Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಇಂದು ದೊಡ್ಡ ಮೊತ್ತದ ಸಾಲ ನೀಡದಿರಿ

ಜನವರಿ 12 ರ ಸೋಮವಾರದ ಜನ್ಮಸಂಖ್ಯೆ 1, 2, 3 ರವರ ಭವಿಷ್ಯ ಇಲ್ಲಿದೆ. ಜನ್ಮಸಂಖ್ಯೆ 1 ರವರಿಗೆ ಹೊಸ ಆಲೋಚನೆಗಳು, ಆರ್ಥಿಕ ನಿರ್ಧಾರಗಳು ಮುಖ್ಯ. 2 ರವರಿಗೆ ಮಾನಸಿಕ ಸ್ಥಿರತೆ, ಕೌಟುಂಬಿಕ ಸಹಕಾರ ಮುಖ್ಯ. 3 ರವರಿಗೆ ಜ್ಞಾನಾರ್ಜನೆ, ಸದುದ್ದೇಶದ ಖರ್ಚು ಮತ್ತು ಹಿರಿಯರ ಆರೋಗ್ಯ ಸುಧಾರಣೆ ನಿರೀಕ್ಷಿಸಿ. ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಇಂದು ದೊಡ್ಡ ಮೊತ್ತದ ಸಾಲ ನೀಡದಿರಿ
ದಿನ ಭವಿಷ್ಯ
Edited By:

Updated on: Jan 12, 2026 | 12:10 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನೀವು ಹಳೆಯ ಯೋಜನೆಗಳನ್ನು ಬಿಟ್ಟು ಹೊಸ ಆಲೋಚನೆಗಳಿಗೆ ಒತ್ತು ನೀಡುವ ದಿನ. ವೃತ್ತಿ ಬದುಕಿನಲ್ಲಿ ಸದಾ ಕಾಲ ನಾನೇ ಮುಂದಿರಬೇಕು ಎಂಬ ಹಠಕ್ಕಿಂತ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ‘ಸಹಬಾಳ್ವೆ’ಯ ಗುಣ ಇಂದು ನಿಮಗೆ ಹೆಚ್ಚು ಲಾಭ ತಂದುಕೊಡಲಿದೆ. ಇಂದು ನೀವು ತೆಗೆದುಕೊಳ್ಳುವ ಒಂದು ಸಣ್ಣ ಆರ್ಥಿಕ ನಿರ್ಧಾರವು ಮುಂದಿನ ಆರು ತಿಂಗಳ ನಿಮ್ಮ ಆರ್ಥಿಕ ಸ್ಥಿತಿಯನ್ನು ನಿರ್ಧರಿಸಲಿದೆ. ಕಚೇರಿಯಲ್ಲಿ ಮೇಲಧಿಕಾರಿಗಳ ಒತ್ತಡವಿದ್ದರೂ ನಿಮ್ಮ ಮಿತಭಾಷಿತ ಸ್ವಭಾವವು ಸಂಕಷ್ಟದಿಂದ ಪಾರು ಮಾಡಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಮಾನಸಿಕ ಸ್ಥಿರತೆ ಬಹಳ ಮುಖ್ಯ. ಸಣ್ಣ ಪುಟ್ಟ ವಿಚಾರಗಳಿಗೂ ಅತಿಯಾಗಿ ಸ್ಪಂದಿಸುವ ಗುಣವನ್ನು ನಿಯಂತ್ರಿಸಿ. ನಿಮ್ಮ ಮನೆಯಲ್ಲಿ ಹಳೆಯ ನೆನಪುಗಳು ಮರುಕಳಿಸಲಿವೆ, ಅದು ಸಂತಸವೋ ಅಥವಾ ನೋವೋ ಎನ್ನುವುದು ನಿಮ್ಮ ಸ್ವೀಕಾರದ ಮೇಲೆ ಅವಲಂಬಿಸಿದೆ. ವ್ಯಾಪಾರಸ್ಥರು ದೊಡ್ಡ ಮೊತ್ತದ ಸಾಲ ನೀಡುವುದನ್ನು ತಪ್ಪಿಸಿ. ಕೌಟುಂಬಿಕವಾಗಿ ಸಂಗಾತಿಯ ಸಹಕಾರವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಕಲಾವಿದರಿಗೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಅನಿರೀಕ್ಷಿತ ಅವಕಾಶಗಳು ಬರಲಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಜ್ಞಾನಾರ್ಜನೆಯ ದಿನವಿದು. ನೀವು ತಿಳಿಯದ ವಿಷಯಗಳ ಬಗ್ಗೆ ಇತರರೊಂದಿಗೆ ಚರ್ಚಿಸುವಾಗ ನಮ್ರತೆ ಇರಲಿ. ಶಿಕ್ಷಣ ಅಥವಾ ಸಲಹಾ ಕೇಂದ್ರಗಳನ್ನು ನಡೆಸುವವರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಖರ್ಚು ಹೆಚ್ಚಾಗುವ ಸಂಭವವಿದೆ, ಆದರೆ ಅದು ಸದುದ್ದೇಶದ ಹೂಡಿಕೆಯಾಗಿರಲಿದೆ. ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಿಸುವುದರಿಂದ ಭಾರ ಇಳಿಯಲಿದೆ. ಧಾರ್ಮಿಕ ಚಿಂತನೆಗಳು ನಿಮ್ಮನ್ನು ಆವರಿಸಲಿವೆ. ನೀವು ಮಾಡುವ ಸಣ್ಣ ಸಹಾಯವು ಭವಿಷ್ಯದಲ್ಲಿ ದೊಡ್ಡ ಮಟ್ಟದ ಪ್ರತಿಫಲ ನೀಡಲಿದೆ.

ಲೇಖನ- ಎನ್‌.ಕೆ.ಸ್ವಾತಿ