AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮೇ 27ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 27ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮೇ 27ರ ದಿನಭವಿಷ್ಯ
ಸಾಂದರ್ಬಿಕ ಚಿತ್ರ
Ganapathi Sharma
|

Updated on: May 27, 2023 | 1:00 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 27ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಆರೋಗ್ಯ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ಸೂಕ್ತ ವೈದ್ಯೋಪಚಾರಗಳಿಗೆ ಮಾರ್ಗದರ್ಶನ ದೊರೆಯಲಿದೆ. ಶತ್ರುಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯ ಹೆಚ್ಚಾಗಲಿದೆ. ವಾಹನ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಅನುಕೂಲವಿದೆ. ಹೊಸದಾಗಿ ಆಗುವ ಸ್ನೇಹಿತೆಯರು- ಸ್ನೇಹಿತರಿಂದ ನಿಮ್ಮ ಉದ್ಯೋಗ, ವೃತ್ತಿಗೆ ಸಹಾಯ. ಮನೆಗೆ ಗೃಹಾಲಂಕಾರ ವಸ್ತುಗಳನ್ನು ತರುವ ಯೋಗ ಇದೆ. ಇತರರನ್ನು ಆಕರ್ಷಿಸುವಂಥ ವಸ್ತ್ರಾಭರಣಗಳನ್ನು ಖರೀದಿಸಲಿದ್ದೀರಿ. ಪತ್ರಿಕೋದ್ಯಮ- ಮಾಧ್ಯಮದ ವೃತ್ತಿಯನ್ನು ಈಗಷ್ಟೇ ಆರಂಭಿಸಿರುವವರಿಗೆ ಇತರರ ಸಹಾಯದಿಂದ ಉದ್ಯೋಗ ದೊರೆಯುವುದು ಇತ್ಯಾದಿ ಶುಭ ಫಲಗಳಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಉದ್ಯೋಗಸ್ಥರಿಗೆ ವಿನಾಕಾರಣದ ಪ್ರಯಾಣ ಅದರಿಂದ ದಣಿವು, ಕೆಲಸದಲ್ಲಿ ವಿಪರೀತ ಒತ್ತಡ, ಅದರಲ್ಲೂ ಫೈನಾನ್ಸ್ ರಿಕವರಿ ವಿಭಾಗಗಳಲ್ಲಿ ಇರುವವರಿಗೆ ಮಾನಸಿಕವಾಗಿ ಬಲು ಹಿಂಸೆ ಆಗುತ್ತದೆ. ಇದರ ಜತೆಗೆ ಅಕೌಂಟ್ಸ್ ವಿಭಾಗದಲ್ಲಿ ಇದ್ದರಂತೂ ಕೈಯಿಂದ ಹಣ ಕಟ್ಟಿಕೊಡಬೇಕಾದ ಸಂದರ್ಭ ಬರಲಿದೆ. ನಿಮ್ಮ ಹಠಮಾರಿತನದಿಂದಾಗಿ ಬೇರೆಯವರು ನಿಮ್ಮನ್ನು ಮೋಸ ಮಾಡುವ ಸಾಧ್ಯತೆ ಹೆಚ್ಚಿದೆ. ವಿದ್ಯಾರ್ಥಿಗಳು ಸೇರಬಯಸುವ ಅಥವಾ ಈಗಾಗಲೇ ಸೇರಿದ ಕೋರ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳುವಂತಾಗುತ್ತದೆ. ಅಥವಾ ಇದರ ಬದಲು ಬೇರೆ ಕೋರ್ಸ್ ಸೇರುತ್ತೇನೆ ಎಂದು ನಿರ್ಧಾರಗಳನ್ನು ಬದಲಿಸಿಕೊಳ್ಳುತ್ತೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಈಗಾಗಲೇ ಕಾರು ಅಥವಾ ಬೈಕ್ ಇದೆ ಅನ್ನುವವರು ಮತ್ತೊಂದು ವಾಹನ ಖರೀದಿಸುವುದಕ್ಕೆ ಯೋಜನೆ ಹಾಕುತ್ತೀರಿ. ಲಕ್ಷುರಿಯಾದ ವಾಹನ ಅದಾಗಿರುವ ಸಾಧ್ಯತೆ ಇದೆ. ಮನೆಗೆ ಪೀಠೋಪಕರಣ, ತುಂಬ ಚೆನ್ನಾಗಿರುವಂಥ ಮಂಚ- ಹಾಸಿಗೆ, ವಜ್ರ- ಪ್ಲಾಟಿನಂ ಆಭರಣ ಖರೀದಿ, ಹಿಲ್ ಸ್ಟೇಷನ್ ಗಳಿಗೆ ಪ್ರವಾಸ ತೆರಳುವುದಕ್ಕೆ ಯೋಜನೆ ಹಾಕುತ್ತೀರಿ. ಭೂಮಿ, ಆಸ್ತಿ, ಒಡವೆ, ಹಣವನ್ನು ಬಾಯಿಬಿಟ್ಟು ಕೇಳಿ ಪಡೆದುಕೊಳ್ಳಬೇಕು ಎಂಬ ಆಲೋಚನೆ, ಧೈರ್ಯ ಬರಲಿದೆ. ದೊಡ್ಡ ಮಟ್ಟದ ನಷ್ಟ ಆಗುತ್ತದೆ ಅಥವಾ ನಿಮಗೆ ಬರಬೇಕಾದ ಹಣವೋ ಆಸ್ತಿಯಲ್ಲಿನ ಪಾಲೋ ಬರುವುದಿಲ್ಲ ಎಂದುಕೊಂಡಿದ್ದು ಬರುವುದಕ್ಕೆ ಮಾರ್ಗಗಳು ಗೋಚರಿಸುತ್ತವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನರಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಲಿವೆ. ಈಗಾಗಲೇ ಅಂಥ ಸಮಸ್ಯೆಗಳು ಇದ್ದಲ್ಲಿ ಉಲ್ಬಣ ಆಗಲಿದೆ. ಯಾವುದೇ ಕೆಲಸ ಮಾಡುವಾಗ ಗಾಬರಿ ಗಾಬರಿ ಆಗುತ್ತದೆ. ಮುಖ್ಯ ಮಾಹಿತಿಯನ್ನು ನೀವೇ ಮಿಸ್ ಮಾಡಿಕೊಂಡು ಬಯ್ಯಿಸಿಕೊಳ್ಳುವ, ನಿಮ್ಮ ಕೈಯಿಂದಲೇ ಹಣ ಕಳೆದುಕೊಳ್ಳುವ ಯೋಗ ಸಹ ಇದೆ. ನಿಮ್ಮ ಅರಿವಿಗೆ ಬಾರದಂತೆಯೇ ಕೆಟ್ಟ ಬೈಗುಳ ಬಂದು, ಇತರರಿಗೆ ನಿಮ್ಮ ಬಗ್ಗೆ ಗೌರವ ಹೋಗಬಹುದು. ಸ್ನೇಹಿತರ ಜತೆಗೆ ಜಗಳ- ಕದನಗಳಾಗಿ, ಸ್ನೇಹ ಕಳೆದುಕೊಳ್ಳುವ ಯೋಗ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಸೋಷಿಯಲ್ ಸ್ಟೇಟಸ್ ಹೆಚ್ಚು ಮಾಡಿಕೊಳ್ಳುವ ಕಡೆಗೆ ಹೆಚ್ಚಿನ ಗಮನ ಕೊಡುತ್ತೀರಿ. ಈಗಿರುವ ಬಾಡಿಗೆ ಮನೆಗಿಂತ ದೊಡ್ಡದಾದ ಮನೆ, ದೊಡ್ಡ ವಾಹನ, ವಿಲಾಸಿ ಪೀಠೋಪಕರಣ, ಹೊಸ ಟೀವಿ, ಗ್ಯಾಜೆಟ್ ಖರೀದಿ ಇಂಥದ್ದನ್ನು ಮಾಡುವಂಥ ಯೋಗ ಇದೆ. ಚೀಟಿ ಹಣವನ್ನು ಎತ್ತುವುದು, ತಾಯಿ ಅಥವಾ ತಾಯಿ ಸಮಾನರಿಂದ ಒಡವೆ- ಹಣವನ್ನು ಪಡೆದುಕೊಳ್ಳುವುದು, ಅಥವಾ ಪತಿಯಿಂದ ಗಿಫ್ಟ್ ಪಡೆಯುವುದು, ನಿಮ್ಮಿಂದ ಅಥವಾ ನಿಮ್ಮ ಮಾತಿನ ಶಿಫಾರಸಿನಿಂದ ಆಗಿರುವ ಕೆಲಸಕ್ಕೆ ಪ್ರತಿಯಾಗಿ ಹಣವೋ ಆಭರಣವೋ ಅಥವಾ ಬೆಲೆಬಾಳುವ ರೇಷ್ಮೆ ಸೀರೆಯನ್ನೋ  ಪಡೆಯುತ್ತೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಆದಾಯದಲ್ಲಿ ಭಾರೀ ಇಳಿಕೆ ಆಗುತ್ತದೆ. ಕುಟುಂಬ ಸದಸ್ಯರ ಅನಾರೋಗ್ಯ ಸಮಸ್ಯೆಗೆ ದೊಡ್ಡ ಮೊತ್ತದ ಖರ್ಚಾಗಲಿದೆ. ಮನೆ ಕಟ್ಟುತ್ತಿರುವವರು, ಸರ್ಕಾರಿ ಟೆಂಡರ್ ಅಥವಾ ಅನುಮತಿ ಬೇಕೇಬೇಕು ಎಂಬಂಥ ಕೆಲಸಗಳಿಗೆ ಆಕ್ಷೇಪಗಳು ಬರಲಿವೆ. ನೀವು ಮಾಡುತ್ತಿರುವ ವೃತ್ತಿಗೆ ಸಂಬಂಧಿಸಿದಂತೆ ಅಪಪ್ರಚಾರ ಆಗಲಿದೆ. ಹೆಣ್ಣುಮಕ್ಕಳಿಗೆ ಉಷ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಲಿವೆ. ಮನಸ್ಸಿಗೆ ಬೇಸರ, ಖಿನ್ನತೆ ಕಾಡಲಿದೆ. ಮನೆಯಲ್ಲಿ ಮಿಕ್ಸಿ, ಮೈಕ್ರೋವೇವ್ ಓವನ್, ಎಲೆಕ್ಟ್ರಿಕಲ್ ಸ್ಟೌ- ಕುಕ್ಕರ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ವಿದ್ಯುತ್ ಅವಘಡಗಳು ಸಂಭವಿಸಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಪ್ರಭಾವಿಗಳ ಸಂಪರ್ಕಕ್ಕೆ ಬರಲಿದ್ದೀರಿ. ಇದರಿಂದ ಉದ್ಯೋಗ, ವೃತ್ತಿ ಜೀವನಕ್ಕೆ ದೊಡ್ಡ ಸಹಾಯ ಆಗಲಿದೆ. ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಬಾವಿಗಳ ನೆರವು ದೊರೆಯಲಿದೆ. ದಂಡ- ಜುಲ್ಮಾನೆ ಅಥವಾ ದೊಡ್ಡ ಮೊತ್ತದ ಶುಲ್ಕವನ್ನು ನಿಮ್ಮ ಮೇಲೆ ವಿಧಿಸಿದ್ದಲ್ಲಿ ಅದನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ದೊರೆಯಲಿದೆ. ಆಕರ್ಷಣಾ ಶಕ್ತಿ ಜಾಸ್ತಿ ಆಗುತ್ತದೆ. ಇಷ್ಟು ಸಮಯ ನಿರೀಕ್ಷೆ ಮಾಡುತ್ತಿದ್ದ ಹಣಕಾಸಿನ ವಿಚಾರಗಳು ನೆರವೇರುತ್ತವೆ. ಮದುವೆ ಸಂಬಂಧಗಳು ಹುಡುಕಿಕೊಂಡು ಬರುವ ಯೋಗ ಸಹ ಇದೆ. ಹೊಸ ವ್ಯಾಪಾರ- ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀವು ಮಾಡಿದ್ದ ಪ್ರಯತ್ನದಲ್ಲಿ ಬೆಳವಣಿಗೆ ಕಾಣಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಟ್ಯಾಕ್ಸ್ ರೀಫಂಡ್ ಆಗುವ, ನಿಮ್ಮ ಪಾಲಿಗೆ ಉದ್ಯೋಗದಲ್ಲೋ – ವೃತ್ತಿ- ವ್ಯಾಪಾರದಲ್ಲಿ ಗಾಡ್ ಫಾದರ್ ರೂಪದಲ್ಲಿ ಇರುವವರು ನೆರವಾಗಲಿದ್ದಾರೆ.  ಪ್ರಮೋಷನ್ ನಿರೀಕ್ಷೆಯಲ್ಲಿ ಇರುವವರಿಗೆ ದೊರೆಕಿಸಿಕೊಳ್ಳುವ ಮಾರ್ಗ ಸಿಗುವ ಸಾಧ್ಯತೆ ಹೆಚ್ಚಿದೆ. ಇಷ್ಟದ ಸ್ಥಳಗಳಿಗೆ ಪ್ರವಾಸಕ್ಕೆ ತೆರಳುವ, ಸ್ಪರ್ಧೆಗಳಲ್ಲಿ ಯಶಸ್ಸು ಸಿಗುವ, ಬುದ್ಧಿಗೆ ಸಂಬಂಧಿಸಿದ ಆಟೋಟಗಳಲ್ಲಿ ಹೆಸರು- ಕೀರ್ತಿ ಪಡೆಯುವ ಯೋಗ ಇದೆ. ಅಡ್ವೈಸರಿ ಸರ್ವೀಸ್ ಮಾಡುವಂಥವರು, ಟೂರ್ ಆಪರೇಟರ್ ಗಳು, ದೇವಾಲಯದ ಪಾರುಪತ್ತೆ ನೋಡಿಕೊಳ್ಳುವಂಥವರಿಗೆ ಆದಾಯ ಹೆಚ್ಚಾಗಲಿದೆ. ಜತೆಗೆ ಗೌರವ ಸಮ್ಮಾನಗಳು ಸಹ ಆಗಲಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸೇಲ್ಸ್, ಮಾರ್ಕೆಟಿಂಗ್, ಅಡ್ವರ್ಟೈಸ್ ಮೆಂಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಆದಾಯ ಹೆಚ್ಚಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಸಂತೋಷವಾದ ಸಮಯ ಕಳೆಯಲಿದ್ದೀರಿ. ಉದ್ಯೋಗಸ್ಥರಾಗಿದ್ದಲ್ಲಿ ಫ್ಲ್ಯಾಟ್ ಖರೀದಿ ಮಾಡುವುದಕ್ಕೆ ಅಡ್ವಾನ್ಸ್ ನೀಡುವ ಅಥವಾ ಖರೀದಿ ಪ್ರಕ್ರಿಯೆಯನ್ನೇ ಪೂರ್ತಿ ಮಾಡುವ ಯೋಗ ಇದೆ. ಗೃಹಿಣಿಯರಿಗೆ ತಮ್ಮ ಸ್ವಂತ ಆಸೆಗೆ ಹಣ ಉಳಿಸುವ ಹಾಗೂ ಅದನ್ನು ಪೂರೈಸಿಕೊಳ್ಳುವ ಅವಕಾಶ ದೊರೆಯಲಿದೆ. ಯಾವುದಾದರೂ ಮುಖ್ಯ ಕೆಲಸಕ್ಕೆ ನೀವು ಅಂದುಕೊಂಡಿದ್ದ ಖರ್ಚಿನ ಪ್ರಮಾಣ ಕಡಿಮೆಯಾಗಿ, ಆ ಹಣ ಉಳಿಯುವ ಸಾಧ್ಯತೆಗಳಿವೆ.

ಲೇಖನ- ಎನ್.ಕೆ. ಸ್ವಾತಿ

ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ