Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್ 28) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್ 28 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕನ್ಯಾ: ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಯಸಿದರೂ ಅದು ಅಕಾಲದಲ್ಲಿ ಪ್ರಕಟವಾಗುವುದು. ಹಣದ ಬೆನ್ನು ಹತ್ತಿ ಸಂಬಂಧಗಳನ್ನು ಕಡಿದುಕೊಳ್ಳಬೇಕಾಗಬುಹುದು. ನಿಮ್ಮಿಂದಾದ ಕೆಲಸವನ್ನು ನೀವೇ ಹೊಗಳಿಕೊಳ್ಳಬೇಡಿ. ನಿಮ್ಮ ವೃತ್ತಿಯನ್ನು ನೀವು ಸರಿಯಾಗಿ ನಿಭಾಯಿಸುತ್ತೀರಿ ಎನ್ನುವುದಕ್ಕೆ ನಿಮಗೆ ಇಂದು ಬರುವ ಜವಾಬ್ದಾರಿಯೇ ಕಾರಣವಾಗಿರುತ್ತದೆ. ಸಂಗಾತಿಯ ಮಾತಿನಿಂದ ಮನಸ್ತಾಪ ಉಂಟಾಗಬಹುದು. ಇದರಿಂದ ರಾತ್ರಿ ನೀವು ಮನೆ ಸೇರುವಿರಿ. ಸ್ನೇಹಿತರ ಬಳಗ ನಿಮ್ಮನ್ನು ಕೆಟ್ಟ ಕೆಲಸಕ್ಕೆ ಪ್ರೇರಿಸಬಹುದು. ಶ್ರೀಹರಿಯ ಸ್ತೋತ್ರವು ನಿಮ್ಮನ್ನು ಅಂತಹ ಕೆಲಸದಿಂದ ದೂರ ಮಾಡಬಹುದು.
ತುಲಾ: ಸರಿಯಾದ ಅಭ್ಯಾಸವಿಲ್ಲದೇ ಮಕ್ಕಳು ಪರೀಕ್ಷೆಯಲ್ಲಿ ಸೋಲವ ಸಾಧ್ಯತೆ ಇದೆ. ಮಕ್ಕಳ ಮೇಲೆ ಪೋಷಕರ ದೃಷ್ಟಿ ಇರಬೇಕಾಗಬಹುದು. ಕಛೇರಿಯಲ್ಲಿ ನೀವು ಹಿರಿಯ ಕೆಲಸಗಾರರಾಗಿದ್ದರೆ ನಿಮಗೆ ವಿದೇಶಪ್ರಯಾಣ ಅವಕಾಶ ಸಿಗಲಿದೆ. ಸರ್ಕಾರದಿಂದ ಸಿಗಬೇಕಾದ ಹಣವು ಸಿಗದೇ ಒದ್ದಾಡುವಿರಿ. ಸ್ಥಳದಲ್ಲಿಯೇ ಸಿಕ್ಕ ಕೆಲಸವನ್ನು ಚೆನ್ನಾಗಿ ಮಾಡಿ. ಹಠವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ ಧನಾತ್ಮವಾದ ಪರಿಣಾಮವನ್ನು ಪಡೆಯಿರಿ. ದಾಂಪತ್ಯದಲ್ಲಿ ಸುಖವು ಇರಲಿದೆ. ಮನಸ್ತಾಪಗಳು ದೂರವಾಗಿ ಕುಟುಂಬದಲ್ಲಿ ಅನ್ಯೋನ್ಯತೆ ಎದ್ದು ತೋರುವುದು. ಜಗದಂಬಾ ಪರಮೇಶ್ವರಿಯನ್ನು ಸ್ತೋತ್ರ ಮಾಡಿ.
ವೃಶ್ಚಿಕ: ನಿಮ್ಮ ಹಿತೈಷಿಗಳ ಸಹಕಾರದಿಂದ ನಿಮ್ಮ ಉದ್ಯಮವು ಅಭಿವೃದ್ಧಿ ಹೊಂದುವುದು. ಒಂದಿಲ್ಲೊಂದು ಆರೋಪದಿಂದ ನೀವು ಬೇಸತ್ತು ಹೋಗಬಹುದು. ಮನಸ್ಸಿಗೆ ಒದು ಬಹಳ ಕಿರಿಕಿರಿಯ ವಿಚಾತವಾಗಿ ಪರಿಣಮಿಸುವುದು. ಸ್ನೇಹಿತರ ಜೊತೆ ಮೋಜಿನಿಂದ ಕಳೆಯುವಿರಿ. ಏನಾದರೂ ಅವಘಡವಾದೀತು, ಎಚ್ಚರ. ವಿದ್ಯಾರ್ಥಿಗಳೂ ಓದಿನಲ್ಲಿಯೂ ಕೆಲಸದಲ್ಲಿಯೂ ಆಟೋಟದಲ್ಲಿಯೂ ನಿರಾಸಕ್ತಿ ಇರಲಿದೆ. ನಿದ್ರೆಯನ್ನು ಹೆಚ್ಚು ಇಷ್ಟಪಡುವರು. ವಿವಾಹವು ಕೂಡಿಬರುವ ಸಾಧ್ಯತೆ ಇದೆ. ನಿರಾಕರಿಸದೇ ಒಪ್ಪಿಕೊಳ್ಳಿ. ಸಮೃದ್ಧವಾದ ಭೋಜನ ಸಿಗಲಿದೆ. ಸಾಲಬಾಧೆಯಿಂದ ಮುಕ್ತರಾಗುವ ತಂತ್ರವನ್ನು ಮಾಡುವಿರಿ. ಗುರುಪಾದುಕಾಸ್ತೋತ್ರವನ್ನು ಪಠಿಸಿ.