
ವಿವಾಹ ಕಾರ್ಯಕ್ಕೆ ಮನೆಯ ವಿರೋಧ. ಉದ್ಯೋಗದಲ್ಲಿ ತೃಪ್ತಿಯಿದ್ದರೂ ಟೀಕೆ. ಉದ್ಯಮದ ಸಮಸ್ಯೆಯಿದ್ದು ಪರಿಹಾರವೂ ಜೊತೆ ಜೊತೆಗೇ ಇರಲಿದೆ. ಸಂಬಂಧದಲ್ಲಿ ಸ್ಪಷ್ಟತೆ, ಭಾವನಾತ್ಮಕ ನೋವು. ಸ್ತ್ರೀಯರು ಈ ದಿನವನ್ನು ಬಹಳ ಉತ್ಸಾಹದಿಂದ ಕಳೆಯುವರು. ಕುಟುಂಬದ ಸೌಖ್ಯದಲ್ಲಿ ನೀವು ಭಾಗಿಯಾಗುವಿರಿ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು ಕಾರ್ಯದಲ್ಲಿ ಪ್ರಗತಿಯನ್ನು ಕಾಣುವಿರಿ. ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಮಾಡಿಕೊಳ್ಳುವಿರಿ. ಮಕ್ಕಳಿಂದ ಆಗುವ ಅಸಮಾಧಾನವನ್ನು ಸಹಿಸಲಾರಿರಿ. ನಿಮ್ಮ ಇಂದಿನ ಧೈರ್ಯವು ಹೆಚ್ಚಿನ ಪ್ರಗತಿಗೆ ಪೂರಕ. ನಿಮ್ಮ ಉದ್ಯೋಗದ ತೊಂದರೆಗಳನ್ನು ಸರಿಮಾಡಿಕೊಂಡು ಮುನ್ನಡೆಯುವಿರಿ. ಮೊದಲಿಗೆ ಹೊಂದಿಕೊಳ್ಳುವುದು ಅನಿವಾರ್ಯ. ವಾಹನ ಖರೀದಿಯ ವ್ಯವಹಾರವು ನಿಮಗೆ ಸರಿಯಾಗದು. ಕುಟುಂಬದಲ್ಲಿ ಸಂಗಾತಿಯಿಂದ ನೆಮ್ಮದಿ. ಪ್ರಯಾಣದಲ್ಲಿ ಒತ್ತಡ. ಅಧ್ಯಾತ್ಮ ಆಸಕ್ತಿ. ವಿದ್ಯಾಭ್ಯಾಸ ಸುಧಾರಣೆ. ಸಹೋದರರ ನಡುವೆ ಆಪ್ತತೆಯು ಇರುವುದು. ಹೂಡಿಕೆಯಲ್ಲಿ ಹಿನ್ನಡೆ ಸಾಧ್ಯತೆ ಇದೆ.
ದಾಂಪತ್ಯದಲ್ಲಿ ಮಧುರತೆ, ಭಾವನಾತ್ಮಕ ಒತ್ತಡದ ನಿರ್ಮಾಣವಾಗಲಿದೆ. ಉದ್ಯೋಗದಲ್ಲಿ ಉತ್ತೇಜನವಿದ್ದರೂ ಪೈಪೋಟಿ ತೀವ್ರ. ಸಂಬಂಧದಲ್ಲಿ ಸಕಾರಾತ್ಮಕ ಸಂಭಾಷಣೆ ನಡೆಯುವುದು. ನಿಮ್ಮ ತಪ್ಪುಗಳೇ ಫಲಿತಾಂಶದಲ್ಲಿ ಬರುವುದು. ಮಂದಗತಿಯ ಕಾರ್ಯಕ್ಕೆ ನಿಮ್ಮನ್ನು ಯಾರಾದರೂ ಹೀಯಾಳಿಸಬಹುದು. ನೀವು ಪ್ರಯಾಣ ಮಾಡದೇ ಬಹಳ ದಿನಗಳಾದಂತೆ ಅನ್ನಿಸುವುದು. ಪುಣ್ಯಸ್ಥಳಗಳ ದರ್ಶನವನ್ನು ಮಾಡಲು ಆಸಕ್ತಿ ಇರುವುದು. ಸಾಮಾಜಿಕ ಕಾರ್ಯಗಳು ನಿಮಗೆ ಯಶಸ್ಸನ್ನು ತಂದುಕೊಡುವುದು. ಹುಡುಕಾಟದ ಅಂತ್ಯವಾಗುವುದು ಒಳ್ಳೆಯದು. ವೃತ್ತಿಯಲ್ಲಿ ನಿಮಗೆ ಭಯವು ಕಾಡಲಿದ್ದು ಆಪ್ತರ ಜೊತೆ ಅದನ್ನು ಹೇಳಿ. ನಿಮ್ಮ ಸಾಮರ್ಥ್ಯವು ಇಂದು ಕಾಣಿಸಿಕೊಳ್ಳದು. ಆದಾಯ ವೃದ್ಧಿಯಿದ್ದರೂ ಸಾಲದ ಒತ್ತಡದಿಂದ ಹೊರಕ್ಕೆ ಬರಲಾಗದು. ಪ್ರಯಾಣ ಮಧ್ಯೆ ವ್ಯತ್ಯಯ. ವಿದ್ಯಾಭ್ಯಾಸದಲ್ಲಿ ಹಲವು ಸವಾಲನ್ನು ಎದುರಿಸಬೇಕಾಗುವುದು. ಮಾತುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವಿರಿ.
ನವ ವಿವಾಹಿತರಲ್ಲಿ ಮಾತಿನ ಗಹನತೆ ಅಧಿಕ. ಉದ್ಯೋಗದಲ್ಲಿ ಪ್ರಮುಖ ಕೆಲಸದಲ್ಲಿ ತಪ್ಪು ಸಾಧ್ಯ. ಉದ್ಯಮದಲ್ಲಿ ಲಾಭ ಮಾಡಿಕೊಂಡರೂ ಹೂಡಿಕೆ ಜಾಗ್ರತೆ. ಕುಟುಂಬದಲ್ಲಿ ಒಗ್ಗಟ್ಟಿಗಾಗಿ ವಾದ. ಸಹೋದ್ಯೋಗಿಗಳ ಜೊತೆ ಮನಸ್ತಾಪ ಬಂದು ಜಗಳವಾಡುವಿರಿ. ಮೇಲಧಿಕಾರಿಗಳ ಜೊತೆ ವಿನಾಕಾರಣ ವಾಗ್ವಾದ ಬೇಡ. ಯಾವ ಮುನ್ಸೂಚನೆಯೂ ಇಲ್ಲದೇ ನಿಮ್ಮ ಮೇಲೆ ಆಕ್ರಮಣ ಮಾಡಬಹುದು. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು. ನೀವು ಹೇಳಬೇಕಾದ ವಿಷಯಗಳನ್ನು ಇನ್ನೊಬ್ಬರಿಗೆ ಹೇಳುವಿರಿ. ಯಾವುದೋ ಯೋಚನೆಯಲ್ಲಿ ಮುಖ್ಯ ಕಾರ್ಯಗಳು ಮರೆತುಹೋಗಬಹುದು. ಭೂಮಿಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನಾತ್ಮಕ ತೊಂದರೆ ಬರುವುದು. ಆದಾಯ ಸಾಮಾನ್ಯವಾಗಿರಲಿದೆ. ಸಹೋದರರ ನಡುವೆ ಮನೆಯ ವಿಚಾರಕ್ಕೆ ಬೇಸರ. ಅಧ್ಯಾತ್ಮದ ಮನೋಭಾವಕ್ಕೆ ಪರಿಸ್ಥಿತಿ ನಿರ್ಮಾಣ. ಅಪರಿಚಿತರ ಕರೆಯಿಂದ ದೂರವಿರುವಿರಿ. ಅಹಂಕಾರದಿಂದ ಸಜ್ಜನರ ಸಹವಾಸ ಮಾಡಲಾರಿರಿ. ಸಾಮೂಹಿಕ ಕಾರ್ಯದಿಂದ ನಿಮಗೆ ಯಶಸ್ಸು ಸಿಗಬಹುದು.
ದಾಂಪತ್ಯದಲ್ಲಿ ಉಲ್ಲಾಸವಿದ್ದು ತಮಾಷೆಗೆ ಚಿಕ್ಕ ಕಲಹವಾಗಿ ಗಂಭೀರ ರೂಪಕ್ಕೆ ಹೋಗುವುದು. ಉದ್ಯೋಗದಲ್ಲಿ ಪ್ರಶಂಸೆ ಹಾಗೂ ಹೆಚ್ಚುವರಿ ಕೆಲಸಕ್ಕೆ ಆದೇಶ. ನಿಮ್ಮ ಇಂದಿನ ಮಧ್ಯ ಯಾವ ಪಕ್ಷಪಾತವನ್ನೂ ತೋರಿಸದು. ಸ್ವಂತ ಉದ್ಯೋಗಸ್ಥರಿಗೆ ಲಾಭವಾಗುವುದು. ಗೊಂದಲದಿಂದ ಹೊರಬರುವುದು ಕಷ್ಟವಾದೀತು. ನಂಬಿಕೆಯಿಂದ ಕೆಲಸವನ್ನು ಮಾಡುವಿರಿ. ಯತ್ನಿಸಿದ ಕಾರ್ಯಗಳು ನಿಮಗೆ ಬಹುಪಾಲು ಉತ್ತಮ ಫಲಿತಾಂಶವು ಇರಲಿದೆ. ಸಂತೋಷವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಸ್ವತಂತ್ರವಾಗಿದ್ದರೂ ಏನನ್ನಾದರೂ ಕಳೆದುಕೊಳ್ಳುತ್ತೇನೆ ಎಂಬ ಭಯವು ಇರಲಿದೆ. ಉದ್ಯಮದಲ್ಲಿ ಪ್ರಗತಿ ಕಾಣಲು ಸಂವಹನದ ದೋಷ ತಪ್ಪಿಸಬೇಕು. ಕುಟುಂಬದಲ್ಲಿ ವಿರುದ್ಧ ಚಟುವಟಿಕೆಗೆ ಗಲಾಟೆ. ಧಾರ್ಮಿಕ ಕಾರ್ಯದಲ್ಲಿ ಭಾಗಿ. ವಿದ್ಯಾಭ್ಯಾಸದಲ್ಲಿ ಒತ್ತಡ ಕಡಿಮೆ. ಹೊಸತನ್ನು ಕಲಿಯುವ ಅವಕಾಶವನ್ನು ಹುಡುಕಿಕೊಳ್ಳುವಿರಿ. ನಿಮ್ಮ ಕುಲದಿಂದ ಗೌರವ ಸಿಗಬಹುದು. ನೀವೇ ಬೇಡದ್ದನ್ನು ಮೈಮೇಲೆ ಹಾಕಿಕೊಂಡು ಒದ್ದಾಡಬೇಕಾದೀತು. ತೋರಿಕೆಗೆ ಮಾಡುವ ಕೆಲಸದಲ್ಲಿ ನಿಮಗೆ ಸಂತೋಷ ಸಿಗದು.
ವಿವಾಹ ಯೋಗಬಿದ್ದರೂ ಕುಟುಂಬದವರಿಂದ ಅಡೆತಡೆ, ಅತಿಯಾದ ಬೇಸರ. ಉದ್ಯೋಗದಲ್ಲಿ ಒತ್ತಡವಿದ್ದರೂ ಉತ್ತಮ ಫಲ ಕಾರಿಯಾಗಲಿದೆ. ಉದ್ಯಮದಲ್ಲಿ ಧೈರ್ಯವಿದ್ದರೂ ರಿಸ್ಕ್ ನ್ನು ಸಂಪೂರ್ಣವಾಗಿ ಪಡೆಯಲಾರಿರಿ. ಉತ್ತಮ ಅವಕಾಶಗಳಿಗೆ ನೀವು ಕಾಯುತ್ತಿರುವಿರಿ. ಯಾರದೋ ಮಾತಿನಿಂದ ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ದೂರಾಲೋಚನೆ ಹಾದಿಯನ್ನು ತಪ್ಪುವುದು. ಏನೂ ಲಾಭವಿಲ್ಲದೇ ಪ್ರಯಾಣವು ನಿಮಗೆ ಬೇಸರ ಎನಿಸುವುದು. ಇಂದು ನಿಮಗೆ ಪ್ರಶಂಸೆಯಿಂದ ಜವಾಬ್ದಾರಿಗಳೂ ಹೆಚ್ಚುವುದು. ಬಂಧುಗಳು ನಿಮ್ಮನ್ನು ಅಳೆಯುವರು. ವ್ಯಾಪಾರದಲ್ಲಿ ಸ್ತ್ರೀಯರ ಸಹಾಯದಿಂದ ಲಾಭವನ್ನು ಪಡೆಯುವಿರಿ. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನೌಕರರು ಒಪ್ಪುವುದಿಲ್ಲ. ಸಂಬಂಧದಲ್ಲಿ ಅನುಮಾನ. ಆದಾಯ ಸ್ಥಿರತೆ ಪ್ರಯತ್ನ. ಪ್ರಯಾಣದ ಕಷ್ಟ. ಅಧ್ಯಾತ್ಮದಲ್ಲಿ ಸ್ಪಷ್ಟತೆ. ಸಹೋದರರಲ್ಲಿ ಭಿನ್ನಾಭಿಪ್ರಾಯ. ವಿದ್ಯಾಭ್ಯಾಸದಲ್ಲಿ ಹಿನ್ನಡೆ ಸಾಧ್ಯ. ಇಬ್ಬರೂ ಒಪ್ಪಿಕೊಂಡ ಬಾಂಧವ್ಯವು ದೂರವಾಗಬಹುದು.
ದಾಂಪತ್ಯ ಅನಿರೀಕ್ಷಿತ ಸುಧಾರಣೆ, ಮನಸ್ಸಿಗೆ ಗಾಬರಿ. ಉದ್ಯೋಗದಲ್ಲಿ ನಿಮ್ಮ ಬಗ್ಗೆ ಶ್ಲಾಘನೆ. ಉದ್ಯಮದಲ್ಲಿ ಹೊಸ ದಾರಿ ಸಿಕ್ಕಿದ್ದು, ಹೂಡಿಕೆಯಲ್ಲಿ ಜಾಗ್ರತೆ. ನಿಮ್ಮವರ ಮೇಲೆ ನಿಮಗೆ ಸಂದೇಹವು ಆರಂಭವಾಗುವುದು. ಇಂದು ನಿಮ್ಮ ನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅನಿರೀಕ್ಷಿತ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಸಣ್ಣ ವಿಚಾರಗಳಿಗೂ ಕೋಪ ಮಾಡಿಕೊಳ್ಳುವಿರಿ. ಯೋಚನೆಗಳು ನೂರಿದ್ದರೂ ಪಾಲುದಾರಿಕೆಯಲ್ಲಿ ನಿರ್ಧಾರ ಒಂದೇ ಇರಲಿ. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು. ಅಧಿಕಾರಿಗಳು ಹೆಚ್ಚು ಒತ್ತಡದಿಂದ ಇರುವರು. ಅಧಿಕ ಹೂಡಿಕೆಯು ನಿಮಗೆ ಸ್ಥಾನದ ಪ್ರಶ್ನೆಯಾಗಿ ಉಳಿಯುವುದು. ನಿಮಗೆ ಮುಜುಗರವಾದೀತು. ನಿತ್ಯದ ಆದಾಯದಲ್ಲಿ ಚೇತರಿಕೆ. ಕುಟುಂಬದಲ್ಲಿ ನೆಮ್ಮದಿ, ಕಲಹ ತಗ್ಗುತ್ತದೆ. ಪ್ರಯಾಣದಲ್ಲಿ ಖರ್ಚು ಹೆಚ್ಚಾಗುವುದು. ಧಾರ್ಮಿಕ ಭಾವನೆ ದೃಢವಾಗುವ ಸಾಧ್ಯತೆ. ವಿದ್ಯಾಭ್ಯಾಸದಲ್ಲಿ ಸ್ಪರ್ಧೆ ತೀವ್ರ. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ನಿಯಮಗಳನ್ನು ಹಾಕಿಕೊಳ್ಳುವುದು ಉತ್ತಮ. ಸಹೋದ್ಯೋಗಿಗಳ ಜೊತೆ ಸಲುಗೆಯಿಂದ ಇರುವಿರಿ.
ವಿವಾಹ ವಿಚಾರದ ಮಾತುಕತೆಯಾದರೂ ತೀರ್ಮಾನ ವಿಳಂಬವಾಗಲಿದೆ. ಹೊಸ ಕೆಲಸದಲ್ಲಿ ನಾನಾ ಗೊಂದಲ ಎದುರಾಗುವುದು. ಉದ್ಯಮದಲ್ಲಿ ನಿಧಾನ ಪ್ರಗತಿ. ಮನೆಯಲ್ಲಿ ಯಾರಾದರೂ ನಿಮ್ಮನ್ನೇ ಗುರಿಯಾಗಿಸಿಕೊಂಡು ಮಾತನಾಡಬಹುದು. ಬಂಧುಗಳಿಂದ ನಿಮಗೆ ಇಂದು ಆಲಸ್ಯದ ಪಟ್ಟವು ಸಿಗಬಹುದು. ನಿಮ್ಮ ನಿರುದ್ಯೋಗ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಸಂಗಾತಿಯನ್ನು ದೂರ ಮಾಡಿಕೊಂಡು ಮನೆಯಲ್ಲಿ ಕಷ್ಟವಾದೀತು. ಅಗತ್ಯತೆಗೆ ಅನುಸಾರವಾಗಿ ಕಾರ್ಯವನ್ನು ವಿಭಾಗಿಸಿ. ನಿಮ್ಮ ಗುರಿಯಾಗಿಸಿಕೊಂಡು ಸಹೋದ್ಯೋಗಿಗಳು ಕೆಲಸವನ್ನು ಮಾಡುವರು. ಕೈಗೆ ಸಿಕ್ಕ ಭೂಮಿಯು ತಪ್ಪಿ ಹೋಗಬಹುದು. ನಿಮ್ಮ ಮಾತನಾಡುವ ಸ್ವಭಾವವು ಇತರರಿಗೆ ಕಿರಿಕಿರಿ ಉಂಟಾದೀತು. ನಿಮ್ಮ ವಸ್ತುವನ್ನು ಕಳೆದುಕೊಳ್ಳುವಿರಿ. ಅವಹೇಳನಕಾರಿ ಮಾತುಗಳನ್ನು ಎಲ್ಲರೆದುರು ಆಡುವಿರಿ. ಸಂಬಂಧದಲ್ಲಿ ಅನರ್ಥ ಸಾಧ್ಯತೆ. ಕುಟುಂಬದಲ್ಲಿ ನಿಮ್ಮಿಂದ ಸೌಖ್ಯ. ಆದಾಯ ಏರಿಕೆಗೆ ಕ್ರಮದ ಆಲೋಚನೆ. ಸಹೋದರರೊಂದಿಗೆ ಸ್ವಲ್ಪ ಕಲಹ. ವಿದ್ಯಾಭ್ಯಾಸ ಕಠಿಣವೆನಿಸುವುದು. ಸ್ಥಾನಚ್ಯುತಿಯ ಭಯವು ಇರುವುದು.
ದಾಂಪತ್ಯ ಸಂತೋಷವಿದ್ದರೂ ಹಠವೇ ಎದ್ದು ತೋರುವುದು. ಉದ್ಯೋಗದಲ್ಲಿ ಅವಕಾಶ ಸಿಕ್ಕರೂ ಇತರರಿಂದ ಟೀಕೆ ಸಾಧ್ಯತೆ. ಉದ್ಯಮ ಲಾಭವಿದ್ದು ಸ್ಪರ್ಧೆ ತೀವ್ರವಾಗಿರುವುದು. ಇಂದು ನೀವು ಮಾಡುವ ಕಾರ್ಯದಲ್ಲಿ ವಿಳಂಬವು ಕಾಣಿಸುವುದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರುವುದು. ಆಸ್ತಿಯ ಖರೀದಿಗೆ ಎರಡು ಮನಸ್ಸು ಇರುವುದು. ಪುಣ್ಯಸ್ಥಳಗಳ ದರ್ಶನದಿಂದ ನೆಮ್ಮದಿ. ನಿಮ್ಮ ಚುರುಕುತನಕ್ಕೆ ಅಚ್ಚರಿಗೊಳ್ಳುವರು. ಜವಾಬ್ದಾರಿಯು ನಿಮಗೆ ಅತಿಯಾಗುವುದು. ಆರ್ಥಿಕತೆಯು ನಿಮ್ಮನ್ನು ಚಿಂತೆಗೀಡುಮಾಡುವುದು. ಸ್ನೇಹಿತರ ಸಹಾಯದಿಂದ ನಿಮಗೆ ಬಲವು ಬರುವುದು. ದೂರದ ಬಂಧುಗಳಾದರೂ ಸಹಾಯವು ಸಿಗಬಹುದು. ಕುಟುಂಬದಲ್ಲಿ ಒಗ್ಗಟ್ಟು ಪ್ರದರ್ಶನ. ಸಂಬಂಧದಲ್ಲಿ ನಂಬಿಕೆಯ ಪರೀಕ್ಷೆ ನಡೆಯಬಹದು. ಆದಾಯ ಏರಿಕೆ, ಖರ್ಚೂ ಜಾಸ್ತಿ. ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸುವಿರಿ. ವಿದ್ಯಾಭ್ಯಾಸಕ್ಕಾಗಿ ಪ್ರಯಾಣ. ಎಲ್ಲವನ್ನೂ ತಿಳಿದುಕೊಂಡರೂ ಹಿಂದೆ ಸರಿಯುವಿರಿ. ಬಂಧುಗಳ ಕಾರಣದಿಂದ ಮನೆಯಲ್ಲಿ ವೈಮನಸ್ಯ ಉಂಟಾಗಬಹುದು.
ವಿವಾಹ ಯೋಗ ಕೂಡಲಿದ್ದು, ಮಾತಿನಲ್ಲಿ ಮಿತಿ ಅಗತ್ಯ. ಕೆಲಸದಲ್ಲಿ ಸ್ಥಿರತೆಯನ್ನು ಕಂಡುಕೊಳ್ಳುವಿರಿ. ಮೇಲಧಿಕಾರಿಗಳ ಒತ್ತಡ. ಉದ್ಯಮದಲ್ಲಿ ಬದಲಾವಣೆಯಿಂದ ಕಷ್ಟ. ಕುಟುಂಬದಲ್ಲಿ ಭಿನ್ನಾಭಿಪ್ರಾಯ. ದಾಂಪತ್ಯದಲ್ಲಿ ನಂಬಿಕೆ ದೂರಾಗಬಹುದು. ಚರಾಸ್ತಿಯಲ್ಲಿ ಗೊಂದಲ ಇರುವುದು. ಪ್ರಯತ್ನಿಸಿದ ಕಾರ್ಯಕ್ಕೆ ಫಲವನ್ನು ನಿರ್ದಿಷ್ಟ ಮಾಡಿಕೊಳ್ಳುವಿರಿ. ಮನೆಯ ಸ್ಥಳವನ್ನು ಬದಲಾಯಿಸುವಿರಿ. ಬೇರೆ ಕಾರ್ಯಗಳಿಂದ ಹಣವು ಕೈ ಸೇರುವುದು. ಉತ್ಸಾಹಕ್ಕೆ ತೊಂದರೆ ಆಗುವ ಕಡೆ ನೀವು ಇರಲಾರಿರಿ. ನಿಮ್ಮ ಉದ್ಯೋಗದ ಸ್ಥಳವನ್ನು ನೀವು ಬದಲಾಯಿಸುವಿರಿ. ನಿಮ್ಮ ಕೆಲಸವನ್ನು ಬಿಟ್ಟು ಸಹೋದರರಲ್ಲಿ ಚಿಕ್ಕ ಅಸಮಾಧಾನ. ಆದಾಯ ಅನಿಯಂತ್ರಿತವಾಗಿರಲಿದೆ. ಪ್ರಯಾಣದಲ್ಲಿ ವಾಹನದ ಕಾರಣಕ್ಕೆ ಅಡಚಣೆ. ಅಧ್ಯಾತ್ಮದಲ್ಲಿ ನೆಮ್ಮದಿ. ವಿದ್ಯಾಭ್ಯಾಸಕ್ಕೆ ಹೆಚ್ಚು ಶ್ರಮ ಅಗತ್ಯ. ಪ್ರಾಮಾಣಿಕತೆಯಿಂದ ನಿಮಗೆ ಉನ್ನತ ಸ್ಥಾನವನ್ನು ನಿರೀಕ್ಷಿಸುವಿರಿ. ಸಂಗಾತಿಯ ವಿಚಾರದಲ್ಲಿ ನಿಮಗೆ ಗೊಂದಲವಾಗಬಹುದು. ನಂಬಿಕೆಯಿಂದ ಕೆಲಸವನ್ನು ಮಾಡುವಿರಿ.
ದಾಂಪತ್ಯದಲ್ಲಿ ಸಮತೋಲನವಿದ್ದು ಅಹಂಕಾರ ಬರಬಹುದು. ಉದ್ಯೋಗದಲ್ಲಿ ಹೊಣೆಗಾರಿಕೆ ಹೆಚ್ಚಳ. ಉದ್ಯಮದಲ್ಲಿ ಮಿಶ್ರ ಫಲ. ಸಂಬಂಧದಲ್ಲಿ ಒಳ್ಳೆಯ ಮಾತು ಮುಖ್ಯ. ಮಹಿಳೆಯರು ಉನ್ನತ ಅಧಿಕಾರವನ್ನು ಪಡೆಯುವರು. ಸಹನೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಸ್ವಪ್ರತಿಷ್ಠೆಯಿಂದ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಹಿರಿಯರೆದುರು ವಿನಯವಿರಲಿ. ದೇವತಾಕಾರ್ಯಗಳಲ್ಲಿ ಆಸಕ್ತಿಯು ಶ್ರದ್ಧೆಯಿಂದ ಭಾಗವಹಿಸುವಿರಿ. ಕಛೇರಿಯಲ್ಲಿ ಅಧಿಕಾರಿಗಳು ನಿಮ್ಮ ಕಾರ್ಯಕ್ಕೆ ಸಂಬಂಧಿಸಿದಂತೆ ವಾಗ್ವಾದ ಮಾಡಬಹುದು. ಮಕ್ಕಳ ವಿಚಾರದಲ್ಲಿ ನೀವು ದುರ್ಬಲರಾಗುವಿರಿ. ಪರೋಪಕಾರಕ್ಕೆ ನಿಮ್ಮ ಮನಸ್ಸು ಕರಗುವುದು. ನಿಮ್ಮ ಕೈತಪ್ಪಿ ಹೋದ ಸ್ಥಾನವನ್ನು ಪುನಃ ಪಡೆದುಕೊಳ್ಳುವಿರಿ. ಆದಾಯ ಹಾಗೂ ಖರ್ಚಿನ ಒಂದೇ ಪ್ರಮಾಣದಲ್ಲಿ ಇರಲಿದೆ. ಕುಟುಂಬದಲ್ಲಿ ಸಂವಹನ ಕಡಿಮೆ ಇರುವುದು. ಪ್ರಯಾಣ ಮಧ್ಯದಲ್ಲಿ ವಿಳಂಬ. ವಿದ್ಯಾಭ್ಯಾಸಕ್ಕೆ ಮನೆಯಿಂದ ಒತ್ತಡ. ನಿಮ್ಮ ಸಂಬಂಧಗಳನ್ನು ಬಳಸದೇ ದೂರವಾಗುವುದು. ಬುದ್ಧಿಪೂರ್ವಕವಾಗಿ ತಪ್ಪುಗಳನ್ನು ಮಾಡಿ ಅನಂತರ ಸಂಕಟಪಟುವಿರಿ.
ವಿವಾಹ ವಿಷಯದಲ್ಲಿ ನಿಮಗೆ ಆಸಕ್ತಿ, ಹಿರಿಯರ ವಿರೋಧ. ಉದ್ಯೋಗದಲ್ಲಿ ಪ್ರಗತಿ ಇದ್ದು, ಸಹೋದ್ಯೋಗಿಗಳ ಅಸೂಯೆ. ಉದ್ಯಮದಲ್ಲಿ ಲೆಕ್ಕ ತಪ್ಪಿದರೆ ನಷ್ಟ. ನಿಮಗೆ ಇಂದು ದೇಹಾರೋಗ್ಯವು ಕ್ಷೀಣಿಸಿದಂತೆ ಭಾಸವಾಗುವುದು. ಪ್ರಭಾವಿಗಳ ಭೇಟಿಯಿಂದ ಸಂತೋಷವಾಗಲಿದೆ. ಹಣದ ಕೂಡುವಿಕೆಯಲ್ಲಿ ಸಫಲತೆ ಕಾಣಿಸುವುದು. ಅನ್ಯಸ್ಥಳದಲ್ಲಿ ನಿಮ್ಮ ವಾಸವು ಇರಲಿದೆ. ಸುಖವಾದ ಭೋಜನವನ್ನು ಮಾಡುವಿರಿ. ಕೋಪದಲ್ಲಿ ಏನನ್ನಾದರೂ ಹೇಳುವಿರಿ. ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ಸರಿಮಾಡಿಕೊಳ್ಳುವಿರಿ. ಭವಿಷ್ಯದ ಬಗ್ಗೆ ಅಸ್ಪಷ್ಟವಾದ ಚಿಂತೆಯು ಬೇಡ. ಯಂತ್ರಗಳ ವ್ಯಾಪಾರಿಗಳಿಗೆ ಲಾಭದ ದಿನ. ಆದಾಯದಲ್ಲಿ ಏರಿಕೆ ಹಾಗೂ ಅನಗತ್ಯ ವೆಚ್ಚ. ಕುಟುಂಬದಲ್ಲಿ ಸೌಖ್ಯ. ಸಹೋದರರಿಂದ ಸಲಹೆಪಡೆಯುವಿರಿ. ಧಾರ್ಮಿಕ ಮನೋಭಾವ. ಪ್ರಯಾಣಕ್ಕೆ ಅಡಚಣೆ. ವಿದ್ಯಾಭ್ಯಾಸದಲ್ಲಿ ಚಿಂತೆ. ಇಂದು ನಿಮ್ಮ ಪರಿಶ್ರಮವು ವ್ಯರ್ಥವಾದಂತೆ ತೋರುವುದು.
ದಾಂಪತ್ಯದಲ್ಲಿ ಹಿತ ಸಂಭಾಷಣೆಯಿದ್ದರೂ ಸಣ್ಣಗೆ ಗರಂ ಆಗುವ ಕ್ಷಣ ಬರಲಿದೆ. ಉದ್ಯೋಗದಲ್ಲಿ ಅವಕಾಶ ಸಿಕ್ಕರೂ ಒತ್ತಡ ಅಧಿಕ. ಉದ್ಯಮದ ಲಾಭವನ್ನು ಆತುರದಿಂದ ನಿರೀಕ್ಷಿಸುವುದು ಬೇಡ, ವಿಳಂಬ. ನಿಮ್ಮ ದೌರ್ಬಲ್ಯವೇ ಶಕ್ತಿಯ ಕೇಂದ್ರವೂ ಆಗಬಹುದು. ರಾಜಕೀಯ ಕ್ಷೇತ್ರದಲ್ಲಿ ಕಾದಾಟ, ವಾಗ್ವಾದಗಳು ಅಧಿಕವಾಗಿ ಇರಲಿವೆ. ಬೇಸರದಿಂದ ಹೊರಬರಲು ನಿಮಗೆ ಕಷ್ಟವಾದೀತು. ಅಧಿಕಾರ ಪ್ರಾಪ್ತಿಗೆ ಓಡಾಟವನ್ನು ಮಾಡುವಿರಿ. ಹೇಳಿದ ಸಮಯಕ್ಕೆ ಕೆಲಸವನ್ನು ಮಾಡಿಕೊಡಲಾಗುವುದು. ಹಿರಿಯರ ಸೇವೆಯಲ್ಲಿ ನೀವು ಇರುವಿರಿ. ನಿಮ್ಮ ಪ್ರಗತಿಗೆ ಶತ್ರುಗಳು ಅಡ್ಡಗಾಲು ಹಾಕಬಹುದು. ಬೇಸರದಿಂದ ಹೊರಬರಲು ಮಾರ್ಗವನ್ನು ಹುಡುಕಿಕೊಳ್ಳುವಿರಿ. ಆದಾಯ ಸ್ಥಿರ, ಖರ್ಚು ಹೆಚ್ಚಳ. ಕುಟುಂಬದಲ್ಲಿ ಕಲಹ ಶಮನ. ಸ್ನೇಹ ಸಂಬಂಧ ಸುಧಾರಣೆ. ಪ್ರಯಾಣ ಫಲಕಾರಿ. ಮತ್ತೆ ಮತ್ತೆ ಅಧ್ಯಾತ್ಮ ಚಿಂತನೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ನಿಮ್ಮ ಮಕ್ಕಳ ಬಗ್ಗೆ ಗಮನ ಇರಲಿ. ತಿಳಿವಳಿಕೆ ಇಲ್ಲದವರ ಮುಂದೆ ನಿಮ್ಮ ಉದ್ಯೋಗವನ್ನು ಹೇಳಿಕೊಳ್ಳುವಿರಿ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಜ್ಯೇಷ್ಠಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಶುಭ, ಕರಣ : ಬವ, ಸೂರ್ಯೋದಯ – 06 – 31 am, ಸೂರ್ಯಾಸ್ತ – 05 – 52 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:02 – 16:27, ಯಮಗಂಡ ಕಾಲ 09:22 – 10:47, ಗುಳಿಕ ಕಾಲ 12:12 – 13:37
-ಲೋಹಿತ ಹೆಬ್ಬಾರ್-8762924271 (what’s app only)
Published On - 6:48 am, Tue, 9 December 25