AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

2023 ಮಾರ್ಚ್ 26 ಭಾನುವಾರದ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರImage Credit source: indiatv.in
ಗಂಗಾಧರ​ ಬ. ಸಾಬೋಜಿ
|

Updated on: Mar 26, 2023 | 5:30 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 26 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ :ಭಾನು, ತಿಥಿ : ಪಂಚಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಪ್ರೀತಿ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 33 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 05 :11 ರಿಂದ 06:47ರವರೆಗೆ, ಯಮಘಂಡ ಕಾಲ 12:38 ರಿಂದ 02:09ರ ವರೆಗೆ, ಗುಳಿಕ ಕಾಲ 03:40 ರಿಂದ 05: 11ರ ವರೆಗೆ.

ಮೇಷ: ಇಂದು ಸುತ್ತಾಟಕ್ಕೆಂದು ಹೋಗಲಿದ್ದೀರಿ. ಕಡಿಮೆ ವೆಚ್ಚದಲ್ಲಿ ಹೆಚ್ಚು ಸಂಪಾದಿಸುವ ಯೋಜನೆಯನ್ನು ಹಾಕಿಕೊಳ್ಳುವುದಕ್ಕೆ ಪ್ರಯತ್ನಿಸಿ. ಹಿರಿಯರ ಹಾರೈಕೆ ನಿಮಗೆ ಸಿಗಲಿದೆ. ಕಛೇರಿಯ ಕೆಲಸಕ್ಕೂ ಸಮಯ ಸಿಗದೇ ಒತ್ತಡದಲ್ಲಿ ಇರುವಿರಿ. ಕಲಹವಾಗಿ ಸಂಗಾತಿಯಿಂದ ದೂರವಿರಬೇಕಾದೀತು. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಸಾವಾಗಲಿದೆ. ಕೃಷಿಯಲ್ಲಿ ಇಂದು ಎಂದಿಗಿಂತ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ಖರ್ಚನ್ನು ಕಡಿಮೆ ಮಾಡಿಕೊಳ್ಳಿ. ಬಾಯಿ ಚಪಲಕ್ಕೆ ಆಹಾರವನ್ನು ತಿಂದು ಆರೋಗ್ಯವು ಹಾಳಾಗಲಿದೆ.

ವೃಷಭ: ನಿಮ್ಮ ಅಧಿಕವಾದ ಮಾತು ಕೇಳುವವರಿಗೆ ಹಿಂಸೆ ಕೊಡಬಹುದು. ಅಪರೂಪದ ವ್ಯಕ್ತಿಗಳ ಭೇಟಿಯಾಗುವುದು. ಆಪ್ತರ ಜೊತೆ ಮಾತುಕತೆಗಳು ಆಗಬಹುದು. ಮನಸ್ಸಿಗೆ ಹಿತವಾದ ಕೆಲಸವನ್ನು ಮಾಡಿ. ಇಲ್ಲವಾದರೆ ಕೊರಗಬೇಕಾದೀತು. ಉತ್ತಮ ಆಹಾರವನ್ನು ಸೇವಸಲಿದ್ದೀರಿ. ಅಹಿತಕರವಾದ ಘಟನೆಯು ನಿಮ್ಮನ್ನು ಕೆಲವು ಕಾಲ ಬೇಸರಗೊಳಿಸಬಹುದು. ನೂತನವಸ್ತ್ರಗಳ ಖರೀದಿಯನ್ನು ಮಾಡುವಿರಿ. ಉತ್ತಮವಾದ ಆಲೋಚನೆಗಳು ನಿಮಗೆ ಬರಲಿದ್ದು ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ.

ಮಿಥುನ: ಇಂದು ಕುಟುಂಬದವರ ಮಾತಿನ ಅಲಕ್ಷ್ಯದಿಂದ ತೊಂದರೆಯಾಯಿತು ಎಂದನಿಸುವುದು. ಹಿರಿಯರಿಗೆ ತೊಂದರೆಯನ್ನು ಕೊಡಲು ಹೋಗಬೇಡಿ. ಯಶಸ್ಸು ನಿಮಗೆ ಬೇಡವೆಂದೆನಿಸಬಹುದು. ಯಾರ ಜೊತೆಗೂ ಇರಲು ನೀವು ಇಷ್ಟಪಡುವುದಿಲ್ಲ. ನಿದ್ರೆಯಲ್ಲಿ‌ ಬಿದ್ದ ದುಶಸ್ವಪ್ನವು ನಿಮ್ಮನ್ನು ಚಿಂತೆಗೆ ತಳ್ಳುವುದು. ಗೃಹನಿರ್ಮಾಣ ಕಾರ್ಯವನ್ನು ಆರಂಭಿಸಬಹುದು. ನಿಮ್ಮ ಕೆಲಸಕ್ಕೆ ಯೋಗ್ಯವಾದ ಪ್ರಶಂಸೆಗಳು ಸಿಗಲಿವೆ. ಅಹಾರದಿಂದ ಆರೋಗ್ಯವು ಕಡುವುದು. ಇನ್ನೊಬ್ಬರ ಬಗ್ಗೆ ಸಲ್ಲದ ಮಾತುಗಳನ್ನು ಆಡುವಿರಿ.

ಕಟಕ: ಇಂದು ಮಾಡಲೇಬೇಕಾದ ಕೆಲಸವನ್ನು ಮಾಡದೇ ಸುಮ್ಮನಿರುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಅಕ್ಕಪಕ್ಕದವರ ಜೊತೆ ಅಸಮಾಧಾನ ವ್ಯಕ್ತವಾಗುವುದು. ಪ್ರಾಣಿಗಳ ಜೊತೆ ಸಮಯವನ್ನು ಕಳೆಯುವ ಮನಸ್ಸು ಮಾಡುವಿರಿ. ಊರಿನ ಉತ್ಸವದಲ್ಲಿ ಭಾಗಿಯಾಗುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವ ಹುನ್ನಾರ ನಡೆಸುವಿರಿ. ಕೃಷಿಕರಿಗೆ ತಮ್ಮ ಬೆಳೆಗಳಿಂದ ಲಾಭವಾಗಬಹುದು. ರಾಜಕೀಯವ್ಯಕ್ತಿಗಳಾಗಿದ್ದರೆ ಇಂದು ಜನಸೇವೆಯನ್ನು ಮಾಡುವಿರಿ. ಮಕ್ಕಳು ನಿಮ್ಮನ್ನು ಇಷ್ಟ ಒಡುವರು.‌ ಅವರ ಜೊತೆ ಕಾಲ ಕಳೆಯಿರಿ.