AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಕ್ರ ಹಾಗೂ ರವಿಯ ಅಪರೂಪದ ಸಂಯೋಗ, ಗುರುದೃಷ್ಟಿಯ ಯೋಗ

ಗುರುವಿನ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರರ ಅಪರೂಪದ ಸಂಯೋಗದ ಪ್ರಭಾವವನ್ನು ಈ ಲೇಖನ ವಿವರಿಸುತ್ತದೆ. ಪರಸ್ಪರ ಮಿತ್ರ-ಶತ್ರುಗಳಾದ ಈ ಗ್ರಹಗಳು ವಿಭಿನ್ನ ಫಲಗಳನ್ನು ನೀಡುತ್ತವೆ. ಗುರುವಿನ ದೃಷ್ಟಿ ರಾಜಕೀಯ, ಸರ್ಕಾರಿ ಲಾಭಗಳನ್ನು ಹೆಚ್ಚಿಸಿದರೆ, ಶುಕ್ರನು ಕೆಲವು ಕನಸುಗಳನ್ನು ಭಗ್ನಗೊಳಿಸಬಹುದು. ಮೇಷ, ಸಿಂಹ, ಧನು, ತುಲಾ, ಮಿಥುನ ರಾಶಿಗಳಿಗೆ ಈ ಸಂಯೋಗದಿಂದಾಗುವ ನಿರ್ದಿಷ್ಟ ಶುಭ-ಅಶುಭ ಪರಿಣಾಮಗಳನ್ನು ಇಲ್ಲಿ ತಿಳಿಸಲಾಗಿದೆ.

ಶುಕ್ರ ಹಾಗೂ ರವಿಯ ಅಪರೂಪದ ಸಂಯೋಗ, ಗುರುದೃಷ್ಟಿಯ ಯೋಗ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jan 12, 2026 | 4:49 PM

Share

ಸೂರ್ಯ ಹಾಗು ಶುಕ್ರರು ಗುರುವಿನ ರಾಶಿಯಲ್ಲಿ ಇರುವುದು ಅಪರೂಪದ ಸಂಯೋಜನ. ಪರಮ‌ಮಿತ್ರರೂ ಪರಮಶತ್ರುಗಳೂ ಒಂದೇ ರಾಶಿಯಲ್ಲಿ ಇದೆ. ಸೂರ್ಯ ಹಾಗೂ ಶುಕ್ರ ಪರಸ್ಪರ ಶತ್ರುಗಳು. ಗುರು ಹಾಗೂ ಸೂರ್ಯರು ಪರಸ್ಪರ ಮಿತ್ರರು. ಶುಕ್ರ ಹಾಗೂ ಗುರು ಶತ್ರುವೂ ಮಿತ್ರರೂ ಅಲ್ಲದವರು. ಮಧ್ಯಮ. ಹೀಗಿರುವಾಗ ಗುರುವಿನ ರಾಶಿಯಲ್ಲಿ ಇರುವ ಈ ಗ್ರಹರು ಮತ್ತು ಗುರುವಿನ ದೃಷ್ಟಿಯುಳ್ಳವರು ಯಾವ ರಾಶಿಯವರಿಗೆ ಏನು ಫಲವನ್ನು ಕೊಟ್ಟಾರು ಎನ್ನುವದನ್ನು ಚಿಂತಿಸಬೇಕಿದೆ. ರವಿ ಹಾಗು ಶುಕ್ರರ ಕಾರಕತ್ವ ಭಿನ್ನ. ಆದರೆ ಒಂದಕ್ಕೊಂದು ಪೂರಕ.

ಸೂರ್ಯನು ರಾಜನಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಇದ್ದರೆ, ಶುಕ್ರನು ಭೋಗವನ್ನು ಪ್ರತಿನಿಧಿಸುವವನು. ಹಾಗಾಗಿ ಪರಸ್ಪರ ಸಾಮರಸ್ಯ ಇದೆ. ಇನ್ನು ಗುರುವಿನ ಪೂರ್ಣ ದೃಷ್ಟಿ ಸೂರ್ಯನ ಮೇಲೆ‌ಬರುವುದರಿಂದ ರಾಜಕೀಯ, ಸರ್ಕಾರದ ಉದ್ಯೋಗ, ಸ್ಥಾನಮಾಮ ಇವುಗಳ ಜೊತೆ, ತಂದೆಯಿಂದ ಪ್ರೀತಿ, ಲಾಭ, ಮಾಡುವ ಕಾರ್ಯದಲ್ಲಿ ಉತ್ಸಾಹ, ಆತ್ಮವಿಶ್ವಾಸ ಇವು ಹೆಚ್ಚಾಗುತ್ತದೆ. ಆದರೆ ಶುಕ್ರನಿಂದ ಅಂತಹ ಪೂರ್ಣ ಫಲವನ್ನು ನಿರೀಕ್ಷಿಸುವಂತಿಲ್ಲ. ಹಲವು ಬಾರಿ ನಿಮ್ಮ ಕನಸು ಭಗ್ನವಾಗಬಹದು ಅಥವಾ ಭಗ್ನವಾದಂತೆ ತೋರುವುದು.

ಮೇಷ ರಾಶಿ :

ನಿಮಗೆ ಭಾಗ್ಯೋದಯದ ಕಾಲ, ಉನ್ನತ ವಿದ್ಯಾಭ್ಯಾಸಕ್ಕೆ ದಾರಿ ತೆರೆಯಲಿದೆ. ವಿದೇಶ ಪ್ರಯಾಣದ ಉತ್ಸಾಹದಲ್ಲಿ ಇರುವಿರಿ. ಆತ್ಮವಿಶ್ವಾಸ ವೃದ್ಧಿ. ಸರ್ಕಾರಿ ಕಾರ್ಯಗಳಲ್ಲಿ ಅನುಕೂಲ, ಗುರುಕೃಪೆ ಲಭಿಸುತ್ತದೆ. ಧೈರ್ಯದಿಂದ ತೆಗೆದುಕೊಳ್ಳುವ ನಿರ್ಧಾರಗಳು ಯಶಸ್ಸು ತರುತ್ತವೆ.

ಸಿಂಹ ರಾಶಿ :

ಈ ರಾಶಿಗೆ ರವಿಯು ಅಧಿಪತಿಯಾದ ಕಾರಣ ನಾಯಕತ್ವ, ಕೀರ್ತಿ, ಸೃಜನಶೀಲತೆ ಹೆಚ್ಚಾಗುತ್ತದೆ. ಪ್ರೇಮ ಹಾಗೂ ಸಂತಾನ ಸುಖ ಲಭಿಸುತ್ತದೆ. ಸಮಾಜದಲ್ಲಿ ಗೌರವ, ಅಧಿಕಾರ ಮತ್ತು ಆಕರ್ಷಣೆ ಹೆಚ್ಚುವ ಕಾಲಘಟ್ಟ.

ಧನು ರಾಶಿ :

ಇದೇ ರಾಶಿಯಲ್ಲಿ ರವಿ ಹಾಗೂ ಶುಕ್ರರಿದ್ದು ವ್ಯಕ್ತಿತ್ವ ಪ್ರಕಾಶಮಾನವಾಗುತ್ತದೆ. ಆತ್ಮವಿಶ್ವಾಸ, ವಿವೇಕ, ಆಧ್ಯಾತ್ಮಿಕ ಚಿಂತನೆ ವೃದ್ಧಿ. ವಿವಾಹ, ಕಲೆ, ಶಿಕ್ಷಣ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ.

ಇದನ್ನೂ ಓದಿ: ನವಪಂಚಮ ಯೋಗ: ಯಾರಿಗೆಲ್ಲಾ ಅದೃಷ್ಟ? ಇಲ್ಲಿದೆ ನೋಡಿ

ತುಲಾ ರಾಶಿ :

ಶುಕ್ರನ ಆಧಿಪತ್ಯದ ರಾಶಿಗೆ ಮಾತುಕತೆ, ಸಂಪರ್ಕ, ಪ್ರಯಾಣ, ಕಲಾತ್ಮಕ ಚಟುವಟಿಕೆಗಳಲ್ಲಿ ಲಾಭ. ಸ್ನೇಹ ವಲಯ ವಿಸ್ತರಣೆ. ಅಹಂಕಾರ ನಿಯಂತ್ರಿಸಿದರೆ ಉತ್ತಮ ಯಶಸ್ಸು ಮತ್ತು ಮಾನಸಿಕ ಸಮತೋಲನ ಸಿಗುತ್ತದೆ.

ಮಿಥುನ ರಾಶಿ :

ಶುಕ್ರ ರವಿಯರ ದೃಷ್ಟಿ ಇರಲಿದ್ದು ಸ್ನೇಹಿತರಿಂದ ಲಾಭ, ಆದಾಯ ವೃದ್ಧಿ, ಸಾಮಾಜಿಕ ಗೌರವ ಹೆಚ್ಚಳ. ಸೃಜನಾತ್ಮಕ ಯೋಜನೆಗಳಿಗೆ ಬೆಂಬಲ. ಸಾರ್ವಜನಿಕ ಜೀವನದಲ್ಲಿ ನಿರಂತರ ತೊಡಗಿಕೊಳ್ಳುವಿರಿ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್