Daily Horoscope: ಸಹವಾಸ ದೋಷದಿಂದ ತೊಂದರೆಯಾದೀತು, ದುರಭ್ಯಾಸದಿಂದ ದೂರವಿರಿ
ಇಂದಿನ (2023 ಏಪ್ರಿಲ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ವೃಷಭ: ಕೆಟ್ಟವರ ಸಹವಾಸದಿಂದ ಕೆಟ್ಟ ಹೆಸರೇ ಬರಲಿದೆ. ಕೆಸರಿನ ಜೊತೆ ಸರಸವಾಡಿದರೂ ವಿರಸವಾಡಿದರೂ ಕೆಸರಾಗುವುದು ನಿಮ್ಮದೇ ಶರೀರ. ಮನೆಯ ಕಾರ್ಯದಲ್ಲಿ ನೀವು ಭಾಗಿಯಾಗುವಿರಿ. ನಿಗದಿತ ಸಮಯಕ್ಕೆ ನಿಮ್ಮ ಕೆಲಸಗಳು ಮುಗಿಯದು. ಮುಂದೆ ಮಾಡಿದರಾಯಿತು ಎಂಬ ಮಾನಸಿಕ ಸ್ಥಿತಿಯನ್ನು ಬಿಡುವುದು ಒಳ್ಳೆಯದು. ತಂದೆಯಿಂದ ಹಿತವಚನವು ಸಿಗಬಹುದು. ಹಳೆಯ ಸ್ನೇತರು ದೂರವಾಣಿಯ ಮೂಲಕ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾರು.ತಾಳ್ಮೆಯಿಂದ ಕೇಳಿ. ಸಾಧ್ಯವಾದರೆ ಸಲಹೆ ಕೊಡಿ. ಅವರಿಗೆ ಬೇಸರವಾಗುವಂತೆ ನೋಡಿಕೊಳ್ಳಬೇಡಿ.
ಮಿಥುನ: ಕಛೇರಿಯಲ್ಲಿಯೇ ಅಥವಾ ಕಛೇರಿಯ ಕೆಲಸಕ್ಕೇ ಹೆಚ್ಚಿನ ಸಮಯವನ್ನು ವ್ಯಯಮಾಡುವಿರಿ. ಕುಟುಂಬದಲ್ಲಿ ನಿಮ್ಮ ಬಗ್ಗೆ ಆಡಿಕೊಂಡಾರು. ಸಹೋದ್ಯೋಗಿಗಳು ನಿಮ್ಮ ಮೇಲೆ ಕೆಲಸದ ಭಾರವನ್ನು ಹೊರಿಸಬಹುದು. ನಿಮ್ಮ ನೋವನ್ನು ಸಂಗಾತಿಯ ಜೊತೆ ಹಂಚಿಕೊಳ್ಳಿ. ಮನೆಗೆ ಬಂದ ಅತಿಥಿಗಳ ಜೊತೆ ಸಮಯವನ್ನು ಕಳೆಯುವಿರಿ. ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಹೋಗಿ ದಡ್ಡರಾಗುವಿರಿ. ವಿದ್ಯಾರ್ಥಿಗಳು ಶಿಕ್ಷಕರ ಸಹಾಯವನ್ನು ಪಡೆದು ಮುಂದಿನ ಓದಿನ ಬಗ್ಗೆ ಗಮನಹರಿಸಬಹುದು. ಕೆಲಸವು ಅಪೂರ್ಣವಾಗಿ ನೀವು ಆದಷ್ಟು ಬೇಗ ಮುಗಿಸುವ ತವಕದಲ್ಲಿ ಇರುತ್ತೀರಿ.
ಕಟಕ: ಮಕ್ಕಳಿಂದ ನಿಮಗೆ ಸಂತೋಷದ ಸುದ್ದಿ ಬರಬಹುದು. ಹೂಡಿಕೆಯನ್ನು ಮಾಡಿ ಹಣವನ್ನು ಉಳಿಸಿಕೊಳ್ಳುವುದು ಉತ್ತಮ. ಇಂದಿನ ಒತ್ತಡವನ್ನು ಚೆನ್ನಾಗಿ ನಿಭಾಯಿಸಬಲ್ಲಿರಿ. ದುರಭ್ಯಾಸದಿಂದ ದೂರವಿರಲು ಯತ್ನಿಸಿ. ಸಹವಾಸದಿಂದ ತೊಂದರೆಯಾದೀತು. ಉದ್ಯೋಗವನ್ನು ಬಿಡುವ ಮನಸ್ಸಾಗಬಹುದು. ಸುಂದರವಾದ ಪ್ರದೇಶಕ್ಕೆ ಹೋಗಬೇಕೆನ್ನುವ ಬಯಕೆ ಇರಲಿದೆ. ಚಂಚಲವಾದ ಮನಸ್ಸಿಗೆ ಧ್ಯಾನವೊಂದೆ ಪರಿಹಾರ. ಕೃಷಿಯು ನಿಮಗೆ ಇಷ್ಟವಾದ ವಿಷಯವಾಗಿದ್ದು ಅತ್ತ ಗಮನಹರಿಸುವಿರಿ. ನಿಮ್ಮ ಕಷ್ಟಕ್ಕೆ ಬಂದವರು ಆಪ್ತರಾಗಬಹುದು. ಮನೆಯ ಕೆಲಸವು ನಿಧಾನವಾಗಿ ಸಾಗಬಹುದು. ಯಾವುದನ್ನೇ ಆದರೂ ಸಾಮರ್ಥ್ಯದಷ್ಟೇ ಸೇವಿಸಿ. ಇಲ್ಲವಾದರೆ ಅಜೀರ್ಣವಾದೀತು.
ಸಿಂಹ: ಬಂಧುಗಳ ಸಹಕಾರ ಸಿಗದೇ ಅವರನ್ನು ದ್ವೇಷಿಸಬಹುದು. ಅತಿಯಾದ ಹಠವು ಒಳ್ಳೆಯದಲ್ಲ. ನೀವು ಏನನ್ನಾದರೂ ಪಡೆಯಲು ಪ್ರಯತ್ನಿಸಿದರೆ ಕೂಡಲೇ ಸಿಗುತ್ತದೆ ಎಂಬ ಭ್ರಮೆ ಬೇಡ. ಯಾರ ಹಂಗಿಲ್ಲದೇ ಸ್ವಾತಂತ್ರ್ಯವಾಗಿ ಇರಲು ಬಯಸುವಿರಿ. ಇಂದು ಮಾಡಬೇಕೆಂಬ ಕೆಲಸವನ್ನು ಮುಂದೂಡುವುದು ಒಳ್ಳೆಯದು. ಮನೆಯಿಂದ ದೂರವಿರುವವರಿಗೆ ಇಂದು ಮನೆಯ ನೆನಪಾಗಬಹುದು. ತನ್ನವರನ್ನು ಕಳೆದುಕೊಳ್ಳೆತ್ತೇನೆ ಎಂಬ ಹೆದರಿಕೆ ಇರಲಿದೆ. ದೇವರ ವಿಷಯದಲ್ಲಿ ನಂಬಿಕೆ ಕಡಿಮೆ ಆಗಬಹುದು. ಆಲಸ್ಯದಿಂದ ಮಾಡಬೇಕಾದ ಕೆಲಸವನ್ನು ಮಾಡದೇ ಇರುವಿರಿ.
ಕನ್ಯಾ: ಒಂಟಿಯಾಗೆ ಸುತ್ತಾಡುವ ಬಯಕೆ ಉಂಟಾಗಲಿದೆ. ಅಧಿಕ ಸುತ್ತಾಟದಿಂದ ಆಯಾಸವಾಗಬಹುದು. ನಿಮ್ಮ ಶಕ್ತಿಯನ್ನು ಆಧರಿಸಿಕೊಂಡು ಮುಂದುವರಿಯಿರಿ. ಜೀವನಕ್ಕೆ ಅನುಭವಿಗಳ ಮಾರ್ಗದಶರ್ನವನ್ನು ಪಡೆದುಕೊಳ್ಳುವಿರಿ. ಹಣಕಾಸಿನ ವಿಷಯದಲ್ಲಿ ಸಾಕಷ್ಟು ಗೊಂದಲವಿರಬಹುದು. ಅತಿಯಾದ ಆಲಸ್ಯದಿಂದ ನಿದ್ರಿಸುವಿರಿ. ನನಗೆ ಸಹಾಯಕ್ಕೆ ಯಾರೂ ಇಲ್ಲ ಎಂಬ ಅನಾಥ ಪ್ರಜ್ಞೆಯು ಕಾಡಬಹುದು. ಇಂದು ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಇದ್ದು ಅದನ್ನು ಆಪ್ತರ ಬಳಿ ಹೇಳಿಕೊಳ್ಳುವ ಮನಸ್ಸಾದೀತು. ನಿಮ್ಮ ವಾಹನವು ದುರಸ್ತಿಗೆ ಬರಬಹುದು. ವಿಷ್ಣುಸಹಸ್ರನಾಮ ಸ್ತೋತ್ರವನ್ನು ಪಠಿಸಿ, ಇಲ್ಲವೇ ಶ್ರವಣ ಮಾಡಿ.
ತುಲಾ: ಗೊಂದಲವಿರುವ ವಿಚಾರದ ಬಗ್ಗೆ ಅತಿಯಾಗಿ ತಲೆ ಕಡಸಿಕೊಳ್ಳಬೇಡಿ. ಸ್ವಲ್ಪ ದಿನ ಅದನ್ನು ತಲೆಯಿಂದ ತೆಗದು ಹಾಕಿ. ಗೊಂದಲವು ತಾನಾಗಿಯೇ ಪರಿಹಾರವಾಗುವುದು. ವಿವಾಹದ ವಿಚಾರವನ್ನು ತಂದೆಗೆ ತಿಳಿಸಲು ಹಿಂದೇಟು ಹಾಕಬಹುದು. ಮೇಲಧಿಕಾರಿಗಳನ್ನು ಚೆನ್ನಾಗಿ ನೋಡಿಕೊಳ್ಳಿ. ಅವರ ಕೆಲಸಗಳಿಗೆ ಸ್ಪಂದಿಸಿ. ಅವರ ಕಾರ್ಯಗಳನ್ನು ಪ್ರೀತಿಯಿಂದ ಮಾಡಿಕೊಡುವಿರಿ. ನಿಮ್ಮೊಳಗಿನ ಜಗಳವು ಬೀದಿಗೆ ಬರಬಹುದು. ಪತ್ನಿಗೆ ನೂತನ ವಸ್ತ್ರವನ್ನು ಖರೀದಿಸಿ ಕೊಂಡೊಯ್ಯುವಿರಿ. ನಿಮ್ಮ ಬೆಳವಣಿಗೆತಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಗಣಪತಿಯ ಆರಾಧನೆಯನ್ನು ಮಾಡಿ.
ವೃಶ್ಚಿಕ: ಆಹಾರದ ವಿಚಾರದಲ್ಲಿ ಮಿತಿ ಇರಲಿ. ರುಚಿಯಾಗಿದೆ ಎಂದು ಯಥೇಷ್ಟವಾಗಿ ತಿಂದು ಅನಾರೋಗ್ಯಕ್ಕೆ ಬಲಿಯಾಗಬಹುದು. ನಿಮ್ಮವರ ಮೇಲೆ ನಿಮಗೆ ಬೇಸರ ಉಂಟಾಗಬಹುದು. ವಿವಾಹವಾಗಬೇಕೆಂಬ ಆತುರ ಸರಿಯಲ್ಲ. ಕಾಲ ಬಂದಾಗ ಎಲ್ಲವೂ ಸರಿಯಾಗುತ್ತದೆ. ಪರಪುರುಷರ ಜೊತೆ ಮಾತನಾಡುವುದನದನು ಕಡಿಮೆ ಮಾಡಿ. ಮನೆಯ ವಾತಾವರಣ ಹಿಡಿಸದೇ ಮನೆಯಿಂದ ದೂರವಿರುವ ಆಲೋಚನೆಯನ್ನು ಮಾಡುವಿರಿ. ಭೂಮಿಯ ವ್ಯವಹಾರದಲ್ಲಿ ಅಲ್ಪಲಾಭವನ್ನು ಪಡೆಯಬಹುದು. ಅತಿಯಾದ ಆಸೆಯಿಂದ ಮೋಸ ಹೋಗಬೇಕಾಗಬಹುದು. ಎಚ್ಚರಿಕೆ ಇಂದ ವ್ಯವಹರಿಸಿ.
ಧನು: ನೂತನ ಉದ್ಯೋಗವನ್ನು ಪ್ರಾರಂಭಿಸುವ ಅಲೋಚನೆ ಇದ್ದರೆ ಸದ್ಯ ಕೈಬಿಡಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಗೊಂದಲಗಳನ್ನು ಪೂರ್ಣವಾಗಿ ಸರಿ ಮಾಡಿಕೊಳ್ಳಿ. ಮಕ್ಕಳ ವಿಚಾರದಲ್ಲಿ ನಿಮಗೆ ಹೆಮ್ಮೆ ಎನಿಸಬಹುದು. ಸುಂದರವಾದ ಪುರುಷನ ಬಲೆಗೆ ಬೀಳುವಿರಿ. ಮೋಜಿನಲ್ಲಿ ಜಾಗರೂಕರಾಗಿರಿ. ಅಧಿಕವಾಗಿ ಖರ್ಚಾಗುವುದನ್ನು ನಿಲ್ಲಿಸಿ. ಧಾರ್ಮಿಕಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಮನಸ್ಸು ಬಹಳ ಚಂಚಲವಾಗಲಿದ್ದು ಸಲ್ಲದ್ದರ ಬಗ್ಗೆ ಆಸೆ ಮೂಡಬಹುದು. ಹೆಚ್ಚಿನ ಸಂಪತ್ತಿಗೆ ಆಸೆ ಪಟ್ಟು ಇರುವುದನ್ನು ಕಳೆದುಕೊಳ್ಳಬಹುದು. ಸಕಾರಾತ್ಮಕ ಚಿಂತನೆಗಳು ಇರಲಿ. ಅತಿಯಾದ ಆಲೋಚನೆಯಿಂದ ಪ್ರಯೋಜನವಾಗದು.
ಮಕರ: ಇಂದು ನಿಮಗೆ ಭವಿಷ್ಯದ ಬಗ್ಗೆ ಬಹಳ ಆಲೋಚನೆ ಇರಲಿದೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆನೊಸುವುದು. ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು. ದೂರಪ್ರಯಾಣದಿಂದ ನಿಮಗೆ ತೊಂದರೆಗಳು ಕಾಣಿಸಿಕೊಳ್ಳುವುದು. ದೊಡ್ಡ ಅಪಾಯವೊಂದು ತಪ್ಪಿಹೋಗಿವುದು. ಮನೆಯಲ್ಲಿ ಕಿರಿಕಿರಿಯಾದ ಕಾರಣ ಹೊರನಡೆಯು ಸಾದ್ಯತೆ ಇದೆ. ಎಂದೋ ಮಾಡಿದ ತಪ್ಪು ಇಂದು ಬೆಳಕಿಗೆ ಬಂದು ಅವಮಾನವನ್ನು ಎದುರಿಸುವಿರಿ. ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಹಂಬಲ ಇರಲಿದೆ. ಸಂಗಾತಿಯ ಜೊತೆ ಕಾಲಕಳೆಯುವಿರಿ. ತಂದೆಯಿಂದ ಅಸಮಾಧನಾವಾದೀತು. ದೈವವೇ ನಿಮ್ಮನ್ನು ಅನುಕೂಲ ವಾತಾವರಣದ ಕಡೆ ಒಯ್ಯಲಿದೆ.
ಕುಂಭ: ನೀವಂದುಕೊಂಡ ಉದ್ಯೋಗವು ಸಿಗದೇ ಹೋಗಬಹದು. ಅನಿರೀಕ್ಷಿತ ಪ್ರಯಾಣವನ್ನು ಮಾಡಬೇಕಾಗಬಹುದು. ಮಕ್ಕಳಿಂದ ಸಂತೋಷವಾಗಲಿದೆ. ತಿರುಗಾಟದಿಂದ ಏನಾದರೂ ಅನಾಹುತವಾಗಬಹದು. ಮಾತುಗಳನ್ನು ಆಡಿವಾಗ ಎಚ್ಚರವಿರಲಿ. ಏನನ್ನಾದರೂ ಹೇಳಿ ಅಪಹಾಸ್ಯಕ್ಕೆ ಸಿಲುಕಬೇಡಿ. ಬಲವಂತವಾಗಿ ಯಾರನ್ನೂ ನಿಮ್ಮವರನ್ನಾಗಿ ಮಾಡಿಕೊಳಗಳಬೇಡಿ. ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಿಮ್ಮ ಬಗ್ಗೆ ಸರಿಯಾದ ತಿಳಿವಳಿಕೆ ಇರಲಿ. ಮಕ್ಕಳ ವಿಚಾರದಲ್ಲಿ ನೀವು ತೋರುವ ಅನಾದರದಿಂದ ಕುಟುಂಬದಲ್ಲಿ ವಿವಾದವು ಹುಟ್ಟಿಕೊಳ್ಳಬಹುದು. ನಡೆದಾಡುವ ಹಾದಿಗಳು ಒಂದೇ ರೀತಿ ಇರದು ಎನ್ನುವುದು ಗಮನದಲ್ಲಿಟ್ಟುಕೊಳ್ಳಿ.
ಮೀನ: ಬುದ್ಧಿಪೂರ್ವಕವಾಗಿ ನೀವಿಂದು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ನಿಮಗಿರುವ ಗೊಂದಲವನ್ನು ಪರಿಹರಿಸಲು ನಿಮಗೆ ನೂರಾರು ಮಾರ್ಗಗಳು ಇರಲಿವೆ. ತಾಯಿ ಅಥವಾ ತಾಯಿಯ ಕಡೆಯಿಂದ ಬೇಕಾದ ಸಹಾಯವು ನಿಮಗೆ ಸಿಗುವುದು. ಉದ್ಯೋಗದಲ್ಲಿ ಸ್ವಲ್ಪ ಆಲಸ್ಯ ವಿರಲಿದೆ. ಸಂಗಾತಿಯ ನೋವಿನಲ್ಲಿ ಭಾಗಿಯಾಗಿ. ಅವರಿಗೆ ನೆಮ್ಮದಿ ಸಿಕ್ಕೀತು. ಹಿರಿಯರ ಉಪದೇಶವನ್ನು ಕೇಳುವಿರಿ. ದೇವತಾದರ್ಶನವನ್ನು ಪಡೆಯುವುದು ಉತ್ತಮ. ದಾಂಪತ್ಯದಲ್ಲಿ ಕಲಹವಿದ್ದರೂ ತಣ್ಣಗಾಗಿ ಹೊಂದಾಣಿಕೆಯಿಂದ ಮುಂದುವರಿಯುವಿರಿ. ಅವಿವಾಹಿತರಿಗೆ ಶುಭವಾರ್ತೆ ಬರಲಿದೆ.
ಲೋಹಿತಶರ್ಮಾ 8762924271 (what’s app only)