ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 20ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Numerology Weekly Horoscope: ಸಂಖ್ಯಾಶಾಸ್ತ್ರ ಪ್ರಕಾರ ಜನವರಿ 15ರಿಂದ 21ರ ತನಕ ವಾರಭವಿಷ್ಯ
ಕೃಷಿಯನ್ನು ಮಾಡುತ್ತಿರುವವರಿಗೆ ಈ ದಿನ ವಿಶೇಷವಾಗಿರುತ್ತದೆ. ಮನೆಗೆ ಹೊಸದಾಗಿ ವಸ್ತುಗಳನ್ನು ತರುವ ಸಾಧ್ಯತೆ ಇದೆ. ಮತ್ತು ಇದಕ್ಕಾಗಿ ಸ್ವಲ್ಪ ಮೊತ್ತವನ್ನಾದರೂ ಸಾಲ ಮಾಡಬೇಕಾಗಬಹುದು. ಇನ್ನು ಕಾಲು ನೋವಿನಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯೋಪಚಾರದ ಬಗ್ಗೆ ಮಾಹಿತಿ ದೊರೆಯಲಿದೆ. ಸಂಘ- ಸಂಸ್ಥೆಗಳು, ರಾಜಕೀಯ ಪಕ್ಷಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಉತ್ತಮ ಸ್ಥಾನ- ಮಾನ ದೊರೆಯುವ ಯೋಗ ಇದೆ.
ಹಳೇ ಸ್ನೇಹಿತರನ್ನು ಭೇಟಿ ಆಗುವ ಯೋಗ ಇದ್ದು, ಪುಷ್ಕಳವಾದ ಭೋಜನವನ್ನು ಸವಿಯುವ ಯೋಗ ಇದೆ. ದೀರ್ಘಕಾಲದಿಂದ ನಿಮ್ಮ ಮನಸ್ಸಿನಲ್ಲಿ ಇರುವ ವಿಚಾರವನ್ನು ಹೇಳಿಕೊಳ್ಳುವುದಕ್ಕೆ ಸನ್ನಿವೇಶ ಸೃಷ್ಟಿ ಆಗಲಿದೆ. ತೀರ್ಥಕ್ಷೇತ್ರ ದರ್ಶನ ಮಾಡಬೇಕು ಅಂದುಕೊಳ್ಳುವವರು ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ವಾಹನ ಖರೀದಿ ಮಾಡಬಹುದು ಅಥವಾ ಅದಕ್ಕಾಗಿ ಅಡ್ವಾನ್ಸ್ ಮಾಡುವ ಸಾಧ್ಯತೆ ಕೂಡ ಇದೆ.
ಸೈಟು, ಮನೆ ಅಥವಾ ಅಪಾರ್ಟ್‌ಮೆಂಟ್ ಖರೀದಿಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತವಾದದ್ದು ದೊರೆಯುವ ಅವಕಾಶ ಇದೆ. ಆದರೆ ಶೀತ, ಜ್ವರದಂಥ ಸಮಸ್ಯೆ ಕಾಡಬಹುದು, ಎಚ್ಚರಿಕೆಯಿಂದ ಇರಬೇಕು. ಈ ದಿನ ನೀವಿರುವ ಸಮೀಪದಲ್ಲಿ ಇರುವ ಭೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆಯಿರಿ.
ಮನಸ್ಸಿನಲ್ಲಿ ಒಂದು ಬಗೆಯ ಉಲ್ಲಾಸ ಇರುತ್ತದೆ. ಮಕ್ಕಳ ಜತೆಗೆ ಅಥವಾ ನಿಮಗಿಂತ ಚಿಕ್ಕ ವಯಸ್ಸಿನವರೊಂದಿಗೆ ಉತ್ತಮವಾದ ಸಮಯ ಕಳೆಯುವ ಅವಕಾಶ ಇದೆ. ಈ ದಿನದ ದ್ವಿತೀಯಾರ್ಧದಲ್ಲಿ ನಿಮ್ಮ ಮನೆಗೆ ಅತಿಥಿಗಳು ಭೇಟಿ ನೀಡುವ ಅವಕಾಶ ಇದೆ. ಇದರಿಂದ ಸಂಭ್ರಮ ಹೆಚ್ಚಾಗಲಿದೆ. ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ಈ ದಿನ ಫಲಿತ ದೊರೆಯಲಿದ್ದು, ಇತರರ ಮೆಚ್ಚುಗೆಯ ಮಾತುಗಳನ್ನು ಕೇಳಲಿದ್ದೀರಿ.
ಸ್ತ್ರೀಯರಾಗಿದ್ದಲ್ಲಿ ಪುರುಷರ ವಿಚಾರವಾಗಿ, ಪುರುಷರಾಗಿದ್ದಲ್ಲಿ ಸ್ತ್ರೀಯರ ವಿಚಾರದಲ್ಲಿ ಜಾಗ್ರತೆಯಿಂದ ಇರಬೇಕು. ನಿಮ್ಮ ಮಾತು, ಬಾಡಿ ಲಾಂಗ್ವೇಜ್ ಅನ್ನು ಇತರರು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಅಥವಾ ಬೇಕೆಂತಲೆ ಅಪಪ್ರಚಾರವನ್ನು ಮಾಡಬಹುದು. ಮದ್ಯಪಾನದ ಅಭ್ಯಾಸ ಇರುವವರು ಮಾತಿನ ಮೇಲೆ ನಿಗಾ ಇಟ್ಟುಕೊಳ್ಳಿ. ನಿಮ್ಮದೇ ತಪ್ಪಿದ್ದಾಗಲೂ ವಾದ ಮಾಡುತ್ತಾ ನಿಲ್ಲದಿರಿ.
ಎಲ್ಲವನ್ನೂ ಮೊದಲಿಂದ ಶುರು ಮಾಡಬೇಕಾಗುತ್ತದೆ. ಅದು ಸ್ನೇಹ, ಸಂಬಂಧ, ಈಗಾಗಲೇ ಅರ್ಧವಾದರೂ ಮಾಡಿ ಮುಗಿಸಿದ ಕೆಲಸ ಹೀಗೆ ಎಲ್ಲವನ್ನೂ ಆರಂಭದಿಂದ ಪ್ರಾರಂಭಿಸಬೇಕಾಗುತ್ತದೆ. ಹೋಟೆಲ್ ಉದ್ಯಮದವರು ಸರ್ಕಾರದಿಂದ ಇರುವ ನಿಯಮಗಳನ್ನು ಪಾಲಿಸುತ್ತಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ನಿಮಗೆ ಈ ವರೆಗೆ ಸಿಕ್ಕ ಸ್ಥಾನ- ಮಾನ, ಗೌರವ, ಅಧಿಕಾರಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ.
ಸಂಬಂಧವೇ ಇಲ್ಲದ ವಿಚಾರ, ವ್ಯಕ್ತಿಗಳಿಗಾಗಿ ವೃಥಾ ಅಲೆದಾಟ ಇದೆ. ನಿಮ್ಮ ಜೇಬಿನಿಂದಲೇ ಖರ್ಚು ಕೂಡ ಆಗಬಹುದು. ಆದ್ದರಿಂದ ನೀವಾಗಿಯೇ ಯಾವುದನ್ನು ಮೈ ಮೇಲೆ ಹಾಕಿಕೊಳ್ಳಬೇಡಿ. ನಿಮ್ಮ ಅಗ್ರೆಸಿವ್ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಿ. ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ ಸೂಕ್ತ ವೈದ್ಯರಲ್ಲಿ ಕೂಡಲೇ ತೋರಿಸಿಕೊಳ್ಳಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ.
ಈ ದಿನ ನಿಮ್ಮನ್ನು ಒಂಟಿತನ ಬಹಳ ಕಾಡುತ್ತದೆ. ನಿಮಗೆ ಈ ಸಲಹೆ ತಮಾಷೆ ಅನಿಸಬಹುದು; ಒಂದು ಸಿನಿಮಾಗೆ ಹೋಗಬೇಕೆನಿಸಿದರೆ ಹೋಗಿ. ಸ್ನೇಹಿತರ ಮನೆಗೆ ಹೋಗಬೇಕೆನಿಸಿದರೆ ಹೋಗಿ. ಆದರೆ ಹಳೆಯದನ್ನೆಲ್ಲ ನೆನಪಿಸಿಕೊಳ್ಳುತ್ತಾ ಮನಸ್ಸನ್ನು ಕಹಿ ಮಾಡಿಕೊಳ್ಳಬೇಡಿ. ಕೆಲವು ಕಹಿ ವಿಚಾರಗಳಿಗೆ ಮರೆವು ಮದ್ದು. ಇತರರಿಗೆ ಎಲ್ಲ ವಿಚಾರಕ್ಕೂ ಅವಲಂಬನೆ ಆಗುತ್ತಿದೆ ಎಂದೆನಿಸಬಹುದು. ಆದರೆ ಅನ್ಯ ಮಾರ್ಗವಿಲ್ಲ.
ದಾನ- ಧರ್ಮಗಳಿಂದ, ಮತ್ತೊಬ್ಬರಿಗೆ ಸಹಾಯ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಗಾರ್ಡನಿಂಗ್, ಸಂಗೀತ ಕೇಳುವುದು ಹೀಗೆ ಸಮಯ ಕಳೆಯಲಿದ್ದೀರಿ. ನಿಮ್ಮ ಇನ್‌ಟ್ಯೂಷನ್ ಬಹಳ ಚೆನ್ನಾಗಿ ಕೆಲಸ ಮಾಡಲಿದೆ. ನಿಮಗೆ ದೊರೆಯುವ ಪ್ರೇರಣೆಯಿಂದ ಭವಿಷ್ಯದಲ್ಲಿ ಅನುಕೂಲ ಇದೆ. ಹೊಸದಾಗಿ ಕಾರು ಖರೀದಿ ಮಾಡಬೇಕು ಎಂದಿರುವವರಿಗೆ ಈ ದಿನ ಅನುಕೂಲ ಇದೆ.
ಲೇಖನ- ಎನ್.ಕೆ.ಸ್ವಾತಿ