Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಭಾನುವಾರದ ದಿನ ಭವಿಷ್ಯ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 26) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಭಾನುವಾರದ ದಿನ ಭವಿಷ್ಯ
ಇಂದಿನ ರಾಶಿ ಭವಿಷ್ಯImage Credit source: freepik
Follow us
Rakesh Nayak Manchi
|

Updated on: Mar 26, 2023 | 6:15 AM

ಪ್ರತಿ ದಿನ ಸೂರ್ಯ, ಚಂದ್ರ ಹುಟ್ಟುತ್ತಾರೆ. ಭೂಮಿ ತಿರುಗುತ್ತಿರುತ್ತೆ. ಪ್ರತಿಯೊಬ್ಬರ ಜೀವನವು ನಡೆಯುತ್ತಲೇ ಇರುತ್ತೆ. ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಮಾರ್ಚ್ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು  ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ಪಂಚಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಪ್ರೀತಿ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 33 ನಿಮಿಷಕ್ಕೆ, ಸೂರ್ಯಾಸ್ತ ಬೆಳಗ್ಗೆ 06 ಗಂಟೆ 42 ನಿಮಿಷಕ್ಕೆ. ರಾಹು ಕಾಲ ಸಂಜೆ 05:11 ರಿಂದ 06:43ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:38 ರಿಂದ 02:09ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:40 ರಿಂದ 05:11ರ ವರೆಗೆ.

ಸಿಂಹ: ಆತಂಕಕಾರಿ ವಿಚಾರವೊಂದು ನಿಮಗೆ ತಿಳಿಯಲಿದೆ. ಈಗಿರುವ ಕೆಲಸವನ್ನು ಬಿಟ್ಟು ಸ್ವಂತ ಉದ್ಯೋಗಕ್ಕೆ ತೊಡಗಬಹುದು. ಸಂತೋಷವಾಗಿರಲು ಬೇಕಾದಂತೆ ನಿಮ್ಮ ಶ್ರಮವನ್ನು ಇಟ್ಟುಕೊಳ್ಳಿ.‌ ಬಂಧುಗಳ ಭೇಟಿ ಸ್ವಲ್ಪ ಕಿರಿಕಿರಿ ಎನಿಸಿದರೂ ಅನಿವಾರ್ಯವಾಗಿ ಸುಮ್ಮನಿರುವಿರಿ. ಮನಸ್ಸಿಗೆ ಬುದ್ಧಿಗೆ ಕೆಲಸವನ್ನು ಕೊಡಬೇಡಿ. ಧನಾಗಮನದ ವಾರ್ತೆಯು ಇರಲಿದೆ. ಮರಗೆಲಸದವರಿಗೆ ಉತ್ತಮ ಕೆಲಸಗಳು ಸಿಗಲಿವೆ. ಜನರ ನಡುವೆ ಇರಲು ಬಯಸುವಿರಿ. ಉನ್ನತ ಹುದ್ದೆಯ ಆಕಾಂಕ್ಷಿಯಾಗಿದ್ದರೆ ಪ್ರಯತ್ನಶೀಲರಾಗಿ, ಪಡೆದುಕೊಳ್ಳುವ ಸಾಧ್ಯತೆ ಇದೆ.

ಕನ್ಯಾ: ಇಂದು ಇಷ್ಟು ದಿನ ನಂಬಿ ಬಂದಿದ್ದ ಆಸ್ತಿಯು ಕೈ ತಪ್ಪುವ ಸಾಧ್ಯತೆ ಇದೆ. ಸಹನೆಯನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ನಿಮಗೆ ಎಚ್ಚರಿಕೆ ಇರಲಿ. ಸರ್ಕಾರಿ ಕಾರ್ಯಗಳು ಹಿಂದೆ ಬೀಳಲಿವೆ. ಅನಿವಾರ್ಯವಾಗಿ ಮಾಡಿದ ಸಣ್ಣ ಸಾಲವು ಇಂದು ದೊಡ್ಡದಾಗಿದೆ. ಇನ್ನೂ ಸಾಲಕ್ಕೆಂದು ಇನ್ನೊಬ್ಬರ ಬಳಿ ಕೈ ಚಾಚ ಬೇಕಾಗಬಹುದು.‌ ಕಛೇರಿಯಲ್ಲಿ ನೀವಿಂದು ಸ್ವತಂತ್ರರು. ಅಂಕೊಂಡಂತೆ ಆಗಲಿಲ್ಲ ಎಂದು ಬೇಸರಪಡಬೇಡಿ. ಮನೋಬಲವೃದ್ಧಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಿ. ಆಗುವುದನ್ನು ಒಮ್ಮನಸ್ಸಿನಿಂದ ಒಪ್ಪಿಕೊಳ್ಳಿ. ಆರ್ಥಿಕವಿಚಾರದಲ್ಲಿ ದಂಪತಿಗಳ ನಡುವೆ ಮನಸ್ತಾವಿರಲಿದೆ.

ತುಲಾ: ವಿದೇಶಕ್ಕೆ ಸಂಬಂಧಪಟ್ಟ ವ್ಯವಹಾರವು ಸಿಗುವ ಸಾಧ್ಯತೆ ಇದೆ. ಆನಾರೋಗ್ಯವು ಸ್ವಲ್ಪ ಕಿರಿಕಿರಿಯನ್ನು ಮಾಡಲಿದೆ. ವ್ಯಾಪಾರದಲ್ಲಿ ಮಂದಗತಿ ಇರಲಿದೆ. ಯಂತ್ರೋಪಕರಣದ ಮಾರಾಟಗಾರಿಗೆ ಲಾಭವು ಆಗುವುದು. ಶಿಕ್ಷಕರು ತಮ್ಮ ವೃತ್ತಿಯಲ್ಲಿ ಕೀರ್ತಿಯನ್ನು ಗಳಿಸುವರು. ನಿಮಗೆ ಅಪಮಾನವಾಗುವ ಕೆಲಸವು ನಡೆಯಬಹುದು. ಸ್ತ್ರೀಸಂಬಂಧವಾದ ಅಪವಾದಗಳು ಬರಬಹುದು. ಬ್ಯಾಂಕ್ ಉದ್ಯೋಗದಲ್ಲಿ ಸ್ಥಾನವು ದಲಾವಣೆಯಾಗಲಿದೆ. ಮಾನಸಿಕ ಕಿರುಕುಳವನ್ನು ಅನ್ಯರಿಂದ ಅನುಭವಿಸುವಿರಿ. ಹೊಸತನ್ನು ಮಾಡಲು ಹೋಗಿ ಮುಗ್ಗರಿಸುವಿರಿ. ಸದ್ಯ ನಿಮ್ಮ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಿ.

ವೃಶ್ಚಿಕ: ನಿಮ್ಮ‌ ಕರ್ತವ್ಯಗಳನ್ನು ಮರೆತಿದ್ದು, ಅದನ್ನು ಬೇರೆಯವರು ನೆನಪಿಸುವರು. ಅದು ನಿಮಗೆ ಕೋಪಕ್ಕೆ ಕಾರಣವಾದೀತು. ಕುಟುಂಬಕ್ಕೆ ಆಗಬೇಕಾದ ಕೆಲಸಗಳಿಂದ ಖರ್ಚುಗಳು ಹೆಚ್ಚಾಗಬಹುದು. ಯಾತ್ರೆಯನ್ನು ಮಾಡಲಿದ್ದೀರಿ. ಖರ್ಚನ್ನು ನಿಯಂತ್ರಿಸುವುದಕ್ಕಾಗಿ ನಿಮ್ಮ ಅವಶ್ಯಕತೆಗಳನ್ನು ಸದ್ಯ ನಿಲ್ಲಿಸುವಿರಿ. ಕ್ರೀಡೆಯಲ್ಲಿ ಮನಸ್ಸು ಇಡುವಿರಿ. ಲೇಖಕರು, ಸಾಹಿತಿ, ಪತ್ರ ಕರ್ತರಿಗೆ ಒಳ್ಳೆಯ ಸಮಾಚಾರ ಸಿಗಲಿದೆ.‌ ಪ್ರಶಸ್ತಿಗಳು ನಿಮ್ಮ ಕಾರ್ಯವನ್ನು ಹುಡುಕಿಕೊಂಡು ಬರಬಹುದು. ಓಡಾಟದ ಸುಸ್ತು ನಿಮಗೆ ಅನಾರೋಗ್ಯವಾಗಲಿದೆ. ವಿಶ್ರಾಂತಿಯನ್ನು ಪಡೆಯುವುದು ಉತ್ತಮ.

-ಲೋಹಿತಶರ್ಮಾ ಇಡುವಾಣಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ