Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 03, 2023 | 12:32 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 03) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಆಯುಷ್ಮಾನ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ. ರಾಹು ಕಾಲ ಮಧ್ಯಾಹ್ನ 02:14 ರಿಂದ 03:49ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:17 ರಿಂದ 07:53ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:28 ರಿಂದ 11:03ರ ವರೆಗೆ.

ಧನು ರಾಶಿ: ನೀವು ಇಂದು ನಿಮಗೆ ಮಾತ್ರ ಗೊತ್ತಿರುವ ಇನ್ನೊಬ್ಬರ ರಹಸ್ಯವನ್ನು ಹೇಳುವಿರಿ. ಬಾಡಿಗೆ ಮನೆಯವರಾಗಿದ್ದರೆ ಮನೆಯನ್ನು ಬದಲಿಸುವಿರಿ. ಭೂವ್ಯವಹಾರವನ್ನು ಮಾಡುವವರಿಗೆ ಹೆಚ್ಚು ಲಾಭವು ಸಿಗಲಿದೆ. ಕಡಿಮೆಯಾಗುತ್ತಿದ್ದ ಅನಾರೋಗ್ಯವು ಪುನಃ ಕಾಣಿಸಿಕೊಳ್ಳಬಹುದು. ನಿಮ್ಮ ಇಷ್ಟದವರು ನಿಮಗೆ ವಂಚನೆ ಮಾಡುವರು. ಮನೆಯ ಕೆಲಸದಲ್ಲಿ ನೀವು ಹೆಚ್ಚು ಆಸಕ್ತಿ ಉಳ್ಳವರಾಗುವಿರಿ. ನಿಮ್ಮ ಬಗ್ಗೆಯೇ ನಿಮಗೆ ಕೀಳು ಅರಿಮೆ ಉಂಡಾಗಬಹುದು.‌ ಇಂದು ಬಿದ್ದ ಕನಸು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು.

ಮಕರ ರಾಶಿ: ನೀವು ಮಾಡಬೇಕಂದು ಹೊರಟ ಕೆಲಸದಲ್ಲಿ ಜಯ ಆಗಲಿದೆ. ಸ್ತ್ರೀರಿಂದ ನಿಮಗೆ ವೃತ್ತಿಯಲ್ಲಿ ಸಹಕಾರವು ಸಿಗಲಿದೆ. ಹೊಸ ಬಂಧುಗಳ ಪರಿಚಯವು ನಿಮಗಾಗುವುದು. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಉಂಟಾಗಬಹುದು. ಬಂಧುಗಳ ಮಧ್ಯವೇ ವಿವಾಹ ಸಂಬಂಧವು ಏರ್ಪಡಬಹುದು. ತಂದೆಯ ಆರೋಗ್ಯವನ್ನು ಸರಿಪಡಿಸಲು ನೀವು ಹೆಚ್ಚು ಜವಾಬ್ದಾರಿಯನ್ನು ತೆಗೆದುಕೊಳ್ಳುವಿರಿ. ನೀವು ಮನಸ್ಸಿಗೆ ನೆಮ್ಮದಿ ನೀಡುವ ಸ್ಥಳಗಳಿಗೆ ಹೋಗುವಿರಿ. ನಿಮ್ಮ‌ ಮಾತುಗಳು ಅಹಂಕಾರದಂತೆ ತೋರಬಹುದು. ನಿಮಗೆ ನಿರ್ದಿಷ್ಟ ವೇತನವನ್ನು ಪಡೆಯುವ ಹಂಬಲವಿರುವುದು.

ಕುಂಭ ರಾಶಿ: ಆಕಾಲದಲ್ಲಿ ಮಾಡುವ ಭೋಜನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಚಂಚಲವಾದ ಮನಸ್ಸನ್ನು ನೀವು ನಿಯಂತ್ರಿಸಲು ನಾನಾ ವಿಧವಾದ ಕಸರತ್ತು ಮಾಡುವಿರಿ. ಉದ್ಯೋಗದ ಸ್ಥಳದಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸವನ್ನು ಮಾಡಲು ಕಷ್ಟವಾದೀತು. ಉನ್ನತ ಅಧಿಕಾರಕ್ಕೆ ಸೆಣೆಸಾಡುವ ಸ್ಥಿತಿಯು ಬರಬಹುದು. ಸರ್ಕಾರದ ಕೆಲಸಕ್ಕೆ ನೀವು ಹಣವನ್ನು ಖರ್ಚುಮಾಡಬೇಕಾದೀತು. ಇಂದಿನ‌ ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಏಕಾಂತಕ್ಕೆ ತೆರಳುವಿರಿ. ಸ್ನೇಹಿತರು ಅವರಿಗೆ ಅರಿವಿಲ್ಲದೇ ನಿಮ್ಮನ್ನು ತಪ್ಪು ದಾರಿಗೆ ಕರೆದೊಯ್ಯಬಹುದು.‌ ನಿಮ್ಮ ಬಳಿ ಹಣವಿದ್ದರೂ ಇಂದು ನಿಮಗೆ ಬಳಕೆಗೆ ಬಾರದು. ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳುವುದು ಸಾಧ್ಯವಾಗಬಹುದು.

ಮೀನ ರಾಶಿ: ಮಕ್ಕಳ‌ ಮೇಲೆ ನಿಮಗೆ ಅತಿಯಾದ ಮೋಹವು ಇರಲಿದೆ. ದಾಂಪತ್ಯದಲ್ಲಿ ನೀವು ಸಂತೋಷವಾಗಿರಲು ಹೊಸ ಆಯಾಮವನ್ನು ಕಂಡುಕೊಳ್ಳುವಿರಿ.‌ ಕುಟುಂಬವನ್ನು ಸಂತೋಷದಿಂದ ಇಡುವಿರಿ. ಅಸಪ್ತರನ್ನು ಕಳೆದುಕೊಳ್ಳುವ ಭೀತಿ ಇರಲಿದೆ. ಉದ್ಯಮಕ್ಕೆ ಸಂಬಂಧಿಸಿದಂತೆ ಆಪ್ತರ ನಡುವೆ ನಿಮ್ಮ ಸಮಾಲೋಚನೆಗಳು ನಡೆಸುವಿರಿ. ಪಾಲುದಾರಿಕೆಯಲ್ಲಿ ಸೂಕ್ತ ವ್ಯಕ್ತಿಗಳನ್ನು ನೀವು ಜೊತೆ ಮಾಡಿಕೊಂಡು ಹೋಗುವಿರಿ. ದೂರಪ್ರಯಾಣದಿಂದ ಆಯಾಸಗೊಳ್ಳುವಿರಿ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಯಾರದೋ ತಪ್ಪಿಗೆ ನೀವು ಉತ್ತರಿಸಬೇಕಾಗಬಹುದು. ಶಿವಕವಚವನ್ನು ಪಠಣ ಮಾಡಿರಿ.