Horoscope Today 14 November : ಇಂದು ಈ ರಾಶಿಯವರಿಗಾಗಿ ಎಲ್ಲವನ್ನೂ ಬಿಟ್ಟುಕೊಡುವ ಮನೋಭಾವ ಬರಲಿದೆ
ದಿನ ಭವಿಷ್ಯ, 14 ನವೆಂಬರ್ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಶುಕ್ರವಾರದಂದು ನಿಂದನೆಯಿಂದ ಮನೋವಿಕಾರ, ಏಕಾಗ್ರತೆ, ಕುಟುಂಬದ ಪ್ರೀತಿ, ಪ್ರತಿಕೂಲ ಸಂದರ್ಭ, ಆಕರ್ಷಣೆ, ವ್ಯಾವಹಾರಿಕ ಚಾಣಾಕ್ಷತನ ಇವೆಲ್ಲ ಹನ್ನೆರಡು ರಾಶಿಗಳ ಇಂದಿನ ಭವಿಷ್ಯದಲ್ಲಿ ಇರಲಿದೆ.

ಮೇಷ ರಾಶಿ:
ಯಾರಿಗಾದರೂ ಪ್ರೋತ್ಸಾಹವನ್ನು ನೀಡಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಇಂದಿನ ಪ್ರಯಾಣದಲ್ಲಿ ಅಡೆತಡೆಗಳಿದ್ದರೂ ಅದನ್ನು ಲೆಕ್ಕಿಸದೇ ಮುನ್ನಡೆಯುವಿರಿ. ಶರೀರದಲ್ಲಿ ಅಸಮತೋಲನವು ಇರಲಿದೆ. ಕಛೇರಿಯಲ್ಲಿ ಹೆಚ್ಚಿನ ಕಾರ್ಯವನ್ನು ಮಾಡಲು ಇರಬೇಕಾದೀತು. ವೃತ್ತಿ ಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಇಂದು ನೀವು ನಿಮ್ಮ ಜೀವನ ಸಂಗಾತಿಗಾಗಿ ಕೆಲವು ವಿಶೇಷ ಯೋಜನೆಗಳನ್ನು ಮಾಡಬಹುದು. ಇದು ಪ್ರೀತಿಯ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಉದ್ಯೋಗವನ್ನು ಹುಡುಕುತ್ತಿರುವ ಯುವಕರು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ವೃತ್ತಿಯಲ್ಲಿ ಬರುವ ಪ್ರತಿಕೂಲ ಸಂದರ್ಭವನ್ನು ನಿಭಾಯಿಸುವಿರಿ. ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ನಿಮ್ಮ ಅನುಪಸ್ಥಿತಿಯಲ್ಲಿ ಕಾರ್ಯಗಳು ಆಗುವುದು. ಸಂಗಾತಿಯ ಮಾತಿನಂತೆ ಇಂದು ನಡೆದುಕೊಳ್ಳುವಿರಿ. ವ್ಯಾಪಾರವು ಮಧ್ಯಮಗತಿಯಲ್ಲಿ ಇರುವುದು. ನಿಮ್ಮದಾದ ನಿಯಮವನ್ನು ಬಿಡಲು ನೀವು ತಯಾರಿರುವುದಿಲ್ಲ. ಕೆಲವರ ಮನೋಗತವನ್ನು ಅರಿತುಕೊಳ್ಳುವಿರಿ.
ವೃಷಭ ರಾಶಿ:
ನಿಮ್ಮ ಉದ್ಯೋಗದ ಬಗ್ಗೆ ಬಂಧುಗಳಿಗೆ ತಪ್ಪು ಮಾಹಿತಿಯನ್ನು ನೀಡುವಿರಿ. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಸಕಾಲಕ್ಕೆ ಭೋಜನವನ್ನು ಸ್ವೀಕರಿಸುವುದು ಸೂಕ್ತ.ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳಿವೆ, ಆದರೆ ಖರ್ಚುಗಳನ್ನು ನಿಯಂತ್ರಿಸುವುದು ಮುಖ್ಯವಾಗಿದೆ. ಕೆಲವರು ನಿಮ್ಮ ದಾರಿ ತಪ್ಪಿಸಬಹುದು. ಶ್ರೇಷ್ಠವಾದ ಉಡುಗೊರೆಯೊಂದು ನಿಮ್ಮ ಕೈ ಸೇರಬಹುದು. ನಿಮ್ಮ ವೃತ್ತಿಜೀವನದ ಗುರಿಗಳ ಮೇಲೆ ಕೇಂದ್ರೀಕರಿಸಿ. ಸುಳ್ಳು ಸುದ್ದಿಯನ್ನು ನೀವು ನಂಬುವಿರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಫಲವನ್ನು ನೀವು ಖಂಡಿತವಾಗಿಯೂ ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುವಿರಿ. ಪ್ರಮುಖ ಅಂಶಗಳು ದೂರಾಗಿ ಅಪ್ರಧಾನಾಂಶಗಳೇ ಮುನ್ನೆಲೆಗೆ ಬರುವುದು. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಹತಾಶರಾಗುವಿರಿ. ನಿಮ್ಮವರ ಮಾತು ನಿಮಗೆ ಅಸಮಾಧಾನವನ್ನು ಉಂಟುಮಾಡುವುದು. ನೇರ ನುಡಿಗಳು ನಿಮಗೆ ಮುಜುಗರವನ್ನು ಉಂಟುಮಾಡಬಹುದು. ಮನೆಯಿಂದ ದೂರ ಇದ್ದವರಿಗೆ ತೊಂದರೆ ಬರಬಹುದು.
ಮಿಥುನ ರಾಶಿ:
ಅತಿಥಿಗಳ ಆಗಮನದಿಂದ ಕಸಿವಿಸಿಯಾಗುವ ಸಾಧ್ಯತೆ ಇದೆ. ನಿಮ್ಮ ಸ್ವೇಚ್ಛಾಚಾರವು ಮನೆಯವರಿಗೆ ಇಷ್ಟವಾಗದು. ಅನಿರೀಕ್ಷಿತ ಧನಾಗಮನದಿಂದ ಸಂತೋಷವು ಇಮ್ಮಡಿಯಾಗಬಹುದು. ವೈದ್ಯರಿಗೆ ಹೆಚ್ಚಿನ ಅವಕಾಶವು ಸಿಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಿಂದ ಬೀಗುವಿರಿ. ಇನ್ನೊಬ್ಬರ ಗೌಪ್ಯತೆಯನ್ನು ಬಿಚ್ಚಿಡುವುದು ಸಂತೋಷದ ವಿಚಾರವಾಗುವುದು. ನಿಮ್ಮ ಬಗ್ಗೆ ನೀವೇ ಹೇಳಕೊಳ್ಳುವುದು ಜಂಭವೆನಿಸುವುದು. ಅತಿ ಲೋಭದಿಂದ ಧನಾರ್ಜನೆಯನ್ನು ಮಾಡುವಿರಿ. ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಯೋಜನೆಗಳು ಮತ್ತು ಗುರಿಗಳ ಮೇಲೆ ಕೇಂದ್ರೀಕರಿಸಬೇಕಾಗುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಮನೆಯ ಕೆಲಸವು ಮುಗಿಯುವುದೇ ಇಲ್ಲ ಎಂಬ ಬೇಸರ. ಕೆಲವರಿಗೆ ತಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಸಮಾಜಸೇವೆಯಲ್ಲಿ ಆಸಕ್ತಿ ಹೆಚ್ಚಲಿದೆ. ಇಂದು ನೀವು ಹೊಸ ಕೆಲಸಗಳನ್ನು ಪ್ರಾರಂಭಿಸಬಹುದು. ಅನಾರೋಗ್ಯವನ್ನೂ ನೀವು ಲೆಕ್ಕಿಸದೇ ಇರುವಿರಿ. ಕೆಲವು ವಿಚಾರದಲ್ಲಿ ನಿಮಗೆ ನಿರ್ದಿಷ್ಟತೆ ಇರದು.
ಕರ್ಕಾಟಕ ರಾಶಿ:
ನಿಮ್ಮನ್ನು ನೀವು ಶ್ರೇಷ್ಠರಾಗಿ ಬಿಂಬಿಸಿಕೊಳ್ಳುವಂತೆ ನೋಡಿಕೊಳ್ಳುವಿರಿ. ಧನಾಗಮನದ ನಿರೀಕ್ಷೆಯಲ್ಲಿ ಇರುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ನಿರಂತರ ಕಾರ್ಯದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಅನಗತ್ಯ ವಾದಗಳಿಂದ ದೂರವಿರಬೇಕು. ವಿರೋಧಿಗಳು ಇಂದು ಸಕ್ರಿಯರಾಗಿರುತ್ತಾರೆ. ಕಚೇರಿಯಲ್ಲಿ ಸ್ಪರ್ಧೆಯ ವಾತಾವರಣವಿರುತ್ತದೆ. ನಿಮ್ಮ ಪ್ರೀತಿಪಾತ್ರರ ಜೊತೆ ನೀವು ಕೆಲವು ಸ್ಮರಣೀಯ ಕ್ಷಣಗಳನ್ನು ಕಳೆಯಬಹುದು. ಕೆಲಸದ ಸಮಯವು ವ್ಯತ್ಯಾಸವಾಗಿದ್ದು ನಿಮಗೆ ಹೊಂದಿಕೊಳ್ಳುವುದು ಕಷ್ಟವಾದೀತು. ವಿದೇಶೀ ವ್ಯಾಪಾರದಿಂದ ಆದಾಯವು ಹೆಚ್ಚಾಗಬಹುದು. ನಿಮ್ಮ ಅಜ್ಞಾನವನ್ನು ನೀವೇ ತೋರಿಸಿಕೊಳ್ಳುವಿರಿ. ಹೆಚ್ಚವರಿ ಹೊಣೆಗಾರಿಕೆ ನಿಮ್ಮ ಮೇಲೆ ಬೀಳಲಿದೆ. ನಮ್ಮದೇ ಸರಿ ಎನ್ನುವ ವಾದವು ಸರಿಯಾಗದು. ನೀವು ಇಂದು ಯಾರ ಜೊತೆಯೂ ಬೆರೆಯಲು ಇಷ್ಟಪಡುವುದಿಲ್ಲ. ನಿಮ್ಮ ತಪ್ಪನ್ನು ಯಾರಿಂದಲೂ ಕೇಳಲು ಇಚ್ಛಿಸುವುದಿಲ್ಲ. ಸಂಗಾತಿಯ ಇಂಗಿತವನ್ನು ಅರ್ಥಮಾಡಿಕೊಳ್ಳಲಾರಿರಿ.
ಸಿಂಹ ರಾಶಿ:
ಮನಶ್ಚಾಂಚಲ್ಯದಿಂದ ಪ್ರೇಮವು ಮತ್ತೊಬ್ಬರ ಕಡೆಗೆ ತಿರುಗಲಿದೆ. ಅಪಾತ್ರರಿಗೆ ನಿಮ್ಮ ವಸ್ತುವನ್ನು ಗೊತ್ತಿಲ್ಲದೇ ಕೊಡುವಿರಿ. ಅಮೇಧ್ಯವಾದ ಆಹಾರವನ್ನು ಸೇವಿಸುವ ಸಂದರ್ಭವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ಮಕ್ಕಳಲ್ಲಿ ಪ್ರೀತಿಯನ್ನು ತೋರುವಿರಿ. ದೂರದ ಸ್ಥಳಕ್ಕೆ ಉದ್ಯೋಗಕ್ಕೆ ಹೋಗಲು ಮನೆಯಿಂದ ನಕಾರಾತ್ಮಕ ಮಾತುಗಳು ಬರಬಹುದು. ತುಂಬಾ ಬಿಡುವಿಲ್ಲದ ಸಮಯ ಇರುತ್ತದೆ. ನೀವು ಬಯಸಿದ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ನೀವು ಪಡೆಯಬಹುದು. ನೀವು ಶಾಂತಿಯುತ ಸಂಭಾಷಣೆಯನ್ನು ಮಾಡಬೇಕು. ನಿಮ್ಮ ಸಂಗಾತಿಯಿಂದ ನೀವು ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರವನ್ನು ಇಂದು ಬೇರೆ ಸ್ಥಳದಲ್ಲಿ ಮಾಡುವಿರಿ. ಯಾರನ್ನೂ ಅವಲಂಬಿಸದೇ ನಿಲ್ಲಬೇಕು ಎನ್ನುವ ಹಠವು ಇರುವುದು. ಪ್ರಶಂಸೆಯು ಇಲ್ಲದೇ ಕೆಲಸದಲ್ಲಿ ನಿಮ್ಮ ಆಸಕ್ತಿಯು ಕಡಿಮೆ ಆಗಬಹುದು. ನಿಮ್ಮ ಕಾರ್ಯಕ್ಕೆ ಮಕ್ಕಳಿಂದ ವಿರೋಧವು ಇರಲಿದೆ. ಅಹಂಕಾರದ ಮಾತುಗಳು ನಿಮಗೆ ಶೋಭೆಯಾಗದು.
ಕನ್ಯಾ ರಾಶಿ:
ಮರವಿನ ಖಾಯಿಲೆಯ ಕಾರಣ ಎಲ್ಲರೂ ನಿಮ್ಮ ಮೇಲೆ ಕೋಪಗೊಳ್ಳುವರು. ಸಹೋದ್ಯೋಗಿಯೊಬ್ಬನಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು. ಆಗಬೇಕಾದ ಕಾರ್ಯಗಳು ಒತ್ತಡ ಇಲ್ಲದೇ ಆಗುವುದು. ರತ್ನ ವ್ಯಾಪಾರದಲ್ಲಿ ಹಿನ್ನಡೆಯಾಗಬಹುದು. ಹೊಸ ಹೂಡಿಕೆ ಅವಕಾಶಗಳ ಮೇಲೆ ನಿಗಾ ಇರಿಸಿ. ಮನೆ ಖರೀದಿಸಲು ಅಥವಾ ಮಾರಾಟ ಮಾಡಲು ಯೋಜನೆಯನ್ನು ಮಾಡಬಹುದು. ಸಮಯವನ್ನು ವ್ಯರ್ಥಮಾಡಿಕೊಂಡು ಬೇಸರಿಸುವಿರಿ. ನಿಮ್ಮ ಸ್ವಭಾವವು ಇತರರಿಗೆ ಅಸಹಜತೆಯಂತೆ ಕಾಣಿಸಬಹುದು. ವಹಿಸಿಕೊಂಡ ಕಾರ್ಯವನ್ನು ಸಮಯಕ್ಕೆ ಮುಗಿಸುವಿರಿ. ಕೃಷಿಕರು ಆದಾಯದ ಮೂಲವನ್ನು ಹುಡುಕುವರು. ತಪ್ಪುಗ್ರಹಿಕೆಯನ್ನು ಪರಿಹರಿಸಲು ಅವಕಾಶವಿರುತ್ತದೆ. ಮಕ್ಕಳ ಜೀವನದ ಚಿಂತೆ ಕಾಡುವುದು. ತಂಡವಾಗಿ ಕೆಲಸ ಮಾಡುವ ಮೂಲಕ ನೀವು ಕಾರ್ಯದಲ್ಲಿ ಸ್ಥಳದಲ್ಲಿ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ನಿರ್ಲಕ್ಷ್ಯದಿಂದ ಭೂಮಿಯ ಸ್ವಲ್ಪ ಭಾಗವನ್ನು ಕಳೆದುಹೋಗಬಹುದು. ಬಂಧಿವಿನಿಂದ ನೀವು ಧನವನ್ನು ಅಪೇಕ್ಷಿಸುವಿರಿ. ಉತ್ತಮ ಸ್ನೇಹದಿಂದ ಖುಷಿ ಇರಲಿದೆ.
ತುಲಾ ರಾಶಿ:
ಯಂತ್ರೊಪಕರಣಗಳ ಬಳಕೆ ದುರಸ್ತಿ ಅಸಾಧ್ಯವಾಗಲಿದೆ. ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇಂದು ಕಷ್ಟವಾದೀತು. ಕೆಲವು ವ್ಯಕ್ತಿಗಳಿಂದ ನೀವು ದೂರವಿರಲು ಇಚ್ಛಿಸುವಿರಿ. ನಿಮ್ಮ ಅಸಹಕಾರದಿಂದ ಮಕ್ಕಳಿಗೆ ಬೇಸರವಾದೀತು. ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯಲಿದ್ದು ನೆಮ್ಮದಿ ಇರುವುದು. ಕೌಟುಂಬಿಕ ಕೆಲಸ ಮತ್ತು ಖರ್ಚು ಹೆಚ್ಚಾಗುವ ಪರಿಸ್ಥಿತಿ ಉಂಟಾಗಬಹುದು. ಒಡಹುಟ್ಟಿದವರು ಮತ್ತು ಸ್ನೇಹಿತರಿಂದ ಉದ್ವಿಗ್ನತೆ ಉಂಟಾಗಬಹುದು. ವ್ಯಾಪಾರದಲ್ಲಿ ಜನರ ಆಕರ್ಷಣೆಯನ್ನು ಮಾಡುವ ಕಲೆ ಸಿದ್ಧಿಸಿದೆ.ನಿಮ್ಮ ಶ್ರಮವು ಫಲ ನೀಡುತ್ತದೆ ಮತ್ತು ನೀವು ಹೊಸ ಅವಕಾಶವನ್ನು ಪಡೆಯಬಹುದು. ನಿಮ್ಮ ಅಸಮಾಧಾನವನ್ನು ಅಸ್ಥಾನದಲ್ಲಿ ಹೊರಹಾಕಿ ಮುಜುಗರಕ್ಕೆ ಒಳಗಾಗುವಿರಿ. ಜೀವನೋಪಾಯಕ್ಕೆ ಸಣ್ಣ ವೃತ್ತಿಯ ಅವಲಂಬನೆ. ತಂದೆಯ ಮೇಲೆ ನಿಮ್ಮ ಗೌರವವು ಅಧಿಕಾಗಿದ್ದು ಅನಿರೀಕ್ಷಿತ ಉಡುಗೊರೆಯನ್ನು ಕೊಡುವಿರಿ. ಹಿತಶತ್ರುಗಳನ್ನು ಸರಿಯಾಗಿ ಬಳಸಿಕೊಳ್ಳುವುದು ನಿಮಗೆ ಗೊತ್ತಾಗುವುದು.
ವೃಶ್ಚಿಕ ರಾಶಿ:
ಒತ್ತಡವು ಮನಸ್ಸಿಗೆ ಬಂದರೆ ಯಾವ ಸ್ಥಾನವೂ ಬೇಡ ಎನಿಸುವುದು. ಸುಖದಿಂದ ಇರುವ ಕಾರ್ಯವನ್ನು ಮಾಡುವುದು ಲೇಸಾಗಲಿದೆ. ನೆರೆಹೊರೆಯರ ಮಾತು ನಿಮಗೆ ಬೇಸರ ತರಿಸಿ, ಪ್ರತಿಯಾಗಿ ಏನನ್ನಾದರೂ ಹೇಳಲು ಹೋಗುವಿರಿ. ನಿಮ್ಮ ಉದ್ವೇಗದ ಮನಸ್ಸನ್ನು ಇತರರಿಗೆ ತೋರಿಸುವಿರಿ. ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಕೆ ತೊಂದರೆ ಕೊಟ್ಟಾರು. ಕಷ್ಟವಾದರೂ ಸಾಲದ ಮರುಪಾವತಿಯನ್ನು ಮಾಡವಿರಿ. ಮನಸ್ಸಿಗೆ ಬೇರಸವಾಗುವ ಸಂಗತಿಯು ಹತ್ತಿರ ಬಂದಾಗ ಅದನ್ನು ದೂರವಿಡಲು ಪ್ರಯತ್ನಿಸಿ. ದೂರ ಪ್ರಯಾಣದ ಖರ್ಚು ಹೆಚ್ಚಾಗಬಹುದು. ನೀವು ಸ್ಪರ್ಧೆಯಲ್ಲಿ ಜಯವನ್ನು ಪಡೆಯಬಹುದು. ನಿಮಗೆ ಖುಷಿ ಕೊಡುವ ಸಂಗತಿಯ ಕಡೆಗೆ ಗಮನಹರಿಸಿ. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಉದ್ಯೋಗದಲ್ಲಿ ಬಡ್ತಿ. ನಿಮ್ಮ ವಾಹನವನ್ನು ಬದಲಾಯಿಸುವ ಸಾಧ್ಯತೆ ಇದೆ. ನಿಮ್ಮ ನಾಯಕತ್ವದ ಕೌಶಲ್ಯಗಳನ್ನು ಸಹ ಗುರುತಿಸುವರು. ಪ್ರೇಮ ಸಂಬಂಧಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಹಣವನ್ನು ವೃಥಾ ಖಾಲಿ ಮಾಡುವುದು ಬೇಡ. ಸ್ನೇಹಿತರ ಜೊತೆ ಎಲ್ಲಿಗಾದರೂ ಪ್ರಯಾಣವನ್ನು ಮಾಡುವಿರಿ. ಸತ್ಯವನ್ನು ಸಂಗಾತಿಯಿಂದ ಮುಚ್ಚಿಡಲು ಪ್ರಯತ್ನಿಸುವಿರಿ.
ಧನು ರಾಶಿ:
ಸಂವಾಹಕರ ಉದ್ಯೋಗದಲ್ಲಿ ನಿಮಗೆ ಅಪರಿಚಿರಿಂದ ನಿಂದನೆ ಸಿಗಲಿದೆ. ಅಲಂಕಾರಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವಿರಿ. ಯೋಗಾಭ್ಯಾಸದಿಂದ ನಿಮಗೆ ಆಯಾಸವಾಗಲಿದೆ. ಕೊಟ್ಟ ಹಣವನ್ನು ನೀವು ಪುನಃ ಕೇಳುವಿರಿ. ಹೋರಾಟದ ಅನಂತರ ಉದ್ಯೋಗದಲ್ಲಿ ಬಡ್ತಿ ಮತ್ತು ಬದಲಾವಣೆ ಬರಬಹುದು. ಕೋಪದ ಕಾರಣ, ಸಂಗಾತಿಯೊಂದಿಗೆ ದೂರವಾಗುವ ಪರಿಸ್ಥಿತಿ ಉದ್ಭವಿಸಬಹುದು. ನಿಮ್ಮಿಂದ ಸಹಾಯವನ್ನು ಪಡೆದ ಹಿರಿಯರು ಆಶೀರ್ವದಿಸುವರು. ಇದರಿಂದ ಸಂತೋಷವಾಗಲಿದೆ. ಸ್ನೇಹಿತನ ಸಹವಾಸದಿಂದ ದುರಭ್ಯಾಸವು ಬರಬಹುದು. ವಿದ್ಯಾಭ್ಯಾಸದ ಕಾರಣಕ್ಕೆ ಹಣವನ್ನು ಪಡೆದು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ. ನಂಬಿಕೆಯನ್ನು ಕಳೆದುಕೊಳ್ಳುವವ ಪ್ರಸಂಗವು ಬರಬಹುದು. ಉದ್ಯಮವನ್ನು ಮುನ್ನಡೆಸಲು ಉತ್ತಮ ವ್ಯಕ್ತಿಗಳ ಅನ್ವೇಷಣೆ ಮಾಡುವಿರಿ. ಕೆಲವರನ್ನು ಅನುಕರಣೆ ಮಾಡುವ ಪ್ರಯತ್ನವನ್ನು ಆರಂಭ. ದೇವತಾರಾಧನೆಯಲ್ಲಿ ಮನಸ್ಸು ನಿಲ್ಲಲಿದೆ.
ಇದನ್ನೂ ಓದಿ: ನವೆಂಬರ್ 09 ರಿಂದ 15ರ ವರೆಗಿನ ವಾರ ಭವಿಷ್ಯ ತಿಳಿಯಿರಿ
ಮಕರ ರಾಶಿ:
ಹುಡುಕಿರುವ ಉದ್ಯೋಗ ಸಿಕ್ಕರೂ ವೇತನ ಹಾಗೂ ಸಮಯ ನಿಮಗೆ ಹೊಂದಾಣಿಕೆಯಾಗದು. ಇಂದಿನ ಕೆಲವು ಮಾತುಗಳನ್ನು ನೀವು ನಿರ್ಲಕ್ಷಿಸುವಿರಿ. ಕಛೇರಿಯ ವ್ಯವಹಾರದಲ್ಲಿ ನಿಮಗೆ ಒತ್ತಡವು ಬರಬಹುದು. ಹಳೆಯ ಸ್ನೇಹಿತೆಯ ಸಖ್ಯವಾಗಬಹುದು. ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ವ್ಯವಹರಿಸುವುದು ಉತ್ತಮ. ಬೌದ್ಧಿಕ ಸಾಮರ್ಥ್ಯವನ್ನು ಅರ್ಥಪೂರ್ಣವಾಗಿ ಬಳಸಲು ಸಾಧ್ಯವಾಗುತ್ತದೆ. ಅಧ್ಯಯನ ಮತ್ತು ಬೋಧನೆಯಲ್ಲಿ ಸಾಮಾನ್ಯ ಅಡಚಣೆಯ ಪರಿಸ್ಥಿತಿ ಉದ್ಭವಿಸಬಹುದು. ಹೊಟ್ಟೆಯ ಸಮಸ್ಯೆಗಳು ಒತ್ತಡಕ್ಕೆ ಕಾರಣವಾಗಬಹುದು. ಹೊಸ ಉದ್ಯೋಗಕ್ಕೆ ಪ್ರಯತ್ನಗಳು ಆರಂಭವಾಗಲಿದೆ. ಪಿತ್ರಾರ್ಜಿತ ಆಸ್ತಿಯು ತಾನಾಗಿಯೇ ಬರಬಹುದು. ವಿಳಂಬವಾಗಿ ಮನೆಗೆ ಹೋಗುವ ನಿಮ್ಮನ್ನು ಅನುಮಾನದಿಂದ ನೋಡಬಹುದು. ವಿದ್ಯಾಭ್ಯಾಸದಲ್ಲಿ ಆಸಕ್ತಿ ಬರುವಂತೆ ಮಾಡುವ ಹೊಣೆಗಾರಿಕೆ ಇರಲಿದೆ. ಹಿರಿಯರಿಂದ ಮಾರ್ಗದರ್ಶನವು ಸಿಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದ ಓಡಾಟವು ವ್ಯರ್ಥಯವಾಗುವುದು. ಉಚಿತವಾಗಿ ಸಿಕ್ಕಿದ್ದನ್ನು ಪಡೆಯಲು ಇಚ್ಛಿಸುವುದಿಲ್ಲ.
ಕುಂಭ ರಾಶಿ:
ಮನೆಯ ಹಿರಿಯರ ಪ್ರೀತಿಯನ್ನು ಗೆಲ್ಲುವಿರಿ. ಹಳೆಯ ಬಂಧುಗಳ ಸಮಾಗಮವಾಗಲಿದ್ದು, ಸಂತೋಷವಾಗಲಿದೆ. ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ನಿಮ್ಮ ಮಾತುಗಳು ಕಠೋರವಾಗಿ ಇರುವುದು. ಏನನ್ನೋ ಸಾಧಿಸಲು ಹೋಗಿ ಮತ್ತೇನನ್ನೋ ಮಾಡಿಕೊಳ್ಳುವಿರಿ. ವಾಹನದಿಂದ ಗಾಯವಾಗುವ ಸಾಧ್ಯತೆ ಇದೆ. ಕೆಲವು ಸಂದರ್ಭಗಳು ನಿಮ್ಮ ಚಿತ್ರಣವನ್ನು ಬಲಪಡಿಸುತ್ತವೆ. ಸಹೋದರಿಯರು ಮತ್ತು ಸ್ನೇಹಿತರ ಮೇಲೆ ಖರ್ಚು ಹೆಚ್ಚಾಗಬಹುದು. ಸಂಗಾತಿಯ ಆರೋಗ್ಯದ ಮೇಲಿನ ಖರ್ಚು ಹೆಚ್ಚಾಗಬಹುದು. ದೂರ ಪ್ರಯಾಣ ಮಾಡುವ ಪರಿಸ್ಥಿತಿ ಬರಬಹುದು. ಕೆಲಸ ಕಡಿಮೆಮಾಡಿದಷ್ಟೂ ನಾನಾ ಯೋಚನೆಗಳು ಬರಲುವೆ. ನಿಮಗೆ ಬೇಕಾದ ವಾತಾವರಣದಲ್ಲಿ ಇರುವುದು ಇಷ್ಟವಾಗುವುದು. ಸಹೋದರನ ಜೊತೆ ಸಣ್ಣ ವಿಷಯಕ್ಕೆ ವಿವಾದವಾಗಬಹುದು. ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಬೇಕಾಗುತ್ತದೆ. ಕಾರ್ಯದ ಅನಿವಾರ್ಯತೆಯು ಎದ್ದು ಕಾಣಿಸುವುದು. ನಿಮ್ಮ ಸರಳ ವ್ಯಕ್ತಿತ್ವವು ಮಾದರಿಯಾಗುವುದು.
ಮೀನ ರಾಶಿ:
ದೈವಭಕ್ತಿಯು ಇಂದಿನ ನಿಮ್ಮ ಕಾರ್ಯಗಳಿಗೆ ಯಾವುದಾದರೊಂದು ರೀತಿಯಲ್ಲಿ ಸಹಾಯ ಮಾಡಲಿದೆ. ಅಜಾಗರೂಕತೆಯಿಂದ ನಿಮ್ಮ ವಸ್ತುವು ಇನ್ನೊಬ್ಬರ ಪಾಲಾಗಬಹುದು. ಕಳೆದ ವಿಚಾರವನ್ನು ಮತ್ತೆ ಮತ್ತೆ ನೆನಪಿಸಿಕೊಂಡು ದುಃಖಿಸುವಿರಿ. ಅಪರಿಚಿತ ಕರೆಗಳು ನಿಮ್ಮನ್ನು ಪೀಡಿಸಬಹುದು. ಅನ್ಯ ಕಾರ್ಯದಿಂದ ನಿಮ್ಮ ಮುಖ್ಯ ಕಾರ್ಯದಲ್ಲಿ ವೇಗವು ಕಡಿಮೆ ಆಗಬಹುದು. ನೂತನ ವಾಹನವನ್ನು ಖರೀದಿಸುವ ಆಲೋಚನೆ ಇರುವುದು. ಸ್ನೇಹಿತರ ಸಂಪಾದನೆಯ ದಾರಿಯನ್ನು ಹಾಕಿಕೊಡುವಿರಿ. ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮ ಮತ್ತು ಸಕಾರಾತ್ಮಕ ಬೆಳವಣಿಗೆಯ ಸಾಧ್ಯತೆಯಿದೆ. ತಾಯಿಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಅಧಿಕಾರದ ಮಾತುಗಳು ಅಹಂಕಾರವಾಗಿ ಬದಲಾಗಬಹುದು. ಅಶಕ್ತರಿಗೆ ನಿಮ್ಮ ಕೈಲಾದ ಸಹಕಾರವನ್ನು ಮಾಡುವಿರಿ. ನೂತನ ಸಂಬಂಧವನ್ನು ಬೆಳೆಸಿಕೊಳ್ಳಲು ಉತ್ಸುಕರಾಗುವಿರಿ. ಅರ್ಥಿಕ ಕ್ರಮವನ್ನು ಸರಿಯಾಗಿ ಇಟ್ಟುಕೊಳ್ಳುವಿರಿ.
14 ನವೆಂಬರ್ 2025ರ ಶುಕ್ರವಾರದ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ವಿಶಾಖಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಬ್ರಹ್ಮ, ಕರಣ : ಬವ, ಸೂರ್ಯೋದಯ – 06 – 18 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:38 – 12:04, ಗುಳಿಕ ಕಾಲ 07:44 – 09:11, ಯಮಗಂಡ ಕಾಲ 14:57 – 16:26
-ಲೋಹಿತ ಹೆಬ್ಬಾರ್ – 8762924271 (what’s app only)




