Daily Horoscope 01 August: ಅನಪೇಕ್ಷಿತ ವಿಚಾರಗಳ ಬಗ್ಗೆ ಚರ್ಚೆ ಬೇಡ, ಸಿಟ್ಟು ನಿಮ್ಮ ಹಿಡಿತದಲ್ಲಿ ಇರಲಿ
ಇಂದಿನ (2023 ಜುಲೈ ಆಗಸ್ಟ್ 1) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ ಆಗಸ್ಟ್ 1) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ,ಪ ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಶ್ರವಣಾ , ಯೋಗ: ವಿಷ್ಕಂಭ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 03 :49 ರಿಂದ 05:25ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 11:03ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:39 ರಿಂದ 02:14ರ ವರೆಗೆ.
ಮೇಷ ರಾಶಿ: ಬಹಳಷ್ಟು ಮಾಡಬೇಕಾದ ಕೆಲಸಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ. ನಿಮ್ಮದಾದ ನಿಯಮಗಳನ್ನು ನೀವು ಬದಲಿಸಿಕೊಳ್ಳಲಾರಿರಿ. ಕಳೆದ ಸಮಯವನ್ನು ನೀವು ಮೆಲುಕು ಹಾಕುಕೊಂಡು ಸಂತೋಷೊಡುವಿರಿ. ನೀವು ತೆಗೆದುಕೊಳ್ಳುವ ನಿರ್ಧಾರವು ವಿಳಂಬವಾದರೂ ಸ್ಪಷ್ಟವಾಗಿ ಇರಲಿದೆ. ಬೇಕಾದಷ್ಟನ್ನೇ ಮಾತನಾಡಿ. ಮನಸ್ಸಿನಲ್ಲಿ ಆತಂಕವು ಹೆಚ್ಚಿರಲಿದೆ. ಸಂಪತ್ತಿನ ಬಗ್ಗೆ ತಾತ್ಸಾರಭಾವವು ಬರಬಹುದು. ಇಂದು ನೀವು ಮಾಡುವ ಲೆಕ್ಕಾಚಾರದಿಂದ ಕಳೆದುಕೊಂಡಿದ್ದು ಎಷ್ಟು ಎಂಬ ಮಾಹಿತಿ ಸಿಗಲಿದೆ. ಅನಿರೀಕ್ಷಿತ ಲಾಭವಾಗಲಿದೆ.
ವೃಷಭ ರಾಶಿ: ಪೂರ್ವಪುಣ್ಯವು ನಿಮ್ಮನ್ನು ಕಾಪಾಡುವುದು. ನಿಮ್ಮನ್ನು ಹಾಸ್ಯ ಮಾಡಬಹುದು. ಯಾರೋ ಆಡಿದ ಮಾತಿನಿಂದ ನಿಮಗೆ ಬೇಸರವಾಗಬಹುದು. ಒಂದಿಲ್ಲೊಂದು ನೆನಪಗಳನ್ನು ಹೇಳಿ ಉದ್ಯೋಗಕ್ಕೆ ವಿರಾಮವನ್ನು ಹಾಕುವಿರಿ. ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳುವಿರಿ. ಅಸಾಧ್ಯವನ್ನು ನೀವು ಸಾಧಿಸಲು ಅಧಿಕಶ್ರಮವನ್ನು ಹಾಕುವಿರಿ. ಉಪಕರದ ಸ್ಮರಣೀಯನ್ನು ಇಟ್ಟಕೊಂಡು ಮುಂದುವರಿಯಿರಿ. ಸಿಟ್ಟು ಮಾಡುವ ಸಂದರ್ಭದಲ್ಲಿ ಸಿಟ್ಟು ನಿಮ್ಮ ಹಿಡಿತದಲ್ಲಿ ಇರಲಿ. ಸುತ್ತಾಡುವ ಮನಸ್ಸಾದೀತು. ಏಕಾಂತವನ್ನು ನೀವು ಇಷ್ಟಪಡಲಾರಿರಿ.
ಮಿಥುನ ರಾಶಿ: ಪ್ರೇಮಪ್ರಕರಣವು ದುಃಖಾಂತವಾಗಲಿದೆ. ಸಂಗಾತಿಗಳು ದೂರಾಗಬಹುದು. ನಿಮ್ಮ ಖಾತೆಯಲ್ಲಿ ಹಣವು ಕಡಿಮೆ ಆಗಿ ಆತಂಕ ಸೃಷ್ಟಿಯಾಗಬಹುದು. ನಿಮ್ಮ ವಸ್ತುವನ್ನು ಕಳೆದುಕೊಂಡು ಯಾರದೋ ಮೇಲೆ ಅನುಮಾನಪಡಲಿದ್ದೀರಿ. ಸಮಾಜಿಕ ಗೌರವವನ್ನು ನೀವು ತಿರಸ್ಕರಿಸುವಿರಿ. ಸ್ತ್ರೀಯರ ಮೇಲೆ ನಿಮಗೆ ದಯೆಯು ಉಂಟಾಗಬಹುದು. ಸಹೋದರನಿಗೆ ಧನದ ಸಹಾಯವನ್ನು ಮಾಡುವಿರಿ. ಅನಿರೀಕ್ಷಿತವಾಗಿ ಬರವ ಕೆಲವು ಸುದ್ದಿಗಳು ನಿಮಗೆ ದುಃಖವನ್ನು ಕೊಡಬಹುದು. ನೂತನ ವಾಹನವನ್ನು ಖರೀದಿಸಲು ಹುಮ್ಮಿಸ್ಸಿನಿಂದ ಇರುವಿರಿ. ಉದ್ಯೋಗದಲ್ಲಿ ನಿಮ್ಮ ನಡೆಯು ಸರಿಯಾಗಿರಲಿ.
ಕಟಕ ರಾಶಿ: ಒಂದೇ ತರದ ಜೀವನವು ನಿಮಗೆ ಬೇಸರವನ್ನು ತಂದೀತು. ಏನನ್ನಾದರೂ ಹೊಸತನ್ನು ಮಾಡಲು ಬಯಸುವಿರಿ. ಅಧಿಕ ಖರ್ಚು ಮಾಡುವ ಅನಿವಾರ್ಯತೆ ಬರಬಹುದು. ಸಹೋದ್ಯೋಗಿಗಳಿಂದ ಕಿರಿಯಾಗಲಿದೆ. ನಿಮ್ಮ ಕಾರ್ಯಗಳನ್ನು ವೇಗವಾಗಿ ಮುಗಿಸಿಕೊಂಡು ನಿಶ್ಚಿಂತೆಯಿಂದ ಇರುವಿರಿ. ಸಾಲವನ್ನು ಮಾಡಿ ವಾಹನವನ್ನು ಖರೀದಿಸುವಿರಿ. ಹಿರಿಯರ ಮಾತಿಗೆ ಎದುರಾಡುವುದು ಸರಿಯಾಗದು. ಸಕಾರಾತ್ಮಕ ಆಲೋಚನೆಯನ್ನು ಬೆಳೆಸಿಕೊಳ್ಳಿ. ಸ್ನೇಹಿತರಿಂದ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಹುದು. ಸಂಗಾತಿಯ ಬಗ್ಗೆ ಅನುಕಂಪ ಬರಬಹುದು.
ಸಿಂಹ ರಾಶಿ: ತೆಗಳಿಕೆಗಳನ್ನು ನೀವು ಸ್ವೀಕರಿಸಲು ಸಿದ್ಧರಿರುವುದಿಲ್ಲ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿ ಕೆಲಸವನ್ನು ಮಾಡುವಿರಿ. ಇದರಿಂದ ಸಿಟ್ಟಾಗಬಹುದು. ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯು ನಿಮ್ಮನ್ನು ಮತ್ತೆ ಕಾಡಬಹುದು. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನು ಕೇಳುವ ಧೈರ್ಯ ಮಾಡುವಿರಿ. ಆಪ್ತರನ್ನು ನೀವು ದೂರ ಮಾಡಿಕೊಳ್ಳಬಹುದು. ಸೌಂದರ್ಯ ವರ್ಧನೆಗೆ ಹೆಚ್ಚು ಮಹತ್ತ್ವವನ್ನು ಕೊಡುವಿರಿ. ಬಡ್ಡಿಯ ಹಣದಲ್ಲಿ ನೀವು ಇಂದಿನ ಖರೀದಿಯನ್ನು ಮಾಡುವಿರಿ. ಪೂರ್ವಸಿದ್ಧತೆಯನ್ನು ಮಾಡಿಕೊಂಡು ಯಾವ ಕೆಲಸಕ್ಕಾದರೂ ಇಳಿಯಿರಿ. ಎಲ್ಲರೂ ನಿಮಗೆ ಹೊಸಬರಂತೆ ಕಾಣುವರು.
ಕನ್ಯಾ ರಾಶಿ: ನೀವು ಮಾಡಿದ ತಪ್ಪಿಗೆ ಇನ್ನೊಬ್ಬರನ್ನು ತೋರಿಸುವುದು ಸರಿಯಲ್ಲ. ಮಿತ್ರರನ್ನು ಅನುಮಾನದಿಂದ ಕಾಣುವಿರಿ. ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ನೂತನ ಗೃಹದ ಖರೀದಿಯ ಬಗ್ಗೆ ಸದ್ಯ ಮಾತುಕತೆಗಳು ಬೇಡ. ವಿವಾಹದ ಮಾತುಕತೆಯನ್ನೂ ಮುಂದೂಡಿ. ಕುಟುಂಬಕ್ಕೆ ನಿಮ್ಮಿಂದ ಅಲ್ಪ ಧನಸಹಾಯವಾಗಬಹುದು. ಎಲ್ಲ ಸಂಗತಿಗಳನ್ನು ನೀವು ಲಘುವಾಗಿ ಕಾಣುವಿರಿ. ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ನಿಮಗೆ ಕಷ್ಟವಾದೀತು. ತಾಯಿಯ ಆರೋಗ್ಯವು ಕೆಡಬಹುದು. ಸೂಕ್ತ ಚಿಕಿತ್ಸೆಯನ್ನು ಮಾಡಿಸಿ.
ತುಲಾ ರಾಶಿ: ಅನಪೇಕ್ಷಿತ ವಿಚಾರಗಳನ್ನು ಚರ್ಚಿಸಿ ಸಮಯವನ್ನು ವ್ಯರ್ಥಮಾಡುವಿರಿ. ಉದ್ಯಮದಲ್ಲಿ ಎಂದಿಗಿಂತ ಕಡಿಮೆ ಲಾಭವಾಗುವುದು. ಉದ್ಯೋಗದಲ್ಲಿ ಒತ್ತಡವನ್ನು ನಿಭಾಯಿಸಲು ನಮಗೆ ಗೊತ್ತಾಗದೇ ಒದ್ದಾಡುವಿರಿ. ಸಂಗಾತಿಗಾಗಿ ಹಣವನ್ನು ಖರ್ಚು ಮಾಡುವಿರಿ. ಉದ್ಯೋಗವನ್ನು ಪಡೆಯಲು ನೀವು ಹಣವನ್ನು ನೀಡಬೇಕಾದೀತು. ಹೊರಗೆ ಭೋಜನವನ್ನು ಮಾಡುವಿರಿ. ನಿಮ್ಮ ಸಹಜತೆಯು ನಾಟಕೀಯದಂತೆ ತೋರೀತು. ಬಂಗಾರವನ್ನು ಖರೀದಿಸಲಿದ್ದೀರಿ. ನಿಮ್ಮ ಚಿಂತನೆಯನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ಒಟ್ಟಿಗೇ ಹತ್ತಾರು ಕೆಲಸಗಳಲ್ಲಿ ನೀವು ಮಗ್ನರಾಗಿರುವಿರಿ.
ವೃಶ್ಚಿಕ ರಾಶಿ: ಸರ್ಕಾರದ ಉದ್ಯೋಗಿಗಳು ನಿಮಗೆ ಅನುಕೂಲಕರವಾದುದನ್ನು ಸೃಷ್ಟಿಮಾಡಿಕೊಳ್ಳುವಿರಿ. ಯಾರಿಗೂ ಹೇಳದೇ ಎಲ್ಲಿಗಾದರೂ ಹೋಗಲಿದ್ದೀರಿ. ಸಂಬಂಧಗಳಲ್ಲಿ ಒಡಕು ಬರಬಹುದು. ಹೊಸ ಉದ್ಯೋಗಕ್ಕೆ ನೀವು ಹೊಂದಿಕೊಳ್ಳಲು ಕಷ್ಟವಾದೀತು. ನಿಮ್ಮ ನೋವನ್ನು ಯಾರ ಬಳಿಯಾದರೂ ಹಂಚಿಕೊಳ್ಳುವುದು ಉತ್ತಮ. ಮನಸ್ಸು ಹಗುರಾದೀತು. ಯಾರದೋ ಸಿಟ್ಟನ್ನು ಯಾರ ಮೇಲೋ ತೀರಿಸಿಕೊಂಡು ಸಮಾಧಾನಪಡುವಿರಿ. ಇನ್ನೊಬ್ಬರ ವಿಚಾರಗಳನ್ನು ಕೇಳಲು ನಿಮಗೆ ಕುತೂಹಲವು ಅಧಿಕವಾಗಿರುವುದು. ಏನನ್ನಾದರೂ ಸಾಧಿಸಬೇಕು ಎಂದೆನಿಸಬಹುದು.
ಧನು ರಾಶಿ: ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪವನ್ನು ಮಾಡುವುದು ಇಷ್ಟವಾಗದು. ಹಳೆಯ ನೆನಪುಗಳು ನಿಮ್ಮ ಕಾಡಬಹುದು. ನೀವು ಇಂದು ಆಕರ್ಷಕವಾಗಿ ಇರುವಿರಿ. ಕೃಷಿಯ ಕೆಲಸದಲ್ಲಿ ನಿಮಗೆ ಉತ್ಸಾಹ ಕಡಿಮೆ ಆಗಬಹುದು. ಸಾಲವನ್ನು ಮಾಡವ ಸ್ಥಿತಿ ಬರಬಹುದು. ಕುಶಲ ಕರ್ಮಗಳನ್ನು ಮಾಡಲು ಕಲಿಯುವಿರಿ. ಸಂಶೋಧನೆಗೆ ಹೆಚ್ಚಿನ ಒತ್ತು ಸಿಗಬಹುದು. ಕೆಲವರು ನಿಮ್ಮ ನಂಬಿಕೆಗೆ ಘಾಸಿಯನ್ನು ಉಂಟುಮಾಡಬಹುದು. ಮಿತ್ರರಂತೆ ಇರುವವರನ್ನು ನೀವು ತಿಳಿದುಕೊಳ್ಳುವಿರಿ. ದಿನ ಬಳಕೆಯ ವಸ್ತುಗಳನ್ನು ಮಾರಾಟ ಮಾಡುವವರಾದರೆ ಲಾಭವಿರಲಿದೆ.
ಮಕರ ರಾಶಿ: ಸಂಗಾತಿಗಳ ನಡುವೆ ಸ್ವಪ್ರತಿಷ್ಠೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಬಂಧುಗಳು ನಿಮ್ಮ ಸಂಕಷ್ಟಕ್ಕೆ ನೆರವಾಗಬಹುದು. ನಿಮ್ಮ ಪ್ರಯಾಣವನ್ನು ಮುಂದಕ್ಕೆ ಹಾಕಲಿದ್ದೀರಿ. ಹೊಸ ಪರಿಚಯದ ನಡುವೆ ಆತ್ಮೀಯತೆ ಬೆಳೆಯಬಹುದು. ಅತಿಯಾದ ಆಸೆಯಿಂದ ನಿಮಗೆ ದುಃಖಿಸುವಿರಿ. ಅವಕಾಶದಿಂದ ವಂಚಿತರಾಗಿ ದುಃಖಪಡುವಿರಿ. ಸ್ತ್ರೀಯರ ಜೊತೆ ಮಾತನಾಡುವುದು ನಿಮಗೆ ಇಷ್ಟವಾದೀತು. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಕಾಣಿಸಿಕೊಳ್ಳುವುದು. ಯಾರ ಜೊತೆಗೂ ಮಾತನಾಡಲು ನಿಮಗೆ ಇಷ್ಟವಾಗದು. ಇಂದಿನ ಕೆಲಸಗಳು ವಿಳಂಬವಾಗಬಹುದು.
ಕುಂಭ ರಾಶಿ: ಕಾಲದಿಂದ ನೀವು ಮುಕ್ತರಾಗಿ ಸಂತೋಷಪಡುವಿರಿ. ಮನೆಯಲ್ಲಿ ಮಂಗಲಕಾರ್ಯಕ್ಕೆ ಆಸಕ್ತಿಯನ್ನು ತೋರುವಿರಿ. ಅಪರಿಚಿತರು ನಿಮಗೆ ಸಮಸ್ಯೆಯನ್ನು ತರುವರು. ನಿಮ್ಮನ್ನು ನಾಯಕರನ್ನಾಗಿ ಆಯ್ಕೆ ಮಾಡುವರು. ಕಛೇರಿಯ ಕೆಲಸಗಳನ್ನು ನೀವು ಅನಾಯಾಸವಾಗಿ ಮಾಡುವಿರಿ. ಅನಾರೋಗ್ಯದ ಕಾರಣದಿಂದ ನೀವು ಹಣವನ್ನು ಖರ್ಚು ಮಾಡಬೇಕಾಗಬಹುದು. ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಕ್ಕೆ ಯಾರಾದರೂ ಸಿಕ್ಕಾರು. ನಿಮ್ಮ ಮೌನವನ್ನು ಮುರಿದು ನಿಮ್ಮ ಅಭಿಪ್ರಾಯವನ್ನು ತಿಳಿಸುವುದು ಉತ್ತಮ.
ಮೀನ ರಾಶಿ: ಕುಟುಂಬಕ್ಕೆ ಧಕ್ಕೆಯಾಗದಂತೆ ನೀವು ನೋಡಿಕೊಳ್ಳಬೇಕಾಗಬಹುದು. ಪ್ರೇಮಜೀವನಕ್ಕೆ ನೀವು ಒಗ್ಗಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ಸಲಹೆಯನ್ನು ನೀವು ಪಡೆದುಕೊಳ್ಳಲಿದ್ದೀರಿ. ಮಕ್ಕಳ ಸಂತೋಷದಲ್ಲಿ ನೀವು ಭಾಗಿಯಾಗುವಿರಿ. ಇನ್ನೊಬ್ಬರ ವಸ್ತುವನ್ನು ನೀವು ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸುವಿರಿ. ಎಷ್ಟೋ ವರ್ಷದ ಹಳೆಯ ಗೆಳೆಯರು ಒಂದಾಗುವ ಸಾಧ್ಯತೆ ಇದೆ. ಕಳೆದುಕೊಂಡಿದ್ದರ ಬಗ್ಗೆ ಲೆಕ್ಕ ಹಾಕುವುದು ಬೇಡ. ಆತ್ಮವಿಶ್ವಾಸ ಕೊರತೆ ಎದ್ದು ಕಾಣಬಹುದು. ಸುಲಭವಾಗಿ ಸಿಕ್ಕುವುದನ್ನು ನೀವು ಕಷ್ಟದಿಂದ ಪಡೆದುಕೊಳ್ಳಲಿದ್ದೀರಿ. ನೆನಪಿನ ಶಕ್ತಿಯು ಕಡಿಮೆ ಆಗಲಿದೆ.
ಲೋಹಿತಶರ್ಮಾ – 8762924271 (what’s app only)