Weekly Horoscope 2026: ನಿಮ್ಮ ರಾಶಿಗನುಗುಣವಾಗಿ ಜನವರಿ ತಿಂಗಳ ಎರಡನೇ ವಾರದ ಭವಿಷ್ಯ ತಿಳಿಯಿರಿ
ಜನವರಿ ಎರಡನೇ ವಾರದ ರಾಶಿ ಭವಿಷ್ಯ ಇಲ್ಲಿದೆ. ಈ ವಾರ ಅಲೌಕಿಕ ಸಂಪತ್ತಿನ ಕುರಿತು ಆಸೆಗಳು ಹೆಚ್ಚಲಿವೆ. ಪರರ ಸಂಪತ್ತಿನ ಮೇಲೂ ಕುತೂಹಲವಿರಲಿದೆ. ದಾನ ಮತ್ತು ಧರ್ಮದಿಂದ ಈ ಆಸೆಗಳನ್ನು ಸರಿಪಡಿಸಿಕೊಳ್ಳುವ ಮಾರ್ಗ ಸಿಗಲಿದೆ. ಪ್ರತಿಯೊಂದು ರಾಶಿಗೂ ವಾರದ ವಿಶಿಷ್ಟ ಫಲಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಕ್ತ ಮಾರ್ಗದರ್ಶನ ಇಲ್ಲಿದೆ.

ಜನವರಿ ತಿಂಗಳ ಎರಡನೇ ವಾರ ವಿಶೇಷವಾಗಿ ಅಲೌಕಿಕ ಸಂಪತ್ತು ಪಡೆಯಬೇಕೆನ್ನುವ, ಆಸೆ ಕುತೂಹಲ. ಪರರ ಸಂಪತ್ತಿಗೂ ಬಯಕೆ ಅಧಿಕವಾಗಲಿದೆ. ದಾನ, ಧರ್ಮದಿಂದ ಎಲ್ಲವನ್ನೂ ಸರಿಮಾಡಿಕೊಳ್ಳುವ ಮಾರ್ಗ ಸಿಗಲಿದೆ. ಶುಭವಾಗಲಿ ಎಲ್ಲರಿಗೂ
ಮೇಷ ರಾಶಿ:
ಈ ವಾರ ಸಮಯ ಅಚಾನಕ್ ತಿರುವು ತರುತ್ತದೆ. ಆತುರ ತಪ್ಪಿಸಿ ನಿರೀಕ್ಷೆ ಇಡಿ. ತಡವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಲಾಭ ಕೊಡುತ್ತವೆ. ಧೈರ್ಯಕ್ಕಿಂತ ಸಂಯಮ ಮುಖ್ಯ.
ವೃಷಭ ರಾಶಿ:
ಈ ವಾರದಲ್ಲಿ ನಿಧಾನವಾದ ಕಾಲಪ್ರವಾಹ ನಿಮ್ಮ ಪಾಲಿಗೆ ಅನುಕೂಲ. ತಾಳ್ಮೆಯಿಂದ ಮಾಡಿದ ಕೆಲಸ ಶಾಶ್ವತ ಫಲ ನೀಡುತ್ತದೆ. ಹಣಕಾಸಿನಲ್ಲಿ ಸ್ಥಿರತೆ. ಸಮಯವನ್ನು ಒತ್ತಾಯಿಸಬೇಡಿ.
ಮಿಥುನ ರಾಶಿ:
ಎರಡನೇ ವಾರ ಮಾತು, ಮಾಹಿತಿ, ಸಂದೇಶಗಳ ಮೂಲಕ ಅವಕಾಶಗಳು ಬರುತ್ತವೆ. ಸರಿಯಾದ ಕ್ಷಣದಲ್ಲಿ ಮಾತನಾಡಿದರೆ ಲಾಭ. ಅಸಮಯದ ಮಾತು ಗೊಂದಲ ಉಂಟುಮಾಡುತ್ತದೆ.
ಕರ್ಕಾಟಕ ರಾಶಿ:
ಈ ರಾಶಿಗೆ ಎರಡನೇ ವಾರ ಭಾವನಾತ್ಮಕತೆಯಿಂದ ಪ್ರಭಾವ ಜಾಸ್ತಿ. ಮನಸ್ಸು ಒಪ್ಪಿದ ಸಮಯದಲ್ಲೇ ಕಾರ್ಯಸಾಧನೆ. ಒತ್ತಾಯದ ಕೆಲಸ ವಿಫಲ. ಕುಟುಂಬ ವಿಚಾರಗಳು ಮನಸ್ಸನ್ನು ಆವರಿಸುತ್ತವೆ.
ಸಿಂಹ ರಾಶಿ:
ಈ ವಾರ ನಾಯಕತ್ವ ವಿಜೃಂಭಿಸುವ ಸಮಯ. ಮುನ್ನಡೆಸಿದರೆ ಫಲ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದರೆ ಅಹಂಕಾರ ಹೆಚ್ಚಾದರೆ ಹಿನ್ನಡೆ. ಗೌರವ, ಅಧಿಕಾರ ಸಂಬಂಧಿತ ವಿಚಾರಗಳು ಮುನ್ನೆಲೆ.
ಕನ್ಯಾ ರಾಶಿ:
ಬುಧನ ಆಧಿಪತ್ಯದ ಈ ರಾಶಿಗೆ ಸೂಕ್ಷ್ಮತೆಯನ್ನು ಪರೀಕ್ಷಿಸುವ ಕಾಲ. ಸಣ್ಣ ತಪ್ಪಿಗೂ ಹೆಚ್ಚು ಪರಿಣಾಮ. ಸಮಯಪಾಲನೆ, ಕ್ರಮಬದ್ಧತೆ ಜಯ ತರುತ್ತದೆ. ಕೆಲಸದ ಒತ್ತಡ ಹೆಚ್ಚಾದರೂ ಫಲ ಸಿಗುತ್ತದೆ.
ತುಲಾ ರಾಶಿ:
ನಿಮಗೆ ಈ ವಾರ ಸಮತೋಲನದ ಅವಶ್ಯಕತೆ ಹೆಚ್ಚು. ಎರಡು ವಿಷಯಗಳ ನಡುವೆ ತೀರ್ಮಾನ ಅಗತ್ಯ. ತೂಕ ಹಾಕಿ ನಿರ್ಧಾರ ತೆಗೆದುಕೊಂಡರೆ ಲಾಭ. ಸಂಬಂಧಗಳಲ್ಲಿ ಸಂಯಮ ಬೇಕು.
ವೃಶ್ಚಿಕ ರಾಶಿ:
ಜನವರಿಯ ಎರಡನೇ ವಾರ ಗುಪ್ತವಾಗಿರುವ ಕಾಲದ ಪ್ರಭಾವವನ್ನು ಎದುರಿಸುವಿರಿ. ಮೌನವಾಗಿ ಮಾಡಿದ ಪ್ರಯತ್ನಗಳಿಗೆ ಬೆಂಬಲ. ರಹಸ್ಯ ಯೋಜನೆಗಳು ಫಲ ಕೊಡುತ್ತವೆ. ಬಹಿರಂಗ ಮಾತುಗಳಿಂದ ದೂರವಿರುವುದು ಒಳಿತು.
ಧನು ರಾಶಿ:
ಈ ವಾರ ವಿಸ್ತಾರವಾಗಿ ಹರಡಿದ ನಿಮ್ಮ ಸಮಯವನ್ನು ಏನು ಮಾಡಬೇಕು ಎಂಬ ಜಿಜ್ಞಾಸೆ. ಮುಂದಿನ ದಿನಗಳ ಯೋಜನೆಗಳು ಮಹತ್ವದವು. ಈಗ ಮಾಡಿದ ಪ್ರಯತ್ನಗಳ ಫಲ ತಡವಾಗಿ ಬರುತ್ತದೆ. ಆತುರಕ್ಕಿಂತ ದೃಷ್ಟಿಕೋನ ಮುಖ್ಯ.
ಮಕರ ರಾಶಿ:
ನೀವು ಈ ವಾರದಲ್ಲಿ ಶ್ರಮ, ಶಿಸ್ತಿನ ಬಗ್ಗೆ ಗಮನ ಹರಿಸುವ ಕಾಲ. ಸಮಯಕ್ಕೆ ಮಾಡಿದ ಕಠಿಣ ಪರಿಶ್ರಮ ಗೌರವ ತರುತ್ತದೆ. ಸುಲಭ ದಾರಿ ಹಾನಿಕರ. ಜವಾಬ್ದಾರಿಗಳು ಹೆಚ್ಚಾದರೂ ಸ್ಥಿರತೆ ಸಿಗುತ್ತದೆ.
ಕುಂಭ ರಾಶಿ:
ಶನಿಯ ಆಧಿಪತ್ಯದ ಈ ರಾಶಿಯವರಿಗೆ ಅನಿರೀಕ್ಷಿತ ಬದಲಾವಣೆಯ ಸಮಯ ಎದುರಾಗುವುದು. ನಿರೀಕ್ಷಿಸದ ಅವಕಾಶಗಳು ಬರುತ್ತವೆ. ರೂಢಿ ಯೋಚನೆ ಬಿಡಿ. ಬದಲಾವಣೆ ಸ್ವೀಕರಿಸಿದರೆ ಲಾಭ ಸಾಧ್ಯ.
ಮೀನ ರಾಶಿ:
ಆಂತರಿಕ ಜ್ಞಾನ ಕಾರ್ಯನಿರ್ವಹಿಸಿಲಿದ್ದು, ಅದನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಬೇಕು. ಮನಸ್ಸಿನ ಸೂಚನೆ ಅನುಸರಿಸಿದರೆ ಯಶಸ್ಸು. ಹೊರಗಿನ ಸಲಹೆಗಿಂತ ಸ್ವಂತ ಅನುಭವ ಮುಖ್ಯವಾಗುತ್ತದೆ.
-ಲೋಹಿತ ಹೆಬ್ಬಾರ್ – 8762924271 (what’s app only)
