ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಫೆಬ್ರವರಿ 27 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಅಷ್ಟಮಿ, ನಿತ್ಯನಕ್ಷತ್ರ: ರೋಹಿಣಿ, ಯೋಗ: ವೈಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 52 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 39 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:20ರಿಂದ 09:49ರ ತನಕ, ಯಮಘಂಡ ಕಾಲ ಬೆಳಗ್ಗೆ 11:17 ರಿಂದ ಮಧ್ಯಾಹ್ನ 12:46ರ ತನಕ, ಗುಳಿಕ ಕಾಲ ಮದ್ಯಾಹ್ನ 02:14 ರಿಂದ 03:42ರ ತನಕ.
ಮೇಷ: ಶ್ರಮವಹಿಸಿ ಕೆಲಸಕಾರ್ಯಗಳನ್ನು ಮಾಡಬೇಕಾಗಬಹುದು. ಉದ್ಯೋಗದಲ್ಲಿ ಜವಾಬ್ದಾರಿ ಸ್ಥಾನವವನ್ನು ಒಡೆಯುವಿರಿ. ಮಾತನಾಡುವಾಗ ಆಲೋಚಿಸಿ. ನಿಮ್ಮ ಮಾತು ನಿಮಗೇ ಮೃತ್ಯುಸದೃಶವಾದೀತು. ಹಣವಿದೆ ಎಂದು ದುಂದುವೆಚ್ಚಕ್ಕೆ ಹೋಗಬೇಡಿ. ಇಂದು ನಿಧಾನವಾಗಿ ಕೆಲಸಕಾರ್ಯಗಳು ನಡಯಲಿವೆ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ವೃತ್ತಪರ ನೌಕರಿಗೆ ಶುಭವಾರ್ತೆ ಇರಲಿದೆ. ಆಕಸ್ಮಿಕವಾಗಿ ವಸ್ತುವೊಂದು ಸಿಗಲಿದೆ. ವಾತಾವರಣವು ಬದಲಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸಾಲಬಾಧೆಯಿಂದ ನೀವು ಮುಕ್ತಾರಾಗಲಿದ್ದೀರಿ. ತಾರಕಾಸುರಸಂಹಾರಕನಾದ ಕಾರ್ತಿಕೇಯನನ್ನು ಸ್ಮರಿಸಿ. ನಿಮ್ಮ ಮುಂದಿನ ಮಾರ್ಗವನ್ನು ಚೆನ್ನಾಗಿಸುವನು.
ವೃಷಭ: ಉನ್ನತಶಿಕ್ಷಣವನ್ನು ಪಡೆಯಲು ಮನೆಯಿಂದ ದೂರವಿರುವಿರಿ. ನಿಮ್ಮ ಕಾರ್ತಕ್ಕೆ ಉತ್ತಮವಾದ ಯಶಸ್ಸು ಸಿಗಲಿದೆ. ವಿನಾಕಾರಣ ಹಣವು ವ್ಯಯವಾಗಲಿದೆ. ಕೃಷಿಕರು ಇಂದು ತಮ್ಮ ಕಾರ್ಯದಲ್ಲಿ ಮಂದಗತಿಯನ್ನು ಕಾಣಬಹುದಾಗಿದೆ. ಬೇರಿಗೆ ಹುಳಹಿಡಿದರೆ ಮರವು ಹಾಳಾಗುತ್ತದೆ. ಮನಸ್ಸಿನಲ್ಲಿ ಕೆಟ್ಟದ್ದಿದ್ದರೆ ಜೀವನವೂ ಹಾಳಾಗುತ್ತದೆ ಎಂಬ ಸತ್ಯವು ನೆನಪಿನಲ್ಲಿ ಇರಲಿ. ಸಂಪತ್ತಿನ ವಿಚಾರದಲ್ಲಿ ಜಾಗಕರೂಕರಾಗಿರಿ. ಮೋಸ ಹೋಗಬೇಡಿ. ನಿಮ್ಮ ವಾಹನವು ರಿಪೇರಿಗೆ ಬರಬಹುದು. ಕುಜನಿಂದ ನೀವು ಜ್ವರವನ್ನು ಅನುಭವಿಸುವಿರಿ. ಧನ್ವಂತರಿಯ ಸ್ತೋತ್ರ ಮಾಡಿ.
ಮಿಥುನ: ಮೇಲಧಿಕಾರಿಗಳಿಂದ ನಿಮಗೆ ಮನ್ನಣೆ ಸಿಗಲಿದೆ. ನೂತನ ವಸ್ತ್ರವನ್ನು ಖರೀದಿ ಮಾಡುವಿರಿ. ನಿಮಗೆ ಬೇಕಾದುದನ್ನೇ ಮಾಡಿಕೊಳ್ಳುವ ಛಾತಿಯು ಇಂದು ಇರಲಿದೆ. ಹಣಕಾಸಿನ ಕುರಿತು ಅತಿಯಾದ ಆಲೋಚನೆಯು ನಿಮ್ಮನ್ನು ಅತಿಯಾಗಿ ಕಾಡಬಹುದು. ಸಮಯವನ್ನು ನಿರೀಕ್ಷಿಸುವುದು ಒಳ್ಳೆಯದು. ಕಾಲವು ಎಲ್ಲವನ್ನೂ ಒದಗಿಸಿಕೊಡುತ್ತದೆ. ದಾಂಪತ್ಯದಲ್ಲಿ ಮನಸ್ತಾಪವೇರ್ಪಡಬಹುದು. ಸಮಯೋಚಿತವಾಗಿ ಕಾರ್ಯವನ್ನು ಮಾಡಿ. ದೂರಪ್ರಯಾಣವನ್ನು ಮೊಟಕುಗೊಳಿಸಿ. ಮಾತಿನಿಂದ ಕಲಹವಾಗಬಹುದು. ಭೂಮಿಯ ನಷ್ಷವಾಗುವ ಸಾಧ್ಯತೆ ಇದೆ. ಭೂವರಾಹಸ್ತೋತ್ರವನ್ನು ಮಾಡಿ.
ಕಟಕ: ಹಿಡಿದ ಕೆಲಸವನ್ನು ಬಿಡದೇ ಮಾಡಲಿದ್ದೀರಿ. ಭೂಮಿಯ ವ್ಯವಹಾರವು ನಿಮಗೆ ಲಾಭವನ್ನು ತರುವುದು. ಶತ್ರುಗಳಿಂದ ಸಣ್ಣ ಕಿರಿಕಿರಿಯಾಗಲಿದೆ. ಮಕ್ಕಳಿಂದ ನಿಮಗೆ ಅಶುಭವಾರ್ತೆಯು ಬರಲಿದೆ. ತಂದೆ ಹಾಗು ತಾಯಿಯರ ಆಶೀರ್ವಾದವನ್ನು ಪಡೆದು ನಿಮ್ಮ ಕೆಲಸಕ್ಕೆ ತೆರಳಿ. ಆಹಾರದ ವ್ಯತ್ಯಾಸದಿಂದ ಅನಾರೋಗ್ಯವು ಕಾಡಬಹುದು. ತಂತ್ರಜ್ಞರಿಗೆ ಉನ್ನತಸ್ಥಾನಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಸಂಬಂಧಿಕರ ದೂರವಿರಬೇಕಾದ ಪರಿಸ್ಥಿತಿ ಇರಲಿದೆ. ಆದಾಯಕ್ಕೆ ಸರಿಯಾಗಿ ಖರ್ಚುಗಳೂ ಆಗಲಿವೆ. ಷಷ್ಠಾಧಿಪತಿಯು ಏಕಾದಶದಲ್ಲಿರುವನು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ದರ್ಶನ ಮಾಡಿ.
ಸಿಂಹ: ಆರ್ಥಿಕವಾಗಿ ಹಿನ್ನಡೆಯಾಗಲಿದೆ. ಅಪರಿಚಿತರಿಗೆ ಹಣ ಕೊಡುವಿರಿ. ಯಾರದೋ ತಪ್ಪುಗಳು ನಿಮ್ಮದೆಂದು ಪ್ರತಿಬಿಂಬಿತವಾದಾವು. ಆಲೋಚನೆಗೆ ತಕ್ಕಂತೆ ಯಾವುದೂ ನಡೆಯದು ಎಂಬ ಬೇಸರವು ಹೆಚ್ಚಾಗಿ ಕಾಡಬಹುದು. ವೈಮನಸ್ಯ ಎದುರಾದಾಗ ಹೊಂದಾಣಿಕೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ. ಬಂಧುಗಳ ಆಗಮನ ನಿಮಗೆ ಕಿರಿಕಿರಿಯನ್ನು ತರಬಹುದು. ಕರ್ಮಗಳು ನ್ಯಾಯೋಚಿತವಾಗಿ ಇರಲಿ. ಆರಂಭಿಸಿದ ಕೆಲಸದಲ್ಲಿ ಹಿಂದಡಿಯಿಡಬಹುದು. ಶಿಕ್ಷಣಕ್ಷೇತ್ರದಲ್ಲಿ ಇರುವವರಿಗೆ ಉನ್ನತ ಸ್ಥಾನ ಸಿಗಲಿದೆ. ವಿವಾಹಕ್ಕೆ ತಡಯಾಗಲಿದೆ. ಸ್ವಯಂವರಪಾರ್ವತೀ ಮಂತ್ರವನ್ನು ಜಪಿಸಿ.
ಕನ್ಯಾ: ನಿಮ್ಮ ಕೆಲಸದಿಂದ ಮನಸ್ಸನ್ನು ಗೆಲ್ಲಲಿದ್ದೀರಿ. ನೆಮ್ಮದಿಯ ಕೊರತೆಯಿಂದ ನೀವು ಒದ್ದಾಡುವಿರಿ. ಏಕಾಗ್ರತೆಗೆ ಯೋಗ ಅಥವಾ ಧ್ಯಾನವನ್ನು ಮಾಡಲಿದ್ದೀರಿ. ಹಳೆಯ ಮಿತ್ರನ ಭೇಟಿ ಮಾಡಲಿದ್ದೀರಿ. ಧನಸಂಗ್ರಹದ ವಿಚಾರ ನಿಮ್ಮ ದಾರಿಯು ಸರಿಯಾಗಿದೆ ಎಂದು ನಿಮ್ಮವರಿಗೆ ಅನ್ನಿಸಬಹುದು. ಅಮೂಲ್ಯವಾದ ವಸ್ತುವೊಂದು ನಿಮ್ಮ ಸ್ನೇಹಿತರಿಗೆ ಕೊಡುಗೆಯಾಗಿ ನೀಡಲಿದ್ದೀರಿ. ಧಾರ್ಮಿಕಕ್ಷೇತ್ರಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದೆ. ಗುರುವಿನ ದರ್ಶನವನ್ನು ಪಡೆಯುವಿರಿ. ಒತ್ತಡದಿಂದ ಮುಕ್ತಿಯನ್ನು ಪಡೆಯುವಿರಿ. ಹೂಡಿಕೆಯ ವಿಚಾರದಲ್ಲಿ ಮಾಹಿತಿಯು ಸ್ಪಷ್ಟವಾಗಿರಲಿ. ಸಪ್ತಮದ ಗುರು ಹಾಗೂ ಶುಕ್ರರು ಸಕಲೈಶ್ವರವನ್ನು ದಯಪಾಲಿಸುವರು. ಲಕ್ಷ್ಮೀನಾರಾಯಣಸ್ತೋತ್ರವನ್ನು ಮಾಡಿ.
ತುಲಾ: ಇಂದು ನೀವು ಸುತ್ತಾಟದ ಮನಸ್ಸಿಲ್ಲಿ ಇರಲಿದ್ದೀರಿ. ಹತ್ತಾರು ಕೆಲಸಗಳನ್ನು ಇಟ್ಟುಕೊಂಡು ಯಾವುದನ್ನು ಮಾಡಬೇಕು ಎನ್ನುವ ಗೊಂದಲದಲ್ಲಿ ಇರುವಿರಿ. ಯಾವ ಕಾರಣ ಮತ್ತು ಯಾರು ಇದಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎನ್ನುವುದು ಗಮನಿಸಿಕೊಳ್ಳಿ. ಹಿರಿಯರಿಂದ ಅವಮಾನವಾಗುವ ಸಾಧ್ಯತೆ ಇದೆ. ಒಂದನ್ನು ಪಡೆಯಲು ಹೋಗಿ ಎರಡನ್ನು ಕಳೆದುಕೊಳ್ಳಬೇಕಾದೀತು. ಇಂದು ಬರುವ ಅತಿಥಿಗಳನ್ನು ಸತ್ಕರಿಸಿ. ತುಂಬ ಸಮಸ್ಯೆಗಳು ಬಂದಂತೆ ಕಾಣಬಹುದು. ತಾಳ್ಮೆ ಬೇಕು. ಸಮಯವು ಎಲ್ಲವನ್ನೂ ಸರಿ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಓದಬೇಕು ಎನ್ನುವ ಅಸೆ ಹೆಚ್ಚಾಗಲಿದೆ. ಸಪ್ತಮದಲ್ಲಿರುವ ರಾಹುವು ನಿಮಗೆ ಪತ್ನಿಯಿಂದ ನಷ್ಟ ಮಾಡಿಸುವನು. ನಾಗದೇವತಾರಧನೆಯನ್ನು ಮಾಡಿ.
ವೃಶ್ಚಿಕ: ಸ್ನೇಹಿತರ ಜೊತೆ ದೂರದ ಊರಿಗೆ ಪ್ರಯಾಣ ಹೋಗಲಿದ್ದೀರಿ. ಆಸ್ತಿಯನ್ನು ಖರೀದಿಸುವ ಆಲೋಚನೆಮಾಡುವಿರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಉದ್ಯೋಗದಲ್ಲಿ ಕೆಲವು ಬದಲಾವಣೆಗಳನ್ನು ತರಬಹುದಾಗಿದೆ. ಅಪರಿಚಿತ ದೂರವಾಣಿಯ ಕರೆಯಿಂದ ನಿಮಗೆ ಲಾಭವಾಗುವ ಸಾಧ್ಯತೆ ಇದೆ. ನ್ಯಾಯಾಲಯದಲ್ಲಿ ಗೆಲುವಿಗಾಗಿ ಹಣವನ್ನು ವದಯಯಿಸುವಿರಿ. ಸರ್ಕಾರಿ ಕೆಲಸಗಳು ನಿಧಾನವಾಗಲಿದೆ. ಯಾರ ಮೇಲಾದರೂ ಅನುಮಾನವು ಬರಬಹುದು. ಔಷಧವನ್ನು ಮಿತವಾಗಿ ಸೇವಿಸಿ. ಉದ್ಯೋಗದ ಸ್ಥಳದಲ್ಲಿ ಸಮಸ್ಯೆಗಳು ಬರಬಹುದು. ಅತಿಥಿಗಳಿಗೆ ಭೋಜನವನ್ನು ಮಾಡಿಸಿ.
ಧನು: ಬರಲೇಬೇಕಾದ ಹಣವು ಇಂದು ಬರಲಿದೆ. ಮಾನಸಿಕ ನೆಮ್ಮದಿಯಿರಲಿದೆ. ಸಂಗಾತಿಯನ್ನು ಇಷ್ಟಪಡಲಿದ್ದೀರಿ. ಭಾಷೆಯ ಅಭಾವದಿಂದ ನಿಮ್ಮಲ್ಲಿ ಒಂಟಿತನವು ಕಾಡಬಹುದು. ಉದರಬಾಧೆಯು ನಿಮ್ಮ ಉತ್ಸಾಹವನ್ನು ಕುಗ್ಗಿಸಲಿದೆ. ಫಲವನ್ನು ನಿರೀಕ್ಷಿಸದೇ ಕಾರ್ಯವನ್ನು ಮಾಡಿ. ಉತ್ತಮವಾದ ಫಲವೇ ನಿಮಗಾಗು ಕಾಯುತ್ತಿರುವುದು. ಕೃಷಿಯಲ್ಲಿ ನಿಮ್ಮ ಪ್ರಗತಿಯನ್ನು ಕಾಣಬಹುದಾಗಿದೆ. ಉದ್ಯೋಗದ ಸ್ಥಳದಲ್ಲಿ ಪದೋನ್ನತಿ ಸಿಗಲಿದೆ. ಬಂಗಾರವನ್ನು ಖರೀದಿಸಲು ಮನಸ್ಸು ಮಾಡುವಿರಿ. ಷಷ್ಠದ ಶುಕ್ರಸ್ಥಾನದಲ್ಲಿ ಕುಜನಿರುವುದರಿಂದ ಪ್ರೇಮಪ್ರಕರಣದಲ್ಲಿ ವಿಚಿತ್ರ ತಿರುವು ಸಿಗಲಿದೆ. ಮಹಾವಿಷ್ಣವಿನ ಸ್ತೋತ್ರವನ್ನು ಜಪಿಸಿ.
ಮಕರ: ಸಣ್ಣ ವಿಚಾರಗಳಿಗೆ ಕಾಲು ಕೆರದು ಜಗಳಕ್ಕೆ ಹೋಗಲಿದ್ದೀರಿ. ಹೊಸತಾದ ಕೆಲಸವೊಂದನ್ನು ಆರಂಭಿಸುವ ಮನಸ್ಸು ಇರಲಿದೆ. ತಂದೆಯಿಂದ ಧನಲಾಭವನ್ನು ನಿರೀಕ್ಷಿಸಬಹುದಾಗಿದೆ. ಜ್ವರದಿಂದ ಪೀಡಿತರಾಗುವ ಸಾಧ್ಯತೆ ಇರುತ್ತದೆ. ವಾಹನವನ್ನು ಖರೀದಿಸಲಿದ್ದೀರಿ. ಸಾಮಾಜಿಕ ಗೌರವವನ್ನು ಪಡೆಯಲಿದ್ದೀರಿ. ಸಹೋದರ ನಡುವೆ ನಡೆಯುತ್ತಿದ್ದ ಶೀಲತಲ ಸಮರವು ಇಂದು ಸ್ಫೋಟವಾಗಬಹುದು. ಆಪ್ತರೇ ನಿಮಗೆ ವಂಚಿಸುವ ಸಾಧ್ಯತೆ ಇದೆ. ನಿಮ್ಮನ್ನು ಇಷ್ಟಪಡುವ ವ್ಯಕ್ತಿಗಳು ಇರಲಿದ್ದಾರೆ.
ಕುಂಭ: ಅನ್ಯರನ್ನು ದೂಷಿಸುವ ಕೆಲಸದಿಂದ ಹಿಂದುಳಿಯಿರಿ. ಸಹೋದರನಿಂದ ನಿಮಗೆ ಸ್ಥಾನಪ್ರಾಪ್ತಿಗೆ ಸಹಾಯವಾಗಲಿದೆ. ತಂದೆಯಿಂದ ಬರಬಹುದಾದ ಧನವು ವಿಳಂಬವಾಗಬಹುದು. ಬೇರೆಯವರ ಕುಮ್ಮಕ್ಕಿನಿಂದ ನ್ಯಾಯಾಲಯದ ಅಲೆದಾಟವನ್ನು ಮಾಡಿ ಹಣ ಹಾಗೂ ಸಮಯವನ್ನು ವ್ಯರ್ಥಮಾಡಿಕೊಳ್ಳಬೇಡಿ. ಸಮಾರಂಭಗಳಿಗೆ ಭೇಟಿ ನೀಡುವಿರಿ. ಪೂರ್ವಪರಿಚಿತರು ನಿಮ್ಮ ಭೇಟಿಮಾಡಿಯಾರು. ಮನ್ನಣೆಯನ್ನು ಪಡೆದುಕೊಳ್ಳಲಿದ್ದೀರಿ. ರಾಜಕೀಯಕ್ಕೆ ಹೋಗುವ ಮನಸ್ಸು ಮಾಡಲಿದ್ದೀರಿ. ಶಿವಪಂಚಾಕ್ಷರವನ್ನು ಪಠಿಸಿ.
ಮೀನ: ಬಹಳ ಶ್ರಮವನ್ನು ವಹಿಸಿ ಕೆಲಸ ಮಾಡಲಿದ್ದೀರಿ. ಎಲ್ಲ ಕಾರ್ಯದಲ್ಲಿಯೂ ಪಾರದರ್ಶಕತೆಯನ್ನು ಇಷ್ಟಪಡುವವರು ಇಂದು ಕಂಟಕವಾಗಿ ಪರಿಣಮಿಸೀತು. ವಿದೇಶಕ್ಕೆ ಹೋಗಲು ನಿಮಗೆ ಅವಕಾಶಗಳು ಸಿಗಲಿವೆ. ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ಉತ್ತಮವಾದ ಮಾರ್ಗಾನ್ವೇಷಣೆಯಲ್ಲಿ ಇರಿ. ಅನೀರೀಕ್ಷಿತವಾಗಿ ಬರುವ ಖರ್ಚಿನಿಂದ ನೀವು ಸ್ನೇಹಿತರ ಸಹಾಯವನ್ನು ಪಡೆಯಲಿದ್ದೀರಿ. ವೈದ್ಯರ ಬೇಟಿಯಿಂದಾಗಿ ನಮ್ಮ ಬಹುದಿನಗಳಿಂದ ಇದ್ದ ವ್ಯಾಧಿಯು ನಾಶವಾಗುವುದು. ಸೂರ್ಯನಾರಾಯಣನ್ನು ಆರೋಗ್ಯಕ್ಕೋಸ್ಕರ ಜಪಿಸಿ.
-ಲೋಹಿತಶರ್ಮಾ, ಇಡುವಾಣಿ