ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಆಶ್ಲೇಷ, ಯೋಗ: ಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 55 ನಿಮಿಷಕ್ಕೆ, ರಾಹು ಕಾಲ 09:17 ರಿಂದ 10:53ರ ವರೆಗೆ, ಯಮಘಂಡ ಕಾಲ 02:06 ರಿಂದ 03:42ರ ವರೆಗೆ, ಗುಳಿಕ ಕಾಲ 06:04 ರಿಂದ 07:40ರ ವರೆಗೆ.
ಮೇಷ: ಇಂದು ನಿಮ್ಮ ಸಮಯವು ಸದುಪಯೋಗವಾಗಿದೆ ಎಂದು ಅನ್ನಿಸಬಹುದು. ನಿಮ್ಮ ಬುದ್ಧಿಯಿಂದ ನಿಮಗೆ ಸಿಗಬೇಕಾದುದನ್ನು ಪಡೆದುಕೊಳ್ಳಬಹುದು. ಮಾತುಗಳಿಂದ ನಿಮ್ಮನ್ನು ಅಳೆಯಬಹುದು. ಇಂದಿನ ಹೆಚ್ಚಿನ ವಿಚಾರಗಳು ನಿಮಗೆ ಸಂಬಂಧವಿಲ್ಲದಿದ್ದರೂ ಅನಿವಾರ್ಯವಾಗಿ ಮಾತನಾಡಬೇಕಾಗಬಹುದು. ಒಮ್ಮೆ ಭೇಟಿಯಾದ ಮಿತ್ರರು ನಿಮ್ಮನ್ನು ಭೇಟಿ ಮಾಡುವರು. ವ್ಯವಸ್ಥೆ ಕೊರತೆಯನ್ನು ಸರಿ ಮಾಡಲು ಪ್ರಯತ್ನಿಸುವಿರಿ. ಎಲ್ಲರೂ ನಿಮ್ಮ ಮಾತನ್ನು ಕೇಳುವುದಿಲ್ಲ. ಕೇಳುವವರ ಬಳಿ ಹೇಳಬೇಕಾದುದನ್ನು ಹೇಳಿ.
ವೃಷಭ: ಇಂದು ನೀವು ಹಣಕಾಸಿನ ವ್ಯವಹಾರಕ್ಕೆ ವಾದ ಮಾಡುವ ಹಾಗೆ ಆಗಬಹುದು. ನಿಮ್ಮ ಕಾರ್ಯಕ್ರಮಗಳು ಎಲ್ಲವೂ ವ್ಯತ್ಯಾಸವಾಗಲಿದೆ. ಇದು ನಿಮಗೆ ಅಪಮಾನದಂತೆಯೂ ಎನಿಸಬಹುದು. ಪೂರ್ವಾರ್ಜಿತ ಸಂಪತ್ತಿಗೆ ಬೆಲೆ ಕೊಡಿ. ಕೆಲವು ಸಮಸ್ಯೆಗಳನ್ನು ಅನಗತ್ಯವಾಗಿ ತಂದುಕೊಳ್ಳುವಿರಿ. ನಿಮ್ಮ ಪರೀಕ್ಷೆಯಲ್ಲಿ ನೀವು ಉತ್ತೀರ್ಣರಾಗುವ ಕಾಲ ತುಂಬ ದೀರ್ಘವಿದೆ. ಸಹೋದರನ ಮಾತು ನಿಮಗೆ ಇಷ್ಟವಾಗದಿದ್ದರೂ ಇಷ್ಟಪಡಬೇಕಾದೀತು. ಕಾಲವು ಬಹಳ ನಿಧಾನ ಎಂದು ಅನ್ನಿಸಬಹುದು. ಸಂಪನ್ಮೂಲವ್ಯಕ್ತಿಗಳ ಭೇಟಿಯಾಗಲಿದೆ.
ಮಿಥುನ: ಇಂದು ನೀವು ಧೈರ್ಯವನ್ನು ಕಳೆದುಕೊಳ್ಳದೇ ಮುನ್ನಡೆಯಿರಿ. ಹಣಕಾಸಿನ ವಿಚಾರದಲ್ಲಿ ಕಛೇರಿಯಲ್ಲಿ ಕಲಹವಾದೀತು. ದಾಖಲೆಗಳನ್ನು ಸರಿಯಾಗಿ ಇಡಿ. ಸಭೆಯಲ್ಲಿ ನೀವು ಮಾತನಾಡಬೇಕಾದ ಸ್ಥಿತಿ ಬರಬಹುದು. ಚರಾಸ್ತಿಗಳ ಕೆಲವು ನಷ್ಟವಾಗಬಹುದು. ಕುಟುಂಬ ನಿರ್ವಹಣೆಯು ಅನಿವಾರ್ಯವಾಗಿ ಬಂದೀತು. ತಂದೆಯ ಆರೋಗ್ಯವನ್ನು ವಿಚಾರಿಸಿಕೊಳ್ಳಿ. ಸತತ ಕೆಲಸವು ವಿಶ್ರಾಂತಿಯನ್ನು ಬಯಸುವುದು. ಗಾಯ ಮಾಡಿಕೊಳ್ಲುವ ಸಾಧ್ಯತೆ ಇದೆ. ಅಪರಿಚಿತರ ಮೇಲೆ ಭರವಸೆ ಬಂದೀತು.
ಕಟಕ: ಈ ದಿನ ನಿಮಗೆ ವಾಹನ ಮತ್ತು ವಸತಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ನೀವು ಉದ್ಯೋಗದ ನಿಮಿತ್ತ ಅಪರಿಚಿತ ಪ್ರದೇಶಕ್ಕೆ ಹೋಗುವಿರಿ. ನಿಮಗೆ ಉತ್ಸಾಹ ಕೊರತೆಯಾದರೆ ಸ್ನೇಹಿತರು ಅದನ್ನು ಹೆಚ್ಚಿಸಿಯಾರು. ಯಾರಿಗಾದರೂ ಸಹಾಯವನ್ನು ಮಾಡಿ. ಅಷ್ಟಮದ ಶನಿಯ ಕಾಟವು ಕಡಿಮೆಯಾದೀತು. ಸರ್ಕಾರವು ನೀವು ಸಂಪಾದಿಸಿದ ಸಂಪತ್ತಿಗೆ ದಾಖಲೆ ಕೇಳಬಹುದು. ಅಧಿಕಾರಿಗಳ ಜೊತೆ ವರ್ತನೆ ಸರಿಯಾಗಿರಲಿ. ವಿದ್ಯುತ್ ಉಪಕರಣಗಳಿಂದ ನಿಮ್ಮ ದೇಹಕ್ಕೆ ಹಾನಿಯಾಗಬಹುದು. ಹೊಸದಾಗಿ ಆರಂಭಿಸಿದ ಕಾರ್ಯಗಳನ್ನು ನಿಲ್ಲಿಸುವ ಯೋಚನೆಯು ಬರಬಹುದು.