Weekly Horoscope: ಫೆಬ್ರವರಿ 26ರಿಂದ ಮಾರ್ಚ್ 4ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
2023ರ ಫೆಬ್ರವರಿ 26ರಿಂದ ಮಾರ್ಚ್ 4ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.
ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ(Weekly Horoscope) ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಫೆಬ್ರವರಿ 26ರಿಂದ ಮಾರ್ಚ್ 4ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.
ಇದನ್ನೂ ಓದಿ: Weekly Numerology: ಸಂಖ್ಯಾಶಾಸ್ತ್ರ ಪ್ರಕಾರ ಫೆಬ್ರವರಿ 26ರಿಂದ ಮಾರ್ಚ್ 4ರ ತನಕ ವಾರಭವಿಷ್ಯ
ಮೇಷ: ರಾಹು ನಿಮ್ಮ ರಾಶಿಯಲ್ಲಿಯೇ ಇರುವಕಾರಣ ಆರೋಗ್ಯವನ್ನು ಜೋಪಾನ ಮಾಡಿಕೊಳ್ಳಿ. ದ್ವಾದಶದಲ್ಲಿ ಗುರು, ಶುಕ್ರರು ಇರುವುದರಿಂದ ಆಪಮಾನ, ವಾಹನವಿಯೋಗಗಳು ಆಗಬಹುದು. ಪತ್ನಿಯ ಜೊತೆ ಕಲಹವೂ ಆಗಬಹುದು. ಏಕಾದಶದಲ್ಲಿ ಶನಿ, ಸೂರ್ಯ ಹಾಗೂ ಬುಧರಿದ್ದು ಸಕಲ ಸುಖಗಳನ್ನು ಪಡೆಯುವಿರಿ. ಈಗ ಸದ್ಯಕ್ಕೆ ನಿಮಗೆ ಆದಾಯವೂ ಚೆನ್ನಾಗಿದೆ ಹಾಗೆಯೇ ಖರ್ಚುಗಳೂ ಇವೆ. ವಾಹನ ಅಧಿಪತಿ ಶುಕ್ರ ವ್ಯಯಸ್ಥಾನದಲ್ಲಿ ಇದ್ದು ವಾಹನದಿಂದ ನಷ್ಟವಾಗುವ ಸಾಧ್ಯತೆ ಇದೆ. ಈ ವಾರ ವಾಹನ ಕೊಳ್ಳುವುದು ಹಳೆಯ ವಾಹನ ಮಾರುವುದು ಇದ್ದರೆ ಮುಂದಕ್ಕೆ ಹಾಕಿ. ವಾಹನಗಳಿಂದ ಕೊಂಚ ಖರ್ಚು ಬರುವ ಸಾಧ್ಯತೆಯೂ ಇದೆ. ರಾಜರಾಜೇಶ್ವರಿಯನ್ನು ಸ್ತೋತ್ರ ಮಾಡಿ.
ವೃಷಭ: ನಿಮ್ಮ ರಾಶಿಯಲ್ಲಿಯೇ ಇರುವ ಕುಜ ಕೋಪವನ್ನು ಹೆಚ್ಚಿಸುವನು. ಮಾನಸಿಕ ಕಿರಿಕಿರಿಯನ್ನು ಉಂಟುಮಾಡುವನು. ದ್ವಾದಶದಲ್ಲಿ ರಾಹುವಿದ್ದು ಅಕಾರ್ಯಕ್ಕೆ ಹಣವನ್ನು ವ್ಯಯಿಸುವನು. ಏಕಾದಶದಲ್ಲಿರುವ ಗುರು ಮತ್ತು ಶುಕ್ರರು ನಿಮಗೆ ಶುಭದ ಸರಣಿಯನ್ನು ತರುವರು. ಸಕಾಲಕ್ಕೆ ಹಣವು ಸಿಗಲಿದೆ. ಷಷ್ಠದಲ್ಲಿರುವ ಕೇತುವು ನಿಮ್ಮನ್ನು ಧೈರ್ಯವಂತರನ್ನಾಗಿ ಮಾಡುವನು. ಗುರು ಮತ್ತು ಶುಕ್ರರು ನಿಮಗೆ ಬರುವ ಸಂಕಷ್ಟವನ್ನು ಅನಾಯಾಸವಾಗಿ ಪರಿಹರಿಸುವರು. .
ಮಿಥುನ: ದಶಮದಲ್ಲಿರುವ ಶುಕ್ರನು ಉದ್ಯೋಗದಲ್ಲಿ ಯಶಸ್ಸನ್ನು ಕೊಡಿಸುತ್ತಾನೆ. ಏಕಾದಶದಲ್ಲಿರುವ ರಾಹುವು ಆರ್ಥಿಕತೆಯನ್ನು ಉತ್ತಮಗೊಳಿಸುವನು. ನವಮದಲ್ಲಿರುವ ಶನಿಯು ಯಾವುದೇ ತೊಂದರೆಯನ್ನು ಸೃಷ್ಟಿಸುವುದಿಲ್ಲ. ನವಮದಲ್ಲಿರುವ ಸೂರ್ಯ ಹಾಗೂ ಬುಧ ನಿಮಗೆ ಶುಭ ಫಲವನ್ನೇ ಕೊಡುವರು. ತಂದೆಯಿಂದ ಧನಲಾಭವನ್ನು ನಿರೀಕ್ಷಿಸಬಹುದು. ನ್ಯಾಯಾಲಯದ ವ್ಯಾಜ್ಯಗಳಲ್ಲಿ ನಿಮಗೆ ಜಯ ಸಿಗಲಿದೆ. ಮನಸಿನಂತೆ ನಿಮ್ಮ ಸಂಕಷ್ಟಗಳು ನಿವಾರಣೆ ಆಗುತ್ತದೆ.
ಕಟಕ: ಏಕಾದಶದಲ್ಲಿರುವ ಕುಜನು ಭೂಮಿ ಮುಂತಾದ ಲಾಭವನ್ನು ಮಾಡಿಸುತ್ತಾನೆ. ನವಮದಲ್ಲಿರುವ ಶುಕ್ರನು ವಾಹನದಿಂದ ಲಾಭವನ್ನು ಕೊಡಿಸುವನು. ಹೊಸದಾದ ವಾಹನ ಖರೀದಿಯನ್ನೂ ಮಾಡಲಿದ್ದೀರಿ. ಅಷ್ಟಮದ ಶನಿಯು ಒತ್ತಡವನ್ನೂ ಸ್ವಲ್ಪಮಟ್ಟಿನ ಖರ್ಚುಗಳನ್ನೂ ಕೊಡಿಸುವನು. ಯಾರೊಂದಿಗೂ ಜಗಳ ವಾದ-ವಿವಾದ ಬೇಡ. ಕುಟುಂಬದಲ್ಲೂ ಅಶಾಂತಿ ಇರಲಿದೆ. ಅಷ್ಟಮದಲ್ಲಿರುವ ಸೂರ್ಯನಿಂದ ಕಣ್ಣಿಗೆ ತೊಂದರೆಯಾಗಲಿದೆ. ಅಲ್ಲಿಯೇ ಇರುವ ಬುಧನು ಬಂಧುಗಳ ವಿರೋಧವನ್ನು ಮಾಡಿಸುತ್ತಾನೆ.
ಸಿಂಹ: ತೃತೀಯದಲ್ಲಿರುವ ಕೇತುವು ಮನಸ್ಸಿನಲ್ಲಿ ಧೈರ್ಯವನ್ನೂ ಹಣವನ್ನೂ ಕೊಡಿಸುತ್ತಾನೆ. ಅಷ್ಟಮದ ಗುರುವು ಧಾರ್ಮಿಕ ಕಾರ್ಯಗಳಿಗೆ ಖರ್ಚು ಮಾಡಿಸುತ್ತಾನೆ. ಅಲ್ಲಿಯೇ ಇರುವ ಶುಕ್ರನಿಂದ ಅಶುಭವಾರ್ತೆ ಬರಲಿದೆ. ಸಪ್ತಮದ ಶನಿಯು ನಿಧಾನಗತಿಯನ್ನು ಕೊಡುತ್ತಾನೆ. ಸಪ್ತಮದಲ್ಲಿರುವ ಸೂರ್ಯನಿಂದ ರಕ್ಷಣೆ ಸಿಗಲಿದೆ. ಸಪ್ತಮದಲ್ಲಿರುವ ಬುಧನಿಂದ ಹಣದ ಉತ್ತಮವಾಗಿರಲಿದೆ. ಸ್ನೇಹಿತರಿಂದ ಸಹಾಯ ಸಹಕಾರ ಇದೆ. ನವಮದಲ್ಲಿರುವ ರಾಹುವು ಭಾಗ್ಯಗಳನ್ನು ಅನುಭವಿಸದಂತೆ ತಡೆಯುವನು ರಹಸ್ಯವಾಗಿ ನಿಮ್ಮ ಹೆಸರು ಕೆಡುವಂತೆ ಮಾಡುತ್ತಾನೆ.
ಕನ್ಯಾ: ಸಪ್ತಮದಲ್ಲಿರುವ ಗುರು ಹಾಗೂ ಶುಕ್ರರು ನಿಮ್ಮ ಸಂಗಾತಿಯ ಜೊತೆ ಜೀವನವನ್ನು ಸುಖವಾಗಿರಿಸುವನು. ಅಪಾಯದಿಂದ ರಕ್ಷಿಸುವನು. ಷಷ್ಠದ ಶನಿ ಹಾಗೂ ಸೂರ್ಯರು ನಿಮ್ಮ ಒತ್ತಡವನ್ನು ಕಡಿಮೆ ಮಾಡುವರು. ನೀವು ಮಾಡುವ ಕೆಲಸ ಕಾರ್ಯಗಳು ಹೊಸ ಯೋಜನೆಗಳಿಗೆ ಇರುವ ಅಡ್ಡಿ ಆತಂಕಗಳನ್ನು ನಿವಾರಿಸುವರು. ನವಮದಲ್ಲಿರುವ ಕುಜನು ಪಿತ್ರಾರ್ಜಿತ ಆಸ್ತಿಯನ್ನು ಕೊಡಿಸುವನು. ಅಷ್ಟಮದ ರಾಹುವಿನಿಂದ ಅಪಾಯವನ್ನು ನಿರೀಕ್ಷಿಸಬಹುದು. ಆರೋಗ್ಯವೂ ಕೆಡಬಹುದು. ದ್ವಿತೀಯದಲ್ಲಿರುವ ಕೇತು ಮಾತಿನಲ್ಲಿ ಕಠಿಣತೆಯನ್ನು ಕೊಡುತ್ತಾನೆ.
ತುಲಾ: ನಿಮ್ಮ ರಾಶಿಯಲ್ಲಿಯೇ ಕೇತು ಇರುವುದು ಶುಭಸೂಚಕವಲ್ಲ. ಮೈಮೇಲೆ ಗಾಯಗಳು ಆಗಬಹುದು. ಸಪ್ತಮದಲ್ಲಿರುವ ರಾಹುವಿನಿಂದ ಸಂಗಾತಿಯ ಜೊತೆ ಮನಸ್ತಾಪ ಮತ್ತು ಶರೀರಶ್ರಮ, ನಿರಾಸಕ್ತಿ ಮುಂತಾದವು ಇರಲಿವೆ. ಪಂಚಮದಲ್ಲಿರುವ ಬುಧನು ನಿಮ್ಮ ಕೈ ಹಿಡಿದಾನು. ಪಂಚಮದಲ್ಲಿರುವ ಶನಿಯು ನಿಮ್ಮ ಕೆಲಸಕಾರ್ಯಗಳನ್ನು ಕೆಡಿಸಬಹುದು. ಷಷ್ಠದಲ್ಲಿರುವ ಗುರು ಮತ್ತು ಶುಕ್ರರು ಸದ್ಯ ಪ್ರತಿಕೂಲರಾಗಿರುತ್ತಾರೆ. ಜಗಳ ಆಡಬೇಕಾದ ಸಂದರ್ಭ ಬಂದಾಗ ಮೌನ ವಹಿಸಿ. ಮನಶ್ಶಾಂತಿಯನ್ನು ಇಟ್ಟಕೊಂಡಷ್ಟೂ ನಿಮಗೆ ಶ್ರೇಯಸ್ಸಿದೆ. ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ.
ವೃಶ್ಚಿಕ: ಚತುರ್ಥದಲ್ಲಿರುವ ಶನಿಯಿಂದ ಸುಖ-ದುಃಖಗಳು ಸಮವಾಗಿರಲಿದೆ. ಅಲ್ಲಿಯೇ ಸೂರ್ಯನು ಭೀತಿಯನ್ನು ಉಂಟುಮಾಡಿಸುವನು. ಬುಧ ನಿಮಗೆ ರಕ್ಷೆಯಾಗಿ ಇರುತ್ತಾನೆ. ಪಂಚಮದಲ್ಲಿ ಗುರು ಮತ್ತು ಶುಕ್ರರಿಂದ ವಿವಾಹಯೋಗವಿದೆ. ಅನೇಕ ಮಾರ್ಗಗಳಿಂದ ಹಣವು ಹರಿದು ಬರುವುದು. ವಿದೇಶ ಪ್ರಯಾಣ, ಪ್ರವಾಸದಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಸಪ್ತಮದಲ್ಲಿರುವ ಕುಜನು ನಿಮಗೆ ಧೈರ್ಯವನ್ನು ತಂದುಕೊಡುವನು. ಷಷ್ಠದ ರಾಹು ಶತ್ರನಾಶಕನಾಗುವನು. ಬಹುಕಾಲದ ಅನಾರೋಗ್ಯದಿಂದ ಮುಕ್ತಿಕೊಡಿಸುವನು.
ಧನಸ್ಸು: ಪಂಚಮದಲ್ಲಿರುವ ರಾಹುವು ಮಕ್ಕಳು ವಿರೋಧಗಳಾಗುವಂತೆ ಮಾಡುವನು. ಚತುರ್ಥದಲ್ಲಿರುವ ಗುರು ನೆಮ್ಮದಿಯನ್ನು ದೂರಮಾಡಬಹುದು. ಎಲ್ಲವೂ ಇದ್ದು ಏನೂ ಇಲ್ಲವೆಂಬ ಭಾವನೆ ಬರುವಂತೆ ಮಾಡುವನು. ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಭೂಮಿ ವ್ಯವಹಾರದಲ್ಲಿ ಲಾಭವಿದೆ. ವ್ಯವಸಾಯಗಾರರಿಗೆ ಧನಲಾಭ ಇದೆ. ವಾಹನದಿಂದ ಲಾಭವನ್ನು ಪಡೆಯುವಿರಿ. ಧೈರ್ಯ ಪರಾಕ್ರಮದಿಂದ ಯಾವುದೇ ಕೆಲಸ ಮಾಡಿದರೂ ಜಯಶಾಲಿಯಾಗುತ್ತೀರಿ. ಮನಸ್ಸಿನ ತಳಮಳ ನಿವಾರಣೆಯಾಗಲು ರುದ್ರದೇವರ ಸ್ಮರಣೆ ಮಾಡಿ.
ಮಕರ: ಷಷ್ಠದಲ್ಲಿರುವ ಕುಜನು ಧೈರ್ಯ ಮತ್ತು ಪರಾಕ್ರಮವನ್ನು ಅಧಿಕಗೊಳಿಸುವನು. ಯಾವುದೇ ಕೆಲಸದಲ್ಲಿ ಆತಂಕವಿಲ್ಲದೆ ಸುಲಲಿತವಾಗಿ ಆಗುವಂತೆ ಮಾಡುವನು. ತೃತೀಯದ ಶುಕ್ರನು ಆರ್ಥಿಕತೆಯನ್ನು ಅಧಿಕಗೊಳಿಸುವನು. ಪ್ರಿಯವಾರ್ತೆಯು ನಿಮ್ಮ ಸಂತಸವನ್ನು ಹೆಚ್ಚಿಸುವುದು. ದ್ವಿತೀಯದ ಬುಧನು ಕುಟುಂಬಸೌಖ್ಯವನ್ನು ಹೆಚ್ವಿಸುವನು. ಉತ್ತಮ ಅವಕಾಶಗಳು ನಿಮ್ಮ ಮುಂದೆ ತೆರೆದುಕೊಳ್ಳುವುವು. ನಿಧಾನವಾಗಿ ಯೋಚಿಸಿ ಮುಂದುವರೆಯಿರಿ. ಸಹೋದರನಿಂದ ಸಹಾಯಹಸ್ತವು ಸಿಗಲಿದೆ. ಶೀಘ್ರದಲ್ಲಿ ನಿಮಗೆ ಒಳ್ಳೆಯ ಸಂಗತಿಗಳು ಜರುಗುತ್ತದೆ. ಶನಿದೇವರಿಗೆ ಎಳ್ಳೆಣ್ಣೆ ದೀಪಕ್ಕೆ ಕೊಟ್ಟು ಬನ್ನಿ.
ಕುಂಭ: ನಿಮ್ಮದೇ ರಾಶಿಯಲ್ಲಿ ಶನಿ ಇದ್ದು ನಿಮಗೆ ಕಿರಿಕಿರಿಯನ್ನು ಮಾಡಿಸುವನು. ನಿಮ್ಮ ಹೆಸರಿಗೆ ಮಸಿ ಬಳಿಯುವಂಥ ಘಟನೆಗಳು ನಡೆಯಬಹುದು. ಆಪ್ತರೇ ಬೆನ್ನ ಹಿಂದೆ ಚೂರಿ ಹಾಕಬಹುದು. ಜಾಗರೂಕತೆಯಿಂದ ವ್ಯವಹರಿಸಿ. ದ್ವಿತೀಯದಲ್ಲಿರುವ ಗುರುವು ಹಣವನ್ನು ಕೊಟ್ಟು ಖರ್ಚುನ್ನು ಮಾಡಿಸುವನು. ಅಲೆದಾಟ, ನಿದ್ರಾಹೀನತೆ ಮೊದಲಾದ ಸಮಸ್ಯೆಗಳು ಇರಲಿವೆ. ಚತುರ್ಥದದಲ್ಲಿರುವ ಕುಜನಿಂದ ಆಸ್ತಿ ಖರೀದಿ ಮಾಡುವ ಸಾಧ್ಯತೆಯಿದೆ. ತೃತೀಯದಲ್ಲಿರುವ ರಾಹುವು ಪರಾಕ್ರಮವನ್ನು ತೋರಿಸುವನು. ಸಪ್ತಮದ ಅಧಿಪತಿ ಸೂರ್ಯನು ಶನಿಯ ಜೊತೆ ಇರುವುದರಿಂದ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಆಗಬಹುದು. ಈಶ್ವರನ ಪ್ರಾರ್ಥನೆ ಮಾಡಿ.
ಮೀನ: ನಿಮಗೆ ಸವಾಲುಗಳನ್ನು ಎದುರಿದುವ ಕಾಲ. ಹೆಜ್ಜೆಹೆಜ್ಜೆಗೂ ಸವಾಲುಗಳು ಅಡೆತಡೆಗಳು ಇರುತ್ತದೆ. ನಿಮ್ಮ ರಾಶಿಯಲ್ಲಿರುವ ಶುಕ್ರ ಕೊಂಚ ಉಪಶಮನ ಕೊಡುತ್ತಾನೆ. ತೃತೀಯದಲ್ಲಿರುವ ಕುಜನು ಸಹನಾಶಕ್ತಿಯನ್ನು ಕೊಡುವನು. ಅನಿರೀಕ್ಷಿತ ಖರ್ಚುಗಳು ವಿಪರೀತವಾಗಿ ಇರುತ್ತವೆ. ಹೇಳಿಕೊಳ್ಳಲಾಗದ ದುಃಖವು ನಿಮ್ಮಲ್ಲಿ ಇರಲಿದೆ. ಕುಟುಂಬದಲ್ಲಿ ಅಸಮಾಧಾನ ಉಂಟಾಗಬಹುದು. ಯಾವ ಕೆಲಸಗಳೂ ಬೇಗ ಮುಗಿಯುವುದಿಲ್ಲ. ಒತ್ತಡ ಹೆಚ್ಚು. ಗುರುಬಲ ಬರುವವರೆಗೂ ಕಾಯಲೇಬೇಕು. ಹನುಮಾನ್ ಚಾಲೀಸ್ ನ್ನು ಹಾಗೂ ವಿಷ್ಣು ಸಹಸ್ರನಾಮವನ್ನು ನಿತ್ಯವೂ ಪಠಿಸಿ.
ಲೇಖನ -ಲೋಹಿತಶರ್ಮಾ, ಇಡುವಾಣಿ