
ಇನ್ನೊಬ್ಬರಿಂದ ಮತ್ತೆ ಮತ್ತೆ ಹೇಳಿಸಿಕೊಳ್ಳಬೇಕಾಗುವುದು. ನಿಮ್ಮ ಬಗ್ಗೆ ಇರುವ ಭಾವವನ್ನು ನೀವು ಸದಾ ಉಳಿಸಿಕೊಳ್ಳುವ ಯೋಚನೆಯಲ್ಲಿಯೇ ಇರುವಿರಿ. ಆಪ್ತರನ್ನು ಕಳೆದುಕೊಂಡು ದುಃಖಿಸುವಿರಿ. ಕ್ರೀಡೆಗೆ ಸಂಬಂಧಿಸಿದಂತೆ ಮಾರ್ಗದರ್ಶನದ ಕೊರತೆ ಕಾಣುವುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯಾಗುವ ಮಾತುಗಳು ಬರಬಹುದು. ಎಲ್ಲ ಮಾತುಗಳನ್ನೂ ನೀವು ನಕಾರಾತ್ಮಕವಾಗಿಯೇ ತಿಳಿಯುವಿರಿ. ವಿದ್ಯಾರ್ಥಿಗಳಿಗೆ ಭವಿಷ್ಯದ ವಿದ್ಯಾಭ್ಯಾಸದ ಬಗ್ಗೆ ಆತಂಕ ಕಾಣಿಸುವುದು.
ನಿಮ್ಮ ಬಗ್ಗೆ ಅನಗತ್ಯ ಮಾತುಗಳು ಬರುವುದು. ಸ್ವಯಾರ್ಜಿತ ಆಸ್ತಿಯ ಮಾರಾಟದ ವಿಚಾರವು ಅಧಿಕವಾಗಿ ಕೇಳಿಬರಬಹುದು. ಕೆಲವರು ದೂರವಾದಷ್ಟು ನಿಮಗೆ ನೆಮ್ಮದಿ ಇರುವುದು. ಹಿರಿಯರ ಜೊತೆ ವಾಗ್ವಾದ ಆಗಬಹುದು. ಪ್ರಯಾಣದ ಆಯಾಸದಿಂದ ಜ್ವರ, ಆಶಕ್ತತೆಯು ಬರಬಹುದು. ನಿಮ್ಮ ಶ್ರಮವು ಹಾಕಬೇಕಾದಲ್ಲಿ ಹಾಕದೇ ಮತ್ತೆಲ್ಲೋ ಹಾಕುವಿರಿ. ಪ್ರಯಾಣದಿಂದ ಸ್ವಲ್ಪ ಆಯಾಸವಾಗಲಿದ್ದು ವಿಶ್ರಾಂತಿಯಿಂದ ಸರಿಮಾಡಿಕೊಳ್ಳಿ. ನಿಮ್ಮ ವಸ್ತುಗಳನ್ನು ಕಳೆದುಕೊಳ್ಳುವ ಸಂಭವವಿದೆ.
ಇಂದು ಮಾಡಲಾಗದ ಕಾರ್ಯವನ್ನು ಮತ್ತೆಂದೋ ಮಾಡುವ ಬದಲು ಅದಕ್ಕಾಗಿ ಇಂದೇ ದಿನವನ್ನು ನಿಶ್ಚಯಿಸಿ. ನಿಮ್ಮ ಗೌರವಕ್ಕೆ ದಕ್ಕೆ ಬರುವ ಕಡೆ ಹೋಗಲಾರಿರಿ. ಉತ್ಪನ್ನ ಮಾಡುವವರಿಗೆ ಬೇಡಿಕೆ ಅಧಿಕವಾಗಿದ್ದು, ಪೂರೈಸೈಲು ನಿಮಗೆ ಅಷ್ಟವಾಗುವುದು. ನಿಮ್ಮಲ್ಲಿ ಆದ ಬದಲಾವಣೆಯನ್ನು ಸಹೋದ್ಯೋಗಿಗಳು ಗಮನಿಸಬಹುದು. ದೀರ್ಘಕಾಲದ ರೋಗವು ಇಂದು ಗೊತ್ತಾಗಬಹುದು. ವಿದ್ಯಾರ್ಥಿಗಳು ಮನೆಯ ಜವಾಬ್ದಾರಿಯನ್ನೂ ನಡೆಸುವ ಸಂದರ್ಭವು ಬರಬಹುದು.
ಸಾಹಿತ್ಯಾಸಕ್ತರಿಗೆ ಉತ್ತಮ ಅವಕಾಶಗಳು ಪ್ರಾಪ್ತವಾಗಿ, ತಮ್ಮ ಜೀವನವನ್ನು ಬದಲಿಸಿಕೊಳ್ಳುವರು. ಆಲಂಕಾರಿಕ ವಸ್ತುಗಳ ಖರೀದಿಯನ್ನು ಮಾಡುವಿರಿ. ಸಮಯವನ್ನು ಬಹಳ ದುರುಪಯೋಗ ಮಾಡಿಕೊಳ್ಳುವ ಸಂಭವವಿದೆ. ಸಂಗಾತಿಯಿಂದ ನಿಮಗೆ ಅಪರೂಪದ ವಸ್ತುಗಳು ಸಿಗಬಹುದು. ನಿಮ್ಮ ಶ್ರೇಯಸ್ಸಿಗೆ ದೈವದ ಕೃಪೆಯನ್ನು ಬೇಡುವಿರಿ. ಹೊಸ ಯೋಜನೆಗಳನ್ನು ಆರಂಭಿಸಲು ಧೈರ್ಯ ಮಾಡುವುದು ಬೇಡ. ಏನಾದರೂ ಒಂದು ಅಸಂಬದ್ಧವನ್ನು ಮಾಡಿರುವ ಹಣೆಪಟ್ಟಿ ಬರಬಹುದು.
ಸಹೋದರರ ಜೊತೆ ಸಣ್ಣ ವಿಚಾರಕ್ಕೆ ಕಲಹವಾಗಬಹುದು. ಜಯದಿಂದ ನಿಮಗೆ ಅಹಂಕಾರ ಬರುವ ಸಾಧ್ಯತೆ ಇದೆ. ವಿದ್ಯಾಭ್ಯಾಸವನ್ನು ಮುಗಿಸಿ ಹೊಸ ಉದ್ಯೋಗವನ್ನು ಹುಡುಕುವಿರಿ. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಹೆಚ್ಚು ಖರ್ಚನ್ನು ಮಾಡಬೇಕಾಗುದು. ಯಾವುದೋ ಆಲೋಚನೆಯಲ್ಲಿ ಮಗ್ನರಾಗಿ ಮಾಡಬೇಕಾದ ಕೆಲಸವನ್ನು ಮಾಡಲಾಗದು. ನಿಮ್ಮ ಮಾತನ್ನು ತಪ್ಪಾಗಿ ಅರ್ಥೈಸಬಹುದು. ಕುರುಡಾಗಿ ಮುನ್ನುಗ್ಗುವುದು ಬೇಡ.
ಅದೃಷ್ಟವು ನಿಮಗೆ ಸಂಕೇತದ ರೂಪದಲ್ಲಿ ಕಾಣಿಸಿಕೊಳ್ಳಬಹುದು. ವಿದ್ಯಾಭ್ಯಾಸದ ಹಿನ್ನಡೆಯ ಕಾರಣ ಎಲ್ಲರಿಂದ ಅವಮಾನವಾಗಬಹುದು. ಕೃಷಿಕರಿಗೆ ಲಾಭಾವಾಗಲಿದೆ. ನಿಮಗೆ ಪ್ರೋತ್ಸಾಹದ ಕೊರತೆ ಅಧಿಕವಾಗಿ ಕಾಣಿಸುವುದು. ಅಧಿಕಾರಿಗಳಿಂದ ನಿಮಗೆ ಮಾನಸಿಕ ಹಿಂಸೆ ಆಗಬಹುದು. ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸವನ್ನು ಸಾಮಾಜಿಕ ಕೆಲಸದಿಂದ ಸಾಧಿಸುವಿರಿ. ವಾಹನ ಚಾಲನೆಯಲ್ಲಿ ಸುರಕ್ಷತೆ ಇರಲಿ.
ವಿದ್ಯಾರ್ಥಿಗಳು ಅಧ್ಯಯನವನ್ನು ಚುರುಕು ಮಾಡುವುದು ಒಳ್ಳೆಯದು. ಹಿತಶತ್ರುಗಳನ್ನೇ ನಿಮ್ಮ ಬೆಂಬಲಕ್ಕೆ ಇಟ್ಟುಕೊಳ್ಳುವಿರಿ. ರಾಜಕೀಯದವರಿಗೆ ಬೆಂಬಲಿಗರಿಂದ ಒತ್ತಡಗಳು ಬರಬಹುದು. ಸಂಗಾತಿಯ ಮನೋಭಾವವು ಬದಲಾದಂತೆ ಅನ್ನಿಸುವುದು. ನಿಮ್ಮ ಆದಾಯವನ್ನು ಧಾರ್ಮಿಕ ಕಾರ್ಯಗಳಿಗೆ ಉಪಯೋಗಿಸುವಿರಿ. ಮನೆಯ ವಾತಾವರಣವು ನಿಮಗೆ ಹಿತವೆನಿಸಲಿದ್ದು ಮನೆಯಿಂದ ದೂರವಿರಲು ಕಷ್ಟವಾಗುವುದು. ಸ್ವಾಭಿಮಾನಕ್ಕೆ ಆಪ್ತರಿಂದ ತೊಂದರೆಯಾಗಬಹುದು. ಸಂಗಾತಿಯ ಮೌನದಿಂದ ನಿಮಗೆ ಕಷ್ಟ.
ನೀವು ಮಾಡಿದೆ ಕಾರ್ಯಕ್ಕೆ ದಾಖಲೆ ಅವಶ್ಯಕತೆ ಇರಲಿದೆ. ಸಾಲವನ್ನು ಪಡೆಯಲು ನಿಮಗೆ ಸರಿಯಾದ ಆದಾಯ ಮೂಲದ ಅವಶ್ಯಕತೆ ಇರುವುದು. ಪೋಷಕರ ಜೊತೆ ಮನೋರಂಜನೆಯಲ್ಲಿ ಪಾಲ್ಗೊಳ್ಳುವಿರಿ. ಪರೋಪಕಾರ ಗುಣವು ನಿಮ್ಮಲ್ಲಿ ಇಂದು ಜಾಗರೂಕವಾಗಿ ಇರುವುದು. ನಿಮ್ಮನ್ನು ಅವ್ಯವಹಾರಕ್ಕೆ ಸಹೋದ್ಯೋಗಿಗಳು ಪ್ರೇರಿಸಬಹುದು. ನಿದ್ರಾಹೀನತೆ ಕಾಣಿಸುವುದು. ಅಪ್ರಯೋಜಕ ಎಂದುಕೊಂಡ ವಿದ್ಯೆಯಿಂದ ಪ್ರಯೋಜನವಾಗುವುದು. ಬಹಳ ದಿನಗಳಿಂದ ಮನೆಗೆ ಬಂಧುಗಳ ಆಗಮನವು ಆಗದೇ ಇರುವುದು ಬೇಸರತಂದೀತು.
ಇಂದು ಸಂಗಾತಿಯ ಜೊತೆ ಹೊರಗೆ ಸುತ್ತಾಡುವ ಬಯಕೆಯಾಗುವುದು. ವಾಹನ ಖರೀದಿಯ ಬಗ್ಗೆ ನಿಮಗೆ ಚಿಂತೆಯಾಗಬಹುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ವಿಚಾರದಲ್ಲಿ ತಜ್ಞರ ಸಂಪರ್ಕ ಮಾಡುವುದು ಉತ್ತಮ. ನಿಮ್ಮ ಇಂದಿನ ಕೆಲಸವನ್ನು ಪೂರ್ಣ ಮಾಡಲು ಬಹಳ ಆತುರದಿಂದ ಇರುವಿರಿ. ಸಹೋದರನ ಮನವೊಲಿಸಲು ನಿಮಗೆ ಕಷ್ಟವಾದೀತು. ತಂದೆಯ ಅಸಮಾಧಾನವನ್ನು ಕುಳಿತು ಬಗೆಹರಿಸಿ. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೋರಿಸಬೇಕಾಗುವುದು. ಧಾರ್ಮಿಕ ಕರ್ಮಗಳಿಗೆ ಅಶ್ರದ್ಧೆ.
ಎಲ್ಲದಕ್ಕೂ ಇನ್ನೊಬ್ಬರನ್ನು ಅವಲಂಬಿಸುವುದು ನಿಮಗೆ ಇಷ್ಟವಾಗದು. ಇದಕ್ಕಾಗಿ ಬೇರೆ ಮಾರ್ಗವನ್ನೂ ಅನ್ವೇಷಿಸುವಿರಿ. ಹಿರಿಯರ ಪ್ರೀತಿ ನಿಮಗೆ ಸಿಗಲಿದೆ. ಇಂದು ಕಾರ್ಯದ ಸ್ಥಳದಲ್ಲಿ ನಿಮ್ಮ ಹಿತಶತ್ರುಗಳು ಏನಾದರೂ ಕಿರಿಕಿರಿ ಮಾಡಿ ನಿಮ್ಮ ಕೆಲಸವು ಪೂರ್ಣವಾಗದಂತೆ ನೋಡಿಕೊಳ್ಳುವರು. ಇಂದು ನಿಮ್ಮ ಕುಟುಂಬದ ಸದಸ್ಯರು ನಿಮ್ಮನ್ನು ಬಿಟ್ಟು ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವರು. ಬಹಳ ಹುಡುಕಿದರೂ ನಿಮಗೆ ಬೇಕಾದ ಉದ್ಯೋಗವು ಸಿಗದೇ ಜೀವನವು ನಿರುತ್ಸಾಹವು ಉಂಟಾಗಬಹುದು. ಮಾನಸಿಕವಾಗಿ ನೀವು ಕುಗ್ಗಬಹುದು.
ನಿಮ್ಮ ಹೆಚ್ಚುತ್ತಿರುವ ಖರ್ಚುಗಳ ಬಗ್ಗೆ ಚಿಂತಿಸಬೇಕಾಗುವುದು. ಇಂದು ನಿಮ್ಮ ಮಕ್ಕಳ ಬಗ್ಗೆ ಸಕಾರಾತ್ಮಕ ವಾರ್ತೆಯನ್ನು ಕೇಳುವಿರಿ. ನೀವು ಇಂದು ಯಾರ ಜೊತೆಗದರೂ ಹಣವನ್ನು ವಿನಿಮಯ ಮಾಡಿಕೊಳ್ಳಲು ಯೋಚಿಸುತ್ತಿದ್ದರೆ, ಸರಿಯಾದ ಲೆಕ್ಕಾಚಾರವನ್ನು ಇಟ್ಟುಕೊಳ್ಳಿ. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ನಿಮ್ಮ ಅಪರೂಪದ ವ್ಯಕ್ತಿಗಳು ಆಕಸ್ಮಾತ್ತಾಗಿ ಭೇಟಿಯಾಗುವರು. ನಿಮಗೆ ಕೊಟ್ಟ ಕಾರ್ಯವನ್ನು ಮರೆತು ಅನ್ಯರ ಕಾರ್ಯದಲ್ಲಿ ಮಗ್ನರಾಗುವಿರಿ. ಮನಸ್ತಾಪವನ್ನು ಗುಟ್ಟಾಗಿಡುವುದು ಬೇಡ. ಹಾಗೆಂದು ಎಲ್ಲರ ಮುಂದೂ ಹೇಳಬೇಡಿ.
ನಿಮ್ಮ ಮಗುವನ್ನು ಹೊರಗೆ ಓದಲು ಕಳುಹಿಸಲು ಬಯಸುವಿರಿ. ಸಂಗಾತಿಯನ್ನು ಒಪ್ಪಿಸುವುದು ಸುಲಭವಲ್ಲ. ವಿವಾಹದ ವಾತಾವರಣವು ಮನೆಯಲ್ಲಿ ಇದ್ದರೂ ಉದ್ವೇಗಕ್ಕೆ ಒಳಗಾಗದೇ ನೀವೂ ನೆಮ್ಮದಿಯಿಂದ ಓಡಾಡುವಿರಿ. ಚಲಿಸುವ ವಾಹನದಿಂದ ಬೀಳುವ ಸಾಧ್ಯತೆ ಇದೆ. ಕಳ್ಳತನದ ಅಪವಾದದಿಂದ ತಲೆಮರೆಸಿಕೊಳ್ಳುವಿರಿ. ಸ್ವಂತ ಉದ್ಯೋಗದ ಮೇಲೆ ಕಾಳಜಿಯು ಅನ್ಯ ಕಾರ್ಯದ ನಿಮಿತ್ತ ಕಡಿಮೆಯಾಗುವುದು. ಇದರಿಂದ ನಿಮ್ಮ ಆದಾಯಕ್ಕೆ ಹೊಡೆತ ಬೀಳಬಹುದು.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಭರಣೀ, ಯೋಗ : ಸಾಧ್ಯ, ಕರಣ : ಬವ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 19 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08:20 – 09-46, ಯಮಗಂಡ ಕಾಲ 11:11 – 12:37, ಗುಳಿಕ ಕಾಲ 14:03 – 15:28
-ಲೋಹಿತ ಹೆಬ್ಬಾರ್ – 8762924271 (what’s app only)