Horoscope Today- ದಿನ ಭವಿಷ್ಯ; ಈ ರಾಶಿಯವರು ತಾಳ್ಮೆಯಿಂದ ಇರುವುದು ಶುಭ

| Updated By: ಆಯೇಷಾ ಬಾನು

Updated on: Jul 26, 2021 | 6:28 AM

Horoscope ಜುಲೈ 26, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today- ದಿನ ಭವಿಷ್ಯ; ಈ ರಾಶಿಯವರು ತಾಳ್ಮೆಯಿಂದ ಇರುವುದು ಶುಭ
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣಪಕ್ಷ, ತದಿಗೆ ತಿಥಿ, ಸೋಮವಾರ, ಜುಲೈ 26, 2021. ಧನಿಷ್ಥೆ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 7.30 ರಿಂದ ಇಂದು ಬೆಳಿಗ್ಗೆ 9.07 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.53. ಸೂರ್ಯಾಸ್ತ: ಸಂಜೆ 6.51

ತಾ.26-07-2021 ರ ಸೋಮವಾರದ ರಾಶಿಭವಿಷ್ಯ

ಮೇಷ: ತಾಳ್ಮೆಯಿಂದ ಇರುವುದು ಶುಭ. ಕೌಟುಂಬಿಕ ಕಲಹ ಹೆಚ್ಚಾಗುವ ಸಾಧ್ಯತೆ ಇದೆ ಸಮಾಧಾನ ಚಿತ್ತದಿಂದ ವರ್ತಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು. ಹಾನಿ ಇಲ್ಲ ಆದರೆ ಲಾಭವೂ ಇಲ್ಲದ ಸ್ಥಿತಿ ಇರುವುದು. ಶುಭ ಸಂಖ್ಯೆ: 6

ವೃಷಭ: ಯೋಜನೆಗಳಿಗೆ ಪೂರ್ವ ತಯಾರಿ ಮಾಡುವ ಅಗತ್ಯತೆ ಕಂಡುಬರುವುದು. ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವುದು ಒಳಿತು. ಶುಭ ಸಂಖ್ಯೆ: 4

ಮಿಥುನ: ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರುವುದು. ವೈವಾಹಿಕ ಚಿಂತೆ ಇರುವುದು. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವ ಯೋಗವಿದೆ. ಹಿರಿಯರ ಸಲಹೆಗೆ ತಕ್ಕಂತೆ ಮುಂದುವರೆಯಿರಿ. ಶುಭ ಸಂಖ್ಯೆ: 8

ಕಟಕ: ಹೊಟ್ಟೆಕಿಚ್ಚು ಮಾಡುವವರಿಗೆ ತಕ್ಕ ಶಾಸ್ತಿಯಾಗಲಿದೆ. ಶತ್ರುಗಳು ತಾವಾಗಿಯೇ ದೂರಸರಿಯುವರು. ಜನರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುವುದು. ಯುಕ್ತಿಯಿಂದ ಕಾರ್ಯಸಾಧಿಸುವಿರಿ. ಶುಭ ಸಂಖ್ಯೆ: 5

ಸಿಂಹ: ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಆತ್ಮೀಯರೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅರ್ಧಕ್ಕೆನಿಂತ ಕೆಲಸಗಳು ಮುಂದುವರೆಯುವುದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಶುಭ ಸಂಖ್ಯೆ: 9

ಕನ್ಯಾ: ಕ್ಷಮಾಗುಣ ಇರಲಿ, ಪರಸ್ಪರ ದೋಷಾರೋಪ ಮಾಡುವದರಿಂದ ಕಾರ್ಯಹಾನಿಯ ಸಂಭವವಿದೆ. ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ದೊಡ್ಡಮೊತ್ತದ ಹಣಹೂಡಿಕೆ ಈಗ ಬೇಡ. ಶುಭ ಸಂಖ್ಯೆ: 8

ತುಲಾ: ಹೊಸ ಕೆಲಸವನ್ನು ಒಪ್ಪಿಕೊಳ್ಳುವ ಮೊದಲು ವಿಚಾರಮಾಡಿ ಮುಂದುವರೆಯಿರಿ. ಉದ್ಯೋಗದ ಸ್ಥಾನ ಬದಲಾವಣೆಯ ಯೋಗವಿದೆ. ಆಮಿಷಕ್ಕೆ ಒಳಗಾಗಿ ಮೋಸಹೋಗುವ ಸಂಭವವಿದೆ. ಎಚ್ಚರಿಕೆ ವಹಿಸಿರಿ. ಶುಭ ಸಂಖ್ಯೆ: 7

ವೃಶ್ಚಿಕ; ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ಮಂದಗತಿ ಇರುವುದು. ವ್ಯಾಪಾರದಲ್ಲಿ ಜಾಗರೂಕತೆ ಅವಶ್ಯ. ಹಾನಿ ತಡೆಗಟ್ಟುವ ಪ್ರಯತ್ನಕ್ಕೆ ಫಲ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಶುಭಫಲವಿದೆ. ಶುಭ ಸಂಖ್ಯೆ: 3

ಧನು: ಸಹನೆ ಇಲ್ಲದ ಆತುರದ ನಡೆಯಿಂದ ಹಾನಿ ಸಂಭವ ಎಚ್ಚರಿಕೆ ವಹಿಸಿರಿ. ಅನೀರೀಕ್ಷಿತವಾಗಿ ಬರುವ ವಿಘ್ನಗಳು ತಾವಾಗಿಯೇ ಪರಿಹಾರ ಕಾಣುವವು. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ಶುಭ ಸಂಖ್ಯೆ: 8

ಮಕರ: ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕಂತೆ ಕೆಲಸಗಳು ಕೈಗೂಡುವವು. ಮಾತು ಕೇಳದ ಜನರಿಂದ ದೂರವಿರಿ. ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವದು. ಆಸ್ತಿ ಖರೀದಿ ಯೋಗವಿದೆ ಪ್ರಯತ್ನಿಸಿ. ಶುಭ ಸಂಖ್ಯೆ: 6

ಕುಂಭ: ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ಮೊದಲು ಕಷ್ಟ ನಂತರದಲ್ಲಿ ಉತ್ತಮವಾದ ಫಲ ದೊರೆಯುವದು. ಗುರುಬಲ ವೃದ್ಧಿಸುವದು. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವದು. ಶುಭ ಸಂಖ್ಯೆ: 1

ಮೀನ: ಬಹುಜನರ ಪ್ರಶಂಸೆಗೆ ಪಾತ್ರವಾಗುವ ಆಡಳಿತಾತ್ಮಕ ನಿರ್ಧಾರ. ಇದ್ದಕ್ಕಿದಂತೆ ಶುಭಕರ ಒಲವು. ಸಲ್ಲುವ ವಿಚಾರದಲ್ಲಿ ಕುಟುಂಬದ ಒಗ್ಗಟ್ಟು ವೃದ್ಧಿ. ಆರ್ಥಿಕಾನೂಕೂಲದಿಂದ ಸರಳ ವ್ಯವಹಾರ. ಹೆಂಗಳೆಯರದು ಮೌನವಾದ ಕೆಲಸ. ಆದರೆ ಪರಿಣಾಮ ಜಾಸ್ತಿ . ಶುಭ ಸಂಖ್ಯೆ: 3

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937