Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಏಪ್ರಿಲ್ 28ರ ಭವಿಷ್ಯ ಹೀಗಿದೆ
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್ 28) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್ 28 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಆಶ್ಲೇಷ, ಯೋಗ: ಶೂಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ 10:56 ರಿಂದ 12:30ರ ವರೆಗೆ, ಯಮಘಂಡ ಕಾಲ 03:39 ರಿಂದ 05:13 ವರೆಗೆ, ಗುಳಿಕ ಕಾಲ 07:47 ರಿಂದ 09:21ರ ವರೆಗೆ.
ಧನು: ಒಂದೇ ರೀತಯ ಕೆಲಸದಿಂದ ನೀವು ಬೇಸರಗೊಂಡು ಬೇರೆ ರೀತಿಯಲ್ಲಿ ಬೇರೆ ಕೆಲಸವನ್ನು ಮಾಡಲು ಆಲೋಚಿಸುವಿರಿ. ಹೊಸತನ್ನು ಕಲಿಯುವ ಉತ್ಸುಕತೆಯೂ ನಿಮ್ಮಲ್ಲಿ ಇರಲಿದೆ. ಅನಿರೀಕ್ಷಿತ ದುರ್ವಾತೆಯಿಂದ ನಿಮಗೆ ಸಂಕಟವಾಗುವುದು. ನೆಮ್ಮದಿಯ ವಾತಾವರಣದಲ್ಲಿ ಸ್ವಲ್ಪ ಸಮಯವನ್ನು ಕಳೆಯಿರಿ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೀವಿಂದು ಮನೆಯನ್ನು ಬಿಡಬೇಕಾಗಿಬರಬಹುದು. ಹಂಚಿಕೆಯ ವ್ಯವಹಾರ ನಿಮಗೆ ಹಿಡಿಸಿದ್ದಲ್ಲ. ಸುಮ್ಮನೇ ಕಲಹಕ್ಕೆ ಕಾರಣವಾಗುವುದು. ಅಕಸ್ಮಾತ್ ದೂರ ಪ್ರಯಾಣವು ಅನಿವಾರ್ಯವಾದೀತು. ಸರಿಯಾದ ಸಿದ್ಧತೆಯ ಜೊತೆ ಹೋಗಿ. ಮಂಗಲಗೌರಿಯನ್ನು ಸ್ತೋತ್ರ ಮಾಡಿ.
ಮಕರ: ಮುಖವನ್ನೇ ನೋಡದ ವ್ಯಕ್ತಿಯೋರ್ವ ನಿಮಗೆ ಹೂಡಿಕೆಯನ್ನು ಮಾಡಲು ಹೇಳಿ ಅದರ ವಿಧಾನವನ್ನು ತಿಳಿಸಿ ಹಣವನ್ನು ಪಡೆಯಬಹುದು. ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಅಂತಹ ಸಂದರ್ಭದಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳಬೇಡಿ. ಸ್ನೇಹ ಬಾಂಧವ್ಯವು ಚೆನ್ನಾಗಿರಲಿದೆ. ಉನ್ನತಸ್ಥಾನಕ್ಕೆ ಹೋಗಲು ಅವಕಾಶವನ್ನು ಹುಡುಕುತ್ತೀದ್ದೀರಿ. ತಾಳ್ಮೆ ಇರಲಿ. ಆತುರದಿಂದ ಏನನ್ನಾದರೂ ಮಾಡಲು ಹೋಗಬೇಡಿ. ಭೂಮಿಯ ವಿಚಾರವನ್ನು ಸದ್ಯ ಕೈಬಿಡುವುದು ಒಳ್ಳೆಯದು. ಹಿರಿಯರ ಎದುರು ವಿನಯದಿಂದ ವರ್ತಿಸಿ. ಸಾಧ್ಯವಾದರೆ ಅವರ ಸೇವೆ ಮಾಡಿ. ಮಾತಿಗೆ ತಪ್ಪಿ ನಡೆಯುವಿರಿ ಎಂಬ ಮಾತು ಕೇಳಬಹುದು. ತೈಲವಿದ್ದರಷ್ಟೇ ದೀಪ ಉರಿಯುವುದು. ಶನೈಶ್ಚರನಿಗೆ ಎಳ್ಳಣ್ಣೆಯ ದೀಪ ಬೆಳಗಿ.
ಕುಂಭ: ನೀವು ಇಂದು ಶತ್ರುಗಳನ್ನು ಹೆಡೆಮುರಿ ಕಟ್ಟುತ್ತೇನೆ ಎಂಬ ಮನಃಸ್ಥಿತಿಯನ್ನು ಬಿಟ್ಟು ಶಾಂತರಾಗಿ. ನಿಮಗೆ ಕಾಲವು ಬರಲಿದೆ. ಆತುರದಿಂದ ಏನನ್ನಾದರೂ ಮಾಡಲು ಹೋದೀರಿ. ಕೈ ಹಾಕಿದ ಕೆಲಸವೆಲ್ಲ ಚಿನ್ನವಾಗದು. ಆದರೆ ಕಬ್ಬಿಣವಾದರೂ ಆಗುತ್ತದೆ. ಅದು ನಿಮಗೆ ಬಳಕೆ ಬರಲಿದೆ. ಬೇಸರಗೊಳ್ಳುವ ಅವಶ್ಯಕತೆ ಇಲ್ಲ. ವಿದ್ಯಾಭ್ಯಾಸವೂ ಕುಂಠಿತವಾಗುವುದು. ಸತತ ಪ್ರಯತ್ನವು ಬೇಕಾಗಿದೆ. ಕಛೇರಿಯ ಕೆಲಸಗಳು ಸಹಾಯಕರಿಂದ ಪೂರ್ಣಗೊಳುವುದು. ಅವರೂ ನಿಮ್ಮ ಯಶಸ್ಸಿನ ಪಾಲುದಾರರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಗೋಗ್ರಾಸವನ್ನು ಕೊಡಿ.
ಮೀನ: ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ಸರಿಯಾದ ಚಿತ್ರಣವಿರಲಿ. ಇಲ್ಲವಾದರೆ ನೀವು ಮಾಡಲು ಹೊರಟ ಕೆಲಸವು ಅಪೂರ್ಣವಾಗುವುದು ಅಥವಾ ಆಗದೇಯೂ ಹೋಗಬಹುದು. ನಿಮ್ಮ ಕರ್ತವ್ಯಗಳನ್ನು ಮಾಡಲು ಹಿಂಜರಿಯಬೇಡಿ. ಸಂಗಾತಿಯ ಜೊತೆಗಿನ ಮನಸ್ತಾಪವು ಉದ್ಯೋಗದ ಸ್ಥಳದಲ್ಲಿ ಪ್ರತಿಫಲಿಸುವುದು. ಅವಾಕಶಗಳನ್ನು ಬಳಸಿಕೊಳ್ಳಲು ಹಿಂದೆಟುಹಾಕುವ ಅವಶ್ಯಕತೆ ಇಲ್ಲ. ಮುನ್ನಡೆಯಿರಿ, ಎಲ್ಲವೂ ತಿಳಿಯುತ್ತದೆ. ಪ್ರಯಾಣದ ವಿಚಾರದಲ್ಲಿ ನೀವು ಒಂಟಿಯಾಗಿ ಹೋಗುವುದು ಬೇಡ. ನಿಮ್ಮ ಜೊತೆ ಯಾರದರೂ ಇರಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಭಾವ ನಿಮ್ಮಲ್ಲಿರಲಿ.