Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ

| Updated By: Vinay Bhat

Updated on: Sep 27, 2021 | 6:39 AM

Horoscope ಸೆಪ್ಟೆಂಬರ್ 27, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ವರ್ಷ ಋತು, ಕೃಷ್ಣಪಕ್ಷ, ಷಷ್ಠಿ ತಿಥಿ, ಸೋಮವಾರ, ಸೆಪ್ಟೆಂಬರ್ 27, 2021. ರೋಹಿಣಿ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 7.35 ರಿಂದ ಇಂದು ಬೆಳಿಗ್ಗೆ 9.05ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.05. ಸೂರ್ಯಾಸ್ತ: ಸಂಜೆ 6.08

ತಾ.27-09-2021 ರ ಸೋಮವಾರದ, ರಾಶಿಭವಿಷ್ಯ.

ಮೇಷ: ಕೌಟುಂಬಿಕ ಕಲಹ ಹೆಚ್ಚಾಗುವ ಸಾಧ್ಯತೆ ಇದೆ. ಸಮಾಧಾನ ಚಿತ್ತದಿಂದ ವರ್ತಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು. ಹಾನಿ ಇಲ್ಲ ಆದರೆ ಲಾಭವೂ ಇಲ್ಲದ ಸ್ಥಿತಿ ಇರುವುದು. ಶುಭ ಸಂಖ್ಯೆ: 3

ವೃಷಭ: ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಅಕಾಲಿಕ ಒತ್ತಡಗಳಿಂದ ಕಾರ್ಯಹಾನಿ. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವುದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಶುಭ ಸಂಖ್ಯೆ: 7

ಮಿಥುನ: ವಾಸಸ್ಥಾನ, ಉದ್ಯೋಗಸ್ಥಾನ ಬದಲಾವಣೆಯ ಯೋಗವಿದೆ. ಕೌಟುಂಬಿಕ ಸಮಸ್ಯೆಗಳು ದೂರಾಗುವವು. ವ್ಯವಹಾರಿಕ ಸೂಕ್ಷ್ಮತೆಯಿಂದ ಹಾನಿ ತಪ್ಪಿಸಿರಿ. ವೃಥಾಚಿಂತೆ ಇರುವದು. ಹೊಸ ವ್ಯವಹಾರಗಳು ಬೇಡ. ಶುಭ ಸಂಖ್ಯೆ: 4

ಕಟಕ: ಆಸ್ತಿ ಖರೀದಿ ಅಥವಾ ಮಾರಾಟದ ವ್ಯವಹಾರಗಳು ಕುದುರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಯೋಗ್ಯತಾ ಮೀರಿ ದುಡಿಯುವ ಕಾರ್ಯಭಾರವಿರುವುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಯೋಗವಿದೆ. ಶುಭ ಸಂಖ್ಯೆ: 5

ಸಿಂಹ: ಮನಸ್ಸು ಚಂಚಲವಾಗಿ ಮಾಡುವ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಕಷ್ಟಕಾಲದಲ್ಲಿಯೂ ಪರೋಪಕಾರದ ಬುದ್ಧಿ ತೋರುವಿರಿ. ಸಹಕಾರಿ ವಲಯದದಲ್ಲಿ ಅಪೇಕ್ಷಿತ ಲಾಭ ದೊರೆಯುವುದು. ವಿದೇಶ ಪ್ರಯಾಣದ ಯೋಗವಿದೆ. ಶುಭ ಸಂಖ್ಯೆ: 2

ಕನ್ಯಾ: ಧಾರ್ಮಿಕ ಕ್ಷೇತ್ರದಲ್ಲಿ ಗೌರವ ಸಮ್ಮಾನಗಳು ದೊರೆಯುವವು. ಅತಿಯಾದ ನಿರೀಕ್ಷೆಯಿಂದ ಅಸಮಾಧಾನ ಕಂಡುಬರುವುದು. ದೂರುವವರೇ ಹೊಗಳಿದರೂ ನೆಮ್ಮದಿ ಇರಲಾರದು. ಸ್ವಯಂ ಪ್ರತಿಷ್ಟೆಗೆ ಧನವ್ಯಯ ಆಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 8

ತುಲಾ: ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವುದು ಒಳಿತು. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವುದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಶುಭ ಸಂಖ್ಯೆ: 4

ವೃಶ್ಚಿಕ: ಹೊಸ ಯೋಜನೆಗೆ ಸಂಬಂಧಿಸಿದಂತೆ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಶುಭ ಸಂಖ್ಯೆ: 9

ಧನು: ಧನಾರ್ಜನೆಯ ಮಾರ್ಗವು ಶ್ರೇಷ್ಠ ಮಟ್ಟದಲ್ಲಿದ್ದು, ಐಶ್ವರ್ಯ ಸಮೃದ್ಧಿಯಾಗುತ್ತದೆ. ಸಂಸಾರಿಕ ದೃಷ್ಟಿಯಲ್ಲೂ ಸುಖ, ಸಂಭ್ರಮಗಳಿದ್ದು ತೃಪ್ತಿ ಲಭಿಸಿದರೂ ಶತ್ರುಜನರ ಪೀಡೆ ಅಧಿಕವಾಗುತ್ತದೆ. ಅನಿವಾರ್ಯ ಪ್ರವಾಸ ಸಾಧ್ಯತೆ ಇದೆ. ಶುಭ ಸಂಖ್ಯೆ: 5

ಮಕರ: ಅನಿರೀಕ್ಷಿತ ಧನ ನಷ್ಟ. ತಿರುಗಾಟ ಒದಗಿಬಂದು, ದೇಹಾಲಸ್ಯವು ತಲೆ ದೋರುವುದು, ಅರ್ಥಾರ್ಜನೆಯ ಮಾರ್ಗವು ಸುಗಮವಿದ್ದು, ಸಾಂಸಾರಿಕ ದೃಷ್ಟಿಯಲ್ಲೂ ಉತ್ತಮವಿರುವುದರಿಂದ ಚಿಂತೆಯ ಅವಶ್ಯಕತೆ ಇಲ್ಲ. ಶುಭ ಸಂಖ್ಯೆ: 6

ಕುಂಭ: ಯುವಕರಿಗೆ ನವಿರಾದ ಮಾತುಗಳಿಂದ ಸಂಗಾತಿಗಳನ್ನು ಗೆಲ್ಲುವ ಛಾತಿ. ಆಕರ್ಷಕ ನಿರ್ಧಾರಗಳಿಂದ ಮನ್ನಣೆ. ಯಜಮಾನನಿಗೆ ಬಲವಂತದಲ್ಲಿ ಜವಾಬ್ದಾರಿ ನಿರ್ವಹಣೆ. ವೈಯಕ್ತಿಕ ಬದುಕಿನತ್ತ ಗಮನಹರಿಸಲು ವ್ಯವಧಾನ. ಶುಭ ಸಂಖ್ಯೆ: 8

ಮೀನ: ಆಗುವುದೆಲ್ಲ ಒಳಿತೆಂಬ ಭಾವನೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರದ ನೆಲೆ ದೊರಕಿ ಹರ್ಷ. ಮಹಿಳೆಯರಿಗೆ ಮನೆಯಲ್ಲಿನ ಆಂತರಿಕ ವಿರಸ ನೀಗಿ ಸೌಹಾರ್ದತೆ. ನೂತನ ವಿವಾದ ಹುಟ್ಟುಹಾಕದ ಹಾಗೆ ತಾಳ್ಮೆಯಡಿ ವರ್ತನೆ. ಶುಭ ಸಂಖ್ಯೆ: 1

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937