Daily Horoscope: ಹೂಡಿಕೆಯತ್ತ ಗಮನಹರಿಸುವುದು ಬೇಡ, ಹಣ ಕಳೆದುಕೊಳ್ಳಬೇಕಾದೀತು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 23, 2023 | 12:15 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 23) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಹೂಡಿಕೆಯತ್ತ ಗಮನಹರಿಸುವುದು ಬೇಡ, ಹಣ ಕಳೆದುಕೊಳ್ಳಬೇಕಾದೀತು
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 23 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಪರಿಘ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಸಂಜೆ 05:27 ರಿಂದ 07:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:39 ರಿಂದ 02:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:51 ರಿಂದ 05:27ರ ವರೆಗೆ.

ಮೇಷ: ನಿಮ್ಮ ಪ್ರಯತ್ನವು ಸಂಪೂರ್ವಾಗಿರಲಿ. ಯಶಸ್ಸನ್ನು ಪಡೆಯುವ ಹಂಬಲ ಬೇಡ. ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು ಆಪ್ತರ ಜೊತೆ ಮಾತನಾಡಿ. ಯಾವುದೇ ಹೂಡಿಕೆಯತ್ತ ಗಮನಹರಿಸುವುದು ಬೇಡ. ದುರ್ಬಲರಿಗೆ ಸಹಾಯವನ್ನು ಮಾಡಿ. ನಕಾರಾತ್ಮಕ ಆಲೋಚನೆಗಳಿಗೆ ಆಸ್ಪದವನ್ನು ಕೊಡುವುದು ಬೇಡ. ಪ್ರಯಾಣವನ್ನು ಮಾಡುವ ಅನಿವಾರ್ಯವಿದ್ದರೆ ಮಾಡಿ. ಅನಗತ್ಯ ಖರ್ಚನ್ನು ನಿಲ್ಲಿಸಿ. ಹೊರಗಡೆಯ ಆಹಾರಕ್ಕೆ ಮನೆಯಲ್ಲಿ ಕಡಿವಾಣ ಹಾಕಬಹುದು. ಕೆಲವು ಸಭೆಗಳಿಗೆ ಭೇಟಿ ನೀಡಬೇಕಾಗಬಹುದು. ಸಾಮಾಜಿಕ ಚಿಂತನೆಯನ್ನು ಬೆಳೆಸಿಕೊಳ್ಳುವುದು ಉತ್ತಮ.

ವೃಷಭ: ಮಾನಸಿಕ ಒತ್ತಡವು ಕಡಿಮೆ ಇದ್ದರೂ ನೆಮ್ಮದಿಯ ಕೊರತೆ ಕಾಣಿಸಿಕೊಳ್ಳಲಿದೆ. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಕ್ಷಮಿಸುವ ಸ್ವಭಾವವು ಇಷ್ಟವಾದೀತು. ಸ್ನೇಹಿತರು ನಿಮ್ಮ‌ ಸಹಾಯವನ್ನು ಬಯಸುವರು. ಆಪದ್ಧನವನ್ನು ವಿನಿಯೋಗ ಮಾಡಬೇಕಾದೀತು. ದುರಾಲೋಚನೆಗಳು ಒಂದೊಂದಾಗಿಯೇ ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ನೂತನ ವಸ್ತುಗಳ ಖರೀದಿಯಿಂದ ನಿಮಗೆ ಸ್ವಲ್ಪ ಸಂತೋಷವೂ ಆಗುವುದು. ಬಂಧುಗಳ ಭೇಟಿಯು ಖುಷಿಯನ್ನು ಕೊಡುವುದು. ಕುಲದೇವರ ಸ್ತೋತ್ರವನ್ನು ಪಠಿಸಿ.

ಮಿಥುನ: ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸಲು ಹೋಗುವಿರಿ. ಸಮಾರಂಭಗಳಿಗೆ ಹೋಗಿ ಎಲ್ಲರ ಜೊತೆ ಖುಷಿಯಿಂದ ಕಾಲವನ್ನು ಕಳೆಯುವಿರಿ. ಆರೋಗ್ಯದಲ್ಲಿ ವ್ಯತ್ಯಾಸವಾಗಿ ಕಷ್ಟಪಡಬೇಕಾಗುವುದು. ಯೋಜನೆಯನ್ನು ಬದಲಿಸಿದ್ದಕ್ಕೆ ಬೇಸರಗೊಳ್ಳುವಿರಿ. ಹೇಳಲಾಗದ ಭಯವು ನಿಮ್ಮನ್ನು ಕಾಡಬಹುದು. ಮಕ್ಕಳ‌ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಆಭರಣವನ್ನು ಖರೀದಿಸುವ ಮನಸ್ಸಾಗಲಿದೆ. ಹಳೆಯದನ್ನು ನೆನಪಿಸಿಕೊಂಡು ಬೇಸರಗೊಳ್ಳುವಿರಿ. ಏಕಾಂತವು ಬೇಕೆ ಎನಿಸಬಹುದು. ಮಹಾವಿಷ್ಣುವಿನ ಸ್ತೋತ್ರವನ್ನು ಪಠಿಸಿ.

ಕಟಕ: ನೀವು ಸ್ವಾರ್ಥಿಗಳಂತೆ ತೋರುವಿರಿ. ಎಲ್ಲವನ್ನೂ ನಿಮಗೆ ಬೇಕೆನ್ನುವ ಬಯಕೆ ಇರಲಿದೆ. ಆರ್ಥಿಕವಾಗಿ ವೃದ್ಧಿಯಾಗಲು ತಂತ್ರಗಳನ್ನು ಹೂಡುವ ಅವಶ್ಯಕತೆ ಇದೆ. ಪ್ರಭಾವೀ ವ್ಯಕ್ತಿಗಳ ಮೆಚ್ಚುಗೆಯಿಂದ ನಿಮಗೆ ಅನುಕೂಲವೂ ಆಗಬಹುದು. ದಾಂಪತ್ಯದಲ್ಲಿ ಹೆಚ್ಚಿನ ಮಾತುಗಳು ಭವಿಷ್ಯದ ಬಗ್ಗೆ ಇರಲಿದ್ದು ಒಂದು ನಿರ್ಧಾರಕ್ಕೆ ಇಬ್ಬರೂ ಬರುವಿರಿ. ಸಿಗದ ವಸ್ತುವಿನ ಬಗ್ಗೆ ಅತಿಯಾದ ಮೋಹವನ್ನು ಬೆಳೆಸಿಕೊಳ್ಳಲಿದ್ದೀರಿ. ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸಿ ಮನೆಗೆ ಹಿಂದಿರುಗುವಿರಿ. ನಿಮ್ಮ ತಪ್ಪಿನಿಂದ ನೀವೇ ಪಶ್ಚಾತ್ತಾಪಪಡಬೇಕಾದೀತು. ಮನಸ್ಸು ಬಹಳ ಚಂಚಲವಾಗಿ ಇರಲಿದೆ.