ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲಪಕ್ಷ, ತದಿಗೆ ತಿಥಿ, ಶನಿವಾರ, ಮೇ 15, 2021. ಮೃಗಶಿರ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 8:58ರಿಂದ ಇಂದು ಬೆಳಿಗ್ಗೆ 10:35 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.44. ಸೂರ್ಯಾಸ್ತ: ಸಂಜೆ 6.40.
ಮೇಷ: ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೆಲಸದಲ್ಲಿ ಸ್ಪಷ್ಟತೆ ಇರಲಿ. ಅಲ್ಪಧನಲಾಭವಾದರೂ ಹಳೆಯ ಸಾಲ ತೀರುವುದು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 5
ವೃಷಭ: ವ್ಯಾಪಾರದಲ್ಲಿ ಪ್ರಗತಿ ಇರುವದು. ವೈವಾಹಿಕ ತೊಂದರೆಗಳು ಪರಿಹಾರವಾಗುವವು. ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಶುಭ ಸಂಖ್ಯೆ: 2
ಮಿಥುನ: ವ್ಯಾಪಾರದಲ್ಲಿ ಅದೃಷ್ಟ ಲಾಭವಿದೆ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರುವುದು. ಮನೆಯ ಜವಾಬ್ದಾರಿಗಳು ಹೆಚ್ಚುವವು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಶುಭ ಸಂಖ್ಯೆ: 9
ಕಟಕ: ಮಹಿಳೆಯರ ಇಷ್ಟಾರ್ಥ ಸಿದ್ಧಿಸುವದು.ಕೂಡಿಟ್ಟ ಹಣ ಉಪಯೋಗವಾಗುವ ಸಂಭವವಿದೆ.ಸರಕಾರಿ ಕೆಲಸಗಳು ನಿರ್ವಿಘ್ನವಾಗಿ ಆಗುವವು.ನ್ಯಾಯಾಲಯದಲ್ಲಿ ಜಯ ದೊರೆಯುವುದು. ವಿದ್ಯೆಯಲ್ಲಿ ಸಾಧನೆ ಇರುವುದು. ಶುಭ ಸಂಖ್ಯೆ: 7
ಸಿಂಹ: ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಆತ್ಮೀಯರೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅರ್ಧಕ್ಕೆನಿಂತ ಕೆಲಸಗಳು ಮುಂದುವರೆಯುವದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಶುಭ ಸಂಖ್ಯೆ: 4
ಕನ್ಯಾ: ಅಂತಃಶತ್ರುಗಳ ಕಾಟ ಹೆಚ್ಚಾಗುವ ಲಕ್ಷಣವಿದೆ. ಹಳೆಯ ಸಮಸ್ಯೆಗಳು ಮತ್ತೆ ಎದುರಾಗುವ ಸಂಭವವಿದೆ.ಚಂಚಲತೆ ಬೇಡ, ಹಿಡಿದ ಕಾರ್ಯವನ್ನು ಪೂರ್ಣಗೊಳಿಸಿ.ಆರ್ಥಿಕ ಲಾಭವಿದೆ ಆದರೆ ವಿದ್ಯೆಯಲ್ಲಿ ಹಿನ್ನೆಡೆ ಕಂಡುಬರುವುದು. ಶುಭ ಸಂಖ್ಯೆ: 8
ತುಲಾ: ಎಲ್ಲವನ್ನು ಹಗುರವಾಗಿ ಕಾಣುವದರಿಂದ ಸಣ್ಣ ವಿಷಯವೂ ದೊಡ್ಡ ಸಮಸ್ಯೆಯಾಗುವುದು. ಹಣಕಾಸಿನ ತೊಂದರೆಗಳು ಕಂಡುಬರುವವು. ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಎಚ್ಚರಿಕೆ ವಹಿಸಿರಿ. ಶುಭ ಸಂಖ್ಯೆ: 1
ವೃಶ್ಚಿಕ: ಸಂಗಡಿಗರು ಸಹಕಾರ ತೋರುವುದರಿಂದ ನಿರಾತಂಕ ಜೀವನ ಇರುವುದು. ಆಶೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವುದು. ಉನ್ನತ ಶಿಕ್ಷಣದ ಕನಸು ಈಡೇರುವುದು. ಶುಭ ಸಂಖ್ಯೆ: 6
ಧನು:ಯೋಜನಾಬದ್ಧ ಕೆಲಸಗಳೂ ಕೂಡ ಮುಂದೂಡುವ ಪ್ರಸಂಗವಿದೆ. ಆಪ್ತವಲಯದಲ್ಲಿ ಸಮಾಲೋಚಿಸಿರಿ. ಅನಿವಾರ್ಯ ಕರ್ತವ್ಯಗಳಿಗೆ ಸಮಯ ಹೊಂದಾಣಿಕೆ ಮಾಡುವ ಸಾಧ್ಯತೆ ಇದೆ. ಆರ್ಥಕ ಸಂಕಷ್ಟಗಳು ಎದುರಾಗುವವು. ಶುಭ ಸಂಖ್ಯೆ: 6
ಮಕರ: ಆಸೆ ಆಕಾಂಕ್ಷೆಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವುದು. ಸಹೋದರ ಸಹಕಾರ ತೋರುವದರಿಂದ ನಿರಾತಂಕವಾಗಿ ಕಾರ್ಯ ಪೂರ್ಣವಾಗುವುದು. ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಶುಭ ಸಂಖ್ಯೆ: 7
ಕುಂಭ: ಆರೋಗ್ಯಪೂರ್ಣತೆ, ಪ್ರಸನ್ನತೆ ಇರುವುದು. ಎಲ್ಲ ಕಾರ್ಯಗಳೂ ತಮ್ಮ ಮನಸ್ಸಿನಂತೆ ನಡೆಯುವವು. ಧನಲಾಭ, ಧಾರ್ಮಿಕ ಕಾರ್ಯ, ದೇವತಾ ಕ್ಷೇತ್ರ ದರ್ಶನ ಯೋಗವಿರುವುದು. ವ್ಯಾಪಾರ ಸಾಧಾರಣ. ಶುಭ ಸಂಖ್ಯೆ: 9
ಮೀನ: ದಿಟ್ಟತನ, ಮನೋಸ್ಥೈರ್ಯ, ನೇರ,ನಿಷ್ಟುರ ನಡೆಗಳಿಗೆ ಉತ್ತಮ ಫಲಪಾಪ್ತವಾಗುವುದು. ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗುವವು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು. ಶುಭ ಸಂಖ್ಯೆ: 3
ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937