
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 27ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಈ ದಿನ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳು ಮುಖ್ಯ ಸ್ಥಾನ ಪಡೆದುಕೊಳ್ಳುತ್ತವೆ. ಮನೆ ಖರ್ಚು, ಅಲಂಕಾರ ಅಥವಾ ದುರಸ್ತಿ ಬಗ್ಗೆ ಚರ್ಚೆ ನಡೆಯಬಹುದು. ದಿನಸಿ ಪದಾರ್ಥಗಳ ಖರೀದಿಯಲ್ಲಿ ಖರ್ಚು ಹೆಚ್ಚಾಗಲಿದೆ. ಸಾವಯವ ಉತ್ಪನ್ನಗಳ ಖರೀದಿಗಾಗಿಯೋ ಅಥವಾ ಒಣಹಣ್ಣುಗಳ ಖರೀದಿಗೋ ಹೆಚ್ಚು ಖರ್ಚು ಬರಲಿದೆ. ಇನ್ನು ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಭಾವುಕತೆಗೆ ಒಳಗಾಗಿ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಸಂಬಂಧಗಳಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯುತ್ತದೆ.
ಇಡೀ ದಿನ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಬಿಡುವಿಲ್ಲದಷ್ಟು ಕೆಲಸಗಳಲ್ಲಿ ತೊಡಗಿರುತ್ತೀರಿ. ಫೋನ್ ಕರೆಗಳು, ಸಂದೇಶಗಳು, ಭೇಟಿಗಳು ಜಾಸ್ತಿ ಆಗುತ್ತವೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಅವಕಾಶದ ಮಾತು ಬರಬಹುದು, ಆದರೆ ತಕ್ಷಣ ಒಪ್ಪಿಕೊಳ್ಳಬೇಡಿ. ಪ್ರಭಾವಿಗಳ ಸಂಪರ್ಕದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇನ್ನು ಒಂದು ಕಡೆ ಹಣ ಬರುತ್ತದೆ, ಆದರೆ ಖರ್ಚು ಸಹ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಯಾಣ ಮಾಡುವಾಗ ಸಮಯ ಮತ್ತು ಹಣ ಎರಡಕ್ಕೂ ಲೆಕ್ಕವಿರಲಿ.
ಪ್ರಯಾಣದಲ್ಲಿ, ಉದ್ಯೋಗಕ್ಕೆ ಸಂಬಂಧಿಸಿದ ವಿಚಾರದಲ್ಲಿ ಏಕಾಏಕಿ ಸಿಟ್ಟು ಹೊರ ಹಾಕುವುದಕ್ಕೆ ಹೋಗಬೇಡಿ. ಈ ದಿನ ತಾಳ್ಮೆ ಬಹಳ ಅಗತ್ಯ. ಸರ್ಕಾರಿ ಕೆಲಸ, ದಾಖಲೆ ಅಥವಾ ಬ್ಯಾಂಕ್ ಸಂಬಂಧಿಸಿದ ವಿಚಾರಗಳಲ್ಲಿ ವಿಳಂಬ ಆಗಬಹುದು. ಹಣಕಾಸಿನ ವಿಷಯದಲ್ಲಿ ಸಣ್ಣ ಲಾಭದ ಸೂಚನೆ ಇದ್ದರೂ ಅದನ್ನು ಎಲ್ಲರಿಗೂ ಹೇಳಿಕೊಳ್ಳಬೇಡಿ. ನಿಮ್ಮಲ್ಲಿ ಕೆಲವರು ಚಿನ್ನ- ಬೆಳ್ಳಿ ಇತರ ಬೆಲೆ ಬಾಳುವ ಲೋಹದಲ್ಲಿ ಹೂಡಿಕೆ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ.
ಲೇಖನ- ಸ್ವಾತಿ ಎನ್.ಕೆ.