ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣಪಕ್ಷ, ಚೌತಿ ತಿಥಿ, ಶುಕ್ರವಾರ, ಏಪ್ರಿಲ್ 28, 2021. ಜ್ಯೇಷ್ಠ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 10.36 ರಿಂದ ಇಂದು ಬೆಳಿಗ್ಗೆ 12.11 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.50. ಸೂರ್ಯಾಸ್ತ: ಸಂಜೆ 6.35.
ತಾ.30-04-2021 ರ ಶುಕ್ರವಾರದ ರಾಶಿಭವಿಷ್ಯ
ಮೇಷ: ಕೆಲಸದಲ್ಲಿ ಅಭಿವೃದ್ಧಿ ಇದೆ. ಹಣಕಾಸಿನ ವ್ಯವಹಾರವನ್ನು ತಾಳ್ಮೆಯಿಂದ ನಿಭಾಯಿಸಿ. ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಮಂಗಲ ಕಾರ್ಯ ಜರುಗುವವು. ಶುಭ ಸಂಖ್ಯೆ: 3
ವೃಷಭ: ಒಳ್ಳೆಯ ಮಾತುಗಳಿಂದ ಸಂಬಂಧ ಸುಧಾರಿಸುವುದು. ಸ್ನೇಹಿತರಲ್ಲಿಯ ಮನಸ್ತಾಪ ದೂರಾಗುವುದು. ಶಕ್ಯತಾ ಮೀರಿ ದುಡಿಯುವ ಕಾರ್ಯಭಾರವಿರುವುದು. ಉದ್ಯೋಗದ ಹೊರತಾಗಿ ಬೇರೆ ಕೆಲಸಕ್ಕೂ ಗಮನಹರಿಸಿ. ಶುಭ ಸಂಖ್ಯೆ: 9
ಮಿಥುನ: ಆರೋಗ್ಯಕ್ಕೆ ಸಂಬಂಧಿಸಿದ ವಿಪತ್ತಿನಿಂದ ಪಾರಾಗುವಿರಿ. ಕಷ್ಟದ ಸಮಯದಲ್ಲಿಯೂ ಸಂಯಮ ಕಳೆದುಕೊಳ್ಳದೇ ಮುಂದುವರೆಯುವಿರಿ. ಉದ್ಯೋಗದಲ್ಲಿ ವರ್ಗಾವಣೆಯ ಯೋಗವಿದೆ. ಆರ್ಥಿಕಬಲ ಕುಗ್ಗುವ ಸಂಭವವಿದೆ. ಶುಭ ಸಂಖ್ಯೆ: 4
ಕಟಕ: ವ್ಯವಹಾರಿಕ ಅಭಿವೃದ್ಧಿ ಇರುವುದು. ನಿಂತ ಕೆಲಸಗಳು ಮುಂದುವರೆಯುವವು. ಕಠಿಣ ಪರಿಶ್ರಮದಿಂದ ಕೆಲಸ ಕೈಗೂಡುವುದು. ಹಾನಿಯ ಪ್ರಮಾಣ ಕಡಿಮೆಯಾಗುವುದು. ಶುಭ ಸಂಖ್ಯೆ: 6
ಸಿಂಹ: ಪ್ರೀತಿವಿಶ್ವಾಸದ ಬಲದಿಂದ ಅಧಿಕಾರಿಗಳ ಗಮನ ಸೆಳೆಯುವಿರಿ. ಅತಿಯಾದ ಮೃದು ಧೋರಣೆ ದುರುಪಯೋಗವಾಗದಂತೆ ನೋಡಿಕೊಳ್ಳಿರಿ. ಮಂಗಲಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಇರುವುದು. ಶುಭ ಸಂಖ್ಯೆ: 2
ಕನ್ಯಾ: ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸಿ. ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವಿರಿ. ಸಾಮಾಜಿಕ ಗೌರವಗಳು ಅರಸಿಕೊಂಡು ಬರಲಿವೆ. ಮಾಲೀಕತ್ವದ ಆಸ್ತಿ ಕೈತಪ್ಪದಂತೆ ಎಚ್ಚರಿಕೆ ವಹಿಸಿರಿ. ಧನದ ಅಪವ್ಯಯ ಆಗದಂತೆ ನೋಡಿರಿ. ಶುಭ ಸಂಖ್ಯೆ: 5
ತುಲ: ಯೋಜನಾಬದ್ಧ ಕೆಲಸಗಳೂ ಕೂಡ ಮುಂದೂಡುವ ಪ್ರಸಂಗವಿದೆ. ಆಪ್ತವಲಯದಲ್ಲಿ ಸಮಾಲೋಚಿಸಿರಿ. ಅನಿವಾರ್ಯ ಕರ್ತವ್ಯಗಳಿಗೆ ಸಮಯ ಹೊಂದಾಣಿಕೆ ಮಾಡುವ ಸಾಧ್ಯತೆ ಇದೆ. ಆರ್ಥಕ ಸಂಕಷ್ಟಗಳು ಎದುರಾಗುವವು. ಶುಭ ಸಂಖ್ಯೆ: 8
ವೃಶ್ಚಿಕ: ಆತ್ಮೀಯರೇ ವಿರೋಧಿಗಳಂತೆ ವರ್ತಿಸುವರು. ಮಾಡದ ತಪ್ಪಿಗೆ ಕ್ಷಮೆಕೇಳುವ ಪ್ರಸಂಗ ಇರುವದರಿಂದ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಮನಸ್ಸಿನಲ್ಲಿ ಸಂಕಲ್ಪಿಸಿದ ಕಾರ್ಯವು ನಿಧಾನವಾಗಿ ನೆರವೇರಿ ಲಾಭದಾಯಕವಾಗುವುದು. ಶುಭ ಸಂಖ್ಯೆ: 3
ಧನು: ಹಲವು ರೀತಿಯಿಂದ ಧನಾಗಮನವಿದ್ದು ಐಶ್ವರ್ಯವೃದ್ಧಿ, ಸಂಸಾರ ಸುಖ. ಅಪೇಕ್ಷಿತ ವಸ್ತು, ಪ್ರಾಪ್ತಿ, ಮಿತ್ರಾಗಮನ, ವಿಶೇಷ ಸಂತೋಷ ಪ್ರಸಂಗಗಳು ಒದಗಿ ಬಂದು ಸಂಭ್ರಮವೆನಿಸುತ್ತದೆ. ಶುಭ ಸಂಖ್ಯೆ: 7
ಮಕರ: ವ್ಯವಹಾರಿಕ ಏಳ್ಗೆ ಇರುವುದು. ದೂರ ಪ್ರಯಾಣದ ಸಂಭವ. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ. ವಿವಿಧ ಸೌಭಾಗ್ಯಪ್ರಾಪ್ತಿ. ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ವಾಹನ, ಮಶಿನರಿಗಳಿಂದ ತೊಂದರೆ. ಶುಭ ಸಂಖ್ಯೆ: 4
ಕುಂಭ: ನಿಧಾನವಾಗಿ ಕಾರ್ಯಸಿದ್ಧಿಯಾಗುವುದು. ಮಕ್ಕಳಲ್ಲಿ ಹೊಸಹುರುಪು ಕಂಡು ಬರುವುದು. ವ್ಯಾಪಾರಿಗಳಿಗೆ ಮಧ್ಯಮಫಲ. ಸೀಮಿತ ಆದಾಯ, ಸೀಮಿತ ಕಾರ್ಯಗಳಿಂದ ಬೇಸರ ಇರುವದು. ಮಂದಗತಿಯ ಕೆಲಸಗಳು ನಿರಾಸೆ ಮೂಡಿಸುವ ಸಾಧ್ಯತೆ ಇದೆ. ಶಾಂತಚಿತ್ತರಾಗಿ ವ್ಯವಹರಿಸಿರಿ. ಶುಭ ಸಂಖ್ಯೆ: 9
ಮೀನ: ಆರೋಗ್ಯಪೂರ್ಣತೆ, ಪ್ರಸನ್ನತೆ ಇರುವುದು. ಎಲ್ಲ ಕಾರ್ಯಗಳೂ ತಮ್ಮ ಮನಸ್ಸಿನಂತೆ ನಡೆಯುವವು. ಧನಲಾಭ, ಧಾರ್ಮಿಕ ಕಾರ್ಯ, ದೇವತಾ ಕ್ಷೇತ್ರ ದರ್ಶನ ಯೋಗವಿರುವದು. ವ್ಯಾಪಾರ ಸಾಧಾರಣ. ಶುಭ ಸಂಖ್ಯೆ: 1
Published On - 6:32 am, Fri, 30 April 21