Horoscope Today 12 September : ಈ ರಾಶಿಯವರೆದುರು ಇಂದು ಪೈಪೋಟಿಗೆ ನಿಲ್ಲಲಾಗದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಕೃಷ್ಣ ಪಕ್ಷದ ಪಂಚಮೀ ತಿಥಿ ಶುಕ್ರವಾರ ಹಸಿರು ನಿಶಾನೆ, ಆಡಳಿತದಲ್ಲಿ ಹಿನ್ನಡೆ, ದೃಷ್ಟಿ ಬದಲಾವಣೆ, ಶಿಕ್ಷೆಯ ಅನುಭವ, ಮರುಪಾವತಿ, ರಾಜಿನಾಮೆ ಇವೆಲ್ಲ ಇಂದಿನ ಭವಿಷ್ಯ.

Horoscope Today 12 September : ಈ ರಾಶಿಯವರೆದುರು ಇಂದು ಪೈಪೋಟಿಗೆ ನಿಲ್ಲಲಾಗದು
Horoscope
Edited By:

Updated on: Sep 12, 2025 | 5:44 AM

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಶೂಲಿ, ಕರಣ : ಕೌಲವ, ಸೂರ್ಯೋದಯ – 06 – 22 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:57 – 12:29, ಗುಳಿಕ ಕಾಲ 07:54 – 09:26, ಯಮಗಂಡ ಕಾಲ 16:32 – 17:04,

ಮೇಷ ರಾಶಿ :

ಪೂರ್ವ ಸಿದ್ಧತೆ ಇಲ್ಲದೇ ಆಡಿದ ಮಾತು ದಾರಿ ತಪ್ಪುವುದು. ಸಭಾಕಂಪನ ನಿಮ್ಮ ನಿಲುವನ್ನು ಅಸ್ಪಷ್ಟಗೊಳಿಸಲಿದೆ. ನಿಮ್ಮದಲ್ಲದ ಕಾರ್ಯವನ್ನು ಮಾಡಲು ಒಪ್ಪುಕೊಳ್ಳಲಾರಿರಿ. ನಿಮ್ಮ ವೇಗದ ಮಾತು ಇತರರಿಗೆ ಅರ್ಥವಾಗದೇ ಇರಬಹುದು. ವಿದ್ಯಾರ್ಥಿಗಳಿಗೆ ಆಭ್ಯಾಸಕ್ಕೆ ಸಮಯವನ್ನು ಹೊಂದಿಸುವುದು ಕಷ್ಟವಾದೀತು. ಪೂರಕ ವಾತಾವರಣ ಕೊರತೆ ಕಾಣುವುದು. ಹೂಡಿಕೆಯನ್ನು ಇನ್ನೊಬ್ಬರ ಒತ್ತಾಯಕ್ಕೆ ಮಾಡುವಿರಿ. ಆಡಳಿತಾತ್ಮಕ ವಿಚಾರಕ್ಕೆ ನೀವು ಪೂರ್ಣವಾಗಿ ಒಗ್ಗಲಾರಿರಿ. ಸಮಾಧಾನ ಇಲ್ಲದೇ ಇದ್ದರೂ ಸಮಾಧಾನದಂತೆ ತೋರುವುದು. ಪುಣ್ಯದ ಫಲವನ್ನು ನೀವು ಪಡೆಯುವಿರಿ. ಕೆಲವು ಕಾರ್ಯಗಳು ನಿಮಗೆ ನಿಷ್ಪ್ರಯೋಜಕ ಎಂದು ಕಾಣಿಸುವುದು. ಕೆಲಸವನ್ನು ಬಿಡಬೇಕಾದ ಸಂದರ್ಭವು ಬರಬಹುದು. ನಿಮ್ಮ ಆತ್ಮವಿಶ್ವಾಸಕ್ಕೆ ತೊಂದರೆ ಬರಬಹುದು. ಪೂರ್ಣಮಾಹಿತಿಯ ಕೊರತೆಯನ್ನು ಇಟ್ಟುಕೊಂಡು ನೀವು ಕೆಲಸವನ್ನು ಮಾಡಬೇಕಾದೀತು. ಪದೋನ್ನತಿಗೆ ಗರ್ವ ಬೇಡ. ಅನಾಹುತಗಳು ಸಣ್ಣದರಲ್ಲಿಯೇ ಆಗುವ ಸಂದರ್ಭವಿದೆ. ನಿಮ್ಮ ನಿಜವಾದ ಸಾಮರ್ಥ್ಯದಿಂದ ಯಶಸ್ಸು ಗಳಿಸುವಿರಿ.

ವೃಷಭ ರಾಶಿ :

ಇಷ್ಟಪಟ್ಟು ಪಡೆದ ವಸ್ತುವು ಅನ್ಯರ ಪಾಲಾಗಲಿದೆ. ನೀವು ಕೆಲಸ ಮಾಡುವ ಸಂಸ್ಥೆಯ ರಹಸ್ಯವನ್ನು ನೀವು ಬಿಟ್ಟುಕೊಡಲಾರಿರಿ. ಒತ್ತಡ ಮಾಡಿಕೊಂಡು ಕಾರ್ಯವನ್ನು ಮಾಡುವುದು ಬೇಡ. ನೀವು ಕೆಲಸವನ್ನು ಕಳೆದುಕೊಂಡಿರುವುದು ದಾಯಾದಿಗಳಿಗೆ ಸಂತೋಷದ ಸಮಾಚಾರವಾಗಲಿದೆ. ಸಣ್ಣ ಸಣ್ಣ ಖರ್ಚುಗಳೇ ಕಷ್ಟವಾದೀತು. ಅಧಿಕ ಖರ್ಚಿನ್ನು ಇಂದು ಮಾಡಬೇಕಾಗಿಬರಬಹುದು. ಆರೋಗ್ಯದ ಸುದೃಢತೆಗೆ ಒಂದೊಂದೇ ಹಂತ ಏರುವುದು. ಯಾರಿಗೂ ಹೊರೆಯಾಗದಂತೆ ನಿಮಗೆ ಇರಬೇಕು ಎಂದು ಅನ್ನಿಸಬಹುದು. ನಿಮ್ಮ ದುರಭ್ಯಾಸವು ಇತರರಿಗೂ ತಿಳಿಯಬಹುದು. ಭವಿಷ್ಯದಲ್ಲಿ ಬರಬಹುದಾದ ತೊಂದರೆಗಳನ್ನು ನೀವು ಊಹಿಸಿಕೊಂಡು ಚಿಂತೆಪಡುವಿರಿ. ಸಂಗಾತಿಯಿಂದ ನಿಮಗೆ ಸಿಗಬೇಕಾದುದನ್ನು ಪಡೆಯುವಿರಿ. ಸಿಕ್ಕಿದ್ದನ್ನು ಜೋಪಾನ ಮಾಡಿಕೊಳ್ಳಿ. ಕಲಾವಿದರಿಗೆ ಶಿಷ್ಯ ಬಳಗೆ ಹೆಚ್ಚಾಗುವುದು. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳಲೂಬಹುದು. ಸುಮ್ಮನೇ ಇರುವುದು ನಿಮಗೆ ಇಂದು ಪ್ರಿಯವಾದೀತು. ಹೂಡಿಕೆಯಿಂದ ಹಣವನ್ನು ಕಳೆದುಕೊಳ್ಳುವಿರಿ.

ಮಿಥುನ ರಾಶಿ :

ಶತ್ರುಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಅವಶ್ಯಕತೆ ಇದ್ದರೆ ಮಾತ್ರ, ಅಂತಹ ಕೃತ್ಯಕ್ಕೆ ಕೈಹಾಕಿ. ಇಲ್ಲವಾದರೆ ಕಾಲವೇ ಸರಿಯಾದ ಉತ್ತರವನ್ನು ಕೊಡುತ್ತದೆ. ಮನಸ್ಸು ಯಾವುದೋ ಕಾರಣಕ್ಕೆ ಭಾರವಾಗಬಹುದು. ಅನ್ಯರಿಂದ ಅಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ನೀವು ಧೈರ್ಯವನ್ನು ಬಿಡಲಾರಿರಿ. ಕೋಪವು ನಿಮ್ಮ ಸಹಜತೆಯಾದರೂ ಅದರಿಂದ ಹೊರಬರುವ ತಂತ್ರವನ್ನು ತಿಳಿದುಕೊಳ್ಳಬೇಕು. ಸರಿಯಾದ ಸಂವಹನದ ಕೊರತೆಯಿಂದ ವ್ಯವಸ್ಥೆ ಹಾಳಾಗುವುದು. ನಿಮ್ಮ ಯೋಜನೆಗಳು ವಾಸ್ತವಕ್ಕೆ ಹತ್ತಿರವಿರಲಿ. ಹೆಚ್ಚಿನ ವಿವರಗಳನ್ನು ಅನುಭವಿಗಳ, ತಿಲಕಿದವರಿಂದ ಪಡೆಯಿರಿ. ವಿವಾಹ ಸಮಾರಂಭಕ್ಕೆ ಹೋಗುವಿರಿ. ಪ್ರಭಾವೀ ವ್ಯಕ್ತಿಗಳ ಭೇಟಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ಸಂಗಾತಿಯ ಒಳ್ಳೆಯ ಕೆಲಸಗಳು ನಿಮಗೆ ಇಷ್ಟವಾಗದು. ಕೆಲಸವನ್ನು ಏಕಾಗ್ರತೆಯಿಂದ ಮಾಡುವಿರಿ. ನಿಮ್ಮದೇ ಆದ ಮಿತ್ರರ ವೃಂದವನ್ನು ಕಟ್ಟಿಕೊಳ್ಳುವಿರಿ. ಸಹೋದರರ ನಡುವೆ ದ್ವೇಷವು ಉಂಡಾಗಬಹುದು. ಯಾರ ಪ್ರಶಂಸೆಗೂ ಕಾಯದೇ ಚೆನ್ನಾಗಿ ಕರ್ತವ್ಯವನ್ನು ಮಾಡುವಿರಿ.

ಕರ್ಕಾಟಕ ರಾಶಿ :

ವಾಹನ ಚಾಲನೆಯಲ್ಲಿ ಭಾರೀ ವಾಹನದಿಂದ ನಿಮಗೆ ತೊಂದರೆ. ಕೂಡಲೇ ಸೂಕ್ತ ಪರಿಹಾರ ಕಂಡುಕೊಂಡರೆ ಉತ್ತಮ. ಅಪಾಯದ ಅನಂತರ ದುಃಖಿಸಿ ಪ್ರಯೋಜನವಾಗದು. ಏನನ್ನೂ ಮಾಡದೇ ಕರ್ತವ್ಯ ದೃಷ್ಟಿಯಿಂದ ಮಾಡಿದಾಗ ಯಶಸ್ಸನ್ನು ನಿಮ್ಮನ್ನು ಬಂದು ಸೇರುವುದು. ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುವ ಅವಶ್ಯಕತೆ ಇಲ್ಲ. ಉತ್ತಮ ಭೂಮಿಯ ಲಾಭವಾಗಲಿದೆ. ಅಪಾಯದಿಂದ ಹೊರಬರಲಿದ್ದೀರಿ. ಧನವ್ಯಯವನ್ನು ನಿಮ್ಮ ಜಾಣತನದಿಂದ ತಪ್ಪಿಸಿಕೊಳ್ಳುವಿರಿ‌. ಅಪರಿಚಿತರಿಗೆ ಇಂದು ಸಹಾಯವನ್ನು ಮಾಡುವಿರಿ. ಏನೇ ಆದರೂ ಹೋಗುವ ಸ್ಥಳಕ್ಕೆ ಸಮಯ ವ್ಯತ್ಯಾಸದಿಂದ ಹೋಗುವಿರಿ. ಕೋಪದ ನಿಯಂತ್ರಣವನ್ನು ಮಾಡಲು ಕಷ್ಟವಾದೀತು. ಸಂಸಾರದಲ್ಲಿ ನಿರಾಸಕ್ತಿಯು ಇರಲಿದೆ. ನಿಮ್ಮ ಸಣ್ಣತನವೇ ದೊಡ್ಡ ಲಾಭಕ್ಕೆ ತೊಂದರೆಯಾಗುವುದು. ಕ್ಷಮೆಯನ್ನು ಕೇಳಿದರೆ ನಿರಾಕರಿಸುವುದು ಬೇಡ. ಸೌಲಭ್ಯಗಳಿಂದ ನೀವು ಆಲಸ್ಯವನ್ನು ಬೆಳೆಸಿಕೊಳ್ಳುವಿರಿ.‌ ಮಕ್ಕಳ ಪ್ರೀತಿಯನ್ನು ಸಂಪಾದಿಸುವಿರಿ. ಅನಗತ್ಯ ಖರೀದಿಯನ್ನು ಮಾಡುವಿರಿ. ಕಾರ್ಯದ ನೈರಂತರ್ಯದಿಂದ ಅದ್ಭುತವನ್ನು ಸಾಧಿಸಲು ಸಾಧ್ಯ.

ಸಿಂಹ ರಾಶಿ :

ಇನ್ನೊಬ್ಬರ ದೃಷ್ಟಿಯಲ್ಲಿ ಕೆಟ್ಟ ಭಾವನೆ ಬರಬಾರದು ಎಂದಾದರೂ ಅಲ್ಪ ದಯಾಗುಣವನ್ನು ತೋರಿಸಿ. ಬಂಧುಗಳ ಕಾರಣದಿಂದ ಇಂದಿನ ಕಾರ್ಯದಲ್ಲಿ ತೊಡಕುಗಳು ಕಾಣಿಸಿಕೊಳ್ಳುವುದು. ಕಾರ್ಯದ ಸ್ಥಳದಲ್ಲಿ ಪ್ರತಿಯೊಬ್ಬರೂ ನಿಮ್ಮ ಕೆಲಸವನ್ನು ಪ್ರಶಂಸಿಸುವರು. ಅಸಾಧ್ಯವನ್ನು ಸಾಧಿಸುವ ಛಲವಿರಲಿದೆ. ಉದ್ಯಮದಲ್ಲಿ ಹಿನ್ನಡೆಯಾಗುವ ಸಂಭವವು ನಿಮಗೆ ಮೊದಲೇ ಗೊತ್ತಾಗಲಿದೆ. ಎಷ್ಟೇ ಪ್ರಯತ್ನಿಸಿದರೂ ಹಳೆಯ ನೆನಪುಗಳಿಗೆ ಕಡಿವಾಣ ಹಾಕಲಾಗದು. ನಿರಪೇಕ್ಷ ವಿಚಾರವನ್ನು ಪ್ರಸ್ತಾಪಿಸಿಕೊಂಡು ಕಾಲಹರಣ ಮಾಡುವಿರಿ. ಪ್ರಮಾಣವನ್ನು ಅಂಗೀಕರಿಸದೇ ಅನ್ಯ ಮಾರ್ಗ ನಿಮಗೆ ಇರದು. ತಾಯಿಯ ವಿಚಾರದಲ್ಲಿ ನೀವು ಇಂದು ಕೋಪಗೊಳ್ಳಬಹುದು. ಇಂದು ನೀವು ಹೊಸ ತಂಡವನ್ನು ಕಟ್ಟಿಕೊಳ್ಳುವಿರಿ. ಪಾಲುದಾರಿಕೆಯಲ್ಲಿ ನಿಮಗೆ ಅಸಮಾಧಾನ ಇರಲಿದೆ. ನಿಮ್ಮ ಮಕ್ಕಳಿಂದ ಸೋಲನ್ನು ಒಪ್ಪಿಕೊಳ್ಳುವುದೇ ಸೂಕ್ತ. ಸಭ್ಯತೆಯನ್ನು ಇಟ್ಟುಕೊಂಡು ಇಂದಿನ ವ್ಯವಹಾರವನ್ನು ಮಾಡಿರಿ. ನೀವು ನಿಮ್ಮ ಸ್ಥಾನಕ್ಕಾಗಿ ಇನ್ನೊಬ್ಬರನ್ನು ದೂಷಿಸುವಿರಿ. ಹಳೆಯ ವಸ್ತುಗಳೇ ನಿಮಗೆ ಪ್ರಿಯವಾಗಬಹುದು. ಕೃತಜ್ಞತೆಯನ್ನು ಇಟ್ಟುಕೊಳ್ಳುವುದು ಕಷ್ಟವಾದೀತು.

ಕನ್ಯಾ ರಾಶಿ :

ಕೊಡಬೇಕಾದ ಕಡೆ ಹಣವನ್ನು ಕೊಡಲೇ ಬೇಕು. ಇಲ್ಲದೆ ಸಬೂಬುಗಳು ಗಣನೆಗೆ ಬರದು. ಸಾಲವನ್ನು ಇನ್ನೊಬ್ಬರಿಗಾಗಿ ಮಾಡಬೇಕಾದೀತು. ನಿಮ್ಮ ಸಂಕಷ್ಟಕ್ಕೆ ಯಾರನ್ನೋ ದೂರುತ್ತ ಇರುವುದು ಸರಿಯಲ್ಲ. ಹಣದ ಹರಿವು ಇಂದು ಸ್ವಲ್ಪ ಕಡಿಮೆಯಾಗಲಿದೆ. ಆಪ್ತರನ್ನು ಕಳೆದುಕೊಂಡು ದುಃಖಿಸುವಿರಿ. ನಿಮ್ಮ ಕಳವಳವು ಮಿತ್ರರಿಗೆ ಗೊತ್ತಾಗುವುದು. ಕಲಾವಿದರು ದೂರಪ್ರಯಾಣವನ್ನು ಮಾಡುವಿರಿ. ನಿದ್ರೆಯು ಕಡಿಮೆಯಾಗಿ ಕೆಲಸದಲ್ಲಿ ಉತ್ಸಾಹ ಕಡಿಮೆ ಇರಲಿದೆ‌. ಪ್ರೇಮಿಯ ಜೊತೆ ಈ ದಿನವನ್ನು ಕಳೆಯುವಿರಿ. ಸ್ತ್ರೀಸಂಬಂಧದ ವಿಷಯದಲ್ಲಿ ನಿಮ್ಮನ್ನು ವಿಚಾರಿಸಬಹುದು. ಯಂತ್ರಗಳ ಮಾರಾಟವನ್ನು ನೀವು ಕಡಿಮೆ‌ಮಾಡುವಿರಿ. ಅಪರಿಚಿತ ಪ್ರದೇಶದಲ್ಲಿ ಅನಿರೀಕ್ಷಿತವಾಗಿ ಮಿತ್ರನ ಭೇಟಿಯಾಗುವುದು. ನೀವು ಮಾತನಾಡದೇ ಇದ್ದರೆ, ಉಳಿದವರು ನಿಮ್ಮ ಮೇಲೆ ಹಿಡಿತ ಸಾಧಿಸಲು ಯತ್ನಿಸುವರು. ಉದ್ಯೋಗದಲ್ಲಿ ನಿಶ್ಚಲತೆ ಕಾಣಿಸದು. ಸಂಗಾತಿಯ ಭಾವನೆಗೆ ಬೆಲೆ ಕೊಟ್ಟು ಸಂತೋಷಪಡಿಸುವಿರಿ. ವೈವಾಹಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳುವುದು ಕಷ್ಟವಾಗಬಹುದು. ನಿಮ್ಮ ಸಂಪತ್ತು ಮತ್ತಾವುದೋ ರೂಪದಲ್ಲಿ ಬಂದು ಸೇರುತ್ತದೆ ಎಂಬ ನಂಬಿಕೆ ಇರಲಿದೆ.

ತುಲಾ ರಾಶಿ :

ನಿಮಗೆ ವಹಿಸಿದ ಕೆಲಸವು ನಿಮಗೆ ಶಿಕ್ಷೆಯಂತೆ ಭಾಸವಾಗುವುದು. ಇಂದು ನೀವು ಹೊರಟ ಕಾರ್ಯದಿಂದ ಅರ್ಧಕ್ಕೆ ಬರಬೇಕಾದೀತು. ಇಂದು ಮೇಲಧಿಕಾರಿಗಳಿಂದ ಹಲವು ರೀತಿಯ ಒತ್ತಡವನ್ನು ನೀವು ಅನುಭವಿಸುವಿರಿ. ಸ್ಥಿರಾಸ್ತಿಯಿಂದ ನಿಮಗೆ ಸಾಲವು ದೊರೆಯಬಹುದು. ಹೊಸ ಸಂಬಂಧವನ್ನು ಮಾಡಿಕೊಳ್ಳುವಿರಿ. ನಿರಂತರ ಕೆಲಸವು ನಿಮಗೆ ಇಂದು ಇಷ್ಟವಾಗಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಮಾತುಗಳಲ್ಲಿ ಇರುವ ಕೋಪವು ನಿಮಗೆ ಕಾಣಿಸುವುದು. ವಾಹನದ ದುರಸ್ತಿಯಿಂದ ಖರ್ಚಾಗಲಿದೆ. ವ್ಯವಹಾರದ ಅಂಕಿ ಅಂಶಗಳನ್ನು ಸರಿಯಾಗಿ ಕ್ರೋಢೀಕರಿಸಿ, ತೀರ್ಮಾನ ಮಾಡಿ. ಗೃಹನಿರ್ಮಾಣದ ಭೂಮಿಯ ವಿಚಾರದಲ್ಲಿ ದೂರನ್ನು ದಾಖಲಿಸಬಹುದು. ಅವಕಾಶಗಳು ಇಲ್ಲದೇ ನೀವು ಇಂದು ಅಸಮಾಧಾನದಿಂದ ಇರುವಿರಿ. ಕೂಡಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವಿರಿ. ಮಾರಾಟದಿಂದ ನಿಮಗೆ ಅಲ್ಪ ಲಾಭವಾಗಲಿದೆ. ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು. ಆತಂಕದಿಂದ ನೀವು ಮುಕ್ತರಾಗಲು ಬಯಸುವಿರಿ. ಸಮಯ ಇಂದು ಬೇಗನೆ ಕಳೆದಂತೆ ಅನ್ನಿಸಬಹುದು.

ವೃಶ್ಚಿಕ ರಾಶಿ :

ಪೂರ್ವಾಪರ ಯೋಚ‌ನೆ ಇಲ್ಲದೇ ಕೆಲಸಕ್ಕೆ ರಾಜಿನಾಮೆ ಕೊಟ್ಟರೆ ಆಗದು ಮುಂದೇನು ಎಂಬ ಚಿಂತನೆಯೂ ಬೇಕು. ಹಣಕ್ಕಿಂತ ಆರೋಗ್ಯ ಮುಖ್ಯವಾದ ಕಾರಣ ಅಂತಹ ಸನ್ನಿವೇಶವನ್ನು ನೀವು ಅರ್ಥಮಾಡಿಕೊಳ್ಳಬೇಕು. ನಿಮ್ಮ ಕಠಿಣ ಪರಿಶ್ರಮವು ಕೆಲಸಕ್ಕೆ ಬಾರದು.‌ ಯುಕ್ತಿಯಿಂದ ನಿರ್ವಹಿಸುವ ಚಾಣಾಕ್ಷತೆ ಬೇಕು. ಸರ್ಕಾರದಿಂದ ಸೌಲಭ್ಯವನ್ನು ನೀವು ನಿರೀಕ್ಷಿಸುತ್ತಿರುವಿರಿ. ಯಶಸ್ಸನ್ನು ಒಡೆಯುವ ಹಂಬಲವು ಅಧಿಕವಾಗುವುದು. ನೌಕರರಿಂದ ಕೆಲಸವಾಗುತ್ತಿಲ್ಲ ಎಂಬ ಬೇಸರ ಬರುವುದು. ಅವಶ್ಯಕತೆಗೆ ಅನುಸಾರವಾಗಿ ಮುಂದುವರಿಯಿರಿ.‌ ಸ್ನೇಹಿತರಿಗೆ ಸಾಲವಾಗಿ ಹಣವನ್ನು ಕೊಡುವಿರಿ. ನಿಯತ್ತನ್ನು ತೋರಿಸಬೇಕಾದಲ್ಲಿ ತೋರಿಸಲೇಬೇಕು. ಅಲ್ಲಿ ಅಹಂಕಾರ ಅಡ್ಡ ಬರಬಾರದು. ಸಾಮಾಜಿಕ ತಾಣದಲ್ಲಿ ನಿಮಗೆ ಸ್ತ್ರೀಯ ಜೊತೆ‌ ಪ್ರೇಮವು ಉಂಟಾಗಬಹುದು. ಹೊಸ ಬಾಳಿನ ಕಡೆ ಮನಸ್ಸು ಹರಿಯುವುದು. ಸಮಯವನ್ನು ವ್ಯರ್ಥ ಮಾಡದೇ ಅಧಿಕಸಂಪಾದನೆಯನ್ನು ಮಾಡುವಿರಿ. ಮನೆಯಲ್ಲಿ ಒಂಟಿಯಾಗಿದ್ದು ನಿಮಗೆ ಭಯವು ಉಂಟಾಗಬಹುದು. ಕೆಲಸದಲ್ಲಿ ಆಸಕ್ತಿಯ‌ ಕೊರತೆ ಕಾಣಿಸುವುದು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ.

ಧನು ರಾಶಿ :

ನಿಮ್ಮ ಮೇಲಿರುವ ಅಭಿಮಾನವನ್ನು ಉಳಿಸಿಕೊಳ್ಳುವುದು ಅನಿವಾರ್ಯತೆ ಆಗುವುದು. ನಿಮ್ಮನ್ನು ಅಗೌರವದಿಂದ ಕಾಣುವವರ ಮೇಲೆ‌ ಕೋಪ ಬರುವುದು. ಇಂದು ನಿಮ್ಮ ಮನೆಯ ದುರಸ್ತಿಯ ಕಡೆ ಯೋಚಿಸುಬಿರಿ. ಸಂಗಾತಿಯನ್ನು ನೀವು ಅವಮಾನಸಲಿದ್ದೀರಿ. ಇದರಿಂದ ನಿಮಗೆ ಮುಂದೆ ತೊಂದರೆಯಾಗಬಹುದು. ಅತಿಥಿ ಸತ್ಕಾರವು ನಿಮಗೆ ಸಂತೋಷ ಕೊಡುವುದು. ಆರ್ಥಿಕಸ್ಥಿತಿಯು ನಿಮಗೆ ಸಮಾಧಾನವನ್ನು ಕೊಡುವುದು. ಕುಟುಂಬದಲ್ಲಿ ಐಕಮತ್ಯವಿರಲಿ. ಆತ್ಮೀಯರ ಜೊತೆ ನಿಮ್ಮ ಸಂಬಂಧವು ಚೆನ್ನಾಗಿರಲಿದೆ. ಜೀವನದ ಬಗ್ಗೆ ಭಯಗೊಂಡರೆ ಆಪತ್ತಿಗೆ ಶರಣಾಗುವುದಲ್ಲದೇ ಬೇರೆ ದಾರಿ ಇಲ್ಲ. ವೃತ್ತಿಯಲ್ಲಿ ಬಂದ ಮಾತಿನಿಂದ ನೀವು ಉದ್ವೇಗಗೊಳ್ಳುವಿರಿ. ನಿಮ್ಮ ದೃಷ್ಟಿಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮ್ಮ ಕುರಿತು ತಂದೆ ತಾಯಿಯರು ಚಿಂತಿಸುವರು. ಭೂಮಿಯನ್ನು ವಶ ಮಾಡಿಕೊಳ್ಳಲು ಪ್ರಭಾವಿಗಳ ಸಂಗವನ್ನು ಮಾಡಬೇಕಾದೀತು. ಭೂಮಿಯ ಪ್ರಕರಣವು ನಿಮ್ಮನ್ನು ಚಿಂತೆಗೀಡುಮಾಡೀತು. ನೌಕರರ ಮೇಲೆ ಕಿಡಿಕಾರುವಿರಿ. ಸಂಶೋಧನಾ ವಿಚಾರದಲ್ಲಿ ಆಸಕ್ತಿಯು ಹೆಚ್ಚಾಗುವುದು. ಯಾರ ಯೋಗ್ಯತೆಯನ್ನೂ ಅಳೆಯಲು ಸಾಧ್ಯವಾಗದು.

ಮಕರ ರಾಶಿ :

ನೀವು ಪರರಿಗೆ ಕೊಡುವ ಕಿರುಕುಳದಿಂದ ಅಪಾಯ ಕಾದಿದೆ. ಒಳ್ಳೆಯ ವ್ಯವಸ್ಥೆಯನ್ನು ಇಟ್ಟುಕೊಂಡು ಸರಿಯಾದ ಸೇವೆ ಕೊಡಲು ಕಷ್ಟವಾಗಬಹುದು. ನಿಮ್ಮ ಪ್ರಮುಖ ದಾಖಲೆಗಳನ್ನು ಯಾರಿಗೂ ಹಸ್ತಾಂತರಿಸುವುದು ಬೇಡ. ಸ್ನೇಹಿರಿಂದ ನಿಮಗೆ ಬಹುಮಾನ ಸಿಗಲಿದೆ. ಸಮಾಜಮುಖೀ ಕೆಲಸದಿಂದ ನಿಮಗೆ ಗೌರವವು ಸಿಗಲಿದೆ. ಮಕ್ಕಳ ಯಶಸ್ಸಿನಿಂದ ಪೋಷಕರಿಗೆ ಸಂತಸವಾಗಲಿದೆ. ವಾಹನ ಚಲಿಸುವಾಗ ಜಾಗರೂಕತೆ ಮುಖ್ಯವಾಗಲಿದೆ. ಶತ್ರುಗಳು ವ್ಯವಹಾರದಲ್ಲಿ ಮಧ್ಯವರ್ತಿಗಳಾಗಿ ಇರುವರು. ಅನಾರೋಗ್ಯದ ಬಗ್ಗೆ ನಿಮಗೆ ಅನುಮಾನವಿದ್ದು ಸೂಕ್ತ ತಪಾಸಣೆ ಮಾಡುವಿರಿ. ಮೋಸದ ಜಾಲಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ನೀವು ನಿಮ್ಮ ಬಗ್ಗೆ ಜನರ ಅಭಿಪ್ರಾಯವನ್ನು ಪಡೆಯಲು ಇಚ್ಛಿಸುವಿರಿ. ವಿದೇಶದಲ್ಲಿ ಇದ್ದರೆ ನಿಮಗೆ ಸಂಕಷ್ಟವು ಬರಬಹುದು. ಉತ್ತಮ‌ ಆಹಾರವನ್ನು ಪಡೆಯಲು ಯತ್ನಿಸಿ.‌ ಪೂಜಾಯೋಗ್ಯರಿಗೆ ಆತಿಥ್ಯವನ್ನು ನೀಡಿ. ಕೆಲವು ಉದ್ಯಮದ ರಿಸ್ಕ್ ನ್ನು ತೆಗೆದುಕೊಳ್ಳಬೇಕಾಗುವುದು. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಪ್ರೀತಿಯಲ್ಲಿಯೇ ನಿಮಗೆ ಮೋಸವಾಗಿ ಸಂಪತ್ತನ್ನು ಕಳೆದುಕೊಳ್ಳುವಿರಿ.

ಕುಂಭ ರಾಶಿ :

ಅತಿಯಾದ ಸುಳ್ಳುಗಳೇ ನಿಮಗೆ ಪಾಶದಂತಾಗಿ, ಅದರೊಳಗೆ ಸಿಕ್ಕಿ ಬೀಳುವಿರಿ. ಒಂದಾದ ಮೇಲೆ‌ ಒಂದರಂತೆ ಒತ್ತಡ ಕಾಣಿಸಿಕೊಳ್ಳುವುದು. ಇಂದು ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದೇ ಕಾರ್ಯತತ್ಪರರಾಗುವಿರಿ. ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು. ವಿವಾಹದ ಮಾತುಕತೆಗಳು ಬಿರುಸಿನಿಂದ ನಡೆಯಲಿದೆ. ನಿಮ್ಮ‌ ಸುರಕ್ಷತೆಯಲ್ಲಿ ನೀವಿರುವುದು ಉತ್ತಮ. ಪತ್ನಿಯ ಬಗ್ಗೆ ನಿಮಗೆ ಗೌರವವು ಕಡಿಮೆ ಆಗಬಹುದು. ಎಷ್ಟೇ ಪ್ರಯತ್ನಿಸಿದರೂ ಗೊತ್ತಿರುವ ಸಂಕಟವನ್ನು ತಪ್ಪಿಸಲಾಗದೆಂದರೆ ಪುರಾಕೃತ ಕರ್ಮವೇ ಸಾಕ್ಷಿಯಾಗುವುದು. ಇನ್ನೊಬ್ಬರ ನೋವಿಗೆ ಸ್ಪಂದಿಸಲು ಹೋಗಿ ಸಿಕ್ಕಿಬೀಳಬೇಕಾದೀತು. ನಿಮ್ಮ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ಕೋಪಕ್ಕೆ ಕಾರಣವನ್ನು ನೀವು ವ್ಯಕ್ತಿಪಡಿಸಲು ಇಚ್ಛಿಸುವುದಿಲ್ಲ. ಸಂಪತ್ತಾಗಿ ಅನ್ಯ ವೃತ್ತಿಯನ್ನು ಆಶ್ರಯಿಸಬೇಕಾದೀತು. ಹೂಡಿಕೆಯನ್ನು ಅಲ್ಪ ಮೊತ್ತದಲ್ಲಿ ಮಾಡಿ. ನಿಮ್ಮನ್ನು ನೀವೇ ರೂಪಿಸಿಕೊಳ್ಳುವ ಅನಿವಾರ್ಯತೆ ಬರಬಹುದು. ಅತಿಥಿಗಳ ಆಗಮನವಾಗಲಿದೆ. ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸ.

ಮೀನ ರಾಶಿ :

ಪ್ರೇಮಕ್ಕೆ ನಿಮಗೆ ಹಸಿರು ನಿಶಾನೆ ಬೀಳುವುದು. ನಿಮ್ಮ‌ಸಾಮಾಜಿಕ‌ ಕಾರ್ಯಗಳಿಗೆ ಉತ್ತಮ‌ ಜನಸ್ಪಂದ ಸಿಗಬಹುದು. ನೀವು ಉದ್ಯಮಿಗಳ ಜೊತೆ ಹೊಸ ಯೋಜನೆಯನ್ನು ಪಡೆಯುವ ತವಕದಲ್ಲಿ ಇರುವಿರಿ. ಸರ್ಕಾರದ ಕೆಲಸವಾಗದೇ ಅಧಿಕ ಓಡಾಟವಾದೀತು. ಆರ್ಥಿಕ ನೆರವನ್ನು ನೀವು ಬಯಸುವಿರಿ. ಸಮಾಧಾನ ಚಿತ್ತದಿಂದ ನಿಮ್ಮ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುವಿರಿ. ವೈವಾಹಿಕ ಜೀವನವು ಹಿರಿಯರ ಮಾರ್ಗದರ್ಶನದಲ್ಲಿ ಆಗುವುದು. ಮಕ್ಕಳಿಗೆ ಸಂಪತ್ತನ್ನು ಹಂಚುವ ಯೋಚನೆ ಇರಲಿದೆ. ನಾಯಕರ ಆಯ್ಕೆಯ ಪ್ರಕ್ರಿಯೆಯು ಗುಟ್ಟಾಗಿ ನಡೆಯುವುದು. ನಿಮ್ಮ ಸ್ವಭಾವದಿಂದ ದಾಂಪತ್ಯದಲ್ಲಿ ಕೆಲವು ಮಾತುಗಳು ಕೇಳಿಬರಬಹುದು. ಅನಗತ್ಯ ವಿಚಾರವನ್ನು ಪ್ರಸ್ತಾಪಿಸಿ ವಿವಾದವಾಗುವಂತೆ ಮಾಡುವಿರಿ. ನಿಮ್ಮ ಆದಾಯವು ಅಧಿಕವಾಗಿದ್ದು ನಿಮಗೆ ಸಂತೋಷವನ್ನು ಕೊಡುವ ವಿಚಾರವು ಇದಾಗಿದೆ. ನೀವು ಯಾವುದನ್ನೂ ಪರೀಕ್ಷಿಸದೇ ಒಪ್ಪಿಕೊಳ್ಳುವುದು ಬೇಡ. ಶಿಸ್ತಿಗೆ ಹೆಚ್ಚು ಒತ್ತನ್ನು ಇಂದು ಕೊಡುವಿರಿ. ಇದು ಸಹೋದ್ಯೋಗಿಗಳಿಗೆ ಕಿರಿಕಿರಿಯಾದೀತು. ವಿದ್ಯಾರ್ಥಿಗಳಿಗೆ ಓದಲು ಸಮಯದ ಹೊಂದಿಕೆ ಆಗದು.

– ಲೋಹಿತ ಹೆಬ್ಬಾರ್ – 8762924271 (what’s app only)