Nithya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ

2023 ಮಾರ್ಚ್ 8ರ ಬುಧವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nithya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ
ರಾಶಿ ಭವಿಷ್ಯImage Credit source: Odishatv.In
Follow us
Rakesh Nayak Manchi
| Updated By: Digi Tech Desk

Updated on:Mar 08, 2023 | 9:12 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 8 ಬುಧವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಶೂಲಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 46 ನಿಮಿಷಕ್ಕೆ, ಸೂರ್ಯಾಸ್ತ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:44 ರಿಂದ ಮಧ್ಯಾಹ್ನ 02:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:16 ರಿಂದ ಬೆಳಗ್ಗೆ 09:45ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:14 ರಿಂದ ಮಧ್ಯಾಹ್ನ 12:44ರ ವರೆಗೆ.

ಧನು: ನಿಮ್ಮ ಇಂದಿನ ಮತ್ತು ಅಂದಿನ ಸ್ಥಿತಿಯನ್ನು ನೆನೆಸಿಕೊಳ್ಳುವಿರಿ. ನಿಮ್ಮ ಪ್ರಗತಿ ನಿಮಗೇ ಹೆಮ್ಮೆಯಾಗಲಿದೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಪ್ರಯತ್ನಿಸುವಿರಿ. ಇಂದು ನೀವು ಆಪ್ತರಿಗೋಸ್ಕರ ಸಮಯವನ್ನು ಕೊಡುವಿರಿ. ಆದರೆ ಅವರು ನಿಮಗೆ ಬೆಲೆ ಕೊಡದೇ ಇರುವದನ್ನು ಕಂಡು ಬೇಸರಿಸವಾಗಬಹುದು.‌ಅವರಿಂದ ದೂರವೂ ಉಳಿಯಬಹುದು‌ ಖುಷಿಪಡುವ ಸಂಗತಿಗಳಿದ್ದರೂ ದುಃಖಿಗಳಾಗುವೇ ಅತಿಯಾಗಿ ಕಾಡುವುದು. ಶತ್ರುಗಳು ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬರಬಹುದು. ಬ್ಯಾಂಕ್ ಉದ್ಯೋಗಿಗಳಿಗೆ ಉನ್ನತಸ್ಥಾನವನ್ನು ನೀಡುವ ಪ್ರಸ್ತಾಪವಾಗಲಿದೆ‌. ವಿಷ್ಣು ಆಲಯಕ್ಕೆ ಹೊಕಗಿ ಸ್ವಲ್ಪ ಸಮಯ ಕಳೆದು ಬನ್ನಿ.

ಮಕರ: ನಿಮ್ಮ ಸಣ್ಣ ತಪ್ಪಿನಿಂದ ಆದ ಅನಾಹುತಕ್ಕೆ ಬಹಳ ಕಷ್ಟವನ್ನು ಅನುಭವಿಸುಬೇಕಾದೀತು. ತಂದೆ ಮತ್ತು ಮಕ್ಕಳಲ್ಲಿ ಆಸ್ತಿಯ ವಿಚಾರದಲ್ಲಿ ಕಲಹವಾಗಬಹುದು. ಇಂದಿನ ನಿಮ್ಮಕಛೇರಿಯ ಕೆಲಸಗಳು ಆಯಾಸವನ್ನು ತರಿಸುವುದು. ಇಂದು ಕಲಾವಿದರು ಅವಕಾಶಗಳನ್ನು ವಿದೇಶಗಳಲ್ಲಿ ಸೃಷ್ಟಿಕೊಳ್ಳಲಿದ್ದಾರೆ. ನಿಮ್ಮ ಮನೆಯ ನಿರ್ಮಾಣದ ಪ್ರಸ್ತಾಪವು ಇರಲಿದೆ. ವಾಹನವನ್ನು ನಿಧಾನವಾಗಿ ಚಲಾಯಿಸಿ. ಆತುರ ಬೇಡ. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು. ಅಪರೂಪದವರ ಭೇಟಿಯು ನಿಮಗೆ ಸಂತೋಷವನ್ನು ಕೊಡಲಿದೆ. ಆಂಜನೇಯನ ಸ್ತುತಿ‌ ಮಾಡಿ. ಧೈರ್ಯ ಬರುವುದು.

ಕುಂಭ: ನಿಮ್ಮ ಹಳೆಯ ಪ್ರೇಮಪ್ರಕರಣವು ಇಂದು ಬೆಳಕಿಗೆ ಯಾರದೋ ಮೂಲಕ ಬರಲಿದೆ. ಅದನ್ನು ತಾತ್ಸಾರಮಾಡದೇ ಕ್ರಮಬದ್ಧವಾಗಿ ಅದನ್ನು ಸರಿಮಾಡಿಕೊಳ್ಳಿ. ಕ್ರೀಡಪಟುಗಳು ತಮ್ಮ ಅವಿರತಶ್ರಮವನ್ನು ಗೆಲುವಿಗೋಸ್ಕರ ನಡೆಸಲಿದ್ದಾರೆ. ತಾಯಿಯಿಂದ ನಿಮಗೆ ಧನವು ಲಾಭವು ಉಂಟಾಗಬಹುದು. ಪಿತ್ತಕ್ಕೆ ಸಂಬಂಧಿಸಿದ ಖಾಯಿಲೆಗಳು ಬರಬಹುದು. ವ್ಯಾಪರದಲ್ಲಿ ಸ್ವಲ್ಪ ನಷ್ಟವನ್ನು ಕಾಣುವಿರಿ. ಕೃಷಿಕರು ತಮ್ಮ ಆದಾಯದಿಂದ ಸಂತಸಗೊಂಡು ಇನ್ನಷ್ಟು ಹೆಚ್ಚಿನ ಕೆಲಸವನ್ನು ಮಾಡುವರು. ರುದ್ರಾಭಿಷೇಕವನ್ನು ಮಾಡಿ. ಸಂಕಷ್ಟಕ್ಕೆ ಮುಕ್ತಿ ಸಿಗುವುದು.

ಮೀನ: ನಿಮ್ಮ ಸಂಕಷ್ಟಕ್ಕೆ ಆಪ್ತರ ಸಹಕಾರವು ಸಿಗಲಿದೆ. ಆಸ್ತಿಯ ವಿಚಾರವು ನ್ಯಾಯಾಲಯದ ಮೆಟ್ಟಿಲೇರಲಿದೆ. ತೀರ್ಥಕ್ಷೇತ್ರಗಳ ದರ್ಶನವನ್ನು ಪಡೆಯುವ ಮನಸ್ಸು ಮಾಡುವಿರಿ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು. ಕಾಲವು ಎಲ್ಲವನ್ನೂ ಸಾಧಿಸಿಕೊಡುವುದು. ಇಲ್ಲಿಯವರೆಗೆ ಇದ್ದ ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ. ಅಪರಿಚಿತಸ್ಥಳವು ಆಪ್ತವೂ ಆಗಲಿದೆ. ಮನೆಯಿಂದ ದೂರದಲ್ಲಿ ಇರುವವರಿಗೆ ಮನೆಯ ಹಂಬಲವಾಗಿ ಮನೆಗೆ ಬರುವರು. ಒಂಟಿಯಾಗಿ ಇರಲು ಇಷ್ಟಪಡುವಿರಿ. ಗುರುಕರುಣೆಯನ್ನು ಸಂಪಾದಿಸಿ ಇಂದು. ಸಕಲವೂ ನಿರಾತಂಕವಾಗಿ ಆಗುವುದು.

-ಲೋಹಿತಶರ್ಮಾ, ಇಡುವಾಣಿ

Published On - 5:30 am, Wed, 8 March 23

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!