Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 11ರ ದಿನಭವಿಷ್ಯ

ಜನ್ಮಸಂಖ್ಯೆ 7, 8, 9ರ ಜನವರಿ 11ರ ದಿನಭವಿಷ್ಯ ಇಲ್ಲಿದೆ. ಜನ್ಮಸಂಖ್ಯೆ 7ಕ್ಕೆ ಆರ್ಥಿಕ ಪಾಠಗಳು, ಆಧ್ಯಾತ್ಮಿಕ ಒಲವು; ಜನ್ಮಸಂಖ್ಯೆ 8ಕ್ಕೆ ವ್ಯಾಪಾರ ಲಾಭ, ಆಸ್ತಿ ವಿವಾದ ಇತ್ಯರ್ಥ; ಜನ್ಮಸಂಖ್ಯೆ 9ಕ್ಕೆ ಆತ್ಮವಿಶ್ವಾಸ, ಹೊಸ ಜವಾಬ್ದಾರಿಗಳು, ಸಂಬಂಧಗಳಲ್ಲಿ ತಾಳ್ಮೆ ಇಂದಿನ ಮುಖ್ಯ ಫಲಿತಾಂಶಗಳು. ಭವಿಷ್ಯದ ಮಾರ್ಗದರ್ಶನಕ್ಕಾಗಿ ಸಂಪೂರ್ಣ ಮಾಹಿತಿ ಓದಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 11ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Jan 11, 2026 | 12:39 AM

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಮನೆಯಿಂದ ದೂರ ಇದ್ದು, ವ್ಯಾಸಂಗ- ಉದ್ಯೋಗ ಮಾಡುತ್ತಾ ಇರುವವರು ಏಕಾಂತವನ್ನು ಬಯಸುವಿರಿ ಮತ್ತು ಆರ್ಥಿಕ ವಿಚಾರಗಳಲ್ಲಿ ನಿಮ್ಮ ಹಳೆಯ ತಪ್ಪುಗಳಿಂದ ಪಾಠ ಕಲಿಯುವಿರಿ. ಸಂಶೋಧನಾತ್ಮಕ ಕೆಲಸಗಳಿಗೆ ಇಂದಿನ ಶಕ್ತಿ ಪೂರಕವಾಗಿದೆ. ಆಧ್ಯಾತ್ಮಿಕ ಗುರುವಿನ ಭೇಟಿ ಅಥವಾ ದರ್ಶನ ಪಡೆಯುವ ಸಾಧ್ಯತೆ ಇದೆ. ಸಂಬಂಧಗಳಲ್ಲಿ ಸಾಧಾರಣ ಫಲಿತಾಂಶಗಳಿದ್ದರೂ ನಿಮ್ಮ ಉಳಿತಾಯದ ಯೋಜನೆಗಳು ಫಲ ನೀಡಲಿವೆ. ರಹಸ್ಯ ವಿಚಾರಗಳನ್ನು ಯಾರಿಗೂ ತಿಳಿಸಬೇಡಿ. ಅನಿರೀಕ್ಷಿತವಾಗಿ ಪ್ರಯಾಣ ಮಾಡುವ ಸಂದರ್ಭ ಬರಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಕೆಲಸದ ಒತ್ತಡವನ್ನು ನೀಗಿಸಲು ಇಂದೇ ಸಿದ್ಧತೆ ಮಾಡಿಕೊಳ್ಳುವಿರಿ. ಕಬ್ಬಿಣ, ತೈಲ ಅಥವಾ ಸಿಮೆಂಟ್ ವ್ಯಾಪಾರಸ್ಥರಿಗೆ ದೊಡ್ಡ ಲಾಭ ಸಿಗಲಿದೆ. ಆಸ್ತಿ ವಿವಾದಗಳು ಸುಲಭವಾಗಿ ಬಗೆಹರಿಯಲಿವೆ. ಕಠಿಣ ಶ್ರಮಕ್ಕೆ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ನಿಮ್ಮ ಮೇಲೆ ಅಪವಾದ ಬರದಂತೆ ಎಚ್ಚರ ವಹಿಸಿ. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವ ಹಾದಿ ಗೋಚರಿಸಲಿದೆ. ಅಜೀರ್ಣ ಸಮಸ್ಯೆಯಾಗದಂತೆ ಆಹಾರದ ಮಿತಿಯಿರಲಿ. ಇಷ್ಟದೇವತೆಯ ಪ್ರಾರ್ಥನೆ ಶುಭ ನೀಡಲಿದೆ. ಮನೆಯಲ್ಲಿ ಇರುವಂಥ ಕೆಲವು ಹಳೇ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರುತ್ತದೆ, ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಾವನಾತ್ಮಕತೆ ಬದಲು ತರ್ಕಕ್ಕೆ ಆದ್ಯತೆ ನೀಡಿ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಭೂಮಿಗೆ ಸಂಬಂಧಿಸಿದ ಹಳೆಯ ವ್ಯವಹಾರಗಳು ಲಾಭದಾಯಕವಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ಶಾಂತವಾಗಿ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿ. ದೂರದ ಪ್ರಯಾಣದ ಯೋಜನೆಗಳಿದ್ದರೆ ಸದ್ಯಕ್ಕೆ ಮುಂದೂಡುವುದು ಒಳಿತು.

ಲೇಖನ- ಎನ್‌.ಕೆ.ಸ್ವಾತಿ