ನು ವ್ಯಯಿಸುವಿರಿ. ಪುಣ್ಯಸ್ಥಳಗಳಿಗೆ ಹೋಗುವ ಮನಸ್ಸಿದ್ದರೂ ಕಾರ್ಯದ ಒತ್ತಡದಿಂದ ಅದು ಸಾಧ್ಯವಾಗದು. ಅನಿರೀಕ್ಷಿತ ಸಂಪತ್ತು ನಿಮ್ಮನ್ನು ಬಂದು ಸೇರಬಹುದು.‌ ನಿಮ್ಮ ಸಂತಸಕ್ಕೆ ಮಿತಿ ಇರದು. ಸಜ್ಜನರ ಸಹವಾಸವನ್ನು ಇಷ್ಟಪಡುವಿರಿ. ಸುಬ್ರಹ್ಮಣ್ಯನ ಸ್ತುತಿಯು ನಿಮಗೆ ಶುಭವಿರಲಿದೆ.

ವೃಷಭ ರಾಶಿ : ಸ್ವತಃ ಉದ್ಯೋಗವನ್ನು ಮಾಡುವ ಆಲೋಚನೆಯು ಬರಬಹುದು. ಅಪರಿಚಿತರ ಜೊತೆ ಸಲುಗೆಯಿಂದ ಇರುವಿರಿ. ಆಲಸ್ಯವು ನಿಮಗೆ ಎಲ್ಲ ಕಾರ್ಯದಲ್ಲಿ ಹಿನ್ನಡೆ ತಂದೀತು. ಉತ್ತಮ‌ ವಸ್ತುಗಳ ಖರೀದಿ ಮಾಡುವಿರಿ. ಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗುವುದು. ಸಂಗಾತಿಯ ಜೊತೆ ವಾಗ್ವಾದ ಮಾಡುವಿರಿ. ಇಂದು ಕಛೇರಿಯಲ್ಲಿ ಆದ ಕಲಹವು ಉದ್ಯೋಗವನ್ನು ಕಳೆದುಕೊಳ್ಳುವ ಮಟ್ಟಕ್ಕೂ ಹೋಗುವುದು.‌ ತಮಾಷೆಯ ಮಾತುಗಳೂ ನಿಮಗೆ ಸರಿಯಾದ ತೊಂದರೆ ತಂದೀತು. ಒಂದೇ ವಿಚಾರವನ್ನು ಹಲವರಿಂದ ಕೇಳುವಿರಿ.

ಮಿಥುನ ರಾಶಿ : ಭವಿಷ್ಯದ ಬಗ್ಗೆ ನಿಮಗೆ ಏನೇನೋ ಆಲೋಚನೆಗಳು ಬರಬಹುದು. ಮಾತಿನ ಅಸ್ಪಷ್ಟತೆಯು ಕೇಳುಗರಿಗೆ ಕಷ್ಟವಾದೀತು. ಸಣ್ಣ ವ್ಯಾಪಾರಿಗಳಿಗೆ ಅಲ್ಪ ಲಾಭವು ಆಗುವುದು. ಕಲಾವಿದರು ಹೆಚ್ಚು ಶ್ರಮ ಹಾಕಿದರೆ ತಮ್ಮ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿಯಾರು. ನಿಮ್ಮ ಕಾರ್ಯಕ್ಕೆ ವಿರೋಧಿಗಳ ಪ್ರಶಂಸೆಯೂ ಸಿಗಬಹುದು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಬಹುದು. ಸಾಮಾಜಿಕ ಕಾರ್ಯಗಳನ್ನು ಮಾಡಲು ನಿಮಗೆ ಇಂದು ಉತ್ಸಾಹ ಇರಲಿದೆ. ಮನಸ್ಸಿನಲ್ಲಿ‌ ಯಾವುದಾದರೂ ಭೀತಿಯು ಕಾಡಬಹುದು. ಅತಿಯಾಯದೆ ಆಸೆಯಿಂದ ನಿಮಗೆ ದುಃಖವಿದೆ. ನಿಮ್ಮ ಬಗ್ಗೆ ನೀವು ಸ್ವಲ್ಪ ಅವಲೋಕನ‌ ಮಾಡಿಕೊಳ್ಳಿ. ಎಲ್ಲವನ್ನೂ ನೀವು ಅತಿಯಾಗಿಸುವಿರಿ. ಇಂದು ಸಿಗಬೇಕಾದ ಕಾಲಕ್ಕೆ ಸಿಗುವುದು ಎಂಬ ನಂಬಿಕೆ ಇರಲಿ.

ಕರ್ಕ ರಾಶಿ : ಕಿರಿಯರಿಂದ ನೀವು ಸಲ್ಲದ ಮಾತನ್ನು ಕೇಳುವಿರಿ. ಉದ್ಯೋಗದಲ್ಲಿ ನಿಮಗೆ ಬೆಂಬಲಿಸುವವರು ಹೆಚ್ಚಿರಬಹುದು. ಸಂಗಾತಿಯು ನಿಮ್ಮ ಬಗ್ಗೆ ಸರಿಯಾಗಿ‌ ತಿಳಿದುಕೊಳ್ಳದೇಹೋಗಬಹುದು. ನಿಮಗೆ ಕೆಲವು ವಿಚಾರದಲ್ಲಿ ಕಾನೂನಿನ ತೊಂದರೆ ಕಾಡಬಹುದು. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ಸ್ತ್ರೀಯರಿಗೆ ಮನೆಯ ಕೆಲಸವು ಸಾಕೆನಿಸಿ ಹೊರಗೆ ಹೋಗಬೇಕು ಎನಿಸಬಹುದು. ಬಂಧುಗಳ ಬಗ್ಗೆ ನಿಮಗೆ ಪ್ರೀತಿ ಕಡಿಮೆ ಆದೀತು. ಅಸಭ್ಯ ಮಾತುಗಳಿಂದ ನಿಮ್ಮ ನಡವಳಿಕೆಯು ಗೊತ್ತಾಗುವುದು. ಅಧಿಕಾರವು ನಿಮ್ಮಿಂದ ತಪ್ಪಿಹೋಗಬಹುದು. ಸರಿಯಾಗಿ ಯೋಜನೆ ಮಾಡಿಕೊಳ್ಳದೇ ಕಾರ್ಯವನ್ನು ಆರಂಭಿಸುವಿರಿ. ‌ಮೇಲ್ನೋಟಕ್ಕೇ ನಿಮ್ಮ ಸ್ವಭಾವದ ಗೊತ್ತಾಗುವುದು. ಕುಲದೇವರ ಆರಾಧನೆಯನ್ನು ಮಾಡಿ.