ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 21 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಮೂಲಾ, ಯೋಗ: ಶೋಭನ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 29 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:26 ರಿಂದ 01:57 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:24ರವರೆಗೆ, ಗುಳಿಕ ಕಾಲ ಬೆಳಿಗ್ಗೆ 10:55 ರಿಂದ 12:26ರ ವರೆಗೆ.
ಮೇಷ ರಾಶಿ: ಪ್ರೇಯಸಿಯ ನೆನಪನ್ನು ನುಂಗುವುದು ಕಷ್ಟವೆನಿಸಬಹುದು. ವಾಹನ ಸಂಚಾರಕ್ಕೆ ತೊಂದರೆ ಬರಬಹುದು. ನೀವು ಅಂದುಕೊಂಡಷ್ಟು ಸರಳ ಕೆಲಸಗಳು ಇಂದು ಆಗದು. ಕೆಲವು ಸಂಗತಿಯನ್ನು ಅನುಭವಿಸದೇ ಇರಲಾಗದು. ಕಾರಣವಿಲ್ಲದೇ ಕೋಪವು ಬರುವುದು. ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿಮಗೆ ಸಮಾರಂಭಗಳಿಗೆ ಆಹ್ವಾನವು ಬರಬಹುದು. ಬಹು ದಿನಗಳ ಅನಂತರ ಮನೆಯವರ ಜೊತೆ ಕಾಲ ಕಳೆಯುವ ಅವಕಾಶ ಸಿಗುವುದು. ದಾಂಪತ್ಯದಲ್ಲಿ ಪರಸ್ಪರ ಕಾದಾಟವು ಮಿತಿಮೀರಬಹುದು. ಸಹೋದರರಿಗೆ ಉಡುಗೊರೆಯನ್ನು ಕೊಟ್ಟು ಖುಷಿಪಡಿಸುವಿರಿ. ಗೆಳೆತನದಲ್ಲಿ ಮಿತಿ ಇರಲಿ. ವಿಜ್ಞಾನಿಗಳ ಭೇಟಿಯಾಗುವ ಸನ್ನಿವೇಶವು ಬರಲಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಕೊರತೆ ಕಾಣುವುದು.
ವೃಷಭ ರಾಶಿ: ಸಂಗಾತಿಯ ಸ್ವಭಾವವನ್ನು ಹತ್ತಿರದಿಂದ ತಿಳಿಯುಲು ಪ್ರಯತ್ನಿಸುವಿರಿ. ಅತಿಯಾದ ಬಂಧನವು ನಿಮಗೆ ಕಿರಿಕಿರಿ ತರಿಸಬಹುದು. ವೃತ್ತಿಯಲ್ಲಿ ನಿಮ್ಮ ಮೇಲೆ ಅಭಿಮಾನವು ಹೆಚ್ಚಾಗಬಹುದು. ಸ್ನೇಹಿತರ ಜೊತೆ ಸಮಯವು ವ್ಯರ್ಥವಾದೀತು. ನಿಮ್ಮ ನಂಬಿಕೆಗೆ ತೊಂದರೆಯಾಗುವುದು. ಸಂಗಾತಿಯ ಕಹಿಯಾದ ಮಾತುಗಳು ನಿಮಗೆ ಜೀರ್ಣವಾಗದು. ಹಣಕಾಸಿನ ವೃದ್ಧಿಗೆ ಮಾರ್ಗೋಪಾಯ ಅಗತ್ಯ. ನೀವು ಬಯಸಿದ ವಸ್ತುವು ಯಾವುದೋ ರೂಪದಲ್ಲಿ ನಿಮ್ಮನ್ನು ಬಂದು ಸೇರಬಹುದು. ಧಾರ್ಮಿಕ ಶ್ರದ್ಧೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಸರ್ಕಾರದ ಕೆಲಸಕ್ಕಾಗಿ ಓಡಾಡುವುದು ನಿಮಗೆ ಬೇಸರ ತಂದೀತು. ಖುಷಿಯ ದಾರಿಯನ್ನು ಹುಡುಕುವಿರಿ.
ಮಿಥುನ ರಾಶಿ: ನಿಮ್ಮ ಪ್ರಯತ್ನಕ್ಕೆ ಬೆಲೆ ಕಟ್ಟಲಾಗದು ಎಂದು ಇತರರಿಗೆ ತಿಳಿಯುವುದು. ಮಕ್ಕಳ ಮೇಲೆ ಪ್ರೀತಿ ಅಧಿಕವಾಗುವುದು. ಬೇಕಾದುದನ್ನು ಮಾಡುವ ಆಸೆ ಇರುವುದು. ಕಾರ್ಯದ ಬಗ್ಗೆ ಕಛೇರಿಯನ್ನು ಅಧಿಕಾರಿಯ ಜೊತೆ ಚರ್ಚಿಸುವಿರಿ. ಬೇಡದ ಸಲಹೆಯನ್ನು ಕೊಡಬಹುದು. ವಿವಾಹದಲ್ಲಿ ನಿರಾಸಕ್ತಿಯು ಬರಬಹುದು. ಸ್ವತಂತ್ರವಾಗಿರುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ. ಅತಿಥಿಗಳನ್ನು ಸತ್ಕರಿಸುವಿರಿ. ಆರ್ಥಿಕತೆಯ ಮೇಲೆ ಹೆಚ್ಚು ಒಲವು ಉಂಟಾಗುವುದು. ಸ್ತ್ರೀಯರಿಂದ ಕೆಲವು ಸಹಾಯವು ಸಿಗುವುದು. ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಿ ಓದಿಸುವುದು ಸೂಕ್ತವಾದೀತು. ಮಾತಿನಲ್ಲಿ ನಿಖರತೆ ಇರಲಿ. ಪ್ರತಿ ಕ್ಷಣವೂ ಅಮೂಲ್ಯ ಎನ್ನಿಸುವಂತೆ ಕಾರ್ಯವಿರುವುದು. ಮನಸ್ಸಿನ ತಾಪವನ್ನು ಯಾರ ಮುಂದಾದರೂ ಹೇಳಿ ಕಡಿಮೆ ಮಾಡಿಕೊಳ್ಳುವಿರಿ.
ಕಟಕ ರಾಶಿ: ನಿಮ್ಮ ಕೆಲಸಕ್ಕೆ ಹಣ ದೊರಕುವುದು ಎಂಬ ನಿರೀಕ್ಷೆಯು ಇರುವುದು. ತಾಯಿಯ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಲು ಓಡಾಡಬೇಕಾಗಬಹುದು. ಯಾರದೋ ಮಾತಿನಿಂದ ಮನೆಯಲ್ಲಿ ಅಸಮಾಧಾನದ ವಾತಾವರಣವು ಇರುವುದು. ನಿಮ್ಮ ಸ್ವಭಾವಗಳು ನಿಮ್ಮವರಿಗೆ ಇಷ್ಟವಾಗದೇ ಹೋಗುವುದು. ನಿಮ್ಮ ಮಾತುಗಳಿಗೆ ನೌಕರರು ಬೆಲೆಕೊಡದೇ ಹೋಗಬಹುದು. ಸಂಬಂಧವನ್ನು ಆತ್ಮೀಯಗೊಳಿಸಲು ಪ್ರಯತ್ನಪಡುವಿರಿ. ಉದ್ಯೋಗದ ಸ್ಥಳದಲ್ಲಿ ಭಡ್ತಿಯ ನಿರೀಕ್ಷೆ ಇರುವುದು. ಮಾತನ್ನು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮಗೆ ಸಿಗುವ ಗೌರವದಲ್ಲಿ ವ್ಯತ್ಯಾಸವಾಗಿ ಸಿಟ್ಟು ಬರಬಹುದು. ದಾಂಪತ್ಯದಲ್ಲಿ ಉಂಟಾದ ಬಿರುಕನ್ನು ಮಾತಿನಿಂದಲೇ ಸರಿಮಾಡಿಕೊಳ್ಳಿ. ಮಕ್ಕಳ ವಿವಾಹದ ಚಿಂತೆಯು ಕಾಡಲಿದೆ.