Horoscope: ದಿನಭವಿಷ್ಯ, ಈ ರಾಶಿಯವರಿಗೆ ಇಂದು ಸಾಹಸದ ಕೆಲಸದಲ್ಲಿ ಉತ್ಸಾಹ ಇರಲಿದೆ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 31) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರಿಗೆ ಇಂದು ಸಾಹಸದ ಕೆಲಸದಲ್ಲಿ ಉತ್ಸಾಹ ಇರಲಿದೆ
ಇಂದಿನ ದಿನಭವಿಷ್ಯImage Credit source: iStock Photo
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi

Updated on: Jul 31, 2023 | 12:45 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ,ಪ ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ವೈಧೃತಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಬೆಳಗ್ಗೆ 07:52 ರಿಂದ 09:28ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:39ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:14 ರಿಂದ 03:50ರ ವರೆಗೆ.

ಧನಸ್ಸು ರಾಶಿ: ಸರ್ಕಾರಿ ಉದ್ಯೋಗಿಗಳಿಗೆ ಇಷ್ಟದ ಸ್ಥಳಕ್ಕೆ ವರ್ಗಾವಣೆ ಆಗಲಿದೆ. ಪ್ರಭಾವೀ ವ್ಯಕ್ತಿಗಳಿಂದ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ವಿದ್ಯಾಭ್ಯಾಸಕ್ಕೆ ಹೊರ ನಡೆಯುವ ಮನಸ್ಸನ್ನು ಮಾಡುವಿರಿ. ಸಾಹಸದ ಕೆಲಸಕ್ಕೆ ಉತ್ಸಾಹವು ಇರಲಿದೆ. ಭೂಮಿಯನ್ನು ಮಾರಾಟ ಮಾಡುವ ಯೋಚನೆಯು ನಿಮಗೆ ಬರಲಿದೆ. ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯು ಬರಬಹುದು. ನಿಮಗೆ ನಿಶ್ಚಯವಾದ ಮನಸ್ಸನ್ನು ತಂದುಕೊಳ್ಳುವುದು ಕಷ್ಟವಾದೀತು. ಸ್ತ್ರೀಯ ಕಡೆಯಿಂದ ನಿಮಗೆ ಅಧಿಕಾರವು ಪ್ರಾಪ್ತವಾಗುವುದು. ಕಾರ್ಯಗಳನ್ನು ಗುರುತಿಸಿ ನಿಮ್ಮನ್ನು ಗೌರವಿಸುವ ಸಾಧ್ಯತೆ ಇದೆ.

ಮಕರ ರಾಶಿ: ಕಾರ್ಯದ ನಿಮಿತ್ತ ದೂರದ ಊರಿಗೆ ಪ್ರಯಾಣವನ್ನು ಮಾಡಬೇಕಾದೀತು. ಕೆಲಸವು ಪೂರ್ಣವಾಗದೇ ಹಿಂದಿರುಗುವಿರಿ. ನಿಮಗೆ‌ ಮೇಲಧಿಕಾರಿಗಳಿಂದ ಸೂಚನೆ ಸಿಗಲಿದ್ದು ಅದರಂತೆ ಕೆಲಸವನ್ನು ನೀವು ಮಾಡುವಿರಿ. ನಿಮಗೆ ಆಗದ ವಿಚಾರಕ್ಕೆ ವಿರೋಧವನ್ನು ವ್ಯಕ್ತಪಡಿಸುವಿರಿ. ಭೂಮಿಯ ಮೇಲೆ ನಿಮ್ಮ ಹೂಡಿಕೆ ಮಾಡಲು ಬಯಸುವಿರಿ. ದಂಪತಿಗಳು ವೈಮನಸ್ಯವನ್ನು ದೂರಮಾಡಿಕೊಳ್ಳಲು ಎಲ್ಲಿಗಾದರೂ ಹೋಗಬಹುದು. ಆರ್ಥಿಕತೆಯ ಅಭಿವೃದ್ಧಿಗೆ ನಿಮ್ಮ ಯೋಜನೆಗಳು ರೂಪುಗೊಳ್ಳುವುದು. ನಿಮ್ಮ ಕೆಲಸವನ್ನು ಸ್ನೇಹಿತರ ಮೂಲಕ ಮಾಡಿಕೊಳ್ಳುವಿರಿ.

ಕುಂಭ ರಾಶಿ: ವ್ಯಾಪಾರ ವಹಿವಾಟುಗಳಲ್ಲಿ ನಷ್ಟವಾಗಬಹುದು. ಅನಿರೀಕ್ಷಿತ ವಾರ್ತೆಯಿಂದ ಕಷ್ಟವಾದೀತು. ನಿಮ್ಮ ಮೆಚ್ಚಿನವರನ್ನು ಭೇಟಿಯಾಗುವಿರಿ. ವಾಹನ ಚಾಲನೆಯನ್ನು ಮಾಡುವ ಜಾಗರೂಕತೆಯ ಅವಶ್ಯಕತೆ ಇರಲಿದೆ. ಸಹೋದರಿಗೆ ನಿಮ್ಮಿಂದ ಸಹಕಾರವು ಸಿಗಲಿದೆ. ಸ್ವಂತ ಭೂಮಿಯನ್ನು ಕೃಷಿಗೆ ಬಳಸಿಕೊಳ್ಳುವ ಆಲೋಚನೆ ಇರಲಿದೆ. ಸಂಗಾತಿಯನ್ನು ಮನವೊಲಿಸಲು ಬಹಳ ಕಷ್ಟವಾದೀತು. ಬಂಧುಗಳಿಂದ ನಿಮಗೆ ಅಪಮಾನವಾದೀತು. ಆರೋಗ್ಯವು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಿ. ಹೆಚ್ಚು ಮಾತನಾಡುವಿರಿ. ಶಿಸ್ತಿನಿಂದ ಇರುವುದು ನಿಮಗೆ ಇಷ್ಡವಾದೀತು.

ಮೀನ ರಾಶಿ: ದೌರ್ಭಾಗ್ಯವನ್ನು ನೆನೆಯುತ್ತ ಇರುವುದಕ್ಕಿಂತ ಬೇರೆಯದಾದ ಉತ್ತಮ ದಾರಿಯನ್ನು ಹುಡುಕುವುದು ಶ್ರೇಯಸ್ಕರ. ವೇತನವು ಅಧಿಕವಾಗಿ ಸಂತೋಷವಾಗುವುದು. ಆಸ್ತಿಯ ವಿಚಾರವನ್ನು ಮಾತನಾಡುವುದು ಬೇಡ. ಕಲಹವಾದೀತು. ನಿಮ್ಮ ಸಂಸ್ಥೆಯ ಮುಖ್ಯಸ್ಥರನ್ನಾಗಿ ಮಾಡುವ ಮಾತುಕತೆಗಳು ನಡೆಯಬಹುದು. ನಿಮಗೆ ಬೆಲೆ ಕಡಿಮೆಯಾಗಿರುವುದು, ಗೌರವವನ್ನು ಕೊಡದೇ ಇರುವುದು ಬೇಸರವಾದೀತು. ನಿಮ್ಮ ಕೆಲಸದ ಪ್ರಗತಿಯಿಂದ ನಿಮಗೆ ಖುಷಿಯಾಗಲಿದೆ. ನೆಮ್ಮದಿಯನ್ನು ಕೊಡುವ ಸಂಗತಿಯನ್ನು ನೀವು ಆಯ್ಕೆ ಮಾಡಿಕೊಳ್ಳುವಿರಿ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್