Horoscope – ದಿನ ಭವಿಷ್ಯ; ಈ ರಾಶಿಯವರಿಗೆ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ

| Updated By: Skanda

Updated on: Apr 26, 2021 | 9:34 AM

Today Horoscope ಏಪ್ರಿಲ್ 26, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope - ದಿನ ಭವಿಷ್ಯ; ಈ ರಾಶಿಯವರಿಗೆ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲಪಕ್ಷ, ಚತುರ್ದಶಿ ತಿಥಿ, ಸೋಮವಾರ, ಏಪ್ರಿಲ್ 26, 2021. ಚಿತ್ತೆ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 7.28 ರಿಂದ ಇಂದು ಬೆಳಿಗ್ಗೆ 9.03 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.53. ಸೂರ್ಯಾಸ್ತ: ಸಂಜೆ 6.34.

ತಾ.26-04-2021 ರ ಸೋಮವಾರದ ರಾಶಿಭವಿಷ್ಯ

ಮೇಷ: ಅನವಶ್ಯಕ ಅಲೆದಾಟದ ಸಾದ್ಯತೆ ಇದೆ. ಕರ್ತವ್ಯಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳಲು ಪ್ರಯತ್ನ ಮಾಡುವಿರಿ. ಹಿತಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆರ್ಥಿಕ ಬಲ ಕುಗ್ಗುವ ಸಂಭವವಿದೆ. ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಶುಭ ಸಂಖ್ಯೆ: 7

ವೃಷಭ: ಕ್ಷಮಾಗುಣ ಇರಲಿ, ಪರಸ್ಪರ ದೋಷಾರೋಪ ಮಾಡುವುದರಿಂದ ಕಾರ್ಯಹಾನಿಯ ಸಂಭವವಿದೆ. ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ದೊಡ್ಡಮೊತ್ತದ ಹಣಹೂಡಿಕೆ ಈಗ ಬೇಡ. ಶುಭ ಸಂಖ್ಯೆ: 2

ಮಿಥುನ: ಕೃಷಿಮೂಲದ ಲಾಭ ದೊರೆಯುವುದು. ಸಹೋದ್ಯೋಗಿಗಳ ಸಹಾಯ ಅಪೃಕ್ಷಿಸದೇ ಸ್ವಂತಬಲದಿಂದ ಕೆಲಸ ನಿರ್ವಹಿಸಿರಿ. ಕೈಗೊಂಡ ಕಾರ್ಯಗಳು ಯಶಸ್ವಿಯಾಗುವವು. ನೌಕರರಿಗೆ ಕಿರಿಕಿರಿಯಾಗುವ ಸಂಭವವಿದೆ. ಶುಭ ಸಂಖ್ಯೆ: 9

ಕಟಕ: ಪರಿವಾರದಲ್ಲಿ ಹೊಸಕಳೆ ಬರುವುದು. ಕುಟುಂಬದಲ್ಲಿ ಸುಖ ಇರುವುದು. ಮಹತ್ವದ ಕೆಲಸಕ್ಕೆ ವಿಘ್ನ ಬರುವ ಸಾಧ್ಯತೆ ಇದೆ ಎಚ್ಚರಿಕೆವಹಿಸಿರಿ. ವ್ಯವಹಾರಗಳು ಲಾಭದಾಯಕವಾಗಿ ಇರುವವು. ಶುಭ ಸಂಖ್ಯೆ: 4

ಸಿಂಹ: ಧನ ಅಪವ್ಯಯವಾಗುವ ಲಕ್ಷಣಗಳಿವೆ ಆದರೆ ಸಣ್ಣ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುವುದು. ಶ್ರಮಿಕವರ್ಗಕ್ಕೆ ಉನ್ನತಿ ಇರುವುದು. ಕೌಟುಂಬಿಕ ಸಂಬಂಧಗಳು ಫಲಿಸುವವು. ಋಣಪರಿಹಾರವಾಗುವುದು. ಶುಭ ಸಂಖ್ಯೆ: 5

ಕನ್ಯಾ: ಆರ್ಥಿಕ ಸ್ಥಿತಿ ಸುಧಾರಿಸುವುದು. ಮಕ್ಕಳ ಉದ್ಯೋಗದ ಸಮಸ್ಯೆಗೆ ಪರಿಹಾರ ದೊರೆಯುವುದು. ಜೀವನದ ಹೊಸ ಆಯಾಮದೆಡೆಗೆ ಸಾಗುವ ಸೂಚನೆ ಇದೆ. ಶುಭ ಸಂಖ್ಯೆ: 8

ತುಲಾ: ಹೊಸ ಯೋಜನೆಗೆ ಸಂಬಂಧಿಸಿದಂತೆ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ. ಶುಭ ಸಂಖ್ಯೆ: 3

ವೃಶ್ಚಿಕ: ಧನಾರ್ಜನೆಯ ಮಾರ್ಗವು ಶ್ರೇಷ್ಠ ಮಟ್ಟದಲ್ಲಿದ್ದು, ಐಶ್ವರ್ಯ ಸಮೃದ್ಧಿಯಾಗುತ್ತದೆ. ಸಂಸಾರಿಕ ದೃಷ್ಟಿಯಲ್ಲೂ ಸುಖ, ಸಂಭ್ರಮಗಳಿದ್ದು ತೃಪ್ತಿ ಲಭಿಸಿದರೂ ಶತ್ರುಜನರ ಪೀಡೆ ಅಧಿಕವಾಗುತ್ತದೆ. ಅನಿವಾರ್ಯ ಪ್ರವಾಸ ಸಾಧ್ಯತೆ ಇದೆ. ಶುಭ ಸಂಖ್ಯೆ: 6

ಧನು: ಅಭದ್ರತೆ ಕಾಡುವ ಸಂಭವವಿದೆ. ಸ್ಥಾನಚ್ಯುತಿಯಾಗುವ ಸಾಧ್ಯತೆ ಇದೆ. ಸಹೋದರರಲ್ಲಿ ಕಲಹ. ಸ್ಥಿರಾಸ್ತಿಯು ಹಾನಿಯಾಗುವ ಯೋಗವಿದೆ. ಕೃಷಿಕರಿಗೆ ಹಾಗೂ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಇರುವುದು. ಶುಭ ಸಂಖ್ಯೆ: 2

ಮಕರ: ಧಾರ್ಮಿಕ ಕ್ಷೇತ್ರದಲ್ಲಿ ಗೌರವ ಸಮ್ಮಾನಗಳು ದೊರೆಯುವವು. ಅತಿಯಾದ ನಿರೀಕ್ಷೆಯಿಂದ ಅಸಮಾಧಾನ ಕಂಡುಬರುವುದು. ದೂರುವವರೇ ಹೊಗಳಿದರೂ ನೆಮ್ಮದಿ ಇರಲಾರದು. ಸ್ವಯಂ ಪ್ರತಿಷ್ಟೆಗೆ ಧನವ್ಯಯ ಆಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 8

ಕುಂಭ: ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸಿ. ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವಿರಿ. ಸಾಮಜಿಕ ಗೌರವಗಳು ಅರಸಿಕೊಂಡು ಬರಲಿವೆ. ಮಾಲೀಕತ್ವದ ಆಸ್ತಿ ಕೈತಪ್ಪದಂತೆ ಎಚ್ಚರಿಕೆ ವಹಿಸಿರಿ. ಧನದ ಅಪವ್ಯಯ ಆಗದಂತೆ ನೋಡಿರಿ. ಶುಭ ಸಂಖ್ಯೆ: 5

ಮೀನ: ಎಲ್ಲವನ್ನು ಹಗುರವಾಗಿ ಕಾಣುವುದರಿಂದ ಸಣ್ಣ ವಿಷಯವೂ ದೊಡ್ಡ ಸಮಸ್ಯೆಯಾಗುವುದು. ಹಣಕಾಸಿನ ತೊಂದರೆಗಳು ಕಂಡುಬರುವವು. ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಎಚ್ಚರಿಕೆ ವಹಿಸಿರಿ. ಶುಭ ಸಂಖ್ಯೆ: 9

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

Published On - 6:30 am, Mon, 26 April 21