Horoscope: ಈ ರಾಶಿಯವರು ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ, ಸದಾ ಕಾಲ ಹೊಸತನ್ನು ಅಪೇಕ್ಷಿಸುವಿರಿ
ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಸೆಪ್ಟೆಂಬರ್ 11) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 11 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವರೀಯಾನ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 36 ನಿಮಿಷಕ್ಕೆ, ರಾಹು ಕಾಲ ಸಂಜೆ 07:54 ರಿಂದ 09:26 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:58 ರಿಂದ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:01 ರಿಂದ 03:33ರ ವರೆಗೆ.
ಮೇಷ ರಾಶಿ: ಪರಸ್ಪರ ನೆರವಿನಿಂದ ಇಂದಿನ ಕೆಲಸವು ಸಾಧ್ಯವಾಗುವುದು. ಸ್ನೇಹಿತರು ದೂರವಾದ್ದರಿಂದ ನಿಮಗೂ ನೆಮ್ಮದಿ ಸಿಗುವುದು. ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಸ್ತ್ರೀಯರಿಂದ ಇಂದು ನಿಮಗೆ ಧನ ಸಿಗಬಹುದು. ಕಾರಣಾಂತರಗಳಿಂದ ನಿಮ್ಮ ಯಾತ್ರೆಯು ಸ್ಥಗಿತವಾಗುವುದು. ಮನೆಯವರನ್ನು ಕಾಣದೇ ನಿಮಗೆ ಬೇಸರವಾದೀತು. ಅಧ್ಯಾತ್ಮದ ಚಿಂತನೆಯನ್ನು ಇಂದು ಮಾಡುವಿರಿ. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ಪ್ರಸಿದ್ಧಿಯು ನಿಮ್ಮನ್ನು ಹುಡುಕಿಕೊಂಡು ಬರಬಹುದು. ನಿರಾಸೆಯಿಂದ ನೀವು ಹೊರಬರುವಿರಿ.
ವೃಷಭ ರಾಶಿ: ದಾಂಪತ್ಯದಲ್ಲಿ ಬೇಸರವಿರಲಿದೆ. ಇಬ್ಬರೂ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಸಮಾರಂಭಗಳಲ್ಲಿ ನೀವು ಹೇಳಿದ ಮಾತು ವಿವಾದವಾಗಬಹುದು. ಸ್ನೇಹಿತರನ್ನು ದೂರವಿಡುವಿರಿ. ಅಮೂಲ್ಯ ವಸ್ತುವನ್ನು ಕೊಟ್ಟು ಆರ್ಥಿಕ ಸಂಕಷ್ಟವನ್ನು ತಂದುಕೊಳ್ಳುವಿರಿ. ಕೆಲವು ಸೂಚನೆಗಳು ನಿಮಗೆ ಭವಿಷ್ಯವನ್ನು ತಿಳಿಸಬಹುದು. ಕುಟುಂಬದಲ್ಲಿ ಶಾಂತಿಯು ಕದಡಲು ನಿಮ್ಮ ಪಾತ್ರವೇ ಇರುವುದು. ನಿಮ್ಮ ನೌಕರರನ್ನು ಬಹಳ ಕೆಳಮಟ್ಟದಲ್ಲಿ ನೋಡುವಿರಿ. ಯಾವುದನ್ನೂ ಪೂರ್ವದಲ್ಲಿ ಖಚಿತಪಡಿಸಿಕೊಳ್ಳದೇ ಮುಂದುವರಿಯುವುದು ಬೇಡ.
ಮಿಥುನ ರಾಶಿ: ಕಛೇರಿಯ ನಿಯಮಗಳನ್ನು ಸಡಿಲ ಮಾಡುಕೊಳ್ಳುವಿರಿ. ಮೇಲಧಿಕಾರಿಗಳ ಜೊತೆ ನಿಮಗೆ ಆಪ್ತತೆ ಇರಲಿದೆ. ಸಂಗಾತಿಯ ಮನಃಸ್ಥಿತಿಯನ್ನು ಬದಲಿಸಲು ಪ್ರಯತ್ನಿಸುವಿರಿ. ರಾಜಕಾರಣಿಗಳ ಇಬ್ಬಗೆಯ ವರ್ತನೆಯು ಬೇಸರ ತರಿಸಬಹುದು. ನೀವು ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಬರಬಹುದು. ಪ್ರೇಮವನ್ನು ಸಂಗಾತಿಯಲ್ಲಿ ಹೇಳಿಕೊಳ್ಳುವಿರಿ. ನೀವು ಇದರಿಂದ ನಿರಾಳರಾಗುವಿರಿ. ಕಛೇರಿಯಲ್ಲಿ ನಿಮ್ಮ ಮಾತನ್ನು ಪಾಲಿಸುವರು. ವಿದೇಶೀ ವಿನಿಮಯದಿಂದ ಲಾಭವಾಗಲಿದೆ. ನಿಮ್ಮ ಅನುಪಸ್ಥಿತಿಯಲ್ಲಿ ಕೆಲಸವನ್ನು ಬೇರೆಯವರು ಮಾಡುವರು. ಮನೆಯ ಕೆಲಸವನ್ನು ಬೇಗನೆ ಮುಗಿಸಿ ವಿಶ್ರಾಂತಿ ಪಡೆಯುವಿರಿ. ಸಂಗಾತಿಯ ಜೊತೆ ಕಛೇರಿಯಿಂದ ಬಂದು ಸುರ್ತಾಡುವಿರಿ.
ಕಟಕ ರಾಶಿ: ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಕೋಪದಲ್ಲಿ ಏನನ್ನಾದರೂ ಹೇಳುವಿರಿ. ಕಠಿಣ ಕೆಲಸವನ್ನು ಸರಳ ಮಾಡಿಕೊಳ್ಳುವ ವಿಧಾನವು ಗೊತ್ತಿರಲಿ. ನಿಮ್ಮ ಕಾರ್ಯದ ಉದ್ದೇಶವೇ ಮರೆತುಹೋಗಬಹುದು. ಇಂದು ನೋವು ಅತಿಯಾಗಬಹುದು. ಸ್ನೇಹಿತರ ಜೊತೆ ಸೇರಿ ಸಮಯವನ್ನು ಕಳೆಯಲು ಆಗದು. ಅಶಿಸ್ತಿನ ಕಾರಣ ಹಿರಿಯರಿಂದ ಬೈಸಿಕೊಳ್ಳಬೇಕಾಗುವುದು. ಸದಾ ಕಾಲ ಹೊಸತನ್ನು ಅಪೇಕ್ಷಿಸುವಿರಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಂಡು ಸಂಕಟಪಡುವಿರಿ. ಇಂದು ಸ್ವಂತ ಉದ್ಯಮವು ಹೆಚ್ಚು ಸವಾಲಿನಿಂದ ಇರುವುದು. ಭೂಮಿಯ ಉತ್ಪನ್ನದಿಂದ ಲಾಭವಾಗಲಿದೆ.