AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುವಿನ ವಕ್ರಗತಿಯಿಂದ ಈ ನಾಲ್ಕು ರಾಶಿಯವರ ಗತಿಯೂ ಬದಲು

ಗುರು ಗ್ರಹವು ಮಿಥುನ ರಾಶಿಯ ಪುನರ್ವಸು ನಕ್ಷತ್ರದಲ್ಲಿ ವಕ್ರನಾಗಿ ಸಂಚರಿಸುತ್ತಿದ್ದು, ಇದು ಸುಮಾರು ಎರಡು ತಿಂಗಳುಗಳ ಕಾಲ ದ್ವಾದಶ ರಾಶಿಗಳ ಮೇಲೆ ಶುಭ, ಮಿಶ್ರ ಮತ್ತು ಅಶುಭ ಫಲಗಳನ್ನು ನೀಡಲಿದೆ. ಗುರುವು ವಕ್ರನಾದಾಗ ಅದರ ಪ್ರಭಾವ ಹೆಚ್ಚಿರುತ್ತದೆ. ಆರ್ಥಿಕ ಪ್ರಗತಿ, ಆರೋಗ್ಯ ಸಮಸ್ಯೆ, ವೃತ್ತಿ ಕ್ಷೇತ್ರದಲ್ಲಿ ಬದಲಾವಣೆಗಳು ಈ ಅವಧಿಯಲ್ಲಿ ಕಂಡುಬರಲಿದ್ದು, ಇದರ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಸಲಾಗಿದೆ.

ಗುರುವಿನ ವಕ್ರಗತಿಯಿಂದ ಈ ನಾಲ್ಕು ರಾಶಿಯವರ ಗತಿಯೂ ಬದಲು
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jan 27, 2026 | 12:25 AM

Share

ಗುರುವು ಮಿಥುನ ರಾಶಿಯ ಪುನರ್ವಸು ನಕ್ಷತ್ರದಲ್ಲಿ ವಕ್ರನಾಗಿ ಸಂಚರಿಸುತ್ತಿದ್ದಾನೆ. ಇನ್ನು ಸುಮಾರು ಎರಡು ತಿಂಗಳ ಕಾಲ ಮಿಥುನ ರಾಶಿ ಪುನರ್ವಸು ನಕ್ಷತ್ರದಲ್ಲಿ ಸಂಚರಿಸಕಿದ್ದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಹಳ ಮಹತ್ವದ ಬದಲಾವಣೆ. ಪುನರ್ವಸು ನಕ್ಷತ್ರವು ಗುರು ಗ್ರಹದ ನಕ್ಷತ್ರವಾಗಿದ್ದು, ಇಲ್ಲಿ ಗುರುವು ಬಲಿಷ್ಠನಾಗಿರುತ್ತಾನೆ. ​ಗುರುವು ವಕ್ರನಾದಾಗ ಅದರ ಪ್ರಭಾವವು ಸಾಮಾನ್ಯ ಸಂಚಾರಕ್ಕಿಂತ ಹೆಚ್ಚಾಗಿರುತ್ತದೆ. ಈ ಸಂಚಾರದಿಂದ ದ್ವಾದಶ ರಾಶಿಗಳ ಮೇಲಾಗುವ ಶುಭ ಮತ್ತು ಅಶುಭ ಫಲಗಳು ಇಲ್ಲಿವೆ.

​ಶುಭ ಫಲ

​ಮಿಥುನ :

ಗುರುವು ನಿಮ್ಮ ರಾಶಿಯಲ್ಲೇ ಇರುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆದರೆ ವಕ್ರನಾಗಿರುವುದರಿಂದ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಇರಲಿ.

​ಸಿಂಹ

ಲಾಭ ಸ್ಥಾನದಲ್ಲಿ ಗುರುವಿರುವುದರಿಂದ ಆರ್ಥಿಕ ಪ್ರಗತಿ ಕಂಡುಬರುತ್ತದೆ. ಬಾಕಿ ಉಳಿದಿದ್ದ ಹಣ ಕೈ ಸೇರಲಿದೆ. ದೀರ್ಘಕಾಲದ ಕನಸುಗಳು ನನಸಾಗುವ ಸಾಧ್ಯತೆ ಇದೆ.

​ತುಲಾ :

ಭಾಗ್ಯ ಸ್ಥಾನದಲ್ಲಿ ಗುರುವಿನ ಸಂಚಾರವು ಆಧ್ಯಾತ್ಮಿಕ ಚಿಂತನೆ ಹೆಚ್ಚಿಸುತ್ತದೆ. ವಿದೇಶ ಪ್ರಯಾಣ ಅಥವಾ ಉನ್ನತ ಶಿಕ್ಷಣಕ್ಕೆ ಪ್ರಯತ್ನಿಸುತ್ತಿರುವವರಿಗೆ ಯಶಸ್ಸು ಸಿಗಲಿದೆ. ತಂದೆಯ ಕಡೆಯಿಂದ ಆಸ್ತಿ ಲಾಭವಾಗಬಹುದು.

​ಕುಂಭ :

ಪಂಚಮ ಸ್ಥಾನದಲ್ಲಿ ಗುರುವು ವಕ್ರನಾಗಿರುವುದರಿಂದ ಸಂತಾನ ಭಾಗ್ಯ ಅಥವಾ ಮಕ್ಕಳ ಪ್ರಗತಿಯಿಂದ ಸಂತೋಷವಾಗಲಿದೆ. ಬುದ್ಧಿವಂತಿಕೆಯಿಂದ ಮಾಡುವ ಹೂಡಿಕೆಯಲ್ಲಿ ಲಾಭ ದೊರೆಯಲಿದೆ.

ಮಿಶ್ರ ಫಲ

​ಮೇಷ ಮತ್ತು ಧನು:

ಧೈರ್ಯ ಹೆಚ್ಚಲಿದ್ದರೂ, ಕೆಲಸಗಳಲ್ಲಿ ಸ್ವಲ್ಪ ವಿಳಂಬ ಉಂಟಾಗಬಹುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಗುತ್ತದೆ.

​ವೃಷಭ ಮತ್ತು ವೃಶ್ಚಿಕ:

ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಮಾತು ಒರಟಾಗದಂತೆ ನೋಡಿಕೊಳ್ಳಿ.

​ಅಶುಭ ಫಲ

​ಕರ್ಕಾಟಕ :

ವ್ಯಯ ಸ್ಥಾನದಲ್ಲಿ ಗುರುವಿರುವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗಬಹುದು. ದೂರದ ಪ್ರಯಾಣಗಳು ಆಯಾಸ ತರಬಹುದು. ಆರೋಗ್ಯದ ಬಗ್ಗೆ ಹೂಡಿಕೆ ಮಾಡುವುದು ಉತ್ತಮ.

​ಕನ್ಯಾ :

ಕರ್ಮದ ರಾಶಿಯಲ್ಲಿ ಗುರು ವಕ್ರನಾಗಿರುವುದರಿಂದ ವೃತ್ತಿ ಕ್ಷೇತ್ರದಲ್ಲಿ ಗೊಂದಲ ಉಂಟಾಗಬಹುದು. ಮೇಲಧಿಕಾರಿಗಳೊಂದಿಗೆ ವಾಗ್ವಾದ ಬೇಡ. ವರ್ಗಾವಣೆ ಸಾಧ್ಯತೆ ಇದೆ.

​ಮಕರ :

ಆರನೇ ಮನೆಯಲ್ಲಿ ಗುರು ಇರುವುದರಿಂದ ಗುಪ್ತ ಶತ್ರುಗಳ ಕಾಟ ಅಥವಾ ಹಳೆಯ ಸಾಲದ ಬಾಧೆ ಕಾಡಬಹುದು. ಕಾನೂನು ವಿಚಾರಗಳಲ್ಲಿ ಎಚ್ಚರಿಕೆ ಇರಲಿ.

​ಮೀನ :

ನಾಲ್ಕನೇ ಮನೆಯಲ್ಲಿ ಗುರು ಇರುವುದರಿಂದ ಸುಖ-ಸಂತೋಷಕ್ಕೆ ಸ್ವಲ್ಪ ಧಕ್ಕೆ ಬರಬಹುದು. ಮನೆ ಅಥವಾ ವಾಹನ ದುರಸ್ತಿಗೆ ಹಣ ವ್ಯಯವಾಗಬಹುದು. ತಾಯಿಯ ಆರೋಗ್ಯದ ಕಡೆ ಗಮನವಿರಲಿ.

​ಪುನರ್ವಸು ಅಂದರೆ ‘ಮರಳಿ ಬರುವುದು’ ಎಂದರ್ಥ. ಈ ಅವಧಿಯಲ್ಲಿ ಕಳೆದುಹೋದ ವಸ್ತುಗಳು, ಸಂಪತ್ತು, ಸಂಬಂಧಗಳು ಅಥವಾ ಉದ್ಯೋಗದ ಅವಕಾಶಗಳು ಮತ್ತೆ ಸಿಗುವ ಸಾಧ್ಯತೆ ಇರುತ್ತದೆ.

​ಶುಭ ಫಲಕ್ಕಾಗಿ ಪ್ರತಿ ​ಗುರುವಾರ ಶ್ರೀ ರಾಘವೇಂದ್ರ ಸ್ವಾಮಿಗಳ ಅಥವಾ ದತ್ತಾತ್ರೇಯರ ದರ್ಶನ ಮಾಡಿ. ಗ ಕಡಲೆ ಧಾನ್ಯವನ್ನು ಬಟ್ಟೆಯಲ್ಲಿ ಇಟ್ಟು ದಾನ ಮಾಡಿ.​

– ಲೋಹಿತ ಹೆಬ್ಬಾರ್

ಬಿಗ್ ಬಾಸ್ ಬಳಿಕ ಸಿನಿಮಾ ಅವಕಾಶ ಪಡೆದ ಮಲ್ಲಮ್ಮ; ಬದಲಾಯ್ತು ಲೈಫ್
ಬಿಗ್ ಬಾಸ್ ಬಳಿಕ ಸಿನಿಮಾ ಅವಕಾಶ ಪಡೆದ ಮಲ್ಲಮ್ಮ; ಬದಲಾಯ್ತು ಲೈಫ್
ಆರ್​ಸಿಬಿ ವಿರುದ್ಧ ಐತಿಹಾಸಿಕ ಶತಕ ಬಾರಿಸಿದ ನ್ಯಾಟ್ ಸಿವರ್-ಬ್ರಂಟ್
ಆರ್​ಸಿಬಿ ವಿರುದ್ಧ ಐತಿಹಾಸಿಕ ಶತಕ ಬಾರಿಸಿದ ನ್ಯಾಟ್ ಸಿವರ್-ಬ್ರಂಟ್
ಗಣರಾಜ್ಯೋತ್ಸವ ಪರೇಡ್​​ನಲ್ಲಿ ಗಮನ ಸೆಳೆದ ಆಪರೇಷನ್ ಸಿಂಧೂರ್‌ ವಿಜಯೋತ್ಸವ
ಗಣರಾಜ್ಯೋತ್ಸವ ಪರೇಡ್​​ನಲ್ಲಿ ಗಮನ ಸೆಳೆದ ಆಪರೇಷನ್ ಸಿಂಧೂರ್‌ ವಿಜಯೋತ್ಸವ
ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ
ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ
ಅಟ್ಟಾರಿ-ವಾಘಾ ಗಡಿಯಲ್ಲಿ 'ಬೀಟಿಂಗ್ ರಿಟ್ರೀಟ್'
ಅಟ್ಟಾರಿ-ವಾಘಾ ಗಡಿಯಲ್ಲಿ 'ಬೀಟಿಂಗ್ ರಿಟ್ರೀಟ್'
ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ
ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಚಾಲಕನ ಅಜಾಗರೂಕತೆ: ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದ ರೈಲು
ಚಾಲಕನ ಅಜಾಗರೂಕತೆ: ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದ ರೈಲು