Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 26ರ ದಿನಭವಿಷ್ಯ
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 26 ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 26 ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ದೈವಂ ಮಾನುಷ ರೂಪೇಣ ಎಂಬ ಮಾತಿನಂತೆ ನಿಮ್ಮ ಅಗತ್ಯ, ಅನಿವಾರ್ಯಗಳಿಗೆ ವ್ಯಕ್ತಿಯೊಬ್ಬರ ಮೂಲಕವಾಗಿ ನೆರವು ಒದಗಿಬರುವಂಥ ಸಾಧ್ಯತೆಗಳಿವೆ. ಗಂಭೀರವಾದ ಸಮಸ್ಯೆ ಆಗಬಹುದು ಎಂದುಕೊಂಡಿದ್ದ ವಿಚಾರಗಳು ಬಹಳ ಸಲೀಸಾಗಿ ಬಗೆಹರಿಯಲಿವೆ. ಯಾವುದೇ ವಿಷಯಕ್ಕೆ ಪಂಥ ಕಟ್ಟುವುದಕ್ಕೆ ಹೋಗದಿರಿ. ಮನೆಯ ಮಾರಾಟಕ್ಕೆ ಇಟ್ಟಿದ್ದಲ್ಲಿ ಸೂಕ್ತ ವ್ಯಕ್ತಿಯ ಮೂಲಕ ಖರೀದಿಯ ಪ್ರಸ್ತಾವ ಬರುವ ಸಾಧ್ಯತೆಗಳಿವೆ. ಎಲ್ಲ ವಿಷಯಗಳನ್ನು ಹೃದಯದಿಂದ ಆಲೋಚನೆ ಮಾಡುವುದು ಉಪಯೋಗವಿಲ್ಲ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ವಾಹನ ಚಾಲನೆ ಮಾಡುವವರಿಗೆ ಆಯಾಸ ಹೆಚ್ಚಾಗಲಿದೆ. ಕೆಲವರಿಗೆ ಕಣ್ಣು ಮಂಜಾಗುವಂತೆ ಆಗಬಹುದು. ರಕ್ತದೊತ್ತಡದಂಥ ಸಮಸ್ಯೆಗಳು ಇರುವವರು ಸೂಕ್ತ ವೈದ್ಯೋಪಚಾರಗಳನ್ನು ಮಾಡಿಕೊಳ್ಳುವುದು ಮುಖ್ಯ. ಸ್ವಂತ ವ್ಯಾಪಾರ- ವ್ಯವಹಾರ ಮಾಡುವಂಥವರಿಗೆ ಸಾಲದ ಅಗತ್ಯ ಕಂಡುಬರಲಿದೆ. ನಿಮಗೆ ತೀರಾ ಅಗತ್ಯ ಇಲ್ಲ ಎಂದಾದಲ್ಲಿ ಈ ದಿನ ಪ್ರಯಾಣ ಮಾಡದಿರುವುದು ಉತ್ತಮ. ವಿನಾಕಾರಣವಾಗಿ ವ್ಯಾಜ್ಯಗಳು ಆಗಬಹುದು, ಎಚ್ಚರ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಧಾನಕ್ಕೆ ಎಲ್ಲವೂ ಸರಿಹೋಗುತ್ತದೆ ಎಂಬ ಭಾವನೆ ಮೂಡಲಿದೆ. ಸಣ್ಣ- ಪುಟ್ಟ ಯೋಜನೆಗಳು ರೂಪಿಸುವುದಕ್ಕೆ ಅಗತ್ಯ ಸಂಪನ್ಮೂಲಗಳನ್ನು ಒಟ್ಟುಗೂಡಿಸುವುದಕ್ಕೆ ಶುರು ಮಾಡುತ್ತೀರಿ. ಊಟ- ತಿಂಡಿ ವಿಚಾರದಲ್ಲಿ ಪೊಗದಸ್ತಾದ ಆತಿಥ್ಯ ಸವಿಯುವಂಥ ಯೋಗ ಇದೆ. ದೂರದ ಊರಿನಿಂದ ಶುಭ ಸುದ್ದಿ ಕೇಳಿಬರುವಂಥ ಯೋಗ ಇದೆ. ನಿಮ್ಮ ಕೈಯಿಂದ ಹಣ ಹಾಕಿ, ಇತರರಿಗೆ ಅನುಕೂಲ ಮಾಡಿಕೊಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ದೂರ ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸರ್ಕಾರಿ ಉದ್ಯೋಗಗಳಿಗೆ ಪ್ರಯತ್ನ ಮಾಡುತ್ತಿರುವವರಿಗೆ ಬಹಳ ಒತ್ತಡ ಸೃಷ್ಟಿಯಾಗಲಿದೆ. ಪ್ರೇಮಿಗಳಿಗೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ. ಮನೆಯಲ್ಲಿ ಈ ಬಗ್ಗೆ ಹಿರಿಯರಿಗೆ ವಿಚಾರ ತಿಳಿಸುವ ಸಾಧ್ಯತೆ ಇದೆ. ಸಿನಿಮಾದ ತಾಂತ್ರಿಕ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಹೊಸದಾದ ದೊಡ್ಡ ಪ್ರಾಜೆಕ್ಟ್ ಗಳನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಇದರಿಂದ ಹೆಸರು, ಕೀರ್ತಿ ಹಾಗೂ ಹಣ ದೊರೆಯುವ ಯೋಗ ಇದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಹಳೇ ಪ್ರೇಮ ಪ್ರಸಂಗಗಳು ನಿಮ್ಮನ್ನು ಈ ದಿನ ಕಾಡಲಿದೆ. ಯಾವುದೋ ಮಾತು, ಹಾಡು, ಪುಸ್ತಕದ ಸಾಲಿನ ಕಾರಣಕ್ಕೆ ಕಣ್ಣೀರಾಗುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಮಾಡುವುದು ಮುಖ್ಯವಾಗುತ್ತದೆ. ಮೊದಲ ಬಾರಿಗೆ ಯಾವುದಾದರೂ ಪ್ರಯತ್ನ ಮಾಡುತ್ತಿದ್ದೀರಿ ಎಂದಾದಲ್ಲಿ ಸಿದ್ಧತೆಯನ್ನು ಚೆನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಮನೆಯ ಇಂಟೀರಿಯರ್ ಡಿಸೈನರ್ಗಳಿಗೆ ಹೊಸ ಅವಕಾಶಗಳು ದೊರೆಯಲಿವೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಭೂಮಿ- ಆಸ್ತಿ ವಿಚಾರಕ್ಕೆ ಬಹಳ ಮುಖ್ಯವಾದ ಚರ್ಚೆ ನಡೆಸಲಿದ್ದೀರಿ. ಕುಟುಂಬಸ್ಥರು ನಿಮ್ಮಿಂದ ನಿರೀಕ್ಷೆ ಮಾಡುವುದು ಬಹಳ ಹೆಚ್ಚಾಗುತ್ತದೆ ಎಂಬ ಆತಂಕ ನಿಮ್ಮನ್ನು ಬಹಳ ಕಾಡಲಿದೆ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು, ನಿಮ್ಮ ಸಮಯದಲ್ಲಿ ದೊಡ್ಡ ಪ್ರಮಾಣ ವ್ಯರ್ಥವಾಗುವ ಸಾಧ್ಯತೆ ಇದೆ. ಹೊಸಬರು ಪರಿಚಯವಾಗಿ, ಹೂಡಿಕೆಯ ಪ್ರಸ್ತಾವವನ್ನು ಇಟ್ಟಲ್ಲಿ ಅದೆಷ್ಟೇ ಲಾಭದಾಯಕ, ಆಕರ್ಷಕ ಎಂದೆನಿಸಿದರೂ ತಕ್ಷಣ ಏನೂ ತೀರ್ಮಾನ ಕೈಗೊಳ್ಳಬೇಡಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಕೆಲಸದ ವಿಚಾರದಲ್ಲಿ ವೇಗ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ. ಸ್ನೇಹಿತರು- ಸಂಬಂಧಿಗಳ ಮೂಲಕ ಕೆಲವು ಸಲಹೆ- ಸೂಚನೆಗಳು ಬರಬಹುದು. ಇದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಬಗ್ಗೆ ಆಲೋಚಿಸಿ. ಮಕ್ಕಳ ಬೆಳವಣಿಗೆಗೆ, ಭವಿಷ್ಯಕ್ಕಾಗಿ ತುಂಬ ದೊಡ್ಡದಾದ ಯೋಜನೆಯನ್ನು ಹಾಕಿಕೊಳ್ಳಲಿದ್ದೀರಿ. ಸಂಗಾತಿಯ ಮಾತಿಗೂ ಮನ್ನಣೆಯನ್ನು ನೀಡಿ. ಕೃಷಿ ವಲಯದಲ್ಲಿ ಇರುವವರಿಗೆ ಸಂಭ್ರಮದ ವಾತಾವರಣ ಇರುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮಲ್ಲಿನ ಆತ್ಮವಿಶ್ವಾಸ, ಧೈರ್ಯ ಹೊಸ ಸಾಧ್ಯತೆಗಳು, ಅವಕಾಶಗಳನ್ನು ತೆರೆದಿಡುತ್ತವೆ. ನಿಮ್ಮ ಭವಿಷ್ಯ, ಸಾಮರ್ಥ್ಯವನ್ನು ಇತರರು ನಿರ್ಧಾರ ಮಾಡುವುದಕ್ಕೆ ಅವಕಾಶವನ್ನು ನೀಡದಿರಿ. ಸಣ್ಣ ಸಣ್ಣ ಹೂಡಿಕೆಗಳು ದೊಡ್ಡ ರಿಟರ್ನ್ ನೀಡುವ ಸೂಚನೆ ಕಂಡುಬರಲಿದೆ. ಸಾಲ ತೀರಿಸಿಕೊಳ್ಳುವ ಬಗ್ಗೆ ಗಂಭೀರವಾದ ಆಲೋಚನೆಯನ್ನು ಮಾಡಲಿದ್ದೀರಿ. ಮನೆಯ ಖರ್ಚನ್ನು ಯೋಜಿಸುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಹಣ ಹೊಂದಿಸಿಕೊಳ್ಳುವುದು, ಬಟ್ಟೆ ಹೊಂದಿಸಿಕೊಳ್ಳುವುದು, ಯಾವುದಾದರೂ ಮುಖ್ಯ ವಿಚಾರವನ್ನು ಸಂಗ್ರಹಿಸುವುದು ಇಂಥವುಗಳಿಗೆ ದಿನದ ಹೆಚ್ಚಿನ ಸಮಯವು ಹೋಗಲಿದೆ. ಸ್ನೇಹಿತರು- ಸಂಬಂಧಿಕರು ತಮ್ಮ ಮನೆಯ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸುವ ಸಾಧ್ಯತೆ ಇದೆ. ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿ. ಮುಖ್ಯ ದಾಖಲೆ- ಪತ್ರಗಳಲ್ಲಿ ಸಣ್ಣ -ಪುಟ್ಟ ಲೋಪ, ದೋಷಗಳಾಗಿ, ಸಮಸ್ಯೆಗಳಂತೆ ಕಾಡುವ ಸಾಧ್ಯತೆಗಳಿವೆ.
ಲೇಖನ- ಎನ್.ಕೆ.ಸ್ವಾತಿ