Horoscope: ರಾಶಿಭವಿಷ್ಯ, ಈ ರಾಶಿಯವರು ಇಂದು ಖರ್ಚನ್ನು ನಿಯಂತ್ರಣಕ್ಕೆ ತಂದುಕೊಳ್ಳಿ

| Updated By: Rakesh Nayak Manchi

Updated on: Sep 11, 2023 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 11) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಈ ರಾಶಿಯವರು ಇಂದು ಖರ್ಚನ್ನು ನಿಯಂತ್ರಣಕ್ಕೆ ತಂದುಕೊಳ್ಳಿ
ಪ್ರಾತಿನಿಧಿಕ ಚಿತ್ರ
Image Credit source: iStock Photo
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವರೀಯಾನ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 36 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:54 ರಿಂದ 09:26ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:58 ರಿಂದ ಮಧ್ಯಾಹ್ನ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:01 ರಿಂದ 03:33ರ ವರೆಗೆ.

ಧನು ರಾಶಿ: ಸಹೋದ್ಯೋಗಿಗಳ ಜೊತೆ ವಿರೋಧ ಕಟ್ಟಿಕೊಂಡ ಕಾರಣ ಇಂದಿನ ಕಛೇರಿಯ ಕೆಲಸವು ಅಸ್ತವ್ಯಸ್ತವಾಗುವುದು. ಯಾಂತ್ರಿಕ ಕಾರ್ಯದಲ್ಲಿ ಹೆಚ್ಚು ಸಫಲತೆ ಸಿಗಲಿದೆ. ಸ್ವಂತ ಉದ್ಯಮಕ್ಕೆ ವೇಗವನ್ನು ಕೊಡುವ ಕಾರ್ಯವು ಆಗಬೇಕಿದೆ. ತಂದೆಯಿಂದ ಸಂಪತ್ತನ್ನು ಪಡೆಯುವಿರಿ. ಸಹೋದ್ಯೋಗಿಯ ಕಾರಣದಿಂದ ನಿಮಗೆ ಬೈಗುಳ ಸಿಗುವುದು. ಭಯವನ್ನು ಬಿಟ್ಟು ಬಂದ ಅವಕಾಶಗಳನ್ನು ಪಡೆಯಿರಿ. ಇಂದು ಅಸಾಧ್ಯ ಕಾರ್ಯದಲ್ಲು ದುಸ್ಸಾಹಸ ಮಾಡುವುದು ಬೇಡ. ಸಕಾರಾತ್ಮಕ ಚಿಂತನೆಯ ಬಗ್ಗೆ ಹೆಚ್ಚು ಗಮನವಿರಲಿ. ಇಂದನ ಖುಷಿಯ ವಿಚಾರವನ್ನು ಸಂಗಾತಿಯ ಜೊತೆ ಹಂಚಿಕೊಳ್ಳಿ.

ಮಕರ ರಾಶಿ: ಇಂದಿನ ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ವೃದ್ಧಿ ಆಗಬಹುದು. ಖರ್ಚನ್ನು ನಿಯಂತ್ರಣಕ್ಕೆ ತಂದುಕೊಳ್ಳಿ. ನಿಮ್ಮದನ್ನಾಗಿ ಮಾಡಿಕೊಂಡಿದ್ದು ಸ್ವಲ್ಪ ಭೂಮಿಯು ಪರರ ಪಾಲಾಗಬಹುದು. ನೀವು ಇಂದು ಬೇಸರದಿಂದ ಯಾರ ಸಹಾಯವನ್ನೂ ಇಚ್ಛಿಸುವುದಿಲ್ಲ. ಆಲಸ್ಯವು ಇಂದಿನ ಕಛೇರಿಯ ಕೆಲಸವನ್ನು ನಿಧಾನ ಮಾಡಿಸುವುದು. ನಿಮ್ಮ ಸ್ವಭಾವವು ಇದ್ದಕಿದ್ದಂತೆ ಬದಲಾಗಿ ಪ್ರೀತಿಸುವವರಿಗೆ ಇದು ಕಷ್ಟವಾಗಬಹುದು. ಹಿತಶತ್ರುಗಳನ್ನು ದೂರವಿಟ್ಟು ಕೆಲಸವನ್ನು ಸಾಧಿಸಿಕೊಳ್ಳಬೇಕಾಗಿದೆ. ಜೀವನ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕ ಕೆಲಸಗಳು ಗೌರವವನ್ನು ಕೊಡುವುವು.

ಕುಂಭ ರಾಶಿ: ಓದಿನಲ್ಲಿ ಆಸಕ್ತಿ ಕಡಿಮೆ ಆಗಿ ಅನ್ಯ ಚಟುವಟಿಕೆಯಲ್ಲಿ ತೊಡಗುವಿರಿ. ಪುಣ್ಯಕ್ಷೇತ್ರಗಳ ದರ್ಶನಭಾಗ್ಯವು ಸಿಗಲಿದೆ‌. ಆರೋಗ್ಯದ ಸಮಸ್ಯೆಯು ದೂರವಾಗಲು ಯೋಗ್ಯವಾದ ಆಹಾರವನ್ನು ಸೇವಿಸಿ. ಬಂಧುಗಳ ಭೇಟಿಯಿಂದ ಉತ್ಸಾಹವಿರಲಿದೆ‌. ಇಂದು ಆಗಬೇಕಾದ ಕೆಲಸಗಳನ್ನು ವೇಗವಾಗಿಯೂ ಹಾಗೂ ಬಹಳ ಎಚ್ಚರಿಕೆಯಿಂದ ಮಾಡುವಿರಿ. ಸಹೋದರನಿಂದ ಅನಿರೀಕ್ಷಿತ ಸಹಾಯವು ಸಿಗಬಹುದು. ದಾಂಪತ್ಯದ ಕಲಹವನ್ನು ಮೌನವಹಿಸಿ ನೀವೇ ಶಾಂತಗೊಳಿಸಿ. ಮಾತಿಗೆ ಮಾತು ಬೆಳೆಯುವುದು ಬೇಡ. ಕಾರ್ಯದಲ್ಲಿ ಮನಸ್ಸು ದುರ್ಬಲವಾದಂತೆ ತೋರುವುದು. ನೀವು ಇಂದು ಕಛೇರಿಯ ಚಿಂತೆಯಲ್ಲಿ ಇರುವ ಕಾರಣ ಎಲ್ಲರ ಮೇಲೂ ಸಿಟ್ಟುಗೊಳ್ಳುವಿರಿ. ನಿಮ್ಮ ಸ್ತುತಿಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ನಿಮ್ಮ ವಸ್ತುವನ್ನು ಇಂದು ಇನ್ನೊಬ್ಬರು ಬಳಸಬಹುದು.

ಮೀನ ರಾಶಿ: ಉನ್ನತ ವಿದ್ಯಾಭ್ಯಾಸದ ಕುರಿತು ಸ್ನೇಹಿತರ ಜೊತೆ ಚರ್ಚೆ ನಡೆಸುವಿರಿ. ಕುಟುಂಬ ನಿಮ್ಮ ಮಾರ್ಗದರ್ಶನವನ್ನು ಅಪೇಕ್ಷಿಸುವುದು. ಸಭೆಗೆ ಅತಿಥಿಯಾಗಿ ಭಾಗವಹಿಸುವಿರಿ. ಅಸ್ತಿ ಹಂಚಿಕೆಯ ವಿಚಾರವು ಇಂದು ಮುನ್ನೆಲೆಗೆ ಬರಬಹುದು‌. ನಿಮ್ಮ ಕೆಲಸಗಳಿಗೆ ತಾತ್ಕಾಲಿಕ ತೊಂದರೆಯು ಬರಬಹುದು. ವ್ಯಾಪಾರದಿಂದ ಅಭಿವೃದ್ಧಿಯ ಒಂದೊಂದೇ ಹಂತವನ್ನು ಏರುವಿರಿ. ಉನ್ನತ ಸ್ಥಾನವು ಪ್ರಭಾವೀ ವ್ಯಕ್ತಿಯ ಸಹಕಾರದಿಂದ ಪ್ರಾಪ್ತವಾಗುವುದು. ನಿಮ್ಮವರ ಮೇಲಿದ್ದ ನಿಮ್ಮ ಅಭಿಪ್ರಾಯವು ಬದಲಾಗಬಹುದು. ನಿಮ್ಮ ನಿರೀಕ್ಷೆಯು ಇಂದು ಕಡಿಮೆಯಾಗಲಿದೆ. ನಿಮ್ಮವರ ಪ್ರೀತಿಯನ್ನೂ ನೀವು ಕಳೆದುಕೊಳ್ಳುವಿರಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ