ನಿಮ್ಮ ಪ್ರೇಯಸಿಯ ರಾಶಿ ಭವಿಷ್ಯದ ಆಧಾರದಲ್ಲಿ ನಿಮ್ಮ ಪ್ರೀತಿಯ ಬಗ್ಗೆ ತಿಳಿದುಕೊಳ್ಳಿ, ಯಾವ ರಾಶಿಯವರ ನಡವಳಿಕೆ ಹೇಗಿರುತ್ತದೆ?

ಮೊದಲು ನಿಮ್ಮ ಪ್ರೇಯಸಿಯು ನಿಮ್ಮ ಬಗೆಗೆ ಆಸಕ್ತಿ ಕಳೆದುಕೊಳ್ಳಲು ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಳ್ಳಿ. ರಾಶಿ ಭವಿಷ್ಯದ ಆಧಾರದ ಮೇಲೆ ಪ್ರೇಯಸಿಯು ನಿಮ್ಮ ಬಗ್ಗೆ ಆಸಕ್ತಿ ಕಳೆದುಕೊಂಡಿರುವ ಕಾರಣ ಇಲ್ಲಿದೆ.

ನಿಮ್ಮ ಪ್ರೇಯಸಿಯ ರಾಶಿ ಭವಿಷ್ಯದ ಆಧಾರದಲ್ಲಿ ನಿಮ್ಮ ಪ್ರೀತಿಯ ಬಗ್ಗೆ ತಿಳಿದುಕೊಳ್ಳಿ, ಯಾವ ರಾಶಿಯವರ ನಡವಳಿಕೆ ಹೇಗಿರುತ್ತದೆ?
ಸಾಂದರ್ಭಿಕ ಚಿತ್ರ
Follow us
shruti hegde
| Updated By: ಆಯೇಷಾ ಬಾನು

Updated on: Apr 29, 2021 | 8:10 AM

ಯಾವುದೇ ಸ್ನೇಹ ಅಥವಾ ಪ್ರೀತಿಯಲ್ಲಿ ಉತ್ಸಾಹ ಮತ್ತು ನಂಬಿಕೆ ಇಲ್ಲದಿದ್ದರೆ ಸಂಬಂಧ ಕುಸಿದು ಬೀಳುತ್ತದೆ. ನಿಮ್ಮ ಮತ್ತು ನಿಮ್ಮ ಪ್ರೇಯಸಿಯ ನಡುವಿನ ಬಾಂಧವ್ಯವನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಕೂಡಾ ಒಬ್ಬರಿಗೊಬ್ಬರು ಸ್ನೇಹ ಮತ್ತು ಪ್ರೀತಿಯ ಆಸಕ್ತಿ ಕಳೆದುಕೊಂಡಾಗ ಸಂಬಂಧ ಕಳೆದು ಹೋಗುತ್ತದೆ. ಅಂತಹ ಸಂಬಂಧವನ್ನು ಉಳಿಸಿಕೊಳ್ಳಲು ಬಲು ಕಷ್ಟ. ಆದ್ದರಿಂದ ಮೊದಲು ನಿಮ್ಮ ಪ್ರೇಯಸಿಯು ನಿಮ್ಮ ಬಗೆಗೆ ಆಸಕ್ತಿ ಕಳೆದುಕೊಳ್ಳಲು ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಳ್ಳಿ. ರಾಶಿ ಭವಿಷ್ಯದ ಆಧಾರದ ಮೇಲೆ ಪ್ರೇಯಸಿಯು ನಿಮ್ಮ ಬಗ್ಗೆ ಆಸಕ್ತಿ ಕಳೆದುಕೊಂಡಿರುವ ಕಾರಣ ಇಲ್ಲಿದೆ.

ಮೇಷ ಮೇಷ ರಾಶಿಯವರು ಬೇಸರಗೊಂಡರೆ ವ್ಯಕ್ತಿಯನ್ನು ಬಿಡಲೂ ಹಿಂಜರಿಯುವುದಿಲ್ಲ. ಸಂಬಂಧ ಮುರಿಯಲು ಮೇಷ ರಾಶಿರವರಿಗೆ ಇದೇ ಮುಖ್ಯ ಕಾರಣ. ನೀರಸ ಮತ್ತು ಜೀವನದ ಬಗ್ಗೆ ಬಹಳ ಸಂಕುಚಿತ ಮನೋಭಾವ ಹೊಂದಿರುವವರೊಂದಿಗೆ ಇರಲು ಇಷ್ಟ ಪಡುವುದಿಲ್ಲ. ಆದ್ದರಿಂದ ಅವರು ಅಂತಹ ವ್ಯಕ್ತಿಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ.

ವೃಷಭ ರಾಶಿ ವೃಷಭ ರಾಶಿಯವರು ಬಹುಬೇಗ ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಕೊಂಚ ನಿಧಾನ. ನಿಮ್ಮ ಪ್ರೀತಿಯ ಮೆಚ್ಚುಗೆಯನ್ನು ಪಡೆಯಲು ಒಂದೆರಡು ತಿಂಗಳುಗಳ ಕಾಲ ಕಾಯಬೇಕು. ಹೇಗಾದರೂ ಅತಿ ವೇಗವಾಗಿ ಅವರೊಂದಿಗೆ ವಿಷಯವನ್ನು ಪದೇ ಪದೇ ಹೇಳುತ್ತಿದ್ದರೆ, ಅಥವಾ ಹೆಚ್ಚುವರಿ ಸಮಯವನ್ನು ಕಳೆಯುವಂತೆ ಒತ್ತಾಯಿಸಿದರೆ ಅವರು ನಿಮ್ಮನ್ನು ಸಂಪೂರ್ಣವಾಗಿ ದ್ವೇಷಿಸಲು ಪ್ರಾರಂಭಿಸುತ್ತಾರೆ. ಮತ್ತು ಅತಿ ಬೇಗ ನಿಮ್ಮ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.

ಮಿಥುನ ಈ ರಾಶಿಯವರು ಯಾವಾಗಲೂ ವಿನೋದಾತ್ಮಕವಾಗಿ ಇರಲು ಇಷ್ಟಪಡುತ್ತಾರೆ. ನೀವು ಅವರೊಂದಿಗೆ ಪ್ರೀತಿಯಲ್ಲಿ ಮುಂದುವರೆಯಲು ವಿಫಲವಾದರೆ ಕ್ಷಣಾರ್ಧದಲ್ಲಿ ಅವರು ನಿಮ್ಮನ್ನು ಕಳೆದುಕೊಳ್ಳುತ್ತಾರೆ. ಮತ್ತು ಹೊಸಬರಿಗಾಗಿ ಹುಡುಕಾಟ ಪ್ರಾರಂಭಿಸುತ್ತಾರೆ.

ಕರ್ಕ ಕರ್ಕ ರಾಶಿರವರು ಹೆಚ್ಚು ಹೃದಯವಂತರು. ಈ ರಾಶಿಯವರ ಜೊತೆ ಹೊರಹೋಗಲು ಇಚ್ಛಿಸಿದರೆ ಅದು ವ್ಯರ್ಥ. ಬೇರೆ ವ್ಯಕ್ತಿಗಳನ್ನು ಬಹುಬೇಗ ನಂಬುವುದಿಲ್ಲ. ಸುಳ್ಳು ಹೇಳುವವರನ್ನು ಕಂಡರೆ ಈ ರಾಶಿಯವರು ಹಿಂದೆ ಸರಿಯುತ್ತಾರೆ.

ಸಿಂಹ ಸಿಂಹ ರಾಶಿಯವರಿಗೆ ಹೂವುಗಳೆಂದರೆ ಇಷ್ಟ. ಈ ರಾಶಿಯವರಿಗೆ ಡೇಟಿಂಗ್​ಗಳನ್ನು ಇಷ್ಟಪಡುತ್ತಾರೆ. ಈ ರಾಶಿಯವರಿಂದ ನೀವು ದೂರ ಹೋದರೆ ನಿಮ್ಮ ಕುರಿತಾಗಿ ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ವಿವಿಧ ಉಡುಗೊರೆ, ಹೂವುಗಳನ್ನು ನೀಡಿದರೆ ಈ ರಾಶಿಯವರು ಪ್ರೀತಿಯಲ್ಲಿ ಬೀಳುತ್ತಾರೆ.

ಕನ್ಯಾರಾಶಿ ಕನ್ಯಾ ರಾಶಿಯವರು ಡೇಟಿಂಗ್​ಗಳ ಬಗ್ಗೆ ಬಹಳ ಗಂಭೀರವಾಗಿರುತ್ತಾರೆ. ಬೇರೆಯವರೊಂದಿಗೆ ಸಂಬಂಧ ಬೆಳೆಸುವ ಕುರಿತಾಗಿ ಹೆಚ್ಚು ಯೋಚಿಸುತ್ತಾರೆ ಮತ್ತು ಜಾಗರೂಕರಾಗಿರುತ್ತಾರೆ. ಪ್ರೀತಿಯಲ್ಲಿ ನಿಮಗೆ ಏನಾದರೂ ದೋಷ ಕಂಡಲ್ಲಿ, ಅಥವಾ ಆಸಕ್ತಿರಹಿತವಾದ ವರ್ತನೆ ಕಂಡಲ್ಲಿ ನಿಮ್ಮ ಪಾಡಿಗೆ ನಿಮ್ಮನ್ನು ಬಿಟ್ಟುಬಿಡುತ್ತಾರೆ.

ತುಲಾ ತುಲಾ ರಾಶಿಯವರು ನಿಮ್ಮ ಸಂಪರ್ಕಿಸಬೇಕು ಎಂದು ಇಚ್ಛಿಸಿದಾಗ ನೀವು ಸಿದ್ಧರಾಗಿರಬೇಕು. ಬೇರೆ ಕರೆಯಲ್ಲಿ ನಿರತರಾಗಿದ್ದರೆ ಅಥವಾ ಹರಟೆ ಹೊಡೆಯುತ್ತಿದ್ದರೆ, ಅವರು ನಿಮ್ಮ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಆ ನಂತರ ನೀವೆಷ್ಟೇ ಅವರನ್ನು ನಂಬಿಸಲು ಪ್ರಯತ್ನಿಸಿದರೂ ನಿಮ್ಮನ್ನು ಸ್ವಾರ್ಥಿ ಎಂದು ಪರಿಗಣಿಸುತ್ತಾರೆ.

ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರೊಡನೆ ನೀವು ಯಾವಾಗಲೂ ತಾಳ್ಮೆಯಿಂದ ವರ್ತಿಸಬೇಕು. ಡೇಟಿಂಗ್​ ಸಂದರ್ಭದಲ್ಲಿ ಅವರು ಹೆಚ್ಚಾಗಿ ನಿಮ್ಮಿಂದ ಕಾಳಜಿ, ಪ್ರೀತಿ, ಸಮಯ ಮತ್ತು ಸದ್ಧತೆಯನ್ನು ನಿರೀಕ್ಷಿಸುತ್ತಾರೆ. ಇದಕ್ಕೇ ಮೀರಿ ನಡೆದರೆ ನಿಮ್ಮ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ.

ಧನು ರಾಶಿ ಧನು ರಾಶಿಯವರ ನಿರ್ಧಾರಗಳನ್ನು ಎಂದಿಗೂ ತಡೆಯಬೇಡಿ. ಅವರ ನಿರ್ಧಾರಗಳನ್ನು ತಪ್ಪು ಎಂದರೆ ಅವರಿಗೆ ಕೋಪ ಹೆಚ್ಚು. ಧನು ರಾಶಿಯವರು ಹೆಚ್ಚು ಹಠಮಾರಿಗಳಾಗಿರುವುದರಿಂದ ನಿರ್ಧಾರಗಳನ್ನು ಖಂಡಿಸಿದರೆ ಅವರು ನಿಮ್ಮಲ್ಲಿ ಹೆಚ್ಚು ಬೆರೆಯಲು ಇಷ್ಟಪಡುವುದಿಲ್ಲ.

ಮಕರ ಮಕರ ರಾಶಿಯವರು ತಮ್ಮ ಜೀವನದಲ್ಲಿ ಹೆಚ್ಚು ಬದ್ಧರಾಗಿರುತ್ತಾರೆ. ವೃತ್ತಿಪರ ಜೀವನಕ್ಕೆ ಹೆಚ್ಚು ಬದ್ಧರಾಗಿರುತ್ತಾರೆ. ಮಕರ ರಾಶಿಯವರಲ್ಲಿ ಹೆಚ್ಚು ಸಮಸ್ಯೆ ಕಂಡುಬರುವುದಿಲ್ಲ.

ಕುಂಭ ರಾಶಿ ಕುಂಭ ರಾಶಿಯವರ ಬೇಡಿಕೆಗಳು ಹೆಚ್ಚು. ಕೇಳಿದ್ದು ಆಗಲೇ ಬೇಕು. ಉಡುಗೊರೆಯನ್ನು ನಾಳೆ ಕೊಡಿಸುತ್ತೇನೆ ಎಂದರೆ ಇವರನ್ನು ಓಲೈಸುವುದು ಬಹಳ ಕಷ್ಟ. ಅಂತಹ ವ್ಯಕ್ತಿಯನ್ನು ಹೆಚ್ಚು ದ್ವೇಷಿಸಲು ಪ್ರಾರಂಭಿಸುತ್ತಾರೆ. ಮತ್ತು ಅಂತಹ ನಡುವಳಿಕೆಯವರ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.

ಮೀನ ರಾಶಿ ಮೀನ ರಾಶಿವರಗೆ ಪ್ರೀತಿಯ ಬಗೆಗೆ ನಂಬಿಕೆ ಹುಟ್ಟಿಸುವುದು ಕಷ್ಟ. ಅಷ್ಟು ಬೇಗ ಯಾರ ಮಾತನ್ನೋ ನಂಬಿ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಪ್ರೀತಿಯ ಕುರಿತಾಗಿ ಭರವಸೆ ನೀಡುವಲ್ಲಿ ಹೆಚ್ಚು ಪ್ರಯತ್ನಗಳು ಬೇಕಾಗುತ್ತದೆ.

ಇದನ್ನೂ ಓದಿ: Relations Breakup Astrology: ಯಾವ ರಾಶಿಯವರು ಯಾವಾಗ ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ ಗೊತ್ತಾ?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ