Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನ ಪಡೆಯಲು ಅವಕಾಶವಿದೆ, ಕುಲದೇವರನ್ನು ಸ್ಮರಿಸಿ

ಇಂದಿನ(2023 ಮಾರ್ಚ್ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನ ಪಡೆಯಲು ಅವಕಾಶವಿದೆ, ಕುಲದೇವರನ್ನು ಸ್ಮರಿಸಿ
ರಾಶಿಭವಿಷ್ಯ
Follow us
ಆಯೇಷಾ ಬಾನು
|

Updated on:Mar 13, 2023 | 7:17 AM

ಶುಭೋದಯ ಓದುಗರೇ….ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ(2023 ಮಾರ್ಚ್ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ:ಸೋಮವಾರ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಹರ್ಷಣ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 08: 13ರಿಂದ 09:43ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:13 ರಿಂದ ಬೆಳಗ್ಗೆ 12:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 14:12 ರಿಂದ 15:42ರ ವರೆಗೆ.

ಮೇಷ: ಅನೀತಿಮಾರ್ಗದಿಂದ ಹಣಸಂಪಾದನೆಯನ್ನು ಮಾಡುವ ಮನಸ್ಸು ಮಾಡಲಿದ್ದೀರಿ. ಅಂದುಕೊಂಡ ಕೆಲಸಗಳು ಸುಗಮವಾಗಿ ಸಾಗಲಿದೆ‌. ದೂರದ ಊರಿಗೆ ಕಾರ್ಯದ ಕಾರಣ ಪ್ರಯಾಣ ಮಾಡುವ ಸಂಭವವಿದೆ. ಉದ್ಯೋಗವನ್ನು ಕರಗತ ಮಾಡಿಕೊಂಡು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ನಿಮ್ಮ ಕೆಲಸಕ್ಕೆ ಪ್ರಶಂಸೆಯೂ ಸಿಗಲಿದೆ. ಕೆಲವು ದಿನಗಳಿಂದ ಅನುಭವಿಸಿರುವವ ಖಾಯಿಲೆಯು ಕಡಿಮೆಯಾಗುವುದು. ಮಕ್ಕಳು ನಿಮಗೆ ಶುಭವಾರ್ತೆಯನ್ನು ಕೇಳಿಸುವರು‌. ದಾಂಪತ್ಯದ ಸುಖಜೀವನವು ಅನುಭವಕ್ಕೆ ಬರಲಿದೆ. ಗುರುಚರಿತ್ರೆಯನ್ನು ಓದಿ.

ವೃಷಭ: ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಇಂದು ಇಷ್ಟು ದಿನ ಕಾಡುತ್ತಿದ್ದ ಚಿಂತೆಯಿಂದ ಬಿಡುವಾಗುವಿರಿ. ಪ್ರಯತ್ನವಿಲ್ಲದೇ ಯಾವುದೂ ಸಾಧ್ಯವಾಗದು ಎನ್ನುವ ಮಾತನ್ನು ಮನನ ಮಾಡಿಕೊಳ್ಳುವುದು ಉತ್ತಮ. ಕಛೇರಿಯ ಒತ್ತಡಗಳಿಗೆ ಸಿಲುಕದೆ ಜಾಗರೂಕತೆಯಿಂದ ಕೆಲಸ ಮಾಡಿ ಪಾಲುದಾರಿಕೆ ವಿಚಾರದಲ್ಲಿ ಅರಿವಿರಲಿ. ಕೂಲಂಕಷವಾದ ವಿಚಾರದ ಜೊತೆ‌ ಮುಂದುವರಿಯಿರಿ. ಅವಕಾಶಗನ್ನು ಯಾರಿಗೂ ಬಿಟ್ಟುಕೊಡದೇ ನೀವೇ ಅನುಭವಿಸಿ. ಕುಟುಂಬದವರ ಜೊತೆ ಇಂದು ಕಾಲವನ್ನು ಕಳೆಯಿರಿ. ಸಂಗಾತಿಯಿಂದ ಅನಿರೀಕ್ಷಿತ ಸಮಾಚಾರ ಬರಲಿದೆ. ಧ್ಯಾನ ಹಾಗು ಯೋಗದಿಂದ ನಿಮ್ಮ ಮನಸ್ಸನ್ನು ಸ್ಥಿರಗೊಳಿಸಿ.

ಮಿಥುನ: ನಿಮ್ಮ ದಾಂಪತ್ಯಜೀವನವು ಇಂದು ಸುಖದಿಂದ ಇರಲಿದೆ. ಪತಿ ಹಾಗು ಪತ್ನಿಯರ ನಡುವೆ ಪ್ರೇಮಸಲ್ಲಾಪವು ಎಂದಿಗಿಂತ ಜೋರಾಗಿ ಇರಲಿದೆ. ನಿಮ್ಮ ನಡುವೆ ಪರಸ್ಪರ ಕಾಳಜಿಯು ಗೊತ್ತಾಗುವ ಸಾಧ್ಯತೆ ಇದೆ. ದೈವವನ್ನು ನಂಬುವ ನೀವು ಹೆಚ್ಚು ಕಾಲದ ದೈವಸ್ಮರಣೆಯಲ್ಲಿ ಇರುವುದು ಒಳ್ಳೆಯದು. ಅಧಿಕ ಧನಹಾನಿಯಾಗುವ ಸ್ಥಿತಿ ಎದುರಾಗಬಹುದು. ಸ್ವಲ್ಪ ಎಚ್ಚರದಿಂದ ಇರಿ. ಎಂದೋ ಭವಿಷ್ಯಕ್ಕೆ ಬೇಕೆಂದು ಕೂಡಿಟ್ಟ ಹಣದ ಉಪಯೋಗವು ಇಂದಾಗಲಿದೆ. ಮಿತ್ರರು ನಿಮ್ಮ ಗುಟ್ಟನ್ನು ಬಿಚ್ಚಿಟ್ಟಾರು. ಸಾಲವನ್ನು ನೀಡಿದವರು ನಿಮಗೆ ಪೀಡಿಸುವರು. ಪಂಚಾಕ್ಷರೀಜಪವನ್ನು ಮಾಡಿ.

ಕಟಕ: ಆತ್ಮಗೌರವಕ್ಕೆ ಧಕ್ಕೆ ಉಂಟಾಗಲಿದೆ. ಹಿಂದುಳಿದ ಕಾರ್ಯಗಳು ಪ್ರಗತಿಯನ್ನು ಕಾಣುವವು. ಲಾಭವನ್ನು ಪಡೆಯಲು ನೂತನ ಯೋಜನೆಯನ್ನು ಮಾಡುವಿರಿ. ಮಕ್ಕಳ ಕಾರ್ಯಕ್ಕೆ ನೀವು ಓಡಾಡಬೇಕಾಗಿ ಬರಬಹುದು. ನಿಮ್ಮ ಕಾರ್ಯವೇ ನಿಮಗೆ ಮುಳುವಾಗುವುದು. ಉದ್ಯೋಗದಲ್ಲಿ ಉಂಟಾದ ಗೊಂದಲದಿಂದ ನಿಮಗೆ ಆತಂಕವಸದೀತು. ಕಾರ್ಯದ ಸ್ಥಳದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ರಾಜಕಾರಣಿಗಳು ಜನರಿಂದ ಗೌರವವನ್ನು ಪಡೆಯುವರು. ನಿಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗುವ ಸನ್ನಿವೇಶಗಳು ನಡೆಯಲಿವೆ. ಅಲ್ಪ ಧನವನ್ನು ಕಳೆದುಕೊಳ್ಳುವಿರಿ. ಬಂಧುಗಳ ಭೇಟಿಯು ಹರ್ಷವನ್ನು ತರಬಹುದು. ಕುಲದೇವರ ಆರಾಧನೆಯಿಂದ ಬರುವ ಸಂಕಟಗಳು ದೂರಾಗುವುವು.

ಸಿಂಹ: ಮನಸ್ಸಿನಲ್ಲಿಯೇ ಸಂಕಟವನ್ನು ಅನುಭವಿಸುತ್ತ ಕುಳಿತುಕೊಳ್ಳಬೇಡಿ. ನೂತನ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಯಂತ್ರಗಳಿಂದ ನೋವನ್ನು ಅನುಭವಿಸುವಿರಿ. ದೂರದ ಪ್ರದೇಶಗಳಿಗೆ ಹೋಗಿ ನಿರಾಸೆಯಾಗಲಿದೆ. ಮಿತ್ರರ ಜೊತೆ ಕಲಹವನ್ನು ಮಾಡಿಕೊಳ್ಳಲಿದ್ದೀರಿ. ಉಗುರಿನಿಂದ ಹೋಗುವುದಕ್ಕೆ ಕೊಡಲಿಯನ್ನು ತೆಗೆದುಕೊಳ್ಳಲು ಹೋಗಬೇಡಿ. ಉದ್ಯೋಗದಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯಲು ಅವಕಾಶವಿದೆ. ನಿಮ್ಮ ಸಂಗಾತಿಯ ಮೇಲೆ ಕಛೇರಿಯಲ್ಲಿ ಆದ ವೈಮನಸ್ಯದಿಂದ ಮುನಿಸಿಕೊಳ್ಳಬಹುದು. ನೀವು ಉದ್ಯೋಗಕ್ಷೇತ್ರವನ್ನು ಆರಿಸಿಕೊಳ್ಳಬಹುದಾಗಿದೆ. ಹೂಡಿಕೆಯ ವಿಚಾರದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಿ. ಬೆಳಗ್ಗೆ ಕೆಲಸಕ್ಕೆ ಹೊರಡುವಾಗ ಕುಲದೇವರನ್ನು ಸ್ಮರಿಸಿ.

ಕನ್ಯಾ: ಕೋಪವನ್ನು ಕಡಿಮೆಮಾಡಿಕೊಂಡಷ್ಟು ಒಳ್ಳೆಯದು. ಪಾಲುದಾರಿಕೆಯಲ್ಲಿ ಕಲಹವು ಆರಂಭವಾಗಲಿದೆ. ಕೃಷಿಕರು ಲಾಭವನ್ನು ಗಳಿಸಲಿದ್ದಾರೆ. ಯಾರನ್ನೋ ಮೆಚ್ಚಿಸಲು ಹೋಗಿ ಸಿಕ್ಕಿಹಾಕಿಕೊಳ್ಳಬಹುದು. ತಂದೆಯಿಂದ ನಿಮಗೆ ಧನಸಹಾಯವಾಗಲಿದೆ. ಉನ್ನತಸ್ಥಾನಕ್ಕೆ ಹೋಗಲು ನಿಮ್ಮ ಹೆಸರನ್ನು ಆಯ್ಕೆ ಮಾಡಬಹುದು. ಸಾಮಾಜಿಕ ಸಮ್ಮಾನಗಳು ಸಿಗಲಿವೆ. ಮಾತುಗಳನ್ನು ಅಳೆದು ತೂಗಿ ಆಡುವುದು ಒಳ್ಳೆಯದು. ಸಂತರ ಸಹವಾಸ ಸಿಗಲಿದೆ.

ತುಲಾ: ಭೂಮಿಯ ಗರ್ಭದಲ್ಲಿ ಕಾರ್ಯಮಾಡುವವರಿಗೆ ಹೆಚ್ಚು ಅನುಕೂಲವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅತ್ಯವಶ್ಯಕ. ವಿದ್ಯಾರ್ಥಿಗಳಿಗೆ ಗೊಂದಲವಿರಲಿದೆ. ಹೊಸ ಉದ್ಯೋಗಕ್ಕೆ ಸೇರುವವರಿಗೆ ಅವಕಾಶಗಳು ಸಿಗಲಿವೆ. ಬಂಧುಗಳು ನಿಮ್ಮನ್ನು ಬೇಸರಿಸುವರು. ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಯೋಜನೆಯಿಂದ ಪ್ರಶಂಸಯು ಬರಲಿದೆ. ಭೂಮಿಯ ವ್ಯವಹಾರದಿಂದ ನಿಮಗೆ ನಷ್ಟವಾಗಲಿದೆ. ಸಹೋದರರ ನಡುವೆ ಆಸ್ತಿಯ ವಿಚಾರದಲ್ಲಿ ಕಲಹವಾಗಬಹುದು.

ವೃಶ್ಚಿಕ: ವಿದ್ಯಾರ್ಥಿಗಳು ಕ್ರಮಬದ್ಧವಾದ ಯೋಜನೆಯಿಂದ ಅಭ್ಯಾಸವನ್ನು ಆರಂಭಿಸಿ. ಸಾಹಸಪ್ರವೃತ್ತಿಯುಳ್ಳವರಿಗೆ ಚಾರಣವನ್ನು ಕಾಡುಗಳನ್ನು ಸುತ್ತುವ ಆಸೆಯಾಗಲಿದೆ. ಆಪ್ತರಿಂದ ವಂಚನೆಗೆ ಒಳಗಗಾಗಬಹುದು. ನರಕ್ಕೆ ಸಂಬಂಧಿಸಿದ ಖಾಯಿಲೆಗಳು ಬರಬಹುದು. ನಿದ್ರಾಹೀನತೆಯಿಂದ ಆಲಸ್ಯ ಉಂಟಾಗಬಹುದು. ದಿನದ ಆರಂಭದಲ್ಲಿರುವ ಅನಾರೋಗ್ಯವು ದಿನಾಂತ್ಯದಲ್ಲಿ ಕಡಿಮೆಯಾಗಲಿದೆ. ತಂದೆಯಿಂದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದೆ ಲಾಭವಾಗಲಿದೆ.

ಧನು: ಸಂಗಾತಿಯ ನಡುವೆ ಕಲಹವು ಇರಲಿದೆ. ನಿಮ್ಮ ಮೇಲೆ ಉಂಟಾದ ಅಪನಂಬಿಕೆಯನ್ನ ದೂರಮಾಡಿಕೊಳ್ಳಲು ಪ್ರಯತ್ನಿಸುವಿರಿ. ಮಕ್ಕಳಿಂದ ಸಂತೋಷವಾಗಲಿದೆ. ಸರ್ಕಾರಿ ಉದ್ಯೋಗಿಗಳು ಶುಭವಾರ್ತೆ ನಿರೀಕ್ಷೆಯಲ್ಲಿ ಇರಬಹುದು. ಮಾಧ್ಯಮದಲ್ಲಿ ಇರುವವರು ತಮ್ಮ ಕಾರ್ಯದಿಂದ ಪ್ರಶಂಸೆಯನ್ನು ಪಡೆಯುವರು.‌ ಕಲಾವಿದರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವರು. ಸ್ತ್ರೀಗೆ ಸಂಬಂಧಿಸಿದ ಅಪವಾದಗಳು ಬರಬಹುದು. ಧಾರ್ಮಿಕವೃತ್ತಿಯವರಿಗೆ ಇಂದು ಒತ್ತಡದ ದಿನವಾಗಲಿದೆ.

ಮಕರ: ಅನುಭವಿಸುತ್ತಿರುವ ಕಷ್ಟಗಳು ಇಂದಿಗೆ ನಿವಾರಣೆಯಾಗಿ ನಿರಾಳವೆನಿಸಬಹುದು. ಅನಿರೀಕ್ಷಿತವಾಗಿ ಅಮೂಲ್ಯವಾದ ವಸ್ತುವೊಂದು ಸಿಗಲಿದೆ. ನಿಮ್ಮ ಸಹಾಯಕ್ಕೆ ಮಿತ್ರರು ಬರಲಿದ್ದಾರೆ. ಮನೆಗೆ ಸಂಬಂಧಿಸಿದ ಅಲಂಕಾರಿಕ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ. ಜಾಡ್ಯವಿಂದು ನಿಮ್ಮ ಕೆಲಸಗಳನ್ನು ನಿಧಾನ ಮಾಡಬಹುದು. ಪುತ್ರೋತ್ಸವದ ಸಂತೋಷದಲ್ಲಿ ಇರುವಿರಿ. ಪ್ರಯಾಣ ಮಾಡುವ ಸಂದರ್ಭವಿದ್ದರೆ ಜಾಗರೂಕರಾಗಿ. ವಸ್ಯುಗಳು ಕಳ್ಳತನವಾಗುವಬಹುದು.

ಕುಂಭ: ಸಂಗಾತಿಯ ಮಾತಿನ ಕಾರಣ ಕುಟುಂಬದಿಂದ ದೂರವಿರಲು ಬಯಸುವಿರಿ. ಕಛೇರಿಯಲ್ಲಿ ಒತ್ತಡವು ಇರುವುದರಿಂದ ಉದ್ಯೋಗವನ್ನು ಬದಲಾಯಿಸುವ‌ ಮನಸ್ಸು ಮಾಡುವಿರಿ. ನಿಮ್ಮ ಬೆಳವಣಿಗೆಯನ್ನು ಕಂಡು ಅಸೂಯೆ ಪಡಬಹುದು. ನಿಮಗೆ ಕಳಂಕವನ್ನು ತರಬಹುದು. ಉದ್ವೇಗಕ್ಕೆ ಒಳಗಾಗದೇ ಕಾರ್ಯಗಳನ್ನು ನಿರ್ವಹಿಸಿ. ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಕೆಲಸವನ್ನು ಮಾಡಬೇಡಿ. ಪರಿಚಿತರಂತೆ ಬಂದು ಮೋಸ‌ಮಾಡಬಹುದು.

ಮೀನ: ಹೊಸ ವಾಹನವನ್ನು ಖರೀದಿಸಲಿದ್ದೀರಿ. ಮುಂಜಾಗರೂಕರಾಗಿ ಸಂಪತ್ತನ್ನು ಉಳಿತಾಯ ಮಾಡುವಿರಿ. ಕೃಷಿಯಲ್ಲಿ ಆಸಕ್ತಿ ಇರುವವರು ಹೊಸ ಬೆಳೆಗಳ ಅನ್ವೇಷಣೆಯಲ್ಲಿ ನಿರತರಾಗುವಿರಿ. ಉದ್ಯೋಗದ ನಿಮಿತ್ತ ದೇಶಾಂತರ ಹೋಗಬೇಕಾಗಿ ಬರಬಹುದು. ಸ್ವಾವಲಂಬಿಯಾಗಿ ಜೀವಿಸುವ ಆಸೆ ನಿಮ್ಮದಾಗಿರುತ್ತದೆ. ಸುಖವನ್ನೂ ಕಷ್ಟವನ್ನೂ ಸಮಾನವಾಗಿ ಸ್ವೀಕರಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವುದು ಉತ್ತಮ. ನಿಮ್ಮ ನೆಮ್ಮದಿಗೆ ನೀವೇ ಬುನಾದಿ.

-ಲೋಹಿತಶರ್ಮಾ ಇಡುವಾಣಿ

Published On - 7:16 am, Mon, 13 March 23

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ