Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರಿಗೆ ಹಳೆಯ ಹಣವು ಅನಿರೀಕ್ಷಿತವಾಗಿ ಕೈಸೇರಲಿದೆ

ಜನವರಿ 12 ರಂದು ಜನ್ಮಸಂಖ್ಯೆ 7, 8, 9ರ ದಿನಭವಿಷ್ಯ ಹೀಗಿದೆ. 7 ರವರಿಗೆ ಹೊಸ ಒಪ್ಪಂದಗಳಲ್ಲಿ ವಿಶ್ವಾಸಾರ್ಹತೆಗೆ ಒತ್ತು ನೀಡಿ, ಹೂಡಿಕೆಯಲ್ಲಿ ಲಾಭ. 8 ರವರಿಗೆ ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ, ಆಸ್ತಿ ವಿವಾದ ಬಗೆಹರಿಯಬಹುದು. 9 ರವರಿಗೆ ಕೆಲಸದ ಸ್ಥಳದಲ್ಲಿ ಆವೇಶ ಬೇಡ, ಮೌನದಿಂದಿರಿ; ಹಳೆಯ ಹಣ ಕೈಸೇರಲಿದೆ, ಹೊಸ ಪಾಲುದಾರಿಕೆಗೆ ತಜ್ಞರ ಸಲಹೆ ಪಡೆಯಿರಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರಿಗೆ ಹಳೆಯ ಹಣವು ಅನಿರೀಕ್ಷಿತವಾಗಿ ಕೈಸೇರಲಿದೆ
ದಿನ ಭವಿಷ್ಯ
Edited By:

Updated on: Jan 12, 2026 | 12:30 AM

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನೀವು ಹೊಸಬರ ಜೊತೆ ಒಪ್ಪಂದ ಮಾಡಿಕೊಳ್ಳುವಾಗ ಅವರ ಆರ್ಥಿಕ ಹಿನ್ನೆಲೆಗಿಂತ ಅವರ ವಿಶ್ವಾಸಾರ್ಹತೆಗೆ ಹೆಚ್ಚು ಒತ್ತು ನೀಡಿ. ಮಾರ್ಕೆಟಿಂಗ್ ಮತ್ತು ದಲ್ಲಾಳಿ ವೃತ್ತಿಯಲ್ಲಿ ಇರುವವರಿಗೆ ನಿರೀಕ್ಷೆಗೂ ಮೀರಿದ ಲಾಭದ ಜೊತೆಗೆ ಹೊಸ ಜವಾಬ್ದಾರಿಯೊಂದು ಹೆಗಲೇರಲಿದೆ. ನೀವು ಹೂಡಿಕೆ ಮಾಡಿರುವ ಷೇರುಗಳು ಅಥವಾ ಮ್ಯೂಚುವಲ್ ಫಂಡ್‌ಗಳ ಮೌಲ್ಯ ಏರಿಕೆಯಾಗುವ ಲಕ್ಷಣಗಳಿವೆ, ಆದರೆ ತಕ್ಷಣದ ಲಾಭಕ್ಕಾಗಿ ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಕಂಫರ್ಟ್ ಝೋನ್ ನಿಂದ ಆಚೆ ಬರಬೇಕಾದ ದಿನ ಇದಾಗಿರುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ನಿಗಾ ಇರಲಿ. ಆಸ್ತಿ ವಿವಾದಗಳು ಸುದೀರ್ಘ ಕಾಲದಿಂದ ನಡೆಯುತ್ತಿದ್ದರೆ, ಸಂಧಾನ ಅಥವಾ ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಿದೆ. ಹಳೆಯ ಸಾಲದ ಹೊರೆ ನಿಮ್ಮನ್ನು ಮಾನಸಿಕವಾಗಿ ಸ್ವಲ್ಪ ಕಾಡಬಹುದು, ಆದರೆ ಅದನ್ನು ತೀರಿಸುವ ಹೊಸ ಮಾರ್ಗವೊಂದು ಗೋಚರಿಸಲಿದೆ. ಸಂಗಾತಿಯ ಜೊತೆಗೆ ಮಾತುಕತೆ ಆಡುವಾಗ ಗಾಂಭೀರ್ಯವಿರಲಿ; ಸಣ್ಣ ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಕಚೇರಿಯಲ್ಲಿ ಅಥವಾ ನಿಮ್ಮ ಕೆಲಸದ ಕ್ಷೇತ್ರದಲ್ಲಿ ವಿನಾಕಾರಣ ನಿಮ್ಮ ಮೇಲೆ ಆರೋಪಗಳು ಬರಬಹುದು ಅಥವಾ ನಿಮ್ಮ ಶ್ರಮಕ್ಕೆ ಸಲ್ಲಬೇಕಾದ ಗೌರವ ಬೇರೆಯವರ ಪಾಲಾಗಬಹುದು. ಇಂತಹ ಸಂದರ್ಭದಲ್ಲಿ ಆವೇಶಕ್ಕೆ ಒಳಗಾಗದೆ ಮೌನವಾಗಿರುವುದೇ ಶ್ರೇಯಸ್ಕರ. ದೊಡ್ಡ ಮಟ್ಟದ ವ್ಯವಹಾರ ಕುದುರಲಿದೆ. ಹಳೆಯ ಬಾಕಿ ಉಳಿದಿದ್ದ ಹಣವು ಅನಿರೀಕ್ಷಿತವಾಗಿ ಕೈಸೇರಬಹುದು. ಆದರೆ ಹೊಸ ಪಾಲುದಾರಿಕೆ ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಕಾನೂನು ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.

ಲೇಖನ- ಎನ್‌.ಕೆ.ಸ್ವಾತಿ