ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 20 ಶುಕ್ರವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ಶುಕ್ರವಾರ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಮೂಲ, ಯೋಗ: ವ್ಯಾಘಾತ, ಕರಣ: ವಣಿಜ, ರಾಹು ಕಾಲ ಬೆಳಗ್ಗೆ 11 ಗಂಟೆ 19 ನಿಮಿಷದಿಂದ ಮಧ್ಯಾಹ್ನ 12 ಗಂಟೆ 34 ನಿಮಿಷದವರೆಗೆ, ಸೂರ್ಯೋದಯ: ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 24 ನಿಮಿಷಕ್ಕೆ.
ತಾ. 20-01-2023 ರ ಶುಕ್ರವಾರ ರಾಶಿ ಭವಿಷ್ಯ ಹೀಗಿದೆ:
ಮೇಷ: ನೀವು ಭೂಮಿಯ ವ್ಯವಹಾರವನ್ನು ಮಾಡುತ್ತಿದ್ದರೆ ಇಂದು ಲಾಭವನ್ನು ಪಡೆಯುವಿರಿ. ನೀವು ಪ್ರಯತ್ನಿಸಿದ ಕಾರ್ಯಗಳು ಫಲವನ್ನು ಕೊಡಲಿವೆ. ವಾಹನವನ್ನು ಓಡಿಸುವ ಎಚ್ಚರಿಕೆಯಿಂದ ಇರಿ. ದೂರದ ಊರಿಗೆ ಅನಿವಾರ್ಯವಾಗಿ ಹೋಗಿ ಆರೋಗ್ಯವನ್ನು ಕೆಡಿಸಿಕೊಳ್ಳುವಿರಿ. ಯಾರದೋ ಸಿಟ್ಟನ್ನು ಯಾರ ಮೇಲೋ ತೀರಿಸಿಕೊಳ್ಳುವ ನಿಮ್ಮ ಸ್ವಭಾವವು ಒಳ್ಳೆಯದಲ್ಲ. ತಿದ್ದಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಕರ್ತವ್ಯಗಳನ್ನು ಮಾಡಲು ಹಿಂದೇಟು ಹಾಕದಿರಿ.
ವೃಷಭ: ಹಣವೇ ನಿಮ್ಮ ಪಾಲಿಗೆ ಮುಖ್ಯವೆಂದು ಅಂದುಕೊಂಡಿರುವ ನಿಮಗೆ ಅದು ಮುಖ್ಯವಲ್ಲ ಎಂದು ಅನ್ನಿಸಲು ಆರಂಭವಾಗಬಹುದು. ಮನೆಯ ಚಿಂತೆಯು ನಿಮ್ಮನ್ನು ಬಹಳ ಕಾಡಬಹುದು. ಸಹೋದರರ ಜೊತೆ ಕಲಹವು ಏರ್ಪಟ್ಟು ಕೆಲವು ಕಾಲ ಮೌನವಹಿಸುವಿರಿ. ಕೃಷಿಯ ಜೀವನ ನಿಮಗೆ ಬಹಳ ಸುಖವನ್ನು ನೀಡುತ್ತದೆ ಎಂದನ್ನಿಸುತ್ತಿರುತ್ತದೆ. ಅಮೂಲ್ಯವಾದ ವಸ್ತುವೊಂದನ್ನು ಕಳೆದುಕೊಂಡು ಪಶ್ಚಾತ್ತಪ ಪಡುವಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗಲಿದೆ.
ಮಿಥುನ: ನಿಮ್ಮ ಕಾರ್ಯದ ದಕ್ಷತೆಯನ್ನು ಗಮನಿಸಿ, ನಿಮ್ಮನ್ನೇ ಹುಡುಕಿಕೊಂಡು ಕೆಲವರು ಬರುವ ಸಾಧ್ಯತೆ ಇದೆ. ವೃತ್ತಿಯನ್ನು ಬದಲಿಸಬಹುದು. ಮನೆಯಲ್ಲಿ ಸುಂದರ ವಾತಾವರಣವಿರುತ್ತದೆ. ಸಂಗಾರಿತಿಯಿಂದ ದೂರ ಉಳಿಬೇಕಾದ ಸ್ಥತಿ ಬರಬಹುದು. ಮಾತಿನಿಂದ ಯಾರನ್ನೂ ಟೀಕಿಸಲು ಹೋಗಬೇಡಿ. ನಿಮ್ಮನ್ನು ಟೀಕಿಸಲು ಜನರು ಕಾದುಕುಳಿತಿರುತ್ತಾರೆ. ಎಷ್ಟೋ ವಿಷಯಗಳು ಅರ್ಥವಾಗದೇ ಮುಗಿದುಹೋಗಿದೆ ಎಂದು ಅನ್ನಿಸುತ್ತಿರುತ್ತದೆ.
ಕಟಕ: ನೀವಿಂದು ನೋಡಲು ಸಾಮನ್ಯರಂತೆ ಕಂಡರೂ ನಿಮ್ಮ ಪ್ರಭಾವವು ಅಧಿಕವಾಗಿರುತ್ತದೆ. ಸಾಮಾಜಿಕವಾಗಿ ನಿಮ್ಮನ್ನು ಗುರುತಿಸಿ ಸಮ್ಮಾನಿಸಬಹುದು. ಕಲಾವಿದರಾದ ನೀವು ಇಂದು ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ಆಕಸ್ಮಿಕ ಧನಲಾಭವು ನಿಮ್ಮ ಬದುಕನ್ನು ಖುಷಿಯಾಗಿ ಇಡಲಿದೆ. ಮತ್ತೊಬ್ಬರಿಗೆ ಸಹಾಯ ಮಾಡುವ ಅವಕಾಶ ಬಂದಾಗ ಅದನ್ನು ಅಲ್ಲಗಳೆಯಬೇಡಿ. ಉದ್ಯೋಗದ ಸ್ಥಳ ನಿಮಗೆ ಅನೇಕ ಅನುಕೂಲಗಳನ್ನು ಮಾಡಬಹುದು.
ಸಿಂಹ: ಉತ್ತಮವಾದ ನಡೆಯೇ ನಿಮ್ಮ ಬಲವೆಂದು ಅರಿವಾಗುವ ದಿನ. ಹೊರಗಿನ ಆಹಾರವನ್ನು ತಿಂದು ಅಸ್ವಸ್ಥರಾಗಬೇಡಿ. ವಾಹನಕ್ಕೋಸ್ಕರ ಸಾಲಮಾಡುವ ಸ್ಥಿತಿಯು ಬರಬಹುದು. ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದರೆ ಸಂತೋಷಕರವಾದ ಸುದ್ದಿಯೊಂದು ನಿಮ್ಮ ಪಾಲಿಗೆ ಇರುತ್ತದೆ. ನಿರುತ್ಸಾಹಿಗಳಾಗಿ ಕುಳಿತುಕೊಳ್ಳದೇ ಏನನ್ನಾದರೂ ಸಾಧಿಸಬೇಕು ಎಂಬ ಮನಸ್ಸು ನಿಮಗೆ ಬರುತ್ತದೆ. ಒತ್ತಡದಿಂದ ಯಾವುದನ್ನೂ ಮಾಡಲು ಹೋಗಬೇಡಿ.
ಕನ್ಯಾ: ನಿಮ್ಮ ಒಳ್ಳೆಯತನಕ್ಕೆ ಯಾವ ಫಲವಿಲ್ಲ. ಎಲ್ಲ ನಿರ್ಥಕ ಎನ್ನುವ ಭಾವನೆಯು ನಿಮ್ಮಲ್ಲಿ ಬರಬಹುದು. ಯಾವ ಸಸಿಯೂ ನೆಟ್ಟ ಮರುಕ್ಷಣವೇ ಫಲವನ್ನು ಕೊಡುವುದಿಲ್ಲ ಎಂಬ ವಿಚಾರವು ನಿಮ್ಮೊಳಗೆ ಸರಿಯಾಗಿ ಬೇರೂರಿರಲಿ. ವಾತಕ್ಕೆ ಸಂಬಂಧಿಸಿದ ರೋಗಗಳು ಬರಬಹುದು. ವೈದ್ಯರ ಅಥವಾ ಮನೆಮದ್ದನ್ನು ಮಾಡಿಕೊಳ್ಳಿ. ಆಲಸ್ಯದಿಂದ ನಿಮ್ಮ ಕಾರ್ಯಗಳು ನಿಧಾನವಾಗಲಿದೆ. ವ್ಯಾಪರಸ್ಥರಿಗೆ ತಕ್ಕಮಟ್ಟಿನ ಲಾಭವು ಸಿಗಲಿದೆ.
ತುಲಾ: ಕುಟುಂಬಕ್ಕೆ ಯೋಗ್ಯವಾದ ಹೆಸರನ್ನು ತಂದುಕೊಡಲಿದ್ದೀರಿ. ವಿದೇಶಕ್ಕೆ ಹೋಗಲು ನಿಮಗೆ ಕಛೇರಿಯಲ್ಲಿ ಅನುಮೋದನೆ ಸಿಗಬಹುದು. ಹೊರದೇಶದಲ್ಲಿ ಹೊಸದಾಗಿ ಕೆಲಸವನ್ನು ಹುಡುಕುತ್ತಿದ್ದರೆ ಅದನ್ನು ನಿಲ್ಲಿಸಿ. ಸದ್ಯ ವಿದೇಶದ ಕಡೆಗೆ ಗಮನವನ್ನು ಕೊಡಬೇಡಿ. ಇರುವ ಸ್ಥಳದಲ್ಲಿಯೇ ಸಿಕ್ಕ ಉತ್ತಮ ಕೆಲಸವನ್ನು ಮಾಡಿ. ನಿಮ್ಮನ್ನು ಆಡಿಕೊಳ್ಳುವ ಜನರು ನಿಮ್ಮ ಪಕ್ಕದಲ್ಲಿಯೇ ಇರುತ್ತಾರೆ. ಅವರಿಗೆ ಕಾಣಿಸುವಂತೆ ಏನನ್ನೂ ಮಾಡಬೇಡಿ.
ವೃಶ್ಚಿಕ: ಅನಾರೋಗ್ಯವು ನಿಮಗೆ ಅಭ್ಯಾಸವಾಗಿದ್ದರೂ ಅದನ್ನೂ ಮೀರಲು ಪ್ರಯತ್ನಿಸಬೇಡಿ. ಪೂರ್ಣವಿಶ್ರಾಂತಿಗೆ ನೀವು ಒಳಪಡಬೇಕಾದೀತು. ಅರ್ಥಿಕತೆಯು ಏರಿಕೆಯಾಗಲಿದೆ. ಸ್ನೇಹಿತರ ಜೊತೆ ಮೋಜಿನಲ್ಲಿ ಇರುವ ಮನಸ್ಸು ಮಾಡುವಿರಿ. ಅನಾಹುತಕ್ಕೆ ಎಡೆಮಾಡಿಕೊಡಬೇಡಿ. ಮಕ್ಕಳಿಂದ ನಿಮ್ಮ ಕೀರ್ತಿಯು ಹಾಳಾಗಬಹುದು. ನಿಮ್ಮ ಮಾತಿಗೆ ಬೆಲೆಯು ಬರುವಂತೆ ಮಾತನಾಡಿ. ವೈದ್ಯರು ಅನಾಯಾಸವಾಗಿ ಇರುವರು.
ಧನು: ಸಭೆ ಅಥವಾ ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಇಂದಿನ ಭೋಜನವು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಲಿದೆ. ತಂತ್ರಜ್ಞರು ಉನ್ನತ ಸ್ಥಾನದ ಬಯಕೆಯಿಂದ ಕಛೇರಿಯನ್ನು ಬಿಡಬಹುದು. ಅನಿರೀಕ್ಷಿತ ವಾರ್ತೆಯು ನಿಮ್ಮನ್ನು ಚಿಂತೆಗೆ ದೂಡಲಿದೆ. ಪ್ರಶಾಂತವಾದ ವಾತಾವರಣದಲ್ಲಿ ಕೆಲವು ಸಮಯವನ್ನು ಕಳೆದು ಬನ್ನಿ. ಉನ್ನತ ಹುದ್ದೆಗಾಗಿ ಬರೆಯುವ ಪರೀಕ್ಷೆಯಲ್ಲಿ ನಿಮಗೆ ಜಯ ಸಿಗಲಿದೆ. ದೂರದ ಊರಿಗೆ ಪ್ರಯಾಣ ಮಾಡಲಿದ್ದೀರಿ.
ಮಕರ: ನೂತನವಾಗಿ ನಿರ್ಮಿಸಲ್ಪಟ್ಟ ಗೃಹಪ್ರವೇಶವನ್ನು ಮಾಡಲಿದ್ದೀರಿ. ನೀವಿಡುವ ಹೆಜ್ಜೆಗಳು ಸರಿಯಾಗಿರಿಲಿ. ಉನ್ನತ ಚಿಂತನೆಗಳು ನಿಮ್ಮನ್ನು ಉತ್ತಮ ಸ್ತರಕ್ಕೆ ಕೊಂಡೊಯ್ಯುವುದು. ಎಲ್ಲರ ಜೊತೆಗೆ ಸ್ನೇಹದಿಂದ ಮಾತನಾಡುವಿರಿ. ಆಪ್ತಬಂಧುಗಳ ಅಗಲಿಕೆಯಿಂದ ನೋವಾಗಬಹುದು. ಒತ್ತಡದಿಂದ ನೀವು ಉದ್ವೇಗಕ್ಕೆ ಒಳಗಾಗಬಹುದು. ನಂಬಿಕೆಯನ್ನು ಗಳಿಸಲು ಸತತ ಪ್ರಯತ್ನವನ್ನು ಮಾಡುವಿರಿ. ಶ್ರೇಷ್ಠ ವ್ಯಕ್ತಿಗಳ ಭೇಟಿಯಿಂದ ಹೊಸ ಕಾರ್ಯಗಳನ್ನು ಮಾಡಲು ಉತ್ಸುಕರಾಗಿರುವಿರಿ.
ಕುಂಭ: ಮೃಷ್ಟಾನ್ನದ ಭೋಜನವು ನಿಮಗೆ ಸಂತೃಪ್ತಿಯನ್ನು ತರಲಿದೆ. ಆಲಸ್ಯದಿಂದ ನಿಮಗೆ ಕೆಲಸದಲ್ಲಿ ಅನಾಸಕ್ತಿ ಉಂಟಾಗಬಹುದು. ಹಣವು ಖರ್ಚಾಗುವ ಸಾಧ್ಯತೆ ಇದೆ. ಶತ್ರುಗಳು ನಿಮ್ಮ ಪತನವನ್ನು ನಿರೀಕ್ಷಿಸುತ್ತಿರುತ್ತಾರೆ. ಒಂದನ್ನು ಪಡೆಯಲು ಹೋಗಿ ಎರಡನ್ನು ಕಳೆದುಕೊಳ್ಳಬೇಕಾಗಿಬರಬಹುದು. ಜಾರಿ ಬಿದ್ದು ನೋವನ್ನು ಅನುಭವಿಸುವಿರಿ. ಜಾಗರೂಕರಾಗಿ ಹೆಜ್ಜೆಯನ್ನು ಹಾಕಿ. ದೂರದ ಪ್ರಯಾಣ ವ್ಯರ್ಥವಾಗಬಹುದು.
ಮೀನ: ಶ್ರಮಪಟ್ಟು ಮಾಡಿದ ಕೆಲಸವು ಕ್ಷಣದಲ್ಲಿ ನಾಶವಾಗಿ ಬೇಸರವುಂಟಾಗಬಹುದು. ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಿ. ಹಿರಿಯರ ದಿನವನ್ನು ಶ್ರದ್ಧೆಯಿಂದ ಮಾಡಿ. ಅನೇಕ ಲಾಭಗಳು ನಿಮಗಾಗಲಿವೆ. ನಿಮ್ಮ ಕಾರ್ಯಗಳಿಗೆ ಅಪರಿಚಿತರೂ ಸಹಾಯ ಮಾಡಲಿದ್ದಾರೆ. ಕೃತಜ್ಞತೆಯನ್ನು ಅರ್ಪಿಸಲು ಮರೆಯಬೇಡಿ. ನಿಮ್ಮ ಒಳ್ಳೆತನ ನಿಮಗೆ ವರವಾಗಿಯೇ ಇರಲಿದೆ. ಆರೋಗ್ಯವು ವ್ಯತ್ಯಾಸವಾದ ಕೂಡಲೇ ಬೇಕಾದ ಮದ್ದನ್ನು ಮಾಡಿ.
ಲೋಹಿತಶರ್ಮಾ, ಇಡುವಾಣಿ