Weekly Horoscope ವಾರ ಭವಿಷ್ಯ: ಮೇಷದಿಂದ ಮೀನ ವರೆಗಿನ ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

Weekly Horoscope ವಾರ ಭವಿಷ್ಯ: ಮೇಷದಿಂದ ಮೀನ ವರೆಗಿನ ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Sep 26, 2021 | 7:28 AM

ವಾರ ಭವಿಷ್ಯ: ತಾ.27-09-2021 ರಿಂದ 03-10-2021 ರ ತನಕ: ಮೇಷ: ಆಕಸ್ಮಿಕವಾದ ಅದೃಷ್ಟ ಕೂಡಿಬರಲಿದೆ. ಮೌನ ಹೆಚ್ಚಾಗಿ ಇದ್ದಷ್ಟು ಆರೋಗ್ಯಕ್ಕೆ ಒಳಿತು. ಹಲವರಿಂದ ಮನಸ್ಸು ಕೆಡಿಸುವ ಪ್ರಯತ್ನ. ಅಂಜದೇ ಮನಸ್ಸಿನ ಶಾಂತಯನ್ನು ಕಂಡುಕೊಳ್ಳಿರಿ. ಮನೆಯಲ್ಲಿ ಯಾವತ್ತೂ ಲವಲವಿಕೆ ಇರುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಾಗಲಿವೆ. ಅದೃಷ್ಟ ಸಂಖ್ಯೆ: 3

ವೃಷಭ: ಗುರುವಿನ ಅನುಗ್ರಹವಿದೆ. ಬೇರೆ ಬೇರೆ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಮನೆಯಲ್ಲಿ ಸಿಗುವ ಏಕಾಂತವನ್ನು ನಿಮ್ಮ ಹಿತಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳಿ. ಸೂಕ್ತ ವ್ಯಕ್ತಿಯೊಂದಿಗೆ ಸಂವಹನ ನಡೆಸಿ. ನೀವು ಧೈರ್ಯವಾಗಿರುವಂತೆ, ನಿಮ್ಮ ಮನೆಯವರನ್ನೂ ಗಟ್ಟಿಯಾಗಿ ಇರುವಂತೆ ನೋಡಿಕೊಳ್ಳುವುದು ಅಗತ್ಯ. ಅದೃಷ್ಟ ಸಂಖ್ಯೆ: 1

ಮಿಥುನ: ಬದಲಾವಣೆಯ ವಾರವಾಗಲಿದೆ. ಕೆಟ್ಟ ಚಟಗಳು ಕಡಿಮೆಯಾಗಲಿವೆ. ಅದನ್ನೇ ಮುಂದುವರೆಸಿ. ಇದರಿಂದ ನಿಮ್ಮ ಭವಿಷ್ಯಕ್ಕೆಎ ಅನುಕೂಲವಾದೀತು. ಇಂದು ಹೊಸ ರೀತಿಯ ಜೀವನ ಕ್ರಮವನ್ನು ರೂಢಿ ಮಾಡಿಕೊಳ್ಳಲಿದ್ದೀರಿ. ಸಮಯಕ್ಕೆ ಸರಿಯಾಗಿ ಯಾವ ಕೆಲಸವನ್ನು ಮಾಡಿ ಮುಗಿಸೇಕೂ ಅದನ್ನು ಮಾಡಿ ಮುಗಿಸಿ. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ. ಅದೃಷ್ಟ ಸಂಖ್ಯೆ: 5

ಕಟಕ: ಮಾತಿನಿಂದ ಜಾಗ್ರತೆಯಿರಲಿ. ಸಂಸಾರ ಎಂದಮೇಲೆ ಸಣ್ಣ ಪುಟ್ಟ ಗೊಂದಲಗಳು ಸಹಜ. ಅದನ್ನು ನಿಮ್ಮ ನಡುವಲ್ಲಿಯೇ ಬಬಗೆಹರಿಸಿಕೊಳ್ಳಿ. ನಾಲ್ಕು ಜನರ ಮುಂದೆ ತರುವುದು ಬೇಡ. ಮತ್ತೊಬಬ್ಬರಿಂದ ಪದೇ ಪದೇ ಹೇಳಿಸಿಕೊಳ್ಳುವುದು ಸರಿಯಲ್ಲ. ನಯವಂಚನೆಗೆ ಬಲಿಯಾಗುವುದರಿಂದ ತಪ್ಪಿಸಿಕೊಳ್ಳಿ. ನಿಮ್ಮ ವರ್ತನೆಯಲ್ಲೇ ಕೆಲ ಬದಲಾವಣೆ ಆಗಲಿದೆ. ಅದೃಷ್ಟ ಸಂಖ್ಯೆ: 2

ಸಿಂಹ: ಕೋಪ ತಾಪಗಳು ಜಾಸ್ತಿ. ಆದಾಯದ ಮೂಲಗಳಿಗೆ ಪೆಟ್ಟು ಬೀಳಲಿದೆ. ಅದರೆ ಅದು ಅದ್ಯಕ್ಕೆ ಮಾತ್ರ. ಯಾವುದೇ ಆತಂಕಕ್ಕೆ ಒಳಗಾಗದೆ ಜೀವನ ಸಾಗಿಸಿ. ಮನೆ ಮಂದಿಯೊಂದಿಗೆ ಸಂತೋಷದಿಂದ ಇದ್ದಷ್ಟು ಆರೋಗಗ್ಯದಲ್ಲಿ ಚೇತರಿಕೆ ಕಾಣಲಿದೆ. ತಾಜಾ ಹಹಾಗೂ ಶುದ್ಧವಾದ ಅಹಾರ ಕ್ರಮಕ್ಕೆ ಹೊಂದಿಕೊಳ್ಳಿ. ಅದೃಷ್ಟ ಸಂಖ್ಯೆ: 5

ಕನ್ಯಾ: ಎಲ್ಲರನ್ನೂ ಅಂತೈಸಿ ಜೀವನ ಮಾಡಲು ಸಾಧ್ಯವಿಲ್ಲ. ನೀವು ನಡೆಯುವ ದಾರಿ ಸರಿಯಾಗಿದೆ ಎಂದರೆ ಯಾರಿಗೂ ತಲೆ ಬಾಗುವುದು ಬೇಡ. ಕೆಲಸ ಹೊರೆ ಅಧಿಕವಾಗಲಿದೆ. ಮನಸ್ಸನ್ನು ಬೇರೆ ಬೇರೆ ಕಡೆ ಕಡೆಗೆ ಹರಿಸಿ. ಸಾಧ್ಯವಾದಷ್ಟು ಒಳ್ಳೆಯ ಸಂಗತಿ ಕಡೆ ನಿಮ್ಮ ಚಿತ್ತ ಇರಲಿ. ಅದೃಷ್ಟ ಸಂಖ್ಯೆ: 6

ತುಲಾ: ಇಂತಹ ಸಮಯದಲ್ಲಿ ಕೆಲವು ಸ್ನೇಹಿತರಿಗೆ ನಿಮ್ಮ ಸಹಾಯ ಅನಿವಾರ್ಯವಾಗಿ ಬೇಕಾಗಲಿದೆ. ಅದನ್ನು ನೀವಾಗೇ ತಿಳಿದುಕೊಂಡು ಅವರ ಸಹಾಯಕ್ಕೆ ಮುಂದಾಗಿ. ಒಲ್ಲದ ಮನಸ್ಸಿನಿಂದ ಏನೂ ಮಾಡುವುದು ಬೇಡ. ಮಕ್ಕಳ ಮೇಲೆ ಅನಾವಶ್ಯಕವಾಗಿ ಒತ್ತಡ ಹಾಕುವುದು ಬೇಡ. ಅದೃಷ್ಟ ಸಂಖ್ಯೆ: 4

ವೃಶ್ಚಿಕ: ಹಳೆಯ ಬೇನರೆಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಮನೆ ಮದ್ದು ಉಪಯೋಗಿಸಿ ನಿಮ್ಮ ಇಷ್ಟದ ದೇವರ ಆರಾಧನೆ ಮಾಡಿ. ಮನಸ್ಸಿಗೆ ಸಮಾಧಾನ ಸಿಕ್ಕೀತು. ಮನೆಯಲ್ಲಿಯೇ ಇದ್ದು ಸಮುದಾಯದ ಆರೋಗ್ಯಕ್ಕೆ ಸಹಕರಿಸಿ. ಅದೃಷ್ಟ ಸಂಖ್ಯೆ: 7

ಧನುಸ್ಸು: ನಿಮ್ಮ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಉಪಯೋಗಿಸಿ. ಅನಗತ್ಯವಾಗಿ ಶೇಖರಣೆ ಮಾಡಿಕೊಳ್ಳುವುದು ಬೇಡ. ಆಶಾವಾದಿಯಾಗಿರಿ. ಸಾಧ್ಯವಾದರೆ ಸಕಾರಾತ್ಮಕ ಅಂಶಗಳನ್ನು ಮತ್ತೊಬ್ಬರಿಗೆ ಹಂಚಿ. ಇಲ್ಲವೇ ಸುಮ್ಮನಿರಿ. ಅದೃಷ್ಟ ಸಂಖ್ಯೆ: 8

ಮಕರ: ಬೇಸರ ಕಳೆಯಲೆಂದು ಮಾಡಿದ ಕೆಲಸಕ್ಕೆ ಒಳ್ಳೆಯ ಪ್ರಶಂಸೆ ದೊರೆಯಲಿದೆ. ಇಂತಹ ವೇಳೆಯಲ್ಲಿ ನಿಮ್ಮಲ್ಲಿ ಇರುವ ಪ್ರತಿಭೆಗೆ ತಕ್ಕಂತೆ ಕೆಲಸ ನೀಡಿ. ನಿಮ್ಮ ಅಂತರಂಗವನ್ನು ಕಂಡುಕೊಳ್ಳಲು ಇದು ಸಕಾಲ. ಸಮಾನ ಮನಸ್ಕರೊಂದದಿಗೆ ಹೆಚ್ಚು ಬೆರೆಯಲಿದ್ದೀರರಿ. ಅದೃಷ್ಟ ಸಂಖ್ಯೆ: 2

ಕುಂಭ: ಎಲ್ಲವೂ ಖಾಲಿ ಖಾಲಿ ಎಂದು ಎನಿಸುವ ವೇಳೆಗೆ ಶುಭ ಸುದ್ದಿಯೊಂದು ತಿಳಿಯಲಿದೆ. ಇಂತಹ ವೇಳೆಯಲ್ಲಿ ಶಿಸ್ತಿಗಿಂತ ಮಾನವೀಯತೆ ಮುಖ್ಯ. ಒಬ್ಬರಿಗೆ ಮತ್ತೊಬ್ಬರು ಸಹಾಯ ಮಾಡಿಕೊಂಡು ಜೀವನ ನಡೆಸಬೇಕು. ಕೂಡು ಬಾಳ್ವೆಯಿಂದ ಆನಂದ. ತಾಳ್ಮೆ ತಾನಾಗೇ ಬದುಕಿನ ಅಂಗವಾಗಲಿದೆ. ಅದೃಷ್ಟ ಸಂಖ್ಯೆ: 6

ಮೀನ: ಶುಭ‌ ವಾರವಾಗಲಿದೆ. ಶುಭ ಸುದ್ದಿ ಸಿಗಲಿದೆ. ನಮಗೆ ನಿಜವಾಗಿ ಸಹಾಯದ ಅವಶ್ಯಕತೆ ಇದನ್ನು ನೇರವಾಗಿ ಕೇಳಿ. ಮುಜುಗರ ಆಡಿಕೊಳ್ಳುವುದು ಬೇಡ. ಸಹಾಯ ಮಾಡುವ ಕೈಗಳು ಸಮಾಜದಲ್ಲಿ ಅಧಿಕವಾಗಿ ಇವೆ. ಅನಾವಶ್ಯಕ ಗೊಂದಲ, ಗಾಳಿ ಮಾತುಗಳಿಗೆ ಕಿವಿ ತೆರೆದಿಡುವುದು ಬೇಡ. ಅದೃಷ್ಟ ಸಂಖ್ಯೆ: 3

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937

ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ