AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 26ರ ದಿನಭವಿಷ್ಯ

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 26ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ನಿಮ್ಮ ಜನ್ಮಸಂಖ್ಯೆ ಆಧಾರಿತ ಈ ಭವಿಷ್ಯವು ದಿನದ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ನಿಮಗೆ ಸಹಾಯಕವಾಗಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 26ರ ದಿನಭವಿಷ್ಯ
Numerology Prediction
ಸ್ವಾತಿ ಎನ್​ಕೆ
| Edited By: |

Updated on: Jan 26, 2026 | 12:40 AM

Share

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7) ಯಾವುದೇ ವಿಚಾರದಲ್ಲಿ ಉಲ್ಲಾಸ- ಉತ್ಸಾಹದಿಂದ ತೊಡಗಿಕೊಳ್ಳಲು ಮನಸ್ಸು ಇರುವುದಿಲ್ಲ. ಆದಾಯದಲ್ಲಿ ಇಳಿಕೆ ಆಗುತ್ತಿದೆ ಎಂಬುದು ಒಂದು ಕಡೆಯ ಚಿಂತೆಯಾದರೆ, ಅದನ್ನು ಹೆಚ್ಚಿಸಲು ಮಾಡುತ್ತಿರುವ ಪ್ರಯತ್ನಗಳು ಫಲ ನೀಡುತ್ತಿಲ್ಲ ಎಂಬುದು ಇನ್ನೊಂದು ಕಡೆಯ ಬೇಸರಕ್ಕೆ ಕಾರಣ ಆಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮನ್ನು ದೂರ ಇಟ್ಟು, ಕೆಲವು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸಂಗತಿ ಗಮನಕ್ಕೆ ಬರಲಿದ್ದು, ಸಂಬಂಧಪಟ್ಟವರಲ್ಲಿ ಇದನ್ನು ಕೇಳಿಯೂ ಕೇಳಲಿದ್ದೀರಿ. ಪ್ರಾಣಿಗಳಿಂದ ಕಡಿತಕ್ಕೆ ಒಳಗಾಗುವ ಯೋಗ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8) ಮನಸ್ಸಿಗೆ ಸಮಾಧಾನ ತರುವಂಥ ಬೆಳವಣಿಗೆಗಳು ಆಗಲಿವೆ. ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಪ್ರತಿಷ್ಠಿತ ಸಂಸ್ಥೆಯಿಂದ ಇಂಟರ್ ವ್ಯೂ ಕರೆ ಬರಬಹುದು. ಇನ್ನು ವೃತ್ತಿಪರರು ನೀವಾಗಿಯೇ ಕೆಲವು ಕ್ಲೈಂಟ್ ಗಳಿಗೆ ಇನ್ನು ಕೆಲಸ ಮಾಡಿಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಲಿದ್ದೀರಿ. ಊಟ- ತಿಂಡಿಗಾಗಿ ದೂರದ ಸ್ಥಳಗಳಿಗೆ ಹುಡುಕಿಕೊಂಡು ಹೋಗಲಿದ್ದೀರಿ. ಇದಕ್ಕೆ ನಿಮ್ಮ ಸ್ನೇಹಿತರು ಸಹ ಜೊತೆಯಾಗುತ್ತಾರೆ. ಕೋರ್ಟ್- ಕಚೇರಿ ಅಲೆದಾಟ ಮಾಡುತ್ತಿರುವವರಿಗೆ ರಾಜೀ- ಸಂಧಾನಕ್ಕೆ ಪ್ರಸ್ತಾವ ಬರಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9) ಯಾಕೆ- ಏನು ಎಂಬ ಪ್ರಶ್ನೆ ಮಾಡದೆ ತಮಗೆ ಬೇಕಾದ ಕೆಲಸವನ್ನು ಮಾಡಿಕೊಡಬೇಕು ಎಂಬುದು ನಿಮ್ಮ ಸ್ನೇಹಿತರ ನಿರೀಕ್ಷೆ ಆಗಿರಲಿದೆ. ಇದಕ್ಕಾಗಿ ನಡೆಯುವ ಮಾತುಕತೆ ವೇಳೆ ನಿಮ್ಮ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದೆನಿಸುವುದಕ್ಕೆ ಶುರು ಆಗಲಿದೆ. ಜಮೀನು- ಸೈಟು ಇಂಥ ದಾಖಲೆಗಳ ವಿಚಾರದಲ್ಲಿ, ಮನೆ- ಮಳಿಗೆ ನಿರ್ಮಾಣದಲ್ಲಿ ತೊಡಗಿಕೊಂಡವರು ನಿಯಮಾನುಸಾರ ಕೆಲಸ- ಕಾರ್ಯಗಳು ನಡೆಯುತ್ತಾ ಇವೆಯೇ ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವುದು ಒಳ್ಳೆಯದು.

ಲೇಖನ- ಸ್ವಾತಿ ಎನ್.ಕೆ.

ಮಾತೃ ಭಾಷೆ ತೆಲುಗು, ಜೀವನದ ಭಾಷೆ ಕನ್ನಡ: ಸಾಯಿಕುಮಾರ್
ಮಾತೃ ಭಾಷೆ ತೆಲುಗು, ಜೀವನದ ಭಾಷೆ ಕನ್ನಡ: ಸಾಯಿಕುಮಾರ್
ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​: 80 ಅರ್ಜಿಗಳು ರಿಜೆಕ್ಟ್​
ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​: 80 ಅರ್ಜಿಗಳು ರಿಜೆಕ್ಟ್​
ಗಣರಾಜ್ಯೋತ್ಸವ 2026: ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ
ಗಣರಾಜ್ಯೋತ್ಸವ 2026: ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ
ರೈತರ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ರೈತರ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ
ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ
ಬಿಬಿಎಲ್​ನಲ್ಲಿ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಪರ್ತ್ ಸ್ಕಾರ್ಚರ್ಸ್
ಬಿಬಿಎಲ್​ನಲ್ಲಿ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಪರ್ತ್ ಸ್ಕಾರ್ಚರ್ಸ್
ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ
ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ
ರಾಜ್ಯಪಾಲರ ಭಾಷಣದ ಕುರಿತು ಸಿದ್ದರಾಮಯ್ಯ ರಿಯಾಕ್ಷನ್ ಹೀಗಿತ್ತು!
ರಾಜ್ಯಪಾಲರ ಭಾಷಣದ ಕುರಿತು ಸಿದ್ದರಾಮಯ್ಯ ರಿಯಾಕ್ಷನ್ ಹೀಗಿತ್ತು!
ಪೊಲೀಸರಿಗೆ ನೀಡಿದ್ದ ವಿಡಿಯೋ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನರೆಡ್ಡಿ
ಪೊಲೀಸರಿಗೆ ನೀಡಿದ್ದ ವಿಡಿಯೋ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನರೆಡ್ಡಿ
ಹೌಸ್​ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ
ಹೌಸ್​ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ