ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಫೆಬ್ರವರಿ 15 ಬುಧವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ :ಬುಧ, ತಿಥಿ : ದಶಮೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ವ್ಯಾಘಾತ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 58 ನಿಮಿಷ, ಸೂರ್ಯಾಸ್ತ ಸಂಜೆ 06 ಗಂಟೆ 35 ನಿಮಿಷಕ್ಕೆ. ರಾಹು ಕಾಲ 12:47 ರಿಂದ 14 :14, ಯಮಘಂಡ ಕಾಲ 08:25 ರಿಂದ 09 :52, ಗುಳಿಕ ಕಾಲ 11:20 ರಿಂದ 12:47.
ಮೇಷ: ನೀವಿಂದು ಕೆಲಸಕ್ಕೋಸ್ಕರ ಅಲೆದಾಡಬೇಕಾದೀತು. ಅಧ್ಯಾತ್ಮದಲ್ಲಿ ಆಸಕ್ತಿ ಇರಲಿದೆ. ದೊಡ್ಡ ಕೋರಿಕೆಯ ಪಟ್ಟಿಯನ್ನು ಇಟ್ಟುಕೊಂಡು ಯಾವುದೂ ಆಗಲಿಲ್ಲ ಎಂಬ ಕೊರಗಿನಲ್ಲಿ ಇರಲಿದ್ದೀರಿ. ಒತ್ತಡದ ನಡುವೆಯೂ ನಿಮ್ಮ ಕಾರ್ಯಗಳನ್ನು ಸರಳೀಕರಿಸಿಕೊಂಡು ಮಾಡುವ ವಿಧಾನಕ್ಕೆ ಮೆಚ್ಚುಗೆ ಸಿಗಲಿದೆ. ಗೊಂದಲಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತೀರ್ಮಾನಕ್ಕೆ ಬರದೇ ಅನುಭವಿಸಬೇಕಾಗಬಹುದು. ಹಣವನ್ನು ಉಳಿಸಲು ಯತ್ನಿಸುವಿರಿ. ಆದರೆ ಅದು ಮುಂದಿನ ಬಾಗಿಲಿನಿಂದ ಬಂದು ಹಿಂದಿನ ಬಾಗಿಲಿನಿಂದ ನಿಮಗೆ ಗೊತ್ತಾಗದಂತೆ ಹೋಗಿರುತ್ತದೆ. ಮಾತನ್ನು ಕಡಿಮೆ ಮಾಡಿ.
ವೃಷಭ: ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸಲಿದ್ದಾರೆ. ಮಕ್ಕಳಿಂದ ಬಂದ ಸಿಹಿ ವಾರ್ತೆ ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸಲಿದೆ. ಕಛೇರಿ, ನ್ಯಾಯಾಲಯಗಳಲ್ಲಿ ಮೇಲುಗೈ ಸಾಧಿಸುವಿರಿ. ವ್ಯವಹಾರದಲ್ಲಿ ಪಾಲುದಾರಿಕೆಯಲ್ಲಿ ಸಣ್ಣ ವೈಮನಸ್ಯ ತಲೆ ಹಾಕಲಿದೆ. ದೂರದಲ್ಲಿ ವಾಸಿಸುವ ನೀವು ಇಂದು ಮನೆಗೆ ಹೋಗಿ ಪೋಷಕರನ್ನು ಸಂತೋಷಗೊಳಿಸುವಿರಿ. ಆಪ್ತರಿಂದ ವಂಚನೆಗೆ ಒಳಗಾಗಬಹುದು. ಒಳ್ಳೆಯ ಪುಸ್ತಕವನ್ನು ಆಯ್ದುಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಿರಿ. ವೈದ್ಯರ ಸಲಹೆಯನ್ನು ನಿರಾಕರಿಸದೇ ಪಾಲಿಸಿ.
ಮಿಥುನ: ಮಕ್ಕಳು ಶುಭ ಸಮಾಚಾರವನ್ನು ತಿಳಿಸುವರು. ನಿಮ್ಮ ಶ್ರಮವಿಂದು ಸಾರ್ಥಕವಾಗಲಿದೆ. ಆಗಾಧವಾದ ಆಲೋಚನಯಲ್ಲಿ ಮುಳುಗಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಮುಂದಿನ ಅಧ್ಯಯನ ವಿಷಯವನ್ನು ಆಯ್ದುಕೊಳ್ಳಲು ಪ್ರಯಥನಿಸುವರು. ಉತ್ತಮವಾದ ವಿಚಾರ ಹಾಗು ಸಂದರ್ಭಗಳನ್ನು ಮನನ ಮಾಡಿ. ಆ ಕುರಿತು ಆಲೋಚಿಸಿ. ಸಕಾರಾತ್ಮಕತೆ ಉಂಟಾಗಲಿದೆ. ಆಗಾಗ ಬರುವ ನೋವುಗಳು ನಿಮ್ಮನ್ನು ಪೀಡಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುವುವು. ಆಪ್ತರ ಜೊತೆ ಒಂದಿಷ್ಟು ಹರಟೆ ಹೊಡೆಯಿರಿ. ಹಣದ ಚಿಂತೆ ನಿಮ್ಮನ್ನು ಇಂದು ಕಾಡಲಿದೆ. ಮಾರಾಟದಿಂದ ಲಾಭವಿದೆ.
ಕರ್ಕ: ನಿಮ್ಮನ್ನು ಅಪರಿಚಿರೊಬ್ಬರು ಭೇಟಿಯಾಗಬಹುದು. ಮಿತ್ರರಾಗಲು ಸ್ವಲ್ಪ ಕಾಲ ಕಳೆಯಲಿ. ಶೈತ್ಯದಿಂದ ನಿಮ್ಮ ದಿನ ಹೈರಾಣಾಗಲಿದೆ. ಈಗಲೇ ಕಡಿಮೆ ಮಾಡಿಕೊಳ್ಳುವುದು ಉಚಿತ. ಮಕ್ಕಳ ಜೊತೆ ಕಾಲಕಳೆಯಿರಿ. ವಿದ್ಯುತ್ ಉಪಕರಣಗಳನ್ನು ಖರೀದಿಸುವಿರಿ. ಸುಖ ಹಾಗೂ ದುಃಖವನ್ನು ಸಮವಾಗಿ ತೆಗರಲೆದುಕೊಳ್ಳಬೇಕಾದೀತು. ದಿನಸಿ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಿದೆ. ಅತಿಯಾದ ಸೌಖ್ಯವನ್ನು ಪಡೆತಲು ಹೋಗಿ ಅವಗಢವಾದೀತು. ವಿವಾಹವು ವಿಳಂಬವೆಂದು ಅನ್ನಿಸಬಹುದು. ತಂದೆಯ ಜೊತೆ ಜಗಳವನ್ನು ಮಾಡುವಿರಿ.
ಸಿಂಹ: ಬರಬೇಕಾದ ಹಣವು ಬರಲಿದೆ. ಶತ್ರುಗಳಿಬ್ಬರ ಮುಖಾಮುಖಿಯಾಗಿ ಜಗಳವನ್ನು ಮಾಡಲಿದ್ದೀರಿ. ನಿಮ್ಮ ಬುದ್ಧಿ, ಮನಸ್ಸುಗಳು ನಿಮ್ಮ ಸ್ತಿಮಿತದಲ್ಲಿರಲಿ. ಕೆಲಸದಲ್ಲಿ ಆಲಸ್ಯ ಮಾಡಿ ಬರಬೇಕಾದುದನ್ನು ಕಳೆದುಕೊಳ್ಳುವಿರಿ. ಯಾವ ಸಂದರ್ಭದಲ್ಲಿ ಕೈಮೀರಿ ಹೋಗಿವ ಸನ್ನಿವೇಶವನ್ನು ತಂದುಕೊಳ್ಳಬೇಡಿ. ಅಮೂಲ್ಯವಸ್ತು ಅಥವಾ ಉನ್ನತ ಪದವಿಗಳು ನಷ್ಟವಾಗಲಿವೆ. ದುಃಖಿಸುವ ಅಗತ್ಯವಿಲ್ಲ. ಇನ್ನಷ್ಟು ಉತ್ತಮವಾದುದನ್ನು ನೀಡಲು ಇದು ಸಂಭವಿಸಿರಬಹುದು. ಅನಾರೋಗ್ಯ ವಿಚಾರವಾಗಿ ಸ್ನೇಹಿತರ ಜೊತೆ ಮಾತನಾಡಿ. ಉತ್ತಮವಾದ ಮಾರ್ಗವು ನಿಮಗೆ ಸಿಗಬಹುದು. ಮನಸ್ಸಿನ ನೆಮ್ಮದಿ ಕೆಡಬಹುದು.
ಕನ್ಯಾ: ಕುಟುಂಬದವರೊಂದಿಗೆ ಸುಖವಾಗಿ ಬಾಳುವಿರಿ. ವಿನಾ ಕಾರಣ ಯಾರಮೇಲೋ ಸಿಟ್ಟಗುವ ಅವಶ್ಯಕತೆಯಿಲ್ಲ. ಹೊರಗೆ ಆಹಾರವನ್ನು ಸ್ವೀಕರಿಸಬೇಕು ಎನ್ನುವ ಆಸೆಯು ನಿಮಗಿದ್ದರೂ ಆರೋಗ್ಯವನ್ನು ಗಮನಿಸಿಕೊಂಡು ಹೋಗುವುದು ಉತ್ತಮ. ಕೃಷಿಯಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಶತ್ರುಗಳು ನಿಮ್ಮ ಸಾಧನೆಯನ್ನು ಕಂಡು ಕೊರಗಬಹುದು. ಹೂಡಿಕೆಗೆ ಬೇಕಾದ ಆಲೋಚನೆಗಳನ್ನು ಮಾಡಬಹುದು. ಮನೆಯನ್ನು ಕಟ್ಟಲು ಸಾಲಮಾಡಬೇಕಾದ ಸ್ಥಿತಿಯು ಬರಬಹುದು. ಮನೆಗೆಲಸಕ್ಕೆ ಸಹಾಯಮಾಡಲಿದ್ದೀರಿ. ವಿವಾಹಯೋಗವು ನಿಮಗೆ ಬರಲಿದೆ.
ತುಲಾ: ಒತ್ತಡದ ಕೆಲಸಗಳಿಂದ ಇಂದು ನೀವು ಮುಕ್ತರು. ತುಂಬ ದಿನಗಳ ಅನಂತರ ಕುಟುಂಬದವರ ಮಿಲನವಾಗಲಿದ್ದು ಬಹಳ ಸಂತೋಷದಿಂದ ಭಾಗವಹಿಸುವಿರಿ. ಗೃಹೋಪಯೋಗಿ ವಸ್ತುಗಳ ಖರೀದಿಯಿಂದ ಖರ್ಚಾಗುವ ಸಾಧ್ಯತೆಯಿದೆ. ವಿನಾ ಕಾರಣ ಆರಂಭವಾದ ಕಲಹವು ನ್ಯಾಯಾಲಯಕ್ಕೆ ಹೋಗಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಸಿಗಲಿದೆ. ಸಂಗಾತಿಯ ಜೊತೆ ಅನೌಪಚಾರಿಕ ಹರಟೆಯಿಂದ ಕಾಲವನ್ನು ಕಳೆಯುವಿರಿ. ನಿಮ್ಮನ್ನು ಇಷ್ಟಪಟ್ಟವರು ನಿಮ್ಮ ಜೊತೆ ಇರುವರು.
ವೃಶ್ಚಿಕ: ಆರ್ಥಿಕಸಂಕಷ್ಟವು ಎದುರಾದೀತು. ರಾಜಕಾರಣಿಗಳು ಇಂದು ತಮ್ಮ ಕ್ಷೇತ್ರದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಲಿದ್ದಾರೆ. ಆಭರಣವನ್ನು ತಡಗೆದುಕೊಳ್ಳುವ ಮನಸ್ಸು ಮಾಡುವಿರಿ. ನೀವು ಉನ್ನತಸ್ಥಾನಕ್ಕೆ ಹೋಗಲು ಯಾರದೋ ಕಳ್ಳತನದ ಅಪವಾದ ಬರಬಹುದು. ಅಲ್ಲವೆನ್ನುವುದನ್ನು ಸಾಬೀತುಪಡಿಸಬೇಕು. ಆದಾಯ ಮತ್ತು ಖರ್ಚುಗಳ ಲೆಕ್ಕಾಚಾರವನ್ನು ಕಂಡಾಗ ನಿಮಗೆ ಆಶ್ಚರ್ಯವು ಕಾದಿರುತ್ತದೆ. ಸಂಗಾತಿಯ ಬೇಸರವನ್ನು ಕ್ಷಣಕಾಲದಲ್ಲಿ ದೂರ ಮಾಡುವ ವಿದ್ಯೆಯನ್ನು ನೀವು ಕಲಿತಿದ್ದೀರಿ.
ಧನುಸ್ಸು: ವಿದ್ಯುದುಪಕರಣವನ್ನು ಮಾರಾಟದಿಂದ ಲಾಭವಿದೆ. ಯೋಜನೆಯನ್ನು ಪೂರ್ಣಗೊಳಿಸಲು ಬೇಕಾದ ಪ್ರಯತ್ನವನ್ನು ಮಾಡುವಿರಿ. ವಿದ್ಯಾಭ್ಯಾಸಕ್ಕೆಂದು ಉತ್ತಮವಾದ ವಿದ್ಯಾಕೇಂದ್ರವನ್ನು ಹುಡುಕುತ್ತಿದ್ದರೆ ನಿಮಗದು ಸಿಗಲಿದೆ. ಜನಜಾಗೃತಿಯ ಕಾರ್ಯಕ್ರಮಗಳಿಗೆ ಹೋಗಲಿದ್ದೀರಿ. ಉತ್ತಮ ಆಹಾರವನ್ನು ಸೇವಿಸುವ ದಿನವಿಂದು. ವಿದ್ಯುದುಪಕರಣಗಳಿಂದ ಹಣವು ಖರ್ಚಾಗಬಹುದು. ನಿಮ್ಮ ಮೇಲೆ ಅನುಮಾನದ ಹುತ್ತಗಳು ಇರುತ್ತವೆ. ಶುಭದಿನದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸೇವೆಗಳನ್ನು ಗೌರವಿಸುವರು.
ಮಕರ: ದೇಹಾಲಸ್ಯದಿಂದ ಇಂದು ಅನೇಕ ಕಾರ್ಯಗಳು ಮುಗಿಯದು. ಆದಷ್ಟು ಶೀಘ್ರದಲ್ಲಿ ಮುಗಿಸಿದರೆ ಉತ್ತಮ. ಹೆಚ್ಚು ವಿಶ್ರಾಂತಿಯನ್ನು ಬಯಸಲಿದ್ದೀರಿ. ನಿಮಗಿಂದು ಸಭೆ, ಸಮಾರಂಭಗಳಲ್ಲಿ ಮಾತನಾಡುವ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಸ್ವ ಆಸಕ್ತಿಯಿಂದ ತೊಡಗಿಕೊಳ್ಳುವರು. ಆಯಾಸವಿದ್ದರೂ ಇನ್ನೊಬ್ಬರ ಒತ್ತಾಯಕ್ಕೆ ಅವರೊಂದಿಗೆ ವಾತುವಿಹಾರಕ್ಕೆಂದು ಹೋಗುವಿರಿ. ದೀರ್ಘಕಾಲದ ವಾಹನದಿಂದ ವಾತಸಂಬಂಧಿ ರೋಗಗಳು ಬರಬಹುದು. ಭೂಮಿ ವಿಕ್ರಯದ ಹಣವು ಸಿಗಲಿದೆ.
ಕುಂಭ: ಇಂದು ಮನಸ್ಸು ಬಹಳ ಚಂಚಲವಾಗಲಿದೆ. ನಿಮ್ಮ ಅಮೂಲ್ಯ ವಸ್ತುಗಳು ಕಣ್ಮರೆಯಾಗಲಿದೆ. ನಿಮ್ಮ ಆಲೋಚನಗಳಿಂದ ಅನೇಕರು ಪ್ರಭಾವಿತರಾಗುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಮಾತುಕತೆಗಳು ಇಂದು ಮನೆಯಲ್ಲಿ ನಡೆಯಬಹುದು. ಬಂಧುಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತನಾಡುವರು. ಸಂಪತ್ತಿನ ಅನಿರೀಕ್ಷಿತವಾಗಿ ಖರ್ಚಾಗಲಿದೆ. ಕಲಾವಿದರಿಗೆ ಉತ್ತಮ ಅವಕಾಶವು ಸಿಗಲಿದೆ. ನಿಮ್ಮ ಸಹಾಯಕ್ಕೆ ಬಂದವರನ್ನು ಸ್ಮರಿಸಿಕೊಳ್ಳಲಿದ್ದೀರಿ. ತಿಳಿವಳಿಕಯಿಂದ ಕೂಡಿದ ನಿಮ್ಮ ಜೀವನ ಸುಗಮವಾಗಲಿದೆ. ಧನವ್ಯಯವವನ್ನು ತಡೆಯಲು ಮಾರ್ಗವನ್ನು ಹುಡುಕಿ.
ಮೀನ: ವಿದ್ಯಾಭ್ಯಾಸದಲ್ಲಿ ಆಸಕ್ತಿ ಇದ್ದರೂ ಅದನ್ನು ಬೆಳೆಸಿಕೊಂಡು ಹೋಗಬೇಕಾದ ಕೆಲಸವಿದೆ. ವಿರಾಮದ ಸಮಯವನ್ನು ಆರಾಮಾಗಿ ಕಳೆಯುವಿರಿ. ಎಂದೋ ಕೂಡಿಟ್ಟ ಹಣವು ಇಂದು ನಿಮ್ಮ ಸಮಯಕ್ಕೆ ಸರಿಯಾಗಿ ಸಿಗುವುದು. ನಿಮ್ಮಿಂದ ಪ್ರೀತಿಯನ್ನು ಬಯಸುವವರಿಗೆ ಪ್ರೀತಿಯನ್ನು ಕೊಡಿ. ಬೆಚ್ಚಗಿನ ವಾತಾವರಣದಲ್ಲಿರ ಇರಿ. ಅನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸ. ನಿಧಾನವಾಗಿ ಸಾಗುತ್ತಿದ್ದ ನಿಮ್ಮ ಕೆಲಸಕ್ಕೆ ವೇಗ ಸಿಗಲಿದೆ. ಸಿವಿಲ್ ಕೆಲಸದಲ್ಲಿ ಪ್ರಗತಿ ಇದೆ. ಸ್ವಲ್ಪ ಪ್ರಯಾಣದ ಅನಿವಾರ್ಯತೆ ಬರಬಹುದು. ಆರೋಗ್ಯದ ಬಗ್ಗೆ ಗಮನವಿರಲಿ.
ಲೋಹಿತಶರ್ಮಾ, ಇಡುವಾಣಿ