Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ ಭವಿಷ್ಯ ಹೀಗಿದೆ
2023 ಮಾರ್ಚ್ 8ರ ಬುಧವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 8 ಬುಧವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಶೂಲಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 46 ನಿಮಿಷಕ್ಕೆ, ಸೂರ್ಯಾಸ್ತ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:44 ರಿಂದ ಮಧ್ಯಾಹ್ನ 02:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:16 ರಿಂದ ಬೆಳಗ್ಗೆ 09:45ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:14 ರಿಂದ ಮಧ್ಯಾಹ್ನ 12:44ರ ವರೆಗೆ.
ಮೇಷ: ಹಣಕಾಸಿನ ತೊಂದರೆ ಅತಿಯಾಗಿ ಇರಲಿದ್ದು ಸಾಲವನ್ನು ಮಾಡಬೇಕಾಗಿಬರಬಹುದು. ವಾಹನ ಖರೀದಿಯ ವಿಚಾರದಲ್ಲಿ ನೀವು ಇನ್ನೊಬ್ಬರ ಸಲಹೆಯನ್ನು ಪಡೆಯುವುದು ಉತ್ತಮ. ಕೆಲವು ಸಮಸ್ಯೆಗಳು ನಿಮ್ಮೆದುರು ಬರಬಹುದು. ಆಪ್ತರ ಸಲಹೆಯನ್ನು ಪಡೆದು ಸರಿಮಾಡಿಕೊಳ್ಳಿ. ಉದ್ಯೋಗದ ನಿಮಿತ್ತ ದೇಶಾಂತರ ಹೋಗಬೇಕಾಗಿ ಬರಬಹುದು. ದೂರದ ಊರಿಗೆ ಪ್ರಯಾಣವನ್ನು ಮಾಡಲಿದ್ದೀರಿ. ಸಂಗಾತಿಯ ಮಾತುಗಳಿಗೆ ಬೆಲೆ ಕೊಡದೇ ಇರುವಿರಿ. ಸಹನೆಯನ್ನು ಇಟ್ಟುಕೊಂಡಿರುವ ನೀವು ನಿಮ್ಮ ಆಯುಧವಾಗಿ ಇಟ್ಟುಕೊಂಡಿರುವಿರಿ. ವಲ್ಲೀಸಹಿತನಾದ ಕಾರ್ತಿಕೇಯನನ್ನು ಪ್ರಾರ್ಥಿಸಿ.
ವೃಷಭ: ನಿನ್ನೆಯ ಒತ್ತಡವೇ ಇಂದೂ ಮುಂದುವರಿಯಲಿದ್ದು, ವಿಶ್ರಾಂತಿಯನ್ನು ಅಪೇಕ್ಷಿಸುವಿರಿ. ಇಲ್ಲದಿದ್ದರೆ ನೀವು ಮಾಡುವ ಕೆಲಸವು ಅಶಿಸ್ತಿನಿಂದ ಇಡಿಯ ವ್ಯವಸ್ಥೆ ಹಾಳಾಗಬಹುದು. ದೂರದ ಬಂಧುಗಳು ನಿಮ್ಮ ಪರಿಚಯವನ್ನು ಮಾಡಿಕೊಳ್ಳುವರು. ಕೆಲವು ಸಂಗತಿಗಳು ಅನಿರೀಕ್ಷಿತವಾಗಿ ಬಂದು ಮನಸ್ಸಿನ ನೆಮ್ಮದಿಯನ್ನು ಹಾಳುಗೆಡವಲಿವೆ. ಅತಿಯಾದ ಆತ್ಮವಿಶ್ವಾಸದ ಜೊತೆ ಪೂರ್ವಾಪರಜ್ಞಾನವೂ ಇದ್ದಲ್ಲಿ ಕಾರ್ಯವು ಸರಿಯಾಗುವುದು. ಯಾರೇ ಸಲಹೆಕೊಟ್ಟರೂ ನಿಮ್ಮ ಸಾಮರ್ಥ್ಯವನ್ನು ನೋಡಿಕೊಂಡು ತೀರ್ಮಾನಕ್ಕೆ ಬನ್ನಿ. ಸ್ವಲ್ಪ ಅನಾರೋಗ್ಯವು ಬಾಧಿಸಬಹುದು. ಪರಮೇಶ್ವರಿಯನ್ನು ಪೂಜಿಸಿ.
ಮಿಥುನ: ನಿಮಗೆ ಆಪ್ತರೆನಿಸಿದವರೆಲ್ಲ ಆಪ್ತರಾಗುವುದಿಲ್ಲ. ಅವರೆದುರು ನಿಮ್ಮ ಎಲ್ಲ ವಿಚಾರಗಳನ್ನು ಹಂಚಿಕೊಳ್ಳಬೇಡಿ. ಮನೆಯಲ್ಲಿ ಆಡಿದ ಮಾತುಗಳು ನಿಮಗೆ ಅಪಮಾನವನ್ನು ತರಬಹುದು. ನಿದ್ರೆಯಿಲ್ಲದೇ ಮನಸ್ಸು ಕಿರಿಕಿರಿಯನ್ನು ಅನುಭವಿಸಬಹುದು. ತಂದೆಯು ನಿಮಗೆ ಹಣವನ್ನು ಕೊಡಲಿದ್ದಾರೆ. ಅವಶ್ಯಕವಿರುವ ವಸ್ತುಗಳನ್ನು ನೀವು ಪಡೆಯಲಿದ್ದೀರಿ. ಅವಾಕಶಗಳು ನೂರಿದ್ದರೂ ಯೋಗ್ಯತೆ ಹಾಗೂ ಸಾಮರ್ಥ್ಯವನ್ನು ಅರಿತುಕೊಂಡು ಮುಂದಡಿಯಿಡಿ. ಎಲ್ಲವನ್ನೂ ಒಮ್ಮೆಲೇ ಮುಗಿಸಬೇಕು ಎನ್ನುವ ಆತುರ ಬೇಡ. ಸಮಯಕ್ಕೆ ಸರಿಯಾಗಿ ಎಲ್ಲವೂ ಮುಗಿಯಲಿ. ವಿಷ್ಣು ಅಷ್ಟೋತ್ತರವನ್ನು ಓದಿ.
ಕಟಕ: ಇಂದು ನೀವು ಹಾಕಿಕೊಂಡ ಖರೀದಿಯ ಪಟ್ಟಿಯು ತುಂಬಾ ದೊಡ್ಡದಿದೆ. ಅದನ್ನು ಪೂರೈಸಲು ಬಹಳ ಪ್ರಯತ್ನವನ್ನು ಮಾಡುವಿರಿ. ನೀವು ಕೈಗೊಂಡ ಕಾರ್ಯಗಳು ಸಫಲವಾಗಲಿಲ್ಲವೆಂದು ಹತಾಶರಾಗುವಿರಿ. ಸಿಟ್ಟಿನಿಂದ ಬುಸುಗುಡವಿರಿ. ಗೊತ್ತು ಗುರಿ ಇಲ್ಲದವರನ್ನು ಆಪ್ತರನ್ನಾಗಿ ಮಾಡಿಕೊಳ್ಳಲು ಹೋಗಿ ಅನಾಹುತ ಮಾಡಿಕೊಳ್ಳಬೇಡಿ. ನಿಮಗಿರುವ ಖಾಯಿಲೆಯು ಇಂದು ಹೆಚ್ಚಾದೀತು. ಅಲ್ಪ ಧನಲಾಭವು ಆಗಲಿದೆ. ವಿದ್ಯುತ್ ಉಪಕರಣಗಳ ವ್ಯಾಪಾರಿಗಳಿಗೆ ಹೆಚ್ಚು ಲಾಭವಾಗಲಿದೆ. ಲಕ್ಷ್ಮೀನಾರಾಯಣರನ್ನು ಧ್ಯಾನಿಸಿ.
-ಲೋಹಿತಶರ್ಮಾ, ಇಡುವಾಣಿ
Published On - 5:00 am, Wed, 8 March 23