ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 31 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ,ಪ ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ವೈಧೃತಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಬೆಳಗ್ಗೆ 07:52 ರಿಂದ 09:28ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:39ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:14 ರಿಂದ 03:50ರ ವರೆಗೆ.
ಮೇಷ ರಾಶಿ: ನಿಮ್ಮ ಮಾತುಗಳಿಗೆ ಮೌಲ್ಯವು ಕಡಿಮೆ ಆಗಲಿದೆ. ಆಸ್ತಿಯ ಪಾಲಿನಲ್ಲಿ ನಿಮಗೆ ಬಹಳ ಮುಖ್ಯಭಾಗವು ಬರಬಹುದು. ದೂರದ ಸಂಬಂಧಿಕರ ಪರಿಚಯ ಆಗಲಿದೆ. ಮನೆಯ ನಿರ್ಮಾಣದಲ್ಲಿ ಸರಿಯಾದ ಕ್ರಮವನ್ನು ರೂಢಿಸಿ. ಒಂದೇ ರೀತಿಯ ಜೀವನವು ನಿಮಗೆ ಬೇಸರವನ್ನು ತಂದೀತು. ನಿಮ್ಮ ಜವಾಬ್ದಾರಿಯ ಕೆಲಸವನ್ನು ನೀವು ಬಹಳ ಆನಂದದಿಂದ ಮಾಡುವಿರಿ. ಅಲ್ಪ ಲಾಭವನ್ನು ಸ್ವೀಕರಿಸಿ ಸಂತೋಷಪಡುವಿರಿ. ನೀರಿನಿಂದ ಆದಷ್ಟು ದೂರವಿರಿ. ನಿಮ್ಮ ಸಹವಾಸದಿಂದ ಇತರರೂ ನಿಮ್ಮ ಸ್ವಭಾವವನ್ನು ಕಲಿಯುವರು. ವ್ಯವಹಾರವನ್ನು ಮನ ಬಂದಂತೆ ಮಾಡುವುದು ಬೇಡ.
ವೃಷಭ ರಾಶಿ: ಕೆಲಸದಲ್ಲಿ ಅಧಿಕ ಒತ್ತಡ ಇರಲಿದೆ. ನಿಮ್ಮ ಸಹನೆಯ ಪರೀಕ್ಷೆಯು ಆಗಲಿದೆ. ಸುಖದ ಕಾಲವನ್ನು ನಿರೀಕ್ಷಿಸುವಿರಿ. ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಇರಲಿದೆ. ನಿಮಗೆ ಇಷ್ಟವಾದ ವಸ್ತುಗಳನ್ನು ನೀವು ಖರೀದಿಸುವಿರಿ. ಸಮಯದ ಮಿತಿಯಲ್ಲಿ ನೀವು ಎಲ್ಲ ಕೆಲಸಗಳನ್ನು ಮಾಡುವ ಸಾಹಸಕ್ಕೆ ಹೋಗುವುದು ಬೇಡ. ನಿಮ್ಮ ಸಹಾಯವನ್ನು ಕೇಳಿ ಬಂದವರಿಗೆ ಸಹಾಯವನ್ನು ಮಾಡಿ. ಉಚಿತವಾಗಿ ಬಂದಿದ್ದನ್ನು ನೀವು ನಿರಾಕರಿಸುವಿರಿ. ಉದರಬಾಧೆಯು ಕಾಡಬಹುದು. ಸಮಯಕ್ಕೆ ಸರಿಯಾಗಿ ಭೋಜನವನ್ನು ಮಾಡಿ.
ಮಿಥುನ ರಾಶಿ: ಹಳೆಯ ಖಾಯಿಲೆಯಿಂದ ಬಳಲುವ ಸಾಧ್ಯತೆ ಇದೆ. ನಿಮ್ಮ ವಸ್ತುಗಳನ್ನು ಕಳೆದುಕೊಂಡು ದುಃಖಿಸುವಿರಿ. ಸಂಕಷ್ಟದ ನಿವಾರಣೆಗೆ ದೇವರಲ್ಲಿ ಪ್ರಾರ್ಥಿಸುವಿರಿ. ಕೋಪವನ್ನು ಕಡಿಮೆಮಾಡಿಕೊಂಡು ಕೆಲಸ ಮಾಡುವಿರಿ. ನಿಮಗೆ ಸಂಬಂಧಿಸಿದ ಕೆಲಸವನ್ನು ಇನ್ನೊಬ್ಬರ ಸಹಾಯದ ಜೊತೆ ಮುಗಿಸುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯವಾಗಲಿದೆ. ನಿಮ್ಮದೇ ಹಣವನ್ನು ಪಡೆಯಲು ಕಷ್ಟಪಡಬೇಕಾದೀತು. ದೈವಾನುಕೂಲದಿಂದ ನಿಮಗೆ ಸಹಾಯವಾಗುವುದು. ಕೆಟ್ಟ ಕನಸು ಬೀಳುವುದು. ಸಂಗಾತಿಯಿಂದ ಧನಸಹಾಯವು ಸಿಗಲಿದೆ.
ಕಟಕ ರಾಶಿ: ನಿಮ್ಮ ಬಗ್ಗೆ ಸಲ್ಲದ ಮಾತುಗಳು ಕೇಳಿಬರಬಹುದು. ಸ್ವಂತ ಉದ್ಯೋಗಕ್ಕೆ ನಿಮ್ಮ ಒಲವು ಅಧಿಕವಾಗಿರುವುದು. ಬಯಸಿದ್ದನ್ನು ಪಡೆದುಕೊಳ್ಳಲು ಶ್ರಮಿಸುವಿರಿ. ಕಛೇರಿಯ ಒತ್ತಡವು ನಿಮ್ಮ ಮೇಲೆ ಇರಲಿದೆ. ನಿಮಗೆ ಹಣದ ಕೊರತೆ ಆಗಿದ್ದು ಸ್ನೇಹಿತ ಸಹಾಯವನ್ನು ಪಡೆಯುವಿರಿ. ವೃತ್ತಿಯಲ್ಲಿ ನಿಮಗೆ ಅಸಮಾಧ ಆಗಬಹುದು. ವ್ಯಾಪಾರದಲ್ಲಿ ಅಧಿಕ ಲಾಭವನ್ನು ಪಡೆಯಲು ಇಚ್ಛಿಸುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡಲು ಮನಸ್ಸಾದೀತು. ಸರಳವಾದ ಕೆಲಸವನ್ನು ಸಂಕೀರ್ಣ ಮಾಡಿಕೊಳ್ಳುವುದು ಬೇಡ. ಮನೆಯಲ್ಲಿ ಅಪಮಾನವಾಗಬಹುದು.