ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ : ದಶಮೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಐಂದ್ರ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ ಸಂಜೆ 05:16 ರಿಂದ 06:51ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:29 ರಿಂದ 02:04ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:40 ರಿಂದ 05:16ರ ವರೆಗೆ,
ಮೇಷ: ಇಂದು ನಿಮ್ಮ ನೋವನ್ನು ಯಾರ ಜೊತೆಯೂ ಹಂಚಿಕೊಳ್ಳಲು ಹೋಗುವುದಿಲ್ಲ. ಕಷ್ಟವಾದರೂ ಕೆಲಸವನ್ನು ಮಾಡಬೇಕಾದೀತು. ಅಪರೂಪದ ಬಂಧುಗಳ ಭೇಟಿಯಾಗಲಿದೆ. ಉದ್ಯೋಗದಲ್ಲಿ ನೀವು ಸ್ವತಂತ್ರ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಎಲ್ಲರ ಮೇಲೂ ಅನುಮಾನದ ದೃಷ್ಟಿ ಇರಲಿದೆ. ಆಹಾರದ ಮೇಲೆ ಹಿಡಿತವಿರಲಿ. ವಾತಾವರಣದ ಬದಲಾವಣೆಯಿಂದ ಆರೋಗ್ಯದ ಮೇಲೆ ತೊಂದರೆಯಾದೀತು. ಧಾರ್ಮಿಕ ಆಚರಣೆಯಲ್ಲಿ ಶ್ರದ್ಧೆ ಇರಲಿದೆ. ಶಿಕ್ಷಕರಾಗಿದ್ದರೆ ನಿಮ್ಮಲ್ಲಿ ಗೊಂದಲಗಳು ಬೇಡ. ಸ್ಪಷ್ಟತೆ ಇರಲಿ. ಯಾರನ್ನೋ ಅಪಮಾನಿಸಲು ಹೋಗುವುದು ಬೇಡ.
ವೃಷಭ: ಇಂದು ನಿಮ್ಮ ಸ್ವಂತ ಆಲೋಚನೆಗಳಿಂದ ಮುಂದುವರಿಯಿರಿ. ಇನ್ನೊಬ್ಬರ ಮಾತಿಗೂ ಬೆಲೆ ಇರಲಿ.
ವ್ಯಾಪಾರದಲ್ಲಿ ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೆಚ್ಚಿನ ನಿರೀಕ್ಷೆಯಲ್ಲಿ ಇರುವುದು ಬೇಡ. ನಿಮ್ಮ ಅನುಕೂಲತೆಗೆ ತಕ್ಕಂತೆ ಇಂದಿನ ದಿನವನ್ನು ಇಟ್ಟುಕೊಳ್ಳಿ. ಒತ್ತಡಗಳು ಸ್ವಲ್ಪಮಟ್ಟಿಗೆ ಕಡಿಮೆ ಆದೀತು. ತಂದೆಯ ಮಾತನ್ನು ಹೆಚ್ಚು ಕೇಳುವಿರಿ. ಕಿರಿಕಿರಿಯನ್ನು ಕಡಿಮೆ ಮಾಡಿಕೊಳ್ಳುವ ವಿಚಾರದಲ್ಲಿ ಗೊಂದಲವಾದೀತು. ಸ್ವಲ್ಪ ಬೇಸರವು ನಿಮಗೆ ಉಂಟಾಗಬಹುದು. ಸ್ನೇಹಿತರು ಉದ್ಯೋಗವನ್ನು ಬದಲಿಸಲು ಒತ್ತಾಯ ಮಾಡಬಹುದು.
ಮಿಥುನ: ಸಂಗಾತಿಯು ಸ್ಪಂದಿಸುತ್ತಿಲ್ಲ ಸರಿಯಾಗಿ ಎಂಬ ವಿಚಾರದಲ್ಲಿ ಬೇಸರವಿರಲಿದೆ. ಖರ್ಚುಗಳನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಅಪರಿಚಿತರು ನಿಮ್ಮ ಸ್ನೇಹದ ನೆಪದಲ್ಲಿ ಬರಬಹುದು. ಸಾಮಾಜಿಕ ಸೇವೆಯಲ್ಲಿ ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ಸರಿಯಾಗಿ ನಿರ್ಧರಿಸಿಕೊಳ್ಳುವರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲ್ಲುವಿರಿ. ಆರೋಗ್ಯದ ವಿಚಾರದಲ್ಲಿ ಗಂಭೀರವಾಗಿ ಯೋಚಿಸಬೇಕಾದೀತು. ನಿಮ್ಮ ಕಲ್ಪನೆಗಳು ವಸ್ತುಸ್ಥಿತಿಗೆ ಹತ್ತಿರವಾಗಿರಲಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಕಟಕ: ಯಾರದೋ ಯೋಜನೆಯನ್ನು ನೀವು ಕದಿಯುವ ಪ್ರಯತ್ನ ಮಾಡಬಹುದು. ಎಲ್ಲವನ್ನೂ ಕಳೆದುಕೊಂಡೆ ಎಂಬ ನೋವು ನಿಮ್ಮನ್ನು ಅಕಾರ್ಯದಲ್ಲಿ ತೊಡಗುವಂತೆ ಮಾಡೀತು. ಹಳೆಯ ಹೂಡಿಕೆಯನ್ನು ಸೂಕ್ತವಾದ ಸಮಯಕ್ಕೆ ಹಿಂಪಡೆಯಿರಿ. ಬುದ್ಧಿವಂತಿಕೆಯನ್ನು ತೋರಿಸಲು ಹೋಗಿ ದಡ್ಡರಾದೀರಿ. ಆರ್ಥಿಕ ಅಸಮತೋಲನವನ್ನು ಸರಿದೂಗಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ನಿಮ್ಮವರ ಸಂಪೂರ್ಣ ಬೆಂಬಲ ನಿಮಗೆ ಸಿಗಲಿಕ್ಕಿಲ್ಲ. ಅನಿರೀಕ್ಷಿತ ಸುದ್ದಿಗಳಿಂದ ನಂಬಿಕೆ ಬರದಿದ್ದರೂ ವಾಸ್ತವವಾಗಿ ಸತ್ಯವಾಗಿರುತ್ತದೆ.