Horoscope: ಈ ರಾಶಿಯವರ ಕಾರ್ಯಗಳಿಗೆ ಇನ್ನೊಬ್ಬರ ಸಹಕಾರ ಸಿಗಲಿದೆ

| Updated By: Rakesh Nayak Manchi

Updated on: Aug 30, 2023 | 12:15 AM

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಈ ರಾಶಿಯವರ ಕಾರ್ಯಗಳಿಗೆ ಇನ್ನೊಬ್ಬರ ಸಹಕಾರ ಸಿಗಲಿದೆ
ದಿನಭವಿಷ್ಯ
Image Credit source: iStock Photo
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 30 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶೋಭನ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:33 ರಿಂದ 02:06ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:55 ರಿಂದ 09:27ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:00 ರಿಂದ ಮಧ್ಯಾಹ್ನ 12:33ರ ವರೆಗೆ.

ಮೇಷ ರಾಶಿ: ಗೆಲ್ಲಬೇಕು ಎನ್ನುವ ಉತ್ಕಟ ಇಚ್ಛೆ ಇರಲಿದೆ. ಸೋತರೂ ಗೆದ್ದವರ ಜೊತೆ ಶುಷ್ಕವಾದವನ್ನು ಮಾಡುವಿರಿ. ಸಹೋದರಿಯ ಜೊತೆ ವಾಗ್ವಾದವನ್ನು ಮಾಡುವಿರಿ. ಹಣದ ವಿಚಾರದಲ್ಲಿ ನಿಮಗೆ ಇಂದು ಮೋಹವು ಇರದು. ಇಂದು ನೀವು ಯಾರ‌ ಮಾತನ್ನೂ ನಂಬಲಾರಿರಿ. ಸ್ವತಃ ಅನುಭವವೇ ನಿಮಗೆ ಪ್ರಮಾಣವಾಗುವುದು. ಆರ್ಥಿಕ ತೊಂದರೆಯಿಂದ ಮನೆಯ ಕಾರ್ಯವು ಅರ್ಧಕ್ಕೇ ನಿಲ್ಲಬೇಕಾಗಬಹುದು. ಕುಟುಂಬದ ಜೊತೆ ನಿಮ್ಮ ಭವಿಷ್ಯವನ್ನು ಹಂಚಿಕೊಳ್ಳುವಿರಿ. ಅದೃಷ್ಟವನ್ನು ನಂಬಿಕೆ ಕುಳಿತುಕೊಳ್ಳುವುದು ಪ್ರಯೋಜನವಾಗದು. ಸಾಲಗಾರರ‌ ಉಪಟಳ ಹೆಚ್ಚಿರಲಿದೆ.

ವೃಷಭ ರಾಶಿ: ಸ್ವಪ್ರತಿಷ್ಠೆಯನ್ನು ಬಿಟ್ಟು ನೀವು ಸಹಜವಾಗಿ ಇರಬೇಕಾಗುವುದು. ನಿಮ್ಮ ಅಹಂಕಾರದಿಂದ ಜನರನ್ನು ದೂರಮಾಡಿಕೊಳ್ಳುವಿರಿ. ನಿಮ್ಮ ವಸ್ತುಗಳು ಕಾಣೆಯಾಗಬಹುದು. ಅವ್ಯಕ್ತ ಭೀತಿಯು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಮನೆಯ ಸದ್ಯರ ಜೊತೆ ಕಾಲಹರಣ ಮಾಡುವಿರಿ. ಶತ್ರುಗಳನ್ನು ನೀವು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಮಾತು ಹಾಸ್ಯದಿಂದ ಗಂಭೀರರೂಪಕ್ಕೆ ಹೋಗುವುದು. ಅತಿಥಿಸತ್ಕಾರವನ್ನು ನೀವು ಮಾಡುವಿರಿ. ದೈವರಾಧನೆಗೆ ಸ್ವಲ್ಪ ಸಮಯವನ್ನು ಕೊಡುವಿರಿ.

ಮಿಥುನ ರಾಶಿ: ನಿಮ್ಮ ಕಾರ್ಯಗಳಿಗೆ ಇನ್ನೊಬ್ಬರ ಸಹಕಾರ ಸಿಗಲಿದೆ. ನೀವು ಖರೀದಿಸಿದ ಸ್ಥಿರಾಸ್ತಿ ದಾಖಲೆಗಳನ್ನು ಸರಿಯಾಗಿ ಆಪ್ತರ ಜೊತೆ ಚರ್ಚಿಸಿ. ಇನ್ನೊಬ್ಬರ ಸಂಕಷ್ಟವನ್ನು ಪರಿಹರಿಸಲು ಉತ್ಸಾಹದಿಂದ ಇರುವಿರಿ. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ. ಸಂಗಾತಿಯ‌ ಆರೋಗ್ಯವು ಕೆಡಲಿದ್ದು ನಿಮಗೆ ತಿರುಗಾಡವು ಇರಲಿದೆ. ಸರ್ಕಾರಿ ಕೆಲಸದಲ್ಲಿ ತೊಡಕಾಗಬಹುದು. ಇಂದು ನೀವು ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಉನ್ನತ ಅಧ್ಯಯನಕ್ಕೆ ನೀವು ಬೇರೆ ಕಡೆಗೆ ಹೋಗುವ ಸ್ಥಿತಿಯು ಬರಬಹುದು. ಸಣ್ಣವರ ವಿಚಾರದಲ್ಲಿ ಕಾಳಜಿ ಇರಲಿ.

ಕಟಕ ರಾಶಿ: ಯಾರದೋ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ನಿಮ್ಮವರ ಮೇಲೆ ಸಿಟ್ಟುಗೊಳ್ಳುವಿರಿ. ಎಲ್ಲ ವಿಚಾರದಲ್ಲಿಯೂ ಕಿರಿಕಿರಿ ಆಗಲಿದೆ. ಇಂದು ಸಮಾಧಾನದಿಂದ ಆಲೋಚಿಸುವುದು ನಿಮಗೆ ಬಾರದು.‌ ಬಂಧುಗಳ ಮನೆಗೆ ಹೋಗಲಿದ್ದೀರಿ. ಒಳ್ಳೆಯ ರೀತಿಯಲ್ಲಿ ನಿಮ್ಮನ್ನು ಸತ್ಕರಿಸುವರು. ಸಂಗಾತಿಯ ವಿಚಾರದಲ್ಲಿ ಉದ್ವೇಗಕ್ಕೆ ಒಳಗಾಗುವುದು ಬೇಡ. ನಿಮ್ಮ ಆರ್ಥಿಕ ಸ್ಥಿತಿಯೂ ಕ್ಷೀಣಿಸಬಹುದು. ಸಹೋದರರ ನಡುವೆ ಸಹಬಾಳ್ವೆ ಇರಲಿದೆ. ಪುಣ್ಯಕ್ಷೇತ್ರಗಳಿಗೆ ಹೋಗುವಿರಿ. ಅಂದುಕೊಂಡಿದ್ದನ್ನು ಸಾಧಿಸುವ ಛಲವಿರುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ