ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 1) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ,ಪ ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಶ್ರವಣಾ , ಯೋಗ: ವಿಷ್ಕಂಭ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 03 :49 ರಿಂದ 05:25ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 11:03ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:39 ರಿಂದ 02:14ರ ವರೆಗೆ.
ಧನು ರಾಶಿ: ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪವನ್ನು ಮಾಡುವುದು ಇಷ್ಟವಾಗದು. ಹಳೆಯ ನೆನಪುಗಳು ನಿಮ್ಮ ಕಾಡಬಹುದು. ನೀವು ಇಂದು ಆಕರ್ಷಕವಾಗಿ ಇರುವಿರಿ. ಕೃಷಿಯ ಕೆಲಸದಲ್ಲಿ ನಿಮಗೆ ಉತ್ಸಾಹ ಕಡಿಮೆ ಆಗಬಹುದು. ಸಾಲವನ್ನು ಮಾಡವ ಸ್ಥಿತಿ ಬರಬಹುದು. ಕುಶಲ ಕರ್ಮಗಳನ್ನು ಮಾಡಲು ಕಲಿಯುವಿರಿ. ಸಂಶೋಧನೆಗೆ ಹೆಚ್ಚಿನ ಒತ್ತು ಸಿಗಬಹುದು. ಕೆಲವರು ನಿಮ್ಮ ನಂಬಿಕೆಗೆ ಘಾಸಿಯನ್ನು ಉಂಟುಮಾಡಬಹುದು. ಮಿತ್ರರಂತೆ ಇರುವವರನ್ನು ನೀವು ತಿಳಿದುಕೊಳ್ಳುವಿರಿ. ದಿನ ಬಳಕೆಯ ವಸ್ತುಗಳನ್ನು ಮಾರಾಟ ಮಾಡುವವರಾದರೆ ಲಾಭವಿರಲಿದೆ.
ಮಕರ ರಾಶಿ: ಸಂಗಾತಿಗಳ ನಡುವೆ ಸ್ವಪ್ರತಿಷ್ಠೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಬಂಧುಗಳು ನಿಮ್ಮ ಸಂಕಷ್ಟಕ್ಕೆ ನೆರವಾಗಬಹುದು. ನಿಮ್ಮ ಪ್ರಯಾಣವನ್ನು ಮುಂದಕ್ಕೆ ಹಾಕಲಿದ್ದೀರಿ. ಹೊಸ ಪರಿಚಯದ ನಡುವೆ ಆತ್ಮೀಯತೆ ಬೆಳೆಯಬಹುದು. ಅತಿಯಾದ ಆಸೆಯಿಂದ ನಿಮಗೆ ದುಃಖಿಸುವಿರಿ. ಅವಕಾಶದಿಂದ ವಂಚಿತರಾಗಿ ದುಃಖಪಡುವಿರಿ. ಸ್ತ್ರೀಯರ ಜೊತೆ ಮಾತನಾಡುವುದು ನಿಮಗೆ ಇಷ್ಟವಾದೀತು. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಕಾಣಿಸಿಕೊಳ್ಳುವುದು. ಯಾರ ಜೊತೆಗೂ ಮಾತನಾಡಲು ನಿಮಗೆ ಇಷ್ಟವಾಗದು. ಇಂದಿನ ಕೆಲಸಗಳು ವಿಳಂಬವಾಗಬಹುದು.
ಕುಂಭ ರಾಶಿ: ಕಾಲದಿಂದ ನೀವು ಮುಕ್ತರಾಗಿ ಸಂತೋಷಪಡುವಿರಿ. ಮನೆಯಲ್ಲಿ ಮಂಗಲಕಾರ್ಯಕ್ಕೆ ಆಸಕ್ತಿಯನ್ನು ತೋರುವಿರಿ. ಅಪರಿಚಿತರು ನಿಮಗೆ ಸಮಸ್ಯೆಯನ್ನು ತರುವರು. ನಿಮ್ಮನ್ನು ನಾಯಕರನ್ನಾಗಿ ಆಯ್ಕೆ ಮಾಡುವರು. ಕಛೇರಿಯ ಕೆಲಸಗಳನ್ನು ನೀವು ಅನಾಯಾಸವಾಗಿ ಮಾಡುವಿರಿ. ಅನಾರೋಗ್ಯದ ಕಾರಣದಿಂದ ನೀವು ಹಣವನ್ನು ಖರ್ಚು ಮಾಡಬೇಕಾಗಬಹುದು. ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಕ್ಕೆ ಯಾರಾದರೂ ಸಿಕ್ಕಾರು. ನಿಮ್ಮ ಮೌನವನ್ನು ಮುರಿದು ನಿಮ್ಮ ಅಭಿಪ್ರಾಯವನ್ನು ತಿಳಿಸುವುದು ಉತ್ತಮ.
ಮೀನ ರಾಶಿ: ಕುಟುಂಬಕ್ಕೆ ಧಕ್ಕೆಯಾಗದಂತೆ ನೀವು ನೋಡಿಕೊಳ್ಳಬೇಕಾಗಬಹುದು. ಪ್ರೇಮಜೀವನಕ್ಕೆ ನೀವು ಒಗ್ಗಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ಸಲಹೆಯನ್ನು ನೀವು ಪಡೆದುಕೊಳ್ಳಲಿದ್ದೀರಿ. ಮಕ್ಕಳ ಸಂತೋಷದಲ್ಲಿ ನೀವು ಭಾಗಿಯಾಗುವಿರಿ. ಇನ್ನೊಬ್ಬರ ವಸ್ತುವನ್ನು ನೀವು ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸುವಿರಿ. ಎಷ್ಟೋ ವರ್ಷದ ಹಳೆಯ ಗೆಳೆಯರು ಒಂದಾಗುವ ಸಾಧ್ಯತೆ ಇದೆ. ಕಳೆದುಕೊಂಡಿದ್ದರ ಬಗ್ಗೆ ಲೆಕ್ಕ ಹಾಕುವುದು ಬೇಡ. ಆತ್ಮವಿಶ್ವಾಸ ಕೊರತೆ ಎದ್ದು ಕಾಣಬಹುದು. ಸುಲಭವಾಗಿ ಸಿಕ್ಕುವುದನ್ನು ನೀವು ಕಷ್ಟದಿಂದ ಪಡೆದುಕೊಳ್ಳಲಿದ್ದೀರಿ. ನೆನಪಿನ ಶಕ್ತಿಯು ಕಡಿಮೆ ಆಗಲಿದೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ