Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

|

Updated on: Apr 28, 2023 | 5:30 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 28) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಆಶ್ಲೇಷ, ಯೋಗ: ಶೂಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ 10:56 ರಿಂದ 12:30ರ ವರೆಗೆ, ಯಮಘಂಡ ಕಾಲ 03:39 ರಿಂದ 05:13 ವರೆಗೆ, ಗುಳಿಕ ಕಾಲ 07:47 ರಿಂದ 09:21ರ ವರೆಗೆ.

ಮೇಷ: ಯಂತ್ರೋಪಕರಣವನ್ನು ಖರೀದಿಸುವಿರಿ. ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸಗಳು ಆಗಬಹುದು. ಸರ್ಕಾರಿ ಕೆಲಸವು ಪ್ರಗತಿಯಲ್ಲಿ ಇರಲಿದೆ. ಸಂಗಾತಿಯು ಇಂದು ನಿಮ್ಮ ಮಾತನ್ನು ಅನುಸರಿಸುವಳು. ಹೆಚ್ಚಿನ ಸಂಪಾದನೆಗೆ ಅನ್ಯ ಮಾರ್ಗವನ್ನು ಹಿಡಿದುಕೊಳ್ಳುವಿರಿ. ಮಾತಮಾಡುವಾಗ ಗಮನವಿರಲಿ. ನಿಮ್ಮೆದುರಿನವರಿಗೆ ಬೈಯ್ಯುತ್ತಿದ್ದುದೆಂದು ಅನಂತರ ಗೊತ್ತಾಗಿ ಇಸರುಮುರುಸಾದೀತು. ಮನಸ್ಸಿನ ಆಲಸ್ಯವನ್ನು ಹೋಗಲಾಡಿಸಿಕೊಂಡು ಕಾರ್ಯಪ್ರವೃತ್ತರಾಗಿ. ಪ್ರತಿಯೊಂದು ಕ್ಷಣವನ್ನೂ ಆನಂದಿಸುವಿರಿ. ಸಜ್ಜನರ ಸಹವಾಸ ನಿಮಗೆ ಸಿಕ್ಕಿ ಮಾರ್ಗದರ್ಶನವೂ ಆಗಕಿದೆ. ಗಣಪತಿಯ ಸ್ತೋತ್ರವನ್ನು ಪಠಿಸಿ. ನೆಮ್ಮದಿ ಸಿಗಲಿದೆ.

ವೃಷಭ: ವಾಹನಸಂಚಾರವು ನಿಮಗೆ ಬೇಡ. ನಿಮ್ಮನ್ನು ತರತರದ ಮಾತುಗಳಿಂದ ನಿಮ್ಮ ಉತ್ತೇಜಿಸಬಹುದು. ಅದು ಸರಿ ಎನಿಸಿ ನೀವು ಮಾಡಿ ಸಮಸ್ಯೆಗಳನ್ನು ತಂದುಕೊಳ್ಳಬೇಕಾದೀತು. ಆಪ್ತಮಿತ್ರರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮದಾದ ಗುರಿಯನ್ನು ಹಾಕಿಕೊಳ್ಳಲು ಗೊಂದಲವಾಗಬಹುದು. ಭೂಮಿಯ ಖರೀದಿಗೆ ಯೋಚಿಸಿದ್ದರೆ ನೀವು ಸ್ವಲ್ಪ ಸಮಯವನ್ನು ಬಿಡುವುದು ಒಳ್ಳೆಯದು. ದೇವತಾಕಾರ್ಯಗಳನ್ನು ಬಲವಂತದಿಂದ ಮಾಡುವಿರಿ. ನಿಮ್ಮ ಮನಸ್ಸಿಗೆ ಬಂದ ವಿಚಾರಗಳನ್ನು ಒಂದೆಡೆ ಇಟ್ಟಕೊಳ್ಳಿ. ಸಮಯ ಬಂದಾಗ ಅವು ಮತ್ತೆ ಮನೋಭೂಮಿಯಲ್ಲಿ ಮೊಳಕೆ ಒಡೆದೀತು. ಅಗತಿಗತಿ‌ ಎಂದು ದೇವರ ಶರಣಾಗಿ. ಬರುವ ಸಮಸ್ಯೆಗಳನ್ನು ಗಟ್ಟಿಯಾಗಿ ಎದುರಿಸುವಿರಿ.

ಮಿಥುನ: ಮಕ್ಕಳ ವಿಷಯಕ್ಕೆ ಖರ್ಚು ಮಾಡುವ ಸ್ಥಿತಿ ಬರಲಿದೆ. ದೈನಿಂದನ ಕೆಲಸಗಳು ನಿಶ್ಚಿಂತೆಯಿಂದ ನಡೆಯುವುವು.‌ ಕುಟಂಬದ ಜೊತೆ ನೀವು ಇನ್ನಷ್ಟು ಆಪ್ತರಾಗುವಿರಿ. ದಾಂಪತ್ಯದಲ್ಲಿ ನಗುವಿದ್ದರೂ ಸುಖದ ಕೊರತೆ ನಿಮ್ಮನ್ನು ಕಾಡಬಹುದು. ನಿಮ್ಮ ಕೆಲಸವನ್ನು ಸಕಾಲಕ್ಕೆ ಮುಗಿಸಿ ಎಲ್ಲರಿಂದ‌ ಮೆಚ್ಚುಗೆ ಗಳಿಸುವಿರಿ. ಆಲಂಕಾರಿಕ ವಸ್ತುಗಳನ್ನು ಖರೀದಿಸಲು ಮನಸ್ಸು ಮಾಡುವಿರಿ. ಅದಕ್ಕಾಗಿ ಹಣವು ವ್ಯಯವಾಗಲಿದೆ. ಹಳೆಯ‌ ಕೆಲಸವನ್ನು ಮರೆಯುವ ಸ್ವಭಾವವು ಇರಲಿದೆ. ಸಿನಿಮಾ ಮುಂತಾದ ಕ್ಷೇತ್ರಗಳಲ್ಲಿ ಇರುವವರಿಗೆ ಅಥವಾ ನಟರಿಗೆ ಹೆಚ್ಚು ಅನುಕೂಲವಿದೆ. ರಾಜರಾಜೇಶ್ವರಿಯ ಸ್ತೋತ್ರ ಮಾಡಿ.

ಕಟಕ: ಉದ್ಯೋಗದಲ್ಲಿ ಭಡ್ತಿಗಾಗಿ ಬಹಳ ಶ್ರಮವಹಿಸುವಿರಿ. ನಿಮ್ಮನ್ನು ಹಿಂದೆಳೆಯಲು ಅನೇಕರು ಪ್ರಯತ್ನಿಸಿದರೂ ನಿಮ್ಮ ಕೆಲಸವು ನಿಮ್ಮನ್ನು ಮುಂದಕ್ಕೆ ತಂದಿರುತ್ತದೆ. ಸಮಸ್ಯೆಗಳನ್ನು ಸೃಷ್ಟಿಕೊಳ್ಳುವ ಮಾನಸಿಕ ಸ್ಥಿತಿಯನ್ನು ಬಿಟ್ಟು ಬಿಡುವುದು ಒಳ್ಳೆಯದು. ವಿದ್ಯಾವಂತರೊಬ್ಬರ ಪರಿಚಯವು ನಿಮಗೆ ಇಂದಿನ‌ ಮಹಾಲಾಭದಲ್ಲಿ ಒಂದಾಗಿದೆ. ನಿಮ್ಮಲ್ಲಿ ಹಣವನ್ನು ಕೇಳಿ ಯಾರಾದರೂ ಬರಬಹುದು, ಇಲ್ಲವೆನ್ನದೇ ಎಷ್ಟೋ ಒಂದಿಷ್ಟನ್ನು ಇದಂ‌ ನ ಮಮ ಎಂಬ ಭಾವದಿಂದ ಕೊಡಿ. ಉಪಯೋಗವಿಲ್ಲ ಚರ್ಚೆಯನ್ನು ಮಾಡಿ ಸಮಯವನ್ನು ಹಾಳುಮಾಡಬೇಡಿ. ಹನುಮಾನ್ ಚಾಲೀಸ್ ಪಠಣ ಮಾಡಿ.